ಆಂಚಲ್ ಠಾಕೂರ್ಸ್ಕೀ  ಪ್ಲೇಯರ್

2018ರಲ್ಲಿ ಟರ್ಕಿಯಲ್ಲಿ ಆಯೋಜಿಸಲಾಗಿದ್ದ `ಇಂಟರ್‌ ನ್ಯಾಷನಲ್ ಸ್ಕೀಯಿಂಗ್‌ ಕಾಂಪಿಟಿಶನ್‌'ನಲ್ಲಿ ಕಂಚಿನ ಪದಕ ಗಳಿಸಿದ ಆಂಚಲ್ ಠಾಕೂರ್‌ ಹಿ.ಪ್ರ.ದ ಮನಾಲಿಗೆ ಸೇರಿದವರು. 21ರ ಹರೆಯದ ಈಕೆ ಒಬ್ಬಳೇ ಇಂಥ ಸಾಧನೆ ಮಾಡಿರುವ ಭಾರತೀಯಳು. ಆಕೆ ಎಸ್ಡರ್‌ 3200 ಕಪ್‌ನಲ್ಲಿ ಈ ಪದಕ ಜಯಿಸಿ ಇತಿಹಾಸ ರಚಿಸಿದ್ದಾರೆ. ಭಾರತದಲ್ಲಿ ವಿಂಟರ್‌ ಗೇಮ್ಸ್ ಗೆ ಪ್ರಾಧಾನ್ಯತೆ ಇಲ್ಲ. ಹೀಗಿದ್ದೂ ಆಂಚಲ್ ಇಷ್ಟೆಲ್ಲ ಸಾಧಿಸಿದ್ದಾರೆ.

ಆಕೆ ಈ ಪದಕವನ್ನು ಹಾವಿನ ಆಕಾರದ ರಸ್ತೆ ಮೇಲೆ `ಸ್ಕೀ' ಮಾಡುತ್ತಾ ಜಯಿಸಿದರು. ಇದರ ಪ್ರಾಯೋಜಕತ್ವವನ್ನು ಫೆಡರೇಶನ್ ಇಂಟರ್‌ ನ್ಯಾಷನಲ್ ಸ್ಕೀ ರೇಸ್‌ ಸಂಸ್ಥೆ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಈಕೆ 2017ರಲ್ಲಿ ರಾಷ್ಟ್ರೀಯ ಕ್ರೀಡೆಗಳಲ್ಲಿ 2 ಪದಕ ಹಾಗೂ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.

ಹೇಗಾಯಿತು ಆರಂಭ ಇದಕ್ಕೆ ಪ್ರೇರಣೆ ಯಾರು?

``ನನ್ನ ತಂದೆ ರೋಶನ್‌ ಠಾಕೂರ್‌. ಅವರು ತಮ್ಮ ಕಾಲದ ರಾಷ್ಟ್ರೀಯ ಚಾಂಪಿಯನ್‌. ಹಾಗೆಯೇ ನನ್ನಣ್ಣ ಹಿಮಾಂಶು ಕೂಡ. ಹೀಗಾಗಿ ಬಾಲ್ಯದಿಂದಲೇ ಈ ಕುರಿತಾಗಿ ಹುಚ್ಚು ಬೆಳೆಸಿಕೊಂಡಿದ್ದೆ. 5ನೇ ವಯಸ್ಸಿನಿಂದಲೇ ನಾನು ಈ ಆಟ ಆಡುತ್ತಿದ್ದೇನೆ. ಅಸಲಿ ಟ್ರೇನಿಂಗ್‌ 11ನೇ ವಯಸ್ಸಿನಲ್ಲಿ ಶುರುವಾಯ್ತು.

``ಇದಂತೂ ವಿಂಟರ್‌ನಲ್ಲೇ ನಡೆಯೋದು. ಆಗಂತೂ 3 ಡಿಗ್ರಿಯಂಥ ಕೊರೆಯುವ ವಾತಾವರಣ! ಆಗ ನಿಮ್ಮ ಆಂತರಿಕ ಶಕ್ತಿಯೊಂದೇ ಆಸರೆ. ಬೇಸಿಗೆಯಲ್ಲಿ ದೈಹಿಕ ಟ್ರೇನಿಂಗ್‌ ಇರುತ್ತೆ. ಇದರಿಂದ ಸರಿಯಾದ ಬ್ಯಾಲೆನ್ಸ್ ಜೊತೆ ಥೈ ಮಸಲ್ಸ್ ಕೂಡ ಸ್ಟ್ರಾಂಗ್‌ ಆಗುತ್ತವೆ. ಇಂಥ ಸಾಹಸಿ ಆಟ ಬಲು ರೋಮಾಂಚಕಾರಿ!''

ಮೊದಮೊದಲು ಮೇಲಿನಿಂದ ಕೆಳಗೆ ಜಾರಲು ಭಯ ಎನಿಸಿದ್ದು ಕ್ರಮೇಣ ಬಿಟ್ಟುಹೋಯ್ತು. ಮೊದಲು 2 ಸಾವಿರ ಮೀ. ಇಳಿಯುತ್ತಿದ್ದುದು, ಮುಂದೆ 4 ಸಾವಿರ ಮೀ. ಆಯ್ತು. ಎಲ್ಲ ಹಾರ್ಡ್‌ ಸ್ಲೋಪರ್‌ಗಳ ಮೇಲೇ ಆಗುತ್ತದೆ. ಇದಕ್ಕಾಗಿ ಬೇಕಾದ ಪೂರ್ವ ತಯಾರಿಯೂ ಅಷ್ಟೇ ಮುಖ್ಯ. ಅಂದ್ರೆ ಬ್ಯಾಕ್‌ ಪ್ರೊಟೆಕ್ಟ್, ಆಮ್ಸ್, ನೀ, ಚೆಸ್ಟ್ ಪ್ರೊಟೆಕ್ಟ್, ತಲೆಗೆ ಹೆಲ್ಮೆಟ್‌ ಇತ್ಯಾದಿ ಅತ್ಯಗತ್ಯ. ಆತ್ಮವಿಶ್ವಾಸ ಹಾಗೂ ಸಾಧಿಸಬೇಕೆಂಬ ಛಲ ಇಲ್ಲಿ ಬಲು ಮುಖ್ಯ.

ಫಿಟ್‌ನೆಸ್‌ನ ಮಹತ್ವ

ಆಂಚಲ್ ಪ್ರಕಾರ, ಮಹಿಳೆಯರು ಯಾವ ಕ್ಷೇತ್ರದಲ್ಲೇ ಇರಲಿ, ಅವರು ಫಿಟ್‌ ಆಗಿರಲೇಬೇಕು. ಆಕೆ ಕುಟುಂಬದ ಚುಕ್ಕಾಣಿ, ಫಿಟ್‌ನೆಸ್‌ನಿಂದ ಮಾತ್ರ ಆತ್ಮವಿಶ್ವಾಸ. ಹೀಗಾಗಿ ಈಕೆ ಅದಕ್ಕಾಗಿ ಪರ್ಫೆಕ್ಟ್ ಡಯೆಟ್‌ ಫಾಲೋ ಮಾಡುತ್ತಾರೆ. ಹುರಿದ, ಕರಿದ, ಮಸಾಲೆ ಆಹಾರ ಇಲ್ಲವೇ ಇಲ್ಲ. ಪ್ರೋಟೀನ್‌ ಹೆಚ್ಚಿದ್ದು, ವಿಟಮಿನ್ಸ್ ಸಹ ಬೇಕು ಎನ್ನುತ್ತಾರೆ. ತನ್ನ ಯಶಸ್ಸಿನ ಶ್ರೇಯಸ್ಸನ್ನು ಈಕೆ ತಾಯಿ ರಾಮದಾಯಿ ಠಾಕೂರ್‌ಗೆ ನೀಡುತ್ತಾರೆ. ಇವರೆಲ್ಲರೂ 3-4 ತಿಂಗಳು ತರಬೇತಿಗೆಂದು ಹೊರಟಾಗ ತಾಯಿ ಮನೆಯಲ್ಲಿ ಒಬ್ಬಂಟಿ ಆಗುತ್ತಾರೆ. ಆದರೆ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಾರೆ.

ವೈಫಲ್ಯ ಇವರನ್ನು ಕುಗ್ಗಿಸಿಲ್ಲ. ಆಟ ಎಂದ ಮೇಲೆ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ