ಗೂಗಲ್ ನ್ಯೂಸ್ನಲ್ಲಿ ನಮ್ಮೊಂದಿಗೆ ಸೇರಿರಿVijay Karnataka

ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಅಗ್ನಿಅವಘಡ: 27 ಮಂದಿ ದುರ್ಮರಣ, 60ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ!

Written byವರ್ಷ ಯು |Vijaya Karnataka Web
Subscribe

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ 'ರೋಂಗ್ ಬಿಯರ್ ನಾ ಲಾಟ್ ಫ್ರಾವೊ' ಪಬ್‌ನಲ್ಲಿ ಸೋಮವಾರ(ಜು.13) ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದ್ದು, ರಕ್ಷಣೆಗಾಗಿ ಶೌಚಾಲಯದೊಳಗೆ ಅಡಗಿದ್ದವರೇ ಹೆಚ್ಚಾಗಿ ಮೃತಪಟ್ಟಿದ್ದಾರೆ. ಥೈಲ್ಯಾಂಡ್ ಪ್ರಧಾನಿ ಅನುತಿನ್ ಚರ್ನ್‌ವಿರಕುಲ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.

ಹೈಲೈಟ್ಸ್‌:

  • ಬ್ಯಾಂಕಾಕ್‌ ನ ಪಬ್‌ನಲ್ಲಿ ಸೋಮವಾರ(ಜು.13) ಮಧ್ಯರಾತ್ರಿ ಭೀಕರ ಅಗ್ನಿ ದುರಂತ
  • ಅಗ್ನಿ ದುರಂತಕ್ಕೆ ಪಬ್‌ನಲ್ಲಿ ನೆರೆದಿದ್ದ 27 ಮಂದಿ ದುರ್ಮರಣ, 60ಕ್ಕೂ ಅಧಿಕ ಜನರಿಗೆ ಗಾಯ, ಹಲವರು ನಾಪತ್ತೆ ಶಂಕೆ
  • ಸ್ಥಳಕ್ಕೆ ಭೇಟಿ ನೀಡಿದ ಥೈಲ್ಯಾಂಡ್‌ ಪ್ರಧಾನಿ, ಅಗ್ನಿ ಅವಘಡ ನಡೆದಿದ್ದೇಗೆ ಎಂಬುದರ ಕುರಿತು ತನಿಖೆ ಶುರು..
bankok fire
ಬ್ಯಾಂಕಾಕ್‌ನ ಪಬ್‌ನಲ್ಲಿ ಅಗ್ನಿ ದುರಂತ(ಗ್ಯಾಲರಿ- Agencies)
ಬ್ಯಾಂಕಾಕ್:‌ ಥೈಲ್ಯಾಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ(ಜು.13) ಮುಂಜಾನೆ ಸುಮಾರಿಗೆ ಪಬ್‌ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.


ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ಚತುಚಕ್‌ ಎಂಬ ಪ್ರದೇಶದಲ್ಲಿನ ಮನರಂಜನಾ ತಾಣವಾಗಿರುವ ರೋಂಗ್ ಬಿಯರ್ ನಾ ಲಾಟ್ ಫ್ರಾವೊ ಪಬ್‌ನಲ್ಲಿ ಹತ್ತಾರು ಜನ ನೆರೆದಿರುವಾಗಲೇ ಮಧ್ಯರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಯಭೀತರಾದ ಜನ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆಮ ಕ್ಷಣಮಾತ್ರದಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಹೆಚ್ಚಾಗಿ ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿದ್ದು, ಆಗಸದೆತ್ತರಕ್ಕೆ ಕಪ್ಪುಹೊಗೆ ಹರಡಿಕೊಂಡಿದೆ. ಘಟನೆ ತಿಳಿದು ತಕ್ಷಣವೇ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಸುಮಾರು ಅರ್ಧ ಗಂಟೆಗಳ ಬಳಿಕ ಬೆಂಕಿಯನ್ನು ನಿಯಂತ್ರಣ ಮಾಡಿದ್ದಾರೆ. ‌

ಬೆಂಕಿಯ ಕೆನ್ನಾಲಿಗೆಗೆ ತತ್ತರಿಸಿದ ಜನ

ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಪಬ್‌ನ ಮುಂಭಾಗದ ಬಾಗಿಲಿನಿಂದ ಹೊಗೆ ಹೊರಬರುತ್ತಿದ್ದಂತೆ ದೊಡ್ಡ ಬೆಂಕಿ ಹೊತ್ತಿಕೊಳ್ಳುತ್ತಿರುವಂತೆ ಕಾಣಿಸಿಕೊಂಡಿದ್ದು, ಜನರು ಕಟ್ಟಡದಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಂತೆ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿರುವುದನ್ನು ಕಾಣಬಹುದು. ಅಲ್ಲದೆ, ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಲ್ಲಿಂದ ಪಿಠೋಪಕರಣಗಳು ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಥೈಲ್ಯಾಂಡ್‌ ಪ್ರಧಾನಿ ಪ್ರತಿಕ್ರಿಯೆ

ಥೈಲ್ಯಾಂಡ್ ಪ್ರಧಾನಿ ಅನುತಿನ್ ಚರ್ನ್‌ವಿರಕುಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿ " ಅಗ್ನಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ, ಈ ದುರಂತಕ್ಕೆ ನಿಖರವಾದ ಕಾರಣದ ಕುರಿತು ತನಿಖೆ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ, ಆದರೆ, ಪಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರನೊಬ್ಬ ವೇದಿಕೆಯ ಬಳಿಯಿದ್ದ ಸರ್ಕ್ಯೂಟ್ ಬ್ರೇಕರ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿದೆ. ವಿದ್ಯುತ್ ಕಡಿತಗೊಳ್ಳುವ ಮೊದಲು ಹಾಗೂ ನಂತರ ಸ್ಫೋಟದ ಶಬ್ದ ಕೇಳಿಸಿತು ಮತ್ತು ದಟ್ಟವಾದ ಹೊಗೆ ಬೇಗನೆ ಸ್ಥಳವನ್ನು ತುಂಬಿತು ಎಂದು ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.
Mute
Playback Speed
Settings
-10s
Play
+10s
Play
Mute
00:14 / 09:26
Playback Speed
Settings
Fullscreen
Skip
Dock ImagePlaying Picture-in-picture
ವಯನಾಡಲ್ಲಿ 2,000 ಕೋಟಿ ವೆಚ್ಚದ ದೇಶದ ಬೃಹತ್ ಸುರಂಗ ಯೋಜನೆ ಕುಸಿದಿದ್ದು ಯಾಕೆ?, ಕರ್ನಾಟಕಕ್ಕೂ ಕಂಟಕ?



ಇನ್ನು, ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಘಟನೆಯಲ್ಲಿ ಈವರೆಗೂ ಸುಮಾರು 27 ಜನ ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ವೇಳೆ ಹಲವರು ರಕ್ಷಣೆಗಾಗಿ ಶೌಚಾಲಯದೊಳಗೆ ಹೋಗಿದ್ದು, ಬಹುತೇಕ ಮೃತದೇಹಗಳನ್ನು ಅಲ್ಲಿಂದಲೇ ಹೊರತೆಗೆಯಲಾಗಿದೆ. ಅಷ್ಟೇ ಅಲ್ಲದೆ, ಇನ್ನೂ ಹಲವಾರು ಜನ ಕಾಣೆಯಾಗಿದ್ದಾರೆ ಎಂದು ವರದಿ ಮಾಡಿವೆ.

ಥೈಲ್ಯಾಂಡ್‌ ಮನರಂಜನಾ ಸ್ಥಳಗಳಲ್ಲಿ ಅಗ್ನಿದುರಂತಗಳ ಸಾಲು

ಇತ್ತೀಚಿನ ದುರಂತವು ಥೈಲ್ಯಾಂಡ್‌ನ ಮನರಂಜನಾ ಸ್ಥಳಗಳಲ್ಲಿನ ಅಗ್ನಿ ಸುರಕ್ಷತಾ ಮಾನದಂಡಗಳ ಬಗ್ಗೆ ಕಳವಳವನ್ನು ಮತ್ತೆ ಜೀವಂತವಾಗಿಸಿದ್ದು, ಈ ಹಿಂದೆಯೂ ಇದೇ ರೀತಿಯ ಹಲವಾರು ಘಟನೆಗಳು ಸಂಭವಿಸಿವೆ. 2022 ರಲ್ಲಿ, ಪೂರ್ವ ಥೈಲ್ಯಾಂಡ್‌ನ ಸಂಗೀತ ಪಬ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದರು. 2009 ರಲ್ಲಿ ಬ್ಯಾಂಕಾಕ್‌ನ ಸಂತಿಕಾ ನೈಟ್‌ಕ್ಲಬ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಆಚರಣೆಯ ಸಂದರ್ಭದಲ್ಲಿ 66 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಾಗ ದೇಶದ ಅತ್ಯಂತ ಮಾರಕ ನೈಟ್‌ಕ್ಲಬ್ ಬೆಂಕಿ ಸಂಭವಿಸಿದೆ. ಒಳಾಂಗಣ ಪಟಾಕಿ ಪ್ರದರ್ಶನದಿಂದ ಆ ಬೆಂಕಿ ಕಾಣಿಸಿಕೊಂಡಿತ್ತು.
ವರ್ಷ ಯು

ಲೇಖಕರ ಬಗ್ಗೆವರ್ಷ ಯು ಲೇಖಕರ ಪರಿಚಯ : ವರ್ಷ ಯು ಅವರು ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕನ್ಸಲ್ಟಂಟ್ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಜೊತೆಗೆ ರಾಜ್ಯದ ಪ್ರಮುಖ ವಿಷಯಗಳನ್ನು ಪ್ರಕಟಿಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಕೆ-ಕಲ್ಚರ್ ಅದರಲ್ಲೂ ಪ್ರಮುಖವಾಗಿ ಕೆ-ಎಂಟರ್ಟೈನ್ ಮೆಂಟ್‌ ಹಾಗೂ ಸೆಲೆಬ್ರಿಟಿಗಳ ಜೀವನವನ್ನು ಕುರಿತು ಮಾಹಿತಿ ನೀಡುವ ಸರಳ ವಿಸೃತ್ತ ವರದಿಗಳನ್ನು ಪ್ರಕಟಿಸುವಲ್ಲಿ ವಿಶೇಷ ಆಸಕ್ತಿಹೊಂದಿದ್ದಾರೆ. ಇಷ್ಟೇ ಅಲ್ಲದೆ, ಪ್ರವಾಸ ಸಂಬಂಧಿತ ವರದಿ ಹಾಗೂ ಮಾನವ ಆಸಕ್ತಿ ಕಥನಗಳನ್ನು ವರದಿ ಮಾಡುವುದು ಹಾಗೂ ಪ್ರಕಟಿಸುವುದು ಇವರ ನೆಚ್ಚಿನ ಕೆಲಸ. ಪರಿಣಿತಿ : ಜಾಗತಿಕ ವಿದ್ಯಾಮಾನಗಳ ಹಾಗುಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಹಲವು ಸ್ವಾರಸ್ಯಕರ ಲೇಖನಗಳನ್ನು ಪ್ರಕಟಿಸಿದ್ದಾರೆ. ಕೇವಲ ಜಾಗತಿಕ ವಿದ್ಯಮಾನಗಳು ಮಾತ್ರವಲ್ಲದೆ, ಕೆ-ಕಲ್ಚರ್ ವಿಶೇಷವಾಗಿ ಕೆ-ಎಂಟರ್ಟೈನ್‌ ಮೆಂಟ್‌ ಸುದ್ದಿಗಳನ್ನು ಕನ್ನಡಿಗರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಹಾಗೂ ವಿಸೃತವಾಗಿ ವಿವರಿಸುವ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಇದರೊಂದಿಗೆ ಮಾನವ ಆಸಕ್ತಿ ಲೇಖನಗಳನ್ನು ಪ್ರಕಟಿಸುವಲ್ಲಿಯೂ ಆಸಕ್ತರಾಗಿದ್ದಾರೆ. ಶಿಕ್ಷಣ : 2025ರಲ್ಲಿ ಬೆಂಗಳೂರು ಸಿಟಿ ಯುನಿವರ್ಸಿಟಿಯ ಅಡಿಯಲ್ಲಿರುವ ವಿಜಯ ಕಾಲೇಜು ಜಯನಗರದಿಂದ ಪತ್ರಿಕೋದ್ಯಮ ಹಾಗೂ ಕಮ್ಯೂನಿಕೇಟಿವ್‌ ಇಂಗ್ಲಿಷ್‌ ಪದವಿ ಪಡೆದಿದ್ದಾರೆ. ಅಂತರ ಕಾಲೇಜು ಕಾರ್ಯಕ್ರಮಗಳಲ್ಲಿಯೂ ಪತ್ರಿಕೋದ್ಯಮ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹವ್ಯಾಸ : ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆ-ಪಾಪ್‌ ಸಂಗೀತ ಹಾಗೂ ಕೆ-ಸಿರೀಸ್‌ ಗಳು, ಕೆ-ಕಲ್ಚರ್‌ ಹಾಗೂ ಸೆಲೆಬ್ರಿಟಿಗಳನ್ನು ಕುರಿತು ತಿಳಿದುಕೊಳ್ಳವಲ್ಲಿ ವಿಶೇಷ ಆಸಕ್ತಿಯನ್ನು ಹೊಂದುವುದರ ಜೊತೆಗೆ ಚೈನಿಸ್ ಸಿರೀಸ್‌ ಗಳನ್ನು ವಿಕ್ಷೀಸುವಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ವ್ಯಾಪ್ತಿ ವಿಶೇಷತೆ : ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೆಲಸ ನಿರ್ವಹಿಸುತ್ತಿರುವ ಇವರು ಹಲವು ಅಂತಾರಾಷ್ಟ್ರೀಯ ವಿದ್ಯಮಾನಗಳ (Geopolitics) ಕುರಿತಂತೆ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ರಷ್ಯಾ ಅಧ್ಯಕ್ಷ ಪುಟಿನ್‌ ಭಾರತ ಭೇಟಿಯ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುವ ವಿಸ್ತೃತ ಲೇಖನ ಪ್ರಕಟಿಸಿದ್ದು, ಇದರಲ್ಲಿ ಭಾರತ-ರಷ್ಯಾ ನಡುವಿನ ರಾಜತಾಂತ್ರಿಕ, ರಕ್ಷಣಾ ವಲಯ ಸೇರಿದಂತೆ ದ್ವೀಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾದ ಹಲವು ಘಟನೆಗಳು ಹಾಗೂ ರಷ್ಯಾ ಅಧಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿಯಿಂದ ಭಾರತಕ್ಕೆ ಸಿಕ್ಕ ಕೊಡುಗೆಗಳ ಕುರಿತು ವಿವರಿಸುವ ಮಾಹಿತಿಗಳನ್ನು ನೀಡಿದ್ದಾರೆ.... ಇನ್ನಷ್ಟು ಓದಿ

ಸಂವಾದ ಆರಂಭಿಸಿ
Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
Good