ಸಮ್ಮರ್‌ ಡ್ರೆಸ್‌ ಗಳಲ್ಲಿ ನೀವು ಇಂಡಿಯನ್‌ ಲುಕ್‌ ಬಯಸುತ್ತೀರಾದರೆ ಸ್ಟ್ರೇಟ್‌ ಕುರ್ತಿ, ಫ್ಲೋರ್‌ ಕುರ್ತಿ ಟ್ರೈ ಮಾಡಬಹುದು. ಈ ಸೀಸನ್‌ನಲ್ಲಿ ನಿಮ್ಮನ್ನು ನೀವು ಸುಂದರವಾಗಿ ತೋರ್ಪಡಿಸಿಕೊಳ್ಳಲು ಹಾಗೂ ಟ್ಯಾನಿಂಗ್‌ನಿಂದ ಬಚಾವಾಗಲು ಕುರ್ತಿ ಎಲ್ಲಕ್ಕಿಂತ ಉತ್ತಮ ಡ್ರೆಸ್‌. ನೀವು ನಿಮ್ಮ ಇಂಡಿಯನ್‌ ಲುಕ್‌ನ್ನೂ ಬ್ಲ್ಯಾಕ್‌ ಬಿಂದಿ ಮತ್ತು ಕಲರ್‌ ಫುಲ್ ಜುಮಕಿಗಳಿಂದ ಪೂರೈಸಿಕೊಳ್ಳಬಹುದು. ಅದರ ಬದಲು ನೀವು ವೆಸ್ಟರ್ನ್‌ ಟ್ರೈ ಮಾಡಬಯಸಿದರೆ ಜಂಪ್‌ ಸೂಟ್‌, ರಾಂಪ್‌ ರೋನ್‌ ಸ್ಕರ್ಟ್‌, ಡೆನಿಂ ಶಾರ್ಟ್ಸ್ ಜೊತೆ ವೈಟ್‌ ಟಾಪ್‌ಹಾಗೂ ಪ್ಲಾಜೋ ಟ್ರೌಸರ್ಸ್‌ ಜೊತೆ ಕ್ರಾಪ್‌ ಟಾಪ್‌ ಟ್ರೈ ಮಾಡಬಹುದು. ಇದರಲ್ಲಿ ನೀವು ಬ್ಯೂಟಿಫುಲ್, ಸ್ಟೈಲಿಶ್‌ಗ್ಲಾಮರಸ್‌ ಆಗಿ ಕಂಡು ಬರುವುದರಲ್ಲಿ ಸಂದೇಹವಿಲ್ಲ.

ಬೇಸಿಗೆಯಲ್ಲಿ ಡ್ರೆಸ್ಸಿಂಗ್‌ ಸೆನ್ಸ್ ಡ್ರೆಸ್‌ ಯಾವಾಗಲೂ ಸೀಸನ್‌ಗೆ ತಕ್ಕಂತಿರಬೇಕು. ಆದರೆ ನಮಗೆ ಯಾವಾಗಲಾದರೂ ಒಂದು ಡ್ರೆಸ್‌ ಇಷ್ಟವಾದರೆ ತಕ್ಷಣ ಅದನ್ನು ಖರೀದಿಸುತ್ತೇವೆ. ಆ ಡ್ರೆಸ್‌ ಎಂಥ ಮೆಟೀರಿಯಲ್ ನದು. ಈಗಿನ ಸೀಸನ್‌ಗೆ ಸೂಟ್‌ಆಗುತ್ತದೆಯೇ ಎಂದೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ತಪ್ಪು, ಬದಲಿಗೆ ಸೀಸನ್‌ಗೆ ತಕ್ಕಂತೆ ನಾವು ಡ್ರೆಸ್‌ ಖರೀದಿಸಬೇಕು. ಬೇಸಿಗೆಯಲ್ಲಿ ಕಾಟನ್‌, ಹ್ಯಾಂಡ್‌ ಲೂಂ,  ಖಾದಿ, ಜಾರ್ಜೆಟ್‌ ಇತ್ಯಾದಿ ಡ್ರೆಸೆಸ್‌ ಧರಿಸಬೇಕು. ಇದು ಬೆವರನ್ನು ಚೆನ್ನಾಗಿ ಹೀರಿಕೊಳ್ಳುವುದಲ್ಲದೆ, ದೇಹವನ್ನು ಕೂಲ್ ‌ಆಗಿಯೂ ಇಡುತ್ತದೆ. ಆದಷ್ಟೂ ಲೈಟ್‌ ಡ್ರೆಸ್‌ಗಳಿಗೇ ಆದ್ಯತೆ ಕೊಡಿ.

ಬಣ್ಣಗಳ ಕಡೆ ಗಮನವಿರಲಿ

ಬೇಸಿಗೆಯಲ್ಲಿ ನಮ್ಮ ಉಡುಗೆಗಳ ಬಣ್ಣ ಕಂಗಳಿಗೆ ರಾಚುವಂತಿರಬಾರದು. ಲೈಟ್‌ ಬಣ್ಣದ ಡ್ರೆಸೆಸ್‌, ಬಿಸಿಲಿನ ತೀಕ್ಷ್ಣತೆ ಹಾಗೂ ಸೆಖೆಯ ಬಾಧೆ ಹೆಚ್ಚಿಸುವುದಿಲ್ಲ. ಅದು ನಮ್ಮನ್ನು ಎಷ್ಟೋ ತಂಪಾಗಿಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ  ಆದಷ್ಟೂ ವೈಟ್‌, ಬ್ಲೂ, ಪಿಂಕ್‌, ಯೆಲ್ಲೋ, ಗ್ರೀನ್‌ ಬಣ್ಣಗಳ ಉಡುಗೆಗಳನ್ನೇ ಆರಿಸಿ.

ಟ್ಯಾನಿಂಗ್ತೊಲಗಿಸಿ

ಚಳಿಗಾಲದಲ್ಲಿ ಸಹಜವಾಗಿಯೇ ಸ್ವೆಟರ್‌ ಇತ್ಯಾದಿ ಹೆಚ್ಚಿನ ವಸ್ತ್ರಗಳಿಂದ ನಾವು ಮೈಪೂರ್ತಿ ಒಂದಿಂಚೂ ತೆರೆದಿಡದಂತೆ ಕವರ್ ಮಾಡಿಕೊಳ್ಳುತ್ತೇವೆ, ಆದರೆ ಬೇಸಿಗೆಯಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಬೇಸಿಗೆಯಲ್ಲಿ ನಾವು ಆದಷ್ಟೂ ಓಪನ್‌ ಆಗಿರುವ ಡ್ರೆಸೆಸ್ ಧರಿಸಲು ಬಯಸುತ್ತೇವೆ. ಇದರಿಂದಾಗಿ ನಮಗೆ ಟ್ಯಾನಿಂಗ್‌ ಸಮಸ್ಯೆ ಕಾಡುತ್ತದೆ. ನಮ್ಮ ತೆರೆದ ಅಂಗಗಳ ಚರ್ಮ ಸೂರ್ಯನ UV ಕಿರಣಗಳಿಗೆ ಒಡ್ಡಿಕೊಂಡಷ್ಟೂ ಹಾನಿ ಹೆಚ್ಚಾಗುತ್ತದೆ. ಸೂರ್ಯನ ಈ ಹಾನಿಕಾರಕ UV ಕಿರಣಗಳು ನಮ್ಮ ಚರ್ಮಕ್ಕೆ ಹೆಚ್ಚಿನ ಹಾನಿ ಮಾಡುತ್ತವೆ. ಟ್ಯಾನಿಂಗ್‌ನಿಂದ ಬಚಾವಾಗಲು ನೀವು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ :

ವಾರದಲ್ಲಿ 2-3 ಸಲ ಅಗತ್ಯವಾಗಿ ಸ್ಕ್ರಬ್‌ ಮಾಡಿಸಿ.

ಮನೆಯಿಂದ ಹೊರಗೆ ಹೊರಡುವ ಮೊದಲು ಮರೆಯದೆ 30 SPF ಸನ್‌ಸ್ಕ್ರೀನ್‌ ಲೋಶನ್‌ ಹಚ್ಚಿಕೊಳ್ಳಿ.

ಅರಿಶಿನಕ್ಕೆ ತುಸು ನಿಂಬೆರಸ ಮತ್ತು ಹಸಿ ಹಾಲು ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಟ್ಯಾನಿಂಗ್‌ ಇರುನ ಭಾಗಕ್ಕೆ ನೀಟಾಗಿ ಸವರಬೇಕು. ಇದು ಚೆನ್ನಾಗಿ ಒಣಗಿದ ನಂತರ ನಿಮ್ಮ ಒದ್ದೆ ಕೈಗಳಿಂದ ಇದನ್ನು 5 ನಿಮಿಷ ಸ್ಕ್ರಬ್‌ ಮಾಡಿ.

ಪರಂಗಿ ಹಣ್ಣನ್ನು ಮ್ಯಾಶ್‌ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳಿ. ಇದರಿಂದ ಟ್ಯಾನಿಂಗ್‌ ತೊಲಗುತ್ತದೆ ಹಾಗೂ ಚರ್ಮಕ್ಕೆ ಪೋಷಣೆಯೂ ಸಿಗುತ್ತದೆ.

ಮುಖದ ಮೇಲಿನ ಟ್ಯಾನಿಂಗ್‌ ತೊಲಗಿಸಲು ಐಸ್‌ ಸಹ ಬಳಸಬಹುದು. ಮುಖದ ಮೇಲೆ ಐಸ್‌ನಿಂದ 5 ನಿಮಿಷ ಮಸಾಜ್‌ ಮಾಡಿ. ಇದರಿಂದ ಮುಖದ ಟ್ಯಾನಿಂಗ್‌ ತೊಲಗುವುದಲ್ಲದೆ, ಮುಖ ಹೆಚ್ಚು ಕಾಂತಿಯುತವಾಗಿ ನಳನಳಿಸುತ್ತದೆ.

ನಿಂಬೆ ಸಹ ಮುಖದಲ್ಲಿನ ಟ್ಯಾನಿಂಗ್‌ ನಿವಾರಿಸಲು ಹೆಚ್ಚು ಲಾಭದಾಯಕ. ನಿಂಬೆಹಣ್ಣನ್ನು 2 ಹೋಳು ಮಾಡಿ. ಅದರಿಂದ ಮುಖವನ್ನು ಮಸಾಜ್‌ ಮಾಡಿ.

ಬೇಸಿಗೆಗೆ ಮೇಕಪ್ಟಿಪ್ಸ್

ಬೇಸಿಗೆಯಲ್ಲಿ ಬೆವರಿನ ಕಾರಣ ಮೇಕಪ್‌ ಬೇಗ ಕೆಟ್ಟು ಹೋಗುತ್ತದೆ. ಹೀಗಾಗಿ ಇಲ್ಲಿನ ಕೆಲವು ಸಲಹೆಗಳನ್ನು ಅನುಸರಿಸಿ, ಬೇಸಿಗೆಯಲ್ಲೂ ಮೇಕಪ್‌ ದೀರ್ಘಕಾಲ ಉಳಿಯುವಂತೆ ಮಾಡಿ :

ಬೇಸಿಗೆಯಲ್ಲಿ ಚರ್ಮ ಬೇಗನೆ ಆಯ್ಲಿ ಆಗುತ್ತದೆ. ಇದರಿಂದಾಗಿ ಮೇಕಪ್‌ ಪರ್ಫೆಕ್ಟ್ ಆಗುವುದಿಲ್ಲ. ಇದಕ್ಕಾಗಿ ಆಯಿಲ್ ‌ಕಂಟ್ರೋಲ್ ಫೇಸ್‌ ವಾಶ್‌ ಬಳಸಿಕೊಳ್ಳಿ. ಮೇಕಪ್‌ ಮಾಡುವ ಮೊದಲು ಮುಖವನ್ನು ಐಸ್‌ನಿಂದ ಚೆನ್ನಾಗಿ ಮಸಾಜ್‌ ಮಾಡಿ.

ಯಾವುದೇ ಆಯ್ಲಿ ಮೇಕಪ್‌ ಪ್ರಾಡಕ್ಟ್ ಬಳಸಬೇಡಿ.

ಲಿಕ್ವಿಡ್‌ ಫೌಂಡೇಶನ್‌ ಬಳಸಲೇಬೇಡಿ. ನಿಮಗೆ ಅಗತ್ಯವಾಗಿ ಫೌಂಡೇಶನ್‌ ಬಳಸಬೇಕಿದ್ದರೆ, ಆ ಫೌಂಡೇಶನ್‌ ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತಿರಲಿ. ಫೌಂಡೇಶನ್‌ ಹಚ್ಚಿಕೊಳ್ಳುವಾಗ ಅಗತ್ಯವಾಗಿ ಅದಕ್ಕೆ 30 SPF ಸನ್‌ಸ್ಕ್ರೀನ್‌ ಲೋಶನ್‌ ಬೆರೆಸಿಕೊಳ್ಳಿ.

ನಿಮ್ಮ ಕಂಗಳಿಗೆ ಸದಾ ಸ್ಮಜ್‌ಫ್ರೀ ಕಾಜಲ್ ಮಾತ್ರ ಬಳಸಿಕೊಳ್ಳಿ. ಕಾಜಲ್ ಹಚ್ಚಿದ ನಂತರ ಕಂಗಳ ಕೆಳಗೆ ಲೈಟ್‌ ಆಗಿ ಫೇಸ್ ಪೌಡರ್‌ ಹಚ್ಚಬೇಕು. ಇದರಿಂದ ಕಾಡಿಗೆ ಹರಡಿಕೊಳ್ಳುವುದಿಲ್ಲ.

ಮಸ್ಕರಾ ಸದಾ ವಾಟರ್‌ ಪ್ರೂಫ್‌ ಯಾ ಟ್ರಾನ್ಸ್ ಪರೆಂಟ್‌ ಆಗಿರಲಿ.

ಬ್ಲಶ್‌ಗಾಗಿ ಮ್ಯಾಟ್‌ ಲಿಪ್‌ಸ್ಟಿಕ್‌ನ ಪೀಚ್‌ ಯಾ ಪಿಂಕ್‌ ಶೇಡ್‌ನ್ನು ಬಳಸಿರಿ. ಇದು ಕೆನ್ನೆ ಮೇಲೆ ಸೆಟ್‌ ಆಗುತ್ತದೆ ಹಾಗೂ ನ್ಯಾಚುರಲ್ ಲುಕ್‌ ನೀಡುತ್ತದೆ.

ಲಿಪ್‌ಸ್ಟಿಕ್‌ ಹಚ್ಚುವ ಮೊದಲು ತುಟಿಗಳಿಗೆ ವ್ಯಾಸಲೀನ್‌ ತೀಡಿರಿ. ನಂತರ ಲಿಪ್‌ಸ್ಟಿಕ್‌ ಹಚ್ಚಬೇಕು. ಬೇಸಿಗೆಯಲ್ಲಿ ಮ್ಯಾಟ್‌ ಲಿಪ್‌ಸ್ಟಿಕ್‌ ಎಲ್ಲಕ್ಕೂ ಬೆಸ್ಟ್ ಎನಿಸಿದೆ, ಏಕೆಂದರೆ ಇದು ಬೇಗ ಸ್ಮಜ್‌ ಆಗುವುದಿಲ್ಲ.

ಮೋನಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ