77 ವರ್ಷದ ಮಧುಮೇಹ ರೋಗಿ ಚಂದ್ರಶೇಖರ್‌ ಅವರ ಜೀವನ ಈಗ ನೆಮ್ಮದಿಯಿಂದ ಕೂಡಿದೆ. ಆದರೆ 2014ರಲ್ಲಿ ಅವರ ಸ್ಥಿತಿ ಸಾಕಷ್ಟು ತೊಂದರೆಯಿಂದ ಕೂಡಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಬೈಪಾಸ್‌ ಸರ್ಜರಿ ಕೂಡ ಆಗಿತ್ತು. ವಯಸ್ಸಿನ ಈ ಹಂತದಲ್ಲಿ ಅವರಿಗೆ ನಡೆದಾಡಲು ಅಥವಾ ಕೆಲಸ ಮಾಡಲು ಕೂಡ ಕಷ್ಟಕರವಾಗಿತ್ತು. ಒಂದಿಷ್ಟೂ ನಡೆದರೂ ಸಾಕು, ಅವರಿಗೆ ಉಬ್ಬಸ ಬರುತ್ತಿತ್ತು. ಹೆಚ್ಚುತ್ತಾ ಹೊರಟ ಅವರ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದುಕೊಳ್ಳಲಾಯಿತು.

ವೈದ್ಯರು ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಲು ಸಲಹೆ ನೀಡಿದರು. ಅದರಲ್ಲಿ ಎಂಎಸ್‌ಸಿಟಿ (ಈ ತಂತ್ರಜ್ಞಾನದಲ್ಲಿ ಹೃದಯ ಹಾಗೂ ರಕ್ತನಾಳಗಳ 3ಡಿ ಇಮೇಜ್‌, ಎಕ್ಸರೇ ಬೀಮ್ ಹಾಗೂ ಲಿಕ್ವಿಡ್‌ ಡೈಯನ್ನು ಬಳಸಲಾಗುತ್ತದೆ) ಕೂಡ ಸೇರಿತ್ತು.

ಪರೀಕ್ಷೆಯ ಬಳಿಕ ಅವರು `ಏರೋಟಿಕ್‌ ಸ್ಟೆನೊಸಿಸ್‌’ನಿಂದ ಬಳಲುತ್ತಿದ್ದಾರೆಂದು ಹೇಳಲಾಯಿತು. ಚಂದ್ರಶೇಖರ್‌ ಅವರಿಗೆ ಶಸ್ತ್ರಚಿಕಿತ್ಸೆಯಾಗಿ 2 ವರ್ಷಗಳೇ ಆಗಿವೆ. ಈಗವರು ಅತ್ಯುತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಏನಿದು ಏರೋಟಿಕ್ಸ್ಟೆನೊಸಿಸ್‌?

ಹೃದಯ ಪಂಪ್‌ ಮಾಡುವ ಸಂದರ್ಭದಲ್ಲಿ ಹೃದಯದ ಕಾಟಗಳು ತೆರೆದುಕೊಳ್ಳುತ್ತವೆ. ಆಗ ರಕ್ತ ಮುಂದೆ ಸಾಗುತ್ತದೆ ಹಾಗೂ ಹೃದಯ ಬಡಿತದ ಮಧ್ಯೆ ತಕ್ಷಣವೇ ಮುಚ್ಚಿಕೊಳ್ಳುತ್ತದೆ. ಏಕೆಂದರೆ ರಕ್ತ ವಾಪಸ್‌ ಸಾಗದಿರಲಿ ಎಂದು. ಏರೋಟಿಕ್‌ ವಾಲ್ ‌ರಕ್ತವನ್ನು ಎಡ ಲೋಯರ್‌ ಚೇಂಬರ್‌ (ಎಡ ವೆಂಟ್ರಿಕ್‌) ನಿಂದ ಏರೋಟಿಕ್‌ ನಲ್ಲಿ ಹೋಗಲು ನಿರ್ದೇಶನ ನೀಡುತ್ತದೆ.

ಏರೋಟಿಕ್‌ ಮುಖ್ಯ ರಕ್ತನಾಳವಾಗಿದ್ದು ಅದು ಎಡ ಲೋಯರ್‌ ಚೇಂಬರ್‌ ನಿಂದ ಹೊರಟು ದೇಹದ ಬೇರೆ ಭಾಗಗಳಿಗೆ ಸಾಗುತ್ತದೆ. ಒಂದು ವೇಳೆ ಸಾಮಾನ್ಯ ಪ್ರವಾಹದಲ್ಲಿ ಅಡಚಣೆ ಉಂಟಾದರೆ ಹೃದಯ ಪರಿಣಾಮಕಾರಿಯಾಗಿ ಪಂಪ್‌ ಮಾಡಲು ಆಗುವುದಿಲ್ಲ. ಗಂಭೀರ ಏರೋಟಿಕ್‌ ಸ್ಟೆನೊಸಿಸ್‌ ಅಂದರೆ ಎಎಸ್‌ ನಲ್ಲಿ ಏರೋಟಿಕ್‌ ವಾಲ್ವ್ ‌ಸರಿಯಾಗಿ ತೆರೆದುಕೊಳ್ಳುವುದಿಲ್ಲ.

ಕಾರ್ಡಿಯಾಲಜಿಸ್ಟ್ ಡಾ. ಪ್ರವೀಣ್‌ ಚಂದ್ರ ಹೀಗೆ ಹೇಳುತ್ತಾರೆ, “ಗಂಭೀರ ಏರೋಟಿಕ್‌ ಸ್ಟೆನೊಸಿಸ್‌ ನ ಸ್ಥಿತಿಯಲ್ಲಿ ದೇಹದಲ್ಲಿ ರಕ್ತ ಪೂರೈಸಲು ನಿಮ್ಮ ಹೃದಯ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಕಾಲಕ್ರಮೇಣ ಈ ಕಾರಣದಿಂದಾಗಿ ಹೃದಯ ದುರ್ಬಲವಾಗುತ್ತಾ ಹೋಗುತ್ತದೆ. ಅದು ಇಡೀ ದೇಹದ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣದಿಂದಾಗಿ ಸಾಮಾನ್ಯ ಚಟುವಟಿಕೆ ನಡೆಸಲು ಕಷ್ಟವಾಗುತ್ತದೆ. ಜಟಿಲ ಎಎಸ್‌ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಅದರಿಂದ ಜೀವನಕ್ಕೆ ಅಪಾಯ ಉಂಟಾಗಬಹುದು. ಅದು ಹೃದಯಾಘಾತ ಇಲ್ಲಿ ಕಾರ್ಡಿಯಾಕ್‌ ಮೃತ್ಯುವಿಗೂ ಕಾರಣವಾಗಬಹುದು.

ಲಕ್ಷಣ ಗುರುತಿಸಿ

ಏರೋಟಿಕ್‌ ಸ್ಟೆನೊಸಿಸ್‌ನ ಹಲವು ಪ್ರಕರಣಗಳಲ್ಲಿ ಎಲ್ಲಿಯವರೆಗೆ ರಕ್ತದ ಪ್ರವಾಹ ವೇಗವಾಗಿ ನುಗ್ಗುವುದಿಲ್ಲವೋ ಅಲ್ಲಿಯವರೆಗೆ ಲಕ್ಷಣಗಳು ಗೋಚರಿಸುವುದಿಲ್ಲ. ಹೀಗಾಗಿ ಈ ರೋಗ ಬಹಳ ಅಪಾಯಕಾರಿ. ವೃದ್ಧರಲ್ಲಿ ಕಂಡುಬರುವ ವಿಶಿಷ್ಟ ಲಕ್ಷಣಗಳ ಬಗ್ಗೆ ಗಮನಹರಿಸುವುದು ಅತ್ಯಂತ ಅವಶ್ಯಕ. ಇದರ ಮುಖ್ಯ ಲಕ್ಷಣಗಳೆಂದರೆ ಎದೆಯಲ್ಲಿ ನೋವು, ಒತ್ತಡ ಅಥವಾ ಹಿಡಿದುಕೊಂಡಂತಾಗುವುದು, ಉಸಿರು ತೆಗೆದುಕೊಳ್ಳಲು ತೊಂದರೆ, ಪ್ರಜ್ಞಾಹೀನ ಸ್ಥಿತಿ, ಗಾಬರಿ, ದೇಹ ಭಾರವಾದಂತೆ ಎನಿಸುವುದು, ಹೃದಯ ಬಡಿತ ಮಂದಗೊಳ್ಳುವುದು, ಇಲ್ಲಿ ತೀವ್ರಗೊಳ್ಳುವುದು.

ವೃದ್ಧರಲ್ಲಿ ಏರೋಟಿಕ್‌ ಸ್ಟೆನೊಸಿಸ್‌ನ ರಿಸ್ಕ್ ಜಾಸ್ತಿ ಇರುತ್ತದೆ. ಏಕೆಂದರೆ ಅವರಲ್ಲಿ ಬಹಳ ಸಮಯದ ತನಕ ಇದರ ಆರಂಭಿಕ ಲಕ್ಷಣಗಳು ಗೋಚರಿಸುವುದಿಲ್ಲ. ಎದೆಯಲ್ಲಿ ನೋವು ಅಥವಾ ತೊಂದರೆ, ಪ್ರಜ್ಞಾಹೀನ ಅಥವಾ ಉಸಿರಾಟದಲ್ಲಿ ತೊಂದರೆ, ಈ ಲಕ್ಷಣಗಳು ಆ ಸಮಸ್ಯೆಯನ್ನು ಹೆಚ್ಚಿಸುತ್ತವೆ ಹಾಗೂ ರೋಗಿಯ ಜೀವಿತಾವಧಿ ಸೀಮಿತವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಇದಕ್ಕೆ ಚಿಕಿತ್ಸೆಯೆಂದರೆ ವಾಲ್ವ್ ರಿಪ್ಲೇಸ್‌ ಮೆಂಟ್‌ ಒಂದೇ. ಇತ್ತೀಚೆಗಷ್ಟೆ ಟ್ರಾನ್ಸ್ ಕೆಥೆಟರ್‌ ಏರೋಟಿಕ್‌ ವಾಲ್ವ್ ‌ರೀಪ್ಲೇಸ್‌ ಮೆಂಟ್‌(ಟಿಎಪಿಆರ್‌) ತಂತ್ರಜ್ಞಾನದ ನೆರವಿನಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಯನ್ನು ಪರಿಣಾಮಕಾರಿ ರೀತಿಯಲ್ಲಿ ಮಾಡಬಹುದಾಗಿದೆ. ಅವರ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ರಿಸ್ಕ್ ಆಗಿರುತ್ತದೆ.

ಏರೋಟಿಕ್‌ ವಾಲ್ವ್ ‌ರೀಪ್ಲೇಸ್‌ ಮೆಂಟ್‌ ತೆರೆದ ಹೃದಯದ ಚಿಕಿತ್ಸೆ ಮಾಡಲು ಯಾರನ್ನು ಅನ್‌ ಫಿಟ್‌ ಎಂದು ಭಾವಿಸಲಾಗುತ್ತೋ, ಅವರಿಗೆ ಟಿಎವಿಆರ್‌ ನಿಂದ ಏರೋಟಿಕ್‌ ಸ್ಟೆನೊಸಿಸ್‌ ರೋಗಿಗಳಿಗೆ ಸಾಕಷ್ಟು ಉಪಯೋಗವಾಗುತ್ತದೆ. ಯಾರಿಗೆ ಶಸ್ತ್ರಚಿಕಿತ್ಸೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತೊ ಅವರಿಗೆ ಈ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಇದರಿಂದ ಅವರ ಜೀವಿತಾವಧಿ ಹಾಗೂ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ. ಗಂಭೀರ ಏರೋಟಿಕ್‌ ಸ್ಟೆನೊಸಿಸ್‌ ನ ಸ್ಥಿತಿಯಲ್ಲಿ ಪ್ರಾಣಕ್ಕೆ ಕುತ್ತು ಬರುವ  ಅಪಾಯವಿರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಉಂಟಾಗುತ್ತದೆ. ಕೆಲವು ವರ್ಷಗಳ ತನಕ ಈ ರೋಗದ ಚಿಕಿತ್ಸೆಗೆ ಓಪನ್‌ ಹಾರ್ಟ್‌ ಸರ್ಜರಿಯೇ ಸೂಕ್ತವಾಗಿತ್ತು. ಟಿಎವಿಆರ್‌ ಚಿಕಿತ್ಸೆ ಬಂದ ಬಳಿಕ ಈಗ ಸಾಕಷ್ಟು ಬದಲಾವಣೆ ಬಂದಿದೆ. ಟಿಎವಿಆರ್‌ ಮಿನಿಮಮ್ ಇನ್‌ ವೆಸಿಸ್‌ ಸರ್ಜಿಕಲ್ ರೀಪ್ಲೇಸ್‌ ಮೆಂಟ್‌ ಪ್ರಕ್ರಿಯೆಯಾಗಿದ್ದು, ಗಂಭೀರ ರೂಪದಲ್ಲಿ ತೊಂದರೆಗೆ ಒಳಗಾಗಿರುವ ಏರೋಟಿಕ್‌ ಸ್ಟೆನೊಸಿಸ್‌ ರೋಗಗಳಿಗೆ ಮತ್ತು ಓಪನ್‌ ಹಾರ್ಟ್‌ ಸರ್ಜರಿಗೆ ರಿಸ್ಕಿ ಎಂದು ಪರಿಗಣಿಸಲಾಗುವ ರೋಗಿಗಳಿಗೆ ಲಭ್ಯವಾಗಿದೆ. ಇದರ ಹೊರತಾಗಿ ಯಾವ ರೋಗಿಗಳು ಹಲವು ಬಗೆಯ ರೋಗಗಳಿಂದ ಪೀಡಿತರಾಗಿರುತ್ತಾರೊ ಅವರಿಗೂ ಕೂಡ ಇದು ಸಾಕಷ್ಟು ಪರಿಣಾಮಕಾರಿ ಹಾಗೂ ಸುರಕ್ಷಿತ ಪ್ರಕ್ರಿಯೆಯಾಗಿದೆ.

ಹೊಸ ಜೀವನ ನೀಡಿದ ಟಿಎವಿಆರ್

ವರ್ಷದ ಸಂಜೀವ್ ಕುಮಾರ್‌ ಅವರ ತೂಕ 140 ಕಿಲೋ. ಅವರು ಹೈಪರ್‌ ಟೆನ್ಶನ್‌ ಹಾಗೂ ಮಧುಮೇಹಕ್ಕೆ ತುತ್ತಾಗಿದ್ದರು. ಇದರ  ಜೊತೆಗೆ ಅವರು ಅನ್‌ ಸ್ಟೇಬಲ್ ಎಂಝೈನಾ ಸಮಸ್ಯೆಯಿಂದಲೂ ಸುತ್ತುವರಿದಿದ್ದರು. ಇಂತಹ ಸ್ಥಿತಿಯಲ್ಲಿ ರೋಗಿಗೆ ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ವಿಶ್ರಾಂತಿಯ ಸ್ಥಿತಿಯಲ್ಲಿದ್ದಾಗಲೇ ಅರಿವಿಗೆ ಬರುತ್ತದೆ.

ಸಂಜೀವ್ ‌ರಿಗೆ ಬೇರೆ ಕೆಲವು ರೋಗಗಳು ಅಂದರೆ ಕ್ರಿಟಿಕಲ್ ಕೊರೊನರಿ ಆರ್ಟರಿ ರೋಗ (ಸಿಎಡಿ), ಅಬ್‌ ಸ್ಟ್ರ್ಯಾಕ್ಟಿವ್ ಸ್ಲೀಪ್ ಆಪ್ನಿಯಾ (ಮಲಗಿರುವಾಗ ಉಸಿರು ತೆಗೆದುಕೊಳ್ಳುವಲ್ಲಿ ಸಮಸ್ಯೆ) ಅತಿರಕ್ತದೊತ್ತಡ, ಕ್ರಾನಿಕ್‌ ವೇನ್ಸ್ ಇನ್‌ ಸಫಿಶಿಯೆನ್ಸಿ (ಎಡಗಾಲು) ಗ್ರೇಡ್‌ ಫ್ಯಾಟಿ ಲಿವರ್‌ (ಕರುಳು ದುರ್ಬಲವಾಗುವುದು), ಹರ್ನಿಯಾ ಹಾಗೂ ಗಂಭೀರ ಎಲ್ ವಿ ಡೈಫಂಕ್ಷನ್‌ ಜೊತೆ ದುರ್ಬಲ ಇಂಜೆಕ್ಷನ್‌ ಫ್ರ್ಯಾಕ್ಷನ್‌ % (ಹೃದಯದ ಪಂಪಿಂಗ್‌ ಸಾಮರ್ಥ್ಯ) ಇತ್ತು.

ಸಂಜೀವ್ ರ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಾ ಸಾಗಿತ್ತು. ಅವರ ಪಲ್ಸ್ ರೇಟ್‌ ಪ್ರತಿ ನಿಮಿಷಕ್ಕೆ 98 (ಸಾಮಾನ್ಯಕ್ಕಿಂತ ಹೆಚ್ಚು) ಇತ್ತು. ಸಿ.ಟಿ. ಸ್ಕ್ಯಾನ್‌ ಹಾಗೂ ಇತರೆ ಪರೀಕ್ಷೆಗಳ ಬಳಿಕ ಅವರು ಗಂಭೀರ ಎಿರ್ಟಿಕ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಖಚಿತವಾಯಿತು.

ಇಷ್ಟೆಲ್ಲ ರೋಗಗಳ ಕಾರಣದಿಂದ ಬೊಜ್ಜಿಗೆ ತುತ್ತಾಗಿದ್ದ ಸಂಜೀವ್ ‌ರವರ ಚಿಕಿತ್ಸೆಯನ್ನು ಟ್ರಾನ್ಸ್ ಕೆಪೆಟರ್‌ ಏರೋಟಿಕ್‌ ವಾಲ್ವ್ ರೀಪ್ಲೇಸ್‌ ಮೆಂಟ್‌ (ಟಿಎವಿಆರ್‌) ಮುಖಾಂತರ ಮಾಡಲಾಯಿತು. ಫೆಬ್ರವರಿ 2016ರಲ್ಲಿ ಅವರಿಗೆ ಈ ಚಿಕಿತ್ಸೆ ನೀಡಲಾಯಿತು. ಅಲ್ಲಿಯವರೆಗೆ ಅವರು 25-30 ಕಿಲೋದಷ್ಟು ತೂಕ ಕಡಿಮೆ ಮಾಡಿಕೊಂಡಿದ್ದರು. ಜೀವನದ ಬಗೆಗಿನ ಅವರ ದೃಷ್ಟಿಕೋನ ಬಹಳಷ್ಟು ಸಕಾರಾತ್ಮಕವಾಗಿತ್ತು.

ಸಕಾಲಕ್ಕೆ ಪರೀಕ್ಷೆ ಅತ್ಯಗತ್ಯ

ಎಎಸ್‌ ಎಂತಹ ಒಂದು ರೋಗವೆಂದರೆ, ಅದು ಗಂಭೀರ ರೂಪ ತಾಳುವತನಕ ಅದರ ಲಕ್ಷಣಗಳೇ ಗೊತ್ತಾಗುವುದಿಲ್ಲ. ಹೀಗಾಗಿ ನಿಯಮಿತವಾಗಿ ಪರೀಕ್ಷೆ ಮಾಡಲು ಸಲಹೆ ನೀಡಲಾಗುತ್ತದೆ. ವಯಸ್ಸು ಹೆಚ್ಚುತ್ತಾ ಹೊರಟಂತೆ ಎಎಸ್‌ ನ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ಹೀಗಾಗಿ ವೃದ್ಧ ರೋಗಿಗಳಿಗೆ ವಾಲ್ವ್ ಫಂಕ್ಷನ್‌ ಟೆಸ್ಟ್ ಬಗ್ಗೆ ಕೇಳಬೇಕು ಹಾಗೂ ಗಂಭೀರ ಏರೋಟಿಕ್‌ ಸ್ಟೆನೊಸಿಸ್‌ ನ ಚಿಕಿತ್ಸೆಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯುತ್ತಾ ಇರಬೇಕು.

ಪ್ರತಿನಿಧಿ

ನಿಮಗಿದು ಗೊತ್ತೆ?

ಭಾರತದಲ್ಲಿ ಸುಮಾರು 15 ಲಕ್ಷ ಜನ ಏರೋಟಿಕ್‌ ಸ್ಟೆನೊಸಿಸ್‌ನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅರಲ್ಲಿ 4.5 ಲಕ್ಷ ಜನರು ಶಸ್ತ್ರಚಿಕಿತ್ಸೆಗೆ ಅನ್‌ ಫಿಟ್‌ ಆಗಿದ್ದಾರೆ. ಒಂದು ವೇಳೆ ಸಕಾಲಕ್ಕೆ ಏರೋಟಿಕ್‌ ವಾಲ್ವ್ ‌ರೀಪ್ಲೇಸ್‌ ಮಾಡದೇ ಹೋದರೆ, ಶೇ.50ರಷ್ಟು ಏರೋಟಿಕ್‌ ಸ್ಟೆನೊಸಿಸ್‌ ರೋಗಿಗಳು ಹೃದಯಾಘಾತ ಆದಾಗ 2 ವರ್ಷ ಹಾಗೂ ಎದೆನೋವಿನ ಜೊತೆಗೆ 5 ವರ್ಷಗಳವರೆಗೆ ಮಾತ್ರ ಜೀವಿಸಬಲ್ಲರು.

ರಿಸ್ಕ್ ಫ್ಯಾಕ್ಟರ್ಸ್

ಗಂಭೀರ ರೂಪ ಪಡೆದ ಏರೋಟಿಕ್‌ ಸ್ಟೆನೊಸಿಸ್‌ ನ್ನು ತಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ಏರೋಟಿಕ್‌ ವಾಲ್ವ್ ಸಂಕುಚಿತಗೊಳ್ಳುತ್ತದೆ. ಅದಕ್ಕೆ ಕೆಳಕಂಡ ಕಾರಣಗಳಿರಬಹುದು.

ವಯಸ್ಸು

ಕ್ಯಾಲ್ಶಿಯಂ ಸಂಗ್ರಹದಿಂದ ಏರೋಟಿಕ್‌ ವಾಲ್ವ್ ‌ಸಂಕುಚಿತಗೊಂಡಿರುವುದು

ರೇಡಿಯೇಶನ್‌ ಥೆರಪಿ

ಹೃದಯದಲ್ಲಿ ಬ್ಯಾಕ್ಟೀರಿಯಾ ಸೋಂಕಿನ ಇತಿಹಾಸ (ರೊಮೆಟಿಕ್‌ ಫೀವರ್‌)

ರಕ್ತನಾಳದಲ್ಲಿ ಕೊಬ್ಬಿನಂಶ ಹೆಚ್ಚುವುದು (ಕೊಲೆಸ್ಟ್ರಾಲ್ ಹೆಚ್ಚಾಗುವಿಕೆ)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ