ಚರ್ಮ ನಮ್ಮ ದೇಹದ ಅತಿ ಮಹತ್ವಪೂರ್ಣ ಅಂಗ. ಇದು ದೇಹವನ್ನು ಪರಿಸರ ಮಾಲಿನ್ಯದ ಕುಪ್ರಭಾವಗಳಿಂದ ರಕ್ಷಿಸುತ್ತದೆ. ಇದನ್ನು ಸ್ವಸ್ಥವಾಗಿ ಇಟ್ಟುಕೊಳ್ಳಬೇಕು. ಚರ್ಮವನ್ನು ಆರೋಗ್ಯಕರವಾಗಿಸಿಕೊಳ್ಳಲು ಇದೀಗ ಮಾರುಕಟ್ಟೆಗೆ ಹೊಸ ಸಾಧನ ಬಂದಿದೆ, ಅದುವೇ ರೋಲರ್. ಇದು ಮುಖವನ್ನು ಅಚ್ಚುಕಟ್ಟಾಗಿ ಮಸಾಜ್ ಮಾಡುವ ಒಂದು ಸಾಧನ. ಇದು ಒಂದು ಗೋಲಾಕಾರದ ನುಣುಪಾದ ಪೆಬ್ ನೊಂದಿಗೆ ಒಂದು ಹ್ಯಾಂಡ್ ಜೊತೆ ಹೊಂದಿಕೊಂಡಿರುತ್ತದೆ. ಹ್ಯಾಂಡ್ ನೆರವಿನಿಂದ ಇದನ್ನು ಮುಖವಿಡೀ ಓಡಾಡಿಸಿ ಮಸಾಜ್ ಮಾಡಬಹುದು. ಈ ರೋಲರ್ ಮುಖದ ಚರ್ಮವನ್ನು ಫರ್ಮ್ ಟೈಟ್ ಮಾಡುವಲ್ಲಿ ಸಹಕಾರಿ! ಇದು ರಕ್ತ ಸಂಚಾರವನ್ನು ಸುಗಮಗೊಳಿಸಿ, ಚರ್ಮಕ್ಕೆ ಅತ್ಯಾಕರ್ಷಕ ಹೊಳಪಿನ ಜೊತೆ ಅದ್ಭುತ ಕಾಂತಿಯನ್ನೂ ತಂದುಕೊಡುತ್ತದೆ. ರೋಲರ್ ವಿಶೇಷ ಬ್ಯೂಟಿ ಟೆಕ್ನಿಕ್ ನಿಂದ ಕೂಡಿದ್ದು, ಚರ್ಮದ ಊತಗಳನ್ನು ಕೂಡ ಕಡಿಮೆಗೊಳಿಸಬಲ್ಲದು. ರೋಲರ್ ನ ಲಾಭಗಳು
ರೋಲರ್ ಕೋಲೋಜೆನ್ನಿನ ಉತ್ಪಾದನೆ ಹೆಚ್ಚಾಗುವಂತೆ ಉತ್ತೇಜಿತಗೊಳಿಸುತ್ತದೆ. ಇದು ಚರ್ಮದ ಮೇಲೆ ಸೆಟ್ ಆದ ಫ್ಯಾಟ್ ನ್ನು ಕರಗಿಸಬಲ್ಲದು. ಇದು ಮುಖದಲ್ಲಿನ ಹೆಚ್ಚುವರಿ ಕೊಬ್ಬನ್ನೂ ತೊಲಗಿಸಬಲ್ಲದು.
ರೋಲರ್ ಮುಖದಲ್ಲಿನ ರೋಮರಂಧ್ರಗಳನ್ನು ಕಡಿಮೆಗೊಳಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ.
ಇದು ಮುಖದಲ್ಲಿನ ಸುಕ್ಕುಗಳು, ಕಪ್ಪು ಉಂಗುರ, ಫೈನ್ ಲೈನ್ಸ್, ಇತ್ಯಾದಿ ತಗ್ಗಿಸುವಲ್ಲಿಯೂ ನೆರವಾಗುತ್ತದೆ. ಜೊತೆಗೆ ಮುಖದ ಚರ್ಮ ವಯಸ್ಸಿಗೆ ಮುಂಚೆ ವೃದ್ಧಾಪ್ಯದತ್ತ ಜಾರುವುದನ್ನೂ ತಡೆಯಬಲ್ಲದು.
ರೋಲರ್ ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ರಕ್ತ ಸಂಚಾರವನ್ನೂ ಕಂಟ್ರೊಲ್ ಮಾಡುತ್ತದೆ.
ರೋಲರ್ ಚರ್ಮದಲ್ಲಿ ಉಂಟಾಗುವ ವಿಷಯುಕ್ತ ಪದಾರ್ಥಗಳ ಜೊತೆ ಅನಗತ್ಯ ಊತಗಳನ್ನೂ ನಿವಾರಿಸುತ್ತದೆ.
ಕಂಗಳ ಕೆಳಗಿನ ಕಪ್ಪು ವೃತ್ತಗಳು, ಸುಕ್ಕುಗಳು ತಾನಾಗಿ ತಗ್ಗುತ್ತವೆ.
ರೋಲರ್ ಚರ್ಮದ ಆಳದ ತನಕ ಇಳಿದು ಅದನ್ನು ಶುಭ್ರಗೊಳಿಸಿ, ಬ್ಯೂಟಿ ತಂದುಕೊಡುತ್ತದೆ.
ಇದನ್ನು ಬಳಸುವುದು ಹೇಗೆ?
ರೋಲರನ್ನು ವಿಭಿನ್ನ ವಿಧಾನಗಳಲ್ಲಿ ಬಳಸಲಾಗುತ್ತದೆ. ಸ್ವಚ್ಛ ಚರ್ಮದ ಮೇಲೆ ಸ್ಕಿನ್ ಕೇರ್ ಕಾಸ್ಮೆಟಿಕ್ಸ್ ಬಳಸುವ ಮುನ್ನ ಇದನ್ನು ಸರಿಯಾಗಿ ಬಳಸುವುದು ಒಳ್ಳೆಯದು. ರಾತ್ರಿ ಮಲಗುವ ಮೊದಲು ರೋಲರ್ ಬಳಸುವುದು ಲೇಸು. (ನಾವು ಸಂಪೂರ್ಣ ವಿಶ್ರಾಂತಿ ಪಡೆಯುವಾಗ ಚರ್ಮ ಚಟುವಟಿಕೆಯಿಂದ ತನ್ನ ಕೆಲಸ ಮಾಡಿಕೊಳ್ಳುತ್ತದೆ.) ಅದಕ್ಕೂ ಮುನ್ನ ಮುಖಕ್ಕೆ ಲಘುವಾಗಿ ಬಾದಾಮಿ ಎಣ್ಣೆ ಸವರಬೇಕು. ಉತ್ತಮ ಪರಿಣಾಮಕ್ಕಾಗಿ ರೋಲರ್ ನ್ನು ಕೆಳಗಿನಿಂದ ಮೇಲ್ಭಾಗಕ್ಕೆ ರೋಲ್ ಮಾಡುತ್ತಾ ಬಳಸಬೇಕು.
ಚರ್ಮದ ಒಂದು ಬದಿಯಿಂದ ಮುಖದ ಮೂಲೆ ಮೂಲೆಯನ್ನೂ ತಲುಪಬಹುದು. ಎಲ್ಲಿ ಮುಖದಲ್ಲಿ ಸುಕ್ಕು, ಫೈನ್ ಲೈನ್ಸ್ ಹೆಚ್ಚಿದೆಯೋ ಅಂಥ ಕಡೆ ಇದನ್ನು ಮತ್ತೆ ಮತ್ತೆ ಬಳಸಬೇಕು. ತಲೆನೋವಿನಿಂದ ಮುಕ್ತಿ ಪಡೆಯಲಿಕ್ಕೂ ಇದು ಅನುಕೂಲ.
– ಅರ್ಚನಾ
ರೋಲರ್ ನ ಲಾಭಗಳು
ರಕ್ತ ಸಂಚಾರ ಹೆಚ್ಚಿಸುತ್ತದೆ.
ಊತ ಕಡಿಮೆ ಮಾಡುತ್ತದೆ.
ಚರ್ಮದಲ್ಲಿ ಬಿಗುವು ತರುತ್ತದೆ.
ಡಾರ್ಕ್ ಸರ್ಕಲ್ಸ್ ತಗ್ಗಿಸುತ್ತದೆ.
ಚರ್ಮಕ್ಕೆ ಕಾಂತಿ ತುಂಬುತ್ತದೆ.