ಹಸುವಿನ ಹಾಲು ಪರಿಪೂರ್ಣ ಆಹಾರವೆಂದು ಖ್ಯಾತಿ ಪಡೆದಿದೆ. ಪ್ರಾಚೀನ ಕಾಲದಿಂದಲೂ ಅದನ್ನು ಉಪಯೋಗಿಸಲಾಗುತ್ತಿದೆ. ಈಗಂತೂ ವಿಶ್ವದ ಎಲ್ಲ ದೇಶಗಳಲ್ಲೂ ಇದು ಲಭಿಸುತ್ತದೆ. 1 ಗ್ಲಾಸ್‌ ಹಾಲು ಒಳ್ಳೆಯ ಆರೋಗ್ಯಕ್ಕೆ ಅತ್ಯಂತ ಅವಶ್ಯ. ಇದರಷ್ಟು ಪೋಷಕಾಂಶಗಳನ್ನು ಜಗತ್ತಿನ ಮತ್ತ್ಯಾವುದೇ ಪದಾರ್ಥ ಕೊಡಲಾರದು.

ಹಾಲಿನಲ್ಲಿ ಏನೇನು ಪೋಷಕಾಂಶಗಳಿವೆ?

ಕ್ಯಾಲ್ಶಿಯಂ : ಹಸುವಿನ ಹಾಲು ಕ್ಯಾಲ್ಶಿಯಂನ ಸಮೃದ್ಧ ಮೂಲವಾಗಿದೆ. ಈ ಕ್ಯಾಲ್ಶಿಯಂ ದೇಹಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಇದು ಹಲ್ಲು ಮತ್ತು ಮೂಳೆಗಳನ್ನು ಆರೋಗ್ಯದಿಂದಿಡಲು ಸಹಾಯಕವಾಗಿದೆ. ಕ್ಯಾಲ್ಶಿಯಂ ರಕ್ತ ಹೆಪ್ಪುಗಟ್ಟಲು, ಗಾಯ ಮಾಗಿಸಲು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ಸ್ನಾಯುಗಳ ಆಗುಹೋಗುಗಳು ಮತ್ತು ಹೃದಯ ಬಡಿತವನ್ನು ಸಾಮಾನ್ಯವಾಗಿಡಲು ನೆರವಾಗುತ್ತದೆ.

ಪೊಟ್ಯಾಶಿಯಂ : ಇದನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದಲ್ಲಿ ಸ್ಟ್ರೋಕ್‌, ಹೃದ್ರೋಗಗಳು ಹಾಗೂ ಅತಿ ರಕ್ತದೊತ್ತಡದಿಂದ ರಕ್ಷಿಸುತ್ತದೆ. ಮೂಳೆಗಳ ಸಾಂದ್ರತೆ ಸಾಮಾನ್ಯವಾಗಿರಲು ಸಾಧ್ಯವಾಗುತ್ತದೆ ಹಾಗೂ ಕಿಡ್ನಿಯಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ.

ಕೊಲೈನ್‌ : ಹಾಲು ಕೊಲೈನ್‌ ನ ಸಮೃದ್ಧ ಮೂಲ ಕೂಡ ಆಗಿದೆ. ಇದು ಅಗತ್ಯ ಪೋಷಕಾಂಶವಾಗಿದ್ದು, ಅದು ನಿದ್ದೆ, ಸ್ನಾಯುಗಳ ಆಗುಹೋಗುಗಳು, ಸ್ಮರಣಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯವನ್ನು ಸಾಮಾನ್ಯವಾಗಿಡುತ್ತದೆ. ಕೊಲೈನ್‌ ಇದು ಸೆಲೆ‌ಮೆಂಬ್ರೇನನ್ನು ಕಾಪಾಡಲು ನೆರವಾಗುತ್ತದೆ. ಕೊಬ್ಬಿನ ಹೀರುವಿಕೆಯಲ್ಲಿ ನೆರವು ನೀಡುತ್ತದಲ್ಲದೆ, ಕ್ರಾನಿಕ್‌ ಅಥವಾ ಹಳೆಯ ಊತ ಕಡಿಮೆಗೊಳಿಸಲು ಉಪಯುಕ್ತವಾಗಿದೆ.

ವಿಟಮಿನ್‌ `ಡಿ‘ : ಹಸುವಿನ ಹಾಲಿನಲ್ಲಿ ವಿಟಮಿನ್‌ `ಡಿ’ ನೈಸರ್ಗಿಕವಾಗಿ ಇರುವುದಿಲ್ಲ. ಆದರೆ ಹಸುವಿನ ಹಾಲನ್ನು ಪೇರ್ಟಿಫೈಗೊಳಿಸಿ ಅದರಲ್ಲಿ ಸೇರ್ಪಡೆಗೊಳಿಸಬಹುದಾಗಿದೆ. ಇದು ಮೂಳೆಗಳ ದುರಸ್ತಿಗೆ ಅತ್ಯವಶ್ಯ. ಇದು ಕ್ಯಾಲ್ಶಿಯಂನ ಹೀರುವಿಕೆ ಮತ್ತು ರೋಗ ನಿರೋಧಕ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆ ಆಸ್ಟಿಯೊಪೊರೊಸಿಸ್‌, ಖಿನ್ನತೆ, ದಣಿವು, ಸ್ನಾಯುಗಳ ನೋವು, ಅತಿ ರಕ್ತದೊತ್ತಡ, ಸ್ತನ ಹಾಗೂ ಕೊಲೈನ್‌ ಕ್ಯಾನ್ಸರಿಗೆ ಕಾರಣವಾಗಬಹುದು.

ಮಕ್ಕಳಿಗೂ ಉಪಯುಕ್ತ ಬೆಳವಣಿಗೆ : ದೇಹದ ಬೆಳವಣಿಗೆಗೆ ಪ್ರೋಟೀನ್‌ ಅತ್ಯಂತ ಅವಶ್ಯಕ. ಹಸುವಿನ ಹಾಲಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಪ್ರೋಟೀನುಗಳೂ ಇರುತ್ತವೆ. ಹೀಗಾಗಿ ಹಸುವಿನ ಹಾಲು ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡುವುದಿಲ್ಲ. ದೇಹದ ಬೆಳವಣಿಗೆಗೂ ಪೂರಕವಾಗಿದೆ. ಪ್ರತಿದಿನ ಹಾಲು ಕುಡಿಯುವುದು ಅತ್ಯವಶ್ಯ. ಏಕೆಂದರೆ ದೇಹ ಹಾಗೂ ಮೆದುಳಿನ ಬೆಳವಣಿಗೆಗೆ ಅದು ಸಹಾಯಕ.

ಸ್ನಾಯುಗಳ ನಿರ್ಮಾಣ : ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸಾಮಾನ್ಯವಾಗಿಡಲು ಸ್ನಾಯುಗಳ ಬೆಳವಣಿಗೆಗೆ ಅತ್ಯವಶ್ಯ. ಅದರ ಹೊರತಾಗಿ ತೂಕ ಕೂಡ ಸಾಮಾನ್ಯವಾಗಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ ನ್ನು ಸೇವಿಸಬೇಕು. ಸ್ನಾಯುಗಳ ಬೆಳವಣಿಗೆ ಹಾಗೂ ಅವುಗಳ ದುರಸ್ತಿಗೆ ಡೇರಿ ಪ್ರೋಟೀನ್‌ ಬೇಕು.

645x344-healthy-heart-for-a-longer-life-1493586521180

ರೋಗನಿರೋಧಕ ಶಕ್ತಿ ಬಲವರ್ಧನೆ : ಹಾಲಿನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಗಳಾದ ವಿಟಮಿನ್‌ `ಇ,’ ಸೆಲೆನಿಯಂ ಮತ್ತು ಸತುವಿನಂಶ ಇರುತ್ತದೆ. ಇವು ದೇಹಕ್ಕೆ ಹಾನಿಕಾರಕಗಳಾದ ಫ್ರೀ ರಾಡಿಕಲ್ಸ್ ನ್ನು ನಿವಾರಿಸುತ್ತವೆ ಮತ್ತು ದೇಹವನ್ನು ರೋಗದಿಂದ ರಕ್ಷಿಸುತ್ತವೆ.

ಉತ್ತಮ ನಿದ್ರೆಗೆ ಅತ್ಯವಶ್ಯಕ : ಹಸುವಿನ ಹಾಲಿನಲ್ಲಿ ಎಲ್ಲ ಬಗೆಯ ಅತ್ಯವಶ್ಯ ಪ್ರೋಟೀನುಗಳು ಇರುತ್ತವೆ. ಅವು ನಿದ್ರೆಗೆ ಅತ್ಯಂತ ಉಪಯುಕ್ತ. ಮಗುವಿಗೆ ಮಲಗುವ ಮುನ್ನ ಒಂದು ಗ್ಲಾಸ್‌ ಹಾಲು ಕುಡಿಸಿ, ಅದಕ್ಕೆ ಹಿತಕರ ನಿದ್ರೆ ಲಭಿಸುತ್ತದೆ.

ಹಲ್ಲು ಮೂಳೆಗೆ ಉಪಯುಕ್ತ : ಹಾಲಿನಲ್ಲಿ ಕ್ಯಾಲ್ಶಿಯಂ ಹಾಗೂ ಹೆಚ್ಚಿನ ಪೋಷಕಾಂಶಗಳಿದ್ದು, ಅವು ಹಲ್ಲುಗಳು ಮತ್ತು ಮೂಳೆಗಳ ಬಲವರ್ಧನೆಗೆ ಸಹಾಯಕವಾಗಿದೆ. ವಯಸ್ಸು ಹೆಚ್ಚುತ್ತಾ ಹೋದಂತೆ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಹಾಲು ಸೇವನೆಯಿಂದ ಆ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.

ಹೃದಯದ ಆರೋಗ್ಯ : ಒಮೇಗಾ 3 ಫ್ಯಾಟಿ ಆ್ಯಸಿಡ್‌ ನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಭಾವಿಸಲಾಗುತ್ತದೆ. ಅದು ಹೃದಯವನ್ನು ರೋಗಗಳಿಂದ ರಕ್ಷಿಸುತ್ತದೆ ಮತ್ತು ಹೃದಯಾಘಾತ ಹಾಗೂ ಸ್ಟ್ರೋಕ್ಸ್ ನಿಂದ ರಕ್ಷಿಸುತ್ತದೆ.

ಬುದ್ಧಿಶಕ್ತಿ ಚುರುಕಾಗಲು : ಹಸುವಿನ ಹಾಲಿನಲ್ಲಿ ವಿಟಮಿನ್‌ `ಬಿ’ ಧಾರಾಳ ಇರುವುದರಿಂದ, ಅದು ನರಮಂಡಲ ವ್ಯವಸ್ಥೆಯನ್ನು ಚುರುಕಾಗಿಡುತ್ತದೆ. ಬೇಗ ನಿದ್ದೆ ಬಂದು ಬೇಗ ಏಳಲಿಕ್ಕೂ ಇದು ಪ್ರೇರಕ.

ಗರ್ಭಿಣಿ ಬಾಣಂತಿಗೆ ಅತ್ಯಗತ್ಯ

IB147727-147727130830800-ER482325 (1)

ಹಾಲು ಮತ್ತು ಆಸ್ಟೂವೆ ಆರ್ಥ್ರೈಟಿಸ್‌ : ಹಸುವಿನ ಹಾಲು ಕ್ಯಾಲ್ಶಿಯಂ ಮತ್ತು ಮಿನರಲ್ಸ್ ನ ಅತ್ಯುತ್ತಮ ಮೂಲವಾಗಿದೆ. ಅದು ಮೂಳೆ ಹಾಗೂ ಹಲ್ಲುಗಳನ್ನು ಆರೋಗ್ಯದಿಂದ ಇಡುವುದರ ಜೊತೆ ಜೊತೆ ಮಂಡಿಗಳ ಆಸ್ಟೂವೆ ಆರ್ಥ್‌ ರೈಟಿಸ್‌ ನಿಂದಲೂ ರಕ್ಷಿಸುತ್ತದೆ. ಅದಕ್ಕಾಗಿ ಪ್ರತಿದಿನ 1 ಗ್ಲಾಸ್‌ ಹಾಲು ಸೇವಿಸಬೇಕು.

ಕ್ಯಾನ್ಸರ್ನೊಂದಿಗೆ ಹೋರಾಡಲು ಸಹಾಯಕ : ವಿಟಮಿನ್‌ `ಡಿ’ ಕ್ಯಾನ್ಸರ್‌ ನಿಂದ ರಕ್ಷಣೆ ಕೊಡುತ್ತದೆ ಹಾಗೂ ಜೀವಕೋಶಗಳ ಬೆಳವಣಿಗೆಯನ್ನು ಸಾಮಾನ್ಯವಾಗಿಡುತ್ತದೆ. ಹಾಲಿನಲ್ಲಿ ವಿಟಮಿನ್‌ `ಡಿ’ ಹೇರಳವಾಗಿರುತ್ತದೆ. ಡೇರಿ ಉತ್ಪನ್ನಗಳ ಸೇವನೆಯಿಂದ ಕ್ಯಾಲ್ಶಿಯಂ ಮತ್ತು ಲ್ಯಾಕ್ಟೋಸ್‌ ಪರಿಪೂರ್ಣ ಪ್ರಮಾಣದಲ್ಲಿ ಲಭಿಸುತ್ತದೆ. ಈ ಮೂಲಕ ಮಹಿಳೆಯರು ಓವೇರಿಯನ್‌ ಕ್ಯಾನ್ಸರ್ ನಿಂದ ರಕ್ಷಿಸಲ್ಪಡುತ್ತಾರೆ.

ಮಧುಮೇಹದಿಂದ ರಕ್ಷಣೆ : ವಿಟಮಿನ್‌ `ಬಿ’ ಹಾಗೂ ಮಿನರಲ್ಸ್ ಹೇರಳವಾಗಿರುವುದರಿಂದ ಚಯಾಪಚಯ ಕ್ರಿಯೆಯನ್ನು ಸಾಮಾನ್ಯವಾಗಿಡಲು ನೆರವಾಗುತ್ತದೆ. ದೇಹದಲ್ಲಿ ಗ್ಲೂಕೋಸ್‌ ಹಾಗೂ ಇನ್ಸುಲಿನ್‌ ಮಟ್ಟವನ್ನು ಸಾಮಾನ್ಯವಾಗಿಡುತ್ತದೆ. ಇದರಿಂದಾಗಿ ಮಧುಮೇಹದ ಮೇಲೆ ನಿಯಂತ್ರಣ ಸುಲಭವಾಗುತ್ತದೆ.

ಖಿನ್ನತೆಯಿಂದ ರಕ್ಷಣೆ : ಹಾಲಿನಲ್ಲಿರುವ ವಿಟಮಿನ್‌ `ಡಿ’ ಸೆರೆಟೊನಿನ್‌ನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಎಂತಹ ಒಂದು ಹಾರ್ಮೋನು ಎಂದರೆ ಒಳ್ಳೆಯ ನಿದ್ರೆ, ಹಸಿವಿಗೆ ಅತ್ಯವಶ್ಯಕ. ವಿಟಮಿನ್‌ `ಡಿ’ಯ ಕೊರತೆಯಿಂದ ವ್ಯಕ್ತಿ ಖಿನ್ನತೆ ಹಾಗೂ ದಣಿವಿಗೆ ತುತ್ತಾಗಬಹುದು.

ತೂಕದಲ್ಲಿ ಇಳಿಕೆ : ಹಾಲಿನಲ್ಲಿ ಪ್ರೋಟೀನ್‌ ಪ್ರಮಾಣ ಹೇರಳವಾಗಿರುತ್ತದೆ. ಹೀಗಾಗಿ ಅದು ಹಸಿವನ್ನು ಶಾಂತಗೊಳಿಸುತ್ತದೆ. ಅದರಿಂದ ಚಯಾಪಚಯ ಕ್ರಿಯೆ ಕೂಡ ಸಾಮಾನ್ಯವಾಗಿರುತ್ತದೆ. ವ್ಯಕ್ತಿಯನ್ನು ಕ್ರಿಯಾಶೀಲಗೊಳಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಹೊಳಪು : ಹಾಲಿನಿಂದಾಗಿ ತ್ವಚೆ ಹೊಳಪುಳ್ಳದ್ದು ಹಾಗೂ ಮೃದುವಾಗುತ್ತದೆ. ಅದರ ಬಣ್ಣದಲ್ಲೂ ಸುಧಾರಣೆ ಉಂಟಾಗುತ್ತದೆ. ಹಾಲಿನಲ್ಲಿರುವ ಪೋಷಕಾಂಶ ತ್ವಚೆಯನ್ನು ಸುಕ್ಕುಗಳಿಂದ ರಕ್ಷಿಸುತ್ತದೆ.

ದೇಹವನ್ನು ಆರೋಗ್ಯದಿಂದಿಡುತ್ತದೆ : ಹಾಲು ದೇಹಕ್ಕೆ ಅತ್ಯಂತ ಉಪಯುಕ್ತ. ಅದು ಸ್ನಾಯು ಮತ್ತು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಒತ್ತಡ ಕಡಿಮೆಗೊಳಿಸಿ ಕಣ್ಣುಗಳನ್ನು ಆರೋಗ್ಯದಿಂದಿಡುತ್ತದೆ. ಕ್ಯಾನ್ಸರ್‌ ನ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಶೃತಿ ಶರ್ಮ

ಏನೇನು ಎಚ್ಚರಿಕೆ ವಹಿಸಬೇಕು?

super-brain

ಲ್ಯಾಕ್ಟೋಸ್ಅಸಹಿಷ್ಣುತೆ : ಇದು ಎಂತಹ ಒಂದು ಸ್ಥಿತಿಯೆಂದರೆ, ವ್ಯಕ್ತಿಯೊಬ್ಬರಿಗೆ ಲ್ಯಾಕ್ಟೋಸ್‌ ನ ಕೊರತೆ ಉಂಟಾಗುತ್ತದೆ. ಲ್ಯಾಕ್ಟೋಸ್‌ ಹಾಲಿನಲ್ಲಿರುವ ಸಕ್ಕರೆಯ ಬ್ರೇಕ್‌ ಡೌನ್‌ ಗೆ ಅತ್ಯಗತ್ಯ. ಅದರಿಂದ ಹಾಲು ಜೀರ್ಣವಾಗುತ್ತದೆ. ಕೆಲವರಲ್ಲಿ ಲ್ಯಾಕ್ಟೋಸ್‌ ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುವುದಿಲ್ಲ. ಹೀಗಾಗಿ ಅವರು ಹಾಲನ್ನು ಪಚನ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರಲ್ಲಿ ಹಾಲು ಅಥವಾ ಹಾಲಿನ ಉತ್ಪನ್ನಗಳ ಸೇವನೆಯಿಂದ ಹೊಟ್ಟೆ ಉಬ್ಬರ, ಡಯೇರಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಹಾಲಿನಲ್ಲಿ ಅಲರ್ಜಿ ಅಥವಾ ಸಂವೇದನಾಶೀಲತೆ : ಇದು ಲ್ಯಾಕ್ಟೋಸ್‌ ಅಸಹಿಷ್ಣುತೆಗಿಂತ ಭಿನ್ನವಾಗಿದೆ. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆ ಅಲರ್ಜಿಕ್‌ ಆ್ಯಂಟಿ ಬಾಡಿ ಇಮ್ಯುನೊಗ್ಲೊಬ್ಯುಲಿನ್‌ ಇವು ತಯಾರಾಗುತ್ತವೆ. ಹಸುವಿನ ಹಾಲಿನಿಂದ ಅಲರ್ಜಿಯ ಹಲವು ಲಕ್ಷಣಗಳು ಅಂದರೆ ಎದೆಯಲ್ಲಿ ಗಾಬರಿ, ಡಯೇರಿಯಾ, ವಾಂತಿ, ಗ್ಯಾಸ್ಟ್ರೊ ಇಂಟ್ರೆಸ್ಟೈನ್‌ ರೋಗ ಕಂಡುಬರಬಹುದು.

ಪೊಟ್ಯಾಶಿಯಂ ಅಥವಾ ಫಾಸ್ಛರಸ್ ಅತಿಯಾದ ಸೇವನೆ : ಈ ಎರಡೂ ಪೋಷಕಾಂಶಗಳು ಹಸುವಿನ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಯಾರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲಿ, ಅವರಿಗೆ ಇದರಿಂದ ಒಂದಿಷ್ಟು ಹಾನಿಯಾಗಬಹುದು. ಒಂದು ವೇಳೆ ಕಿಡ್ನಿಗಳು ರಕ್ತದಿಂದ ಹೆಚ್ಚುವರಿ ಪೊಟ್ಯಾಶಿಯಂ ಮತ್ತು ಫಾಸ್ಛರಸ್‌ ನ್ನು ಹೊರತೆಗೆಯದಿದ್ದರೆ ಅದು ಘಾತಕವಾಗಿ ಪರಿಣಮಿಸಬಹುದು.

ಕ್ಯಾಲ್ಶಿಯಂನ ಅತಿಯಾದ ಸೇವನೆ : ಅದರಿಂದ ಹಲವು ಅಡ್ಡಪರಿಣಾಮಗಳು ಆಗಬಹುದು. ಉದಾಹರಣೆಗೆ ಮಲಬದ್ಧತೆ, ಕಿಡ್ನಿಯಲ್ಲಿ ಕಲ್ಲು ಅಥವಾ ಕಿಡ್ನಿ ವೈಫಲ್ಯ. ಎಷ್ಟೋ ಸಲ ಕ್ಯಾಲ್ಶಿಯಂ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದರಿಂದ ಹೀಗಾಗಬಹುದು. ಹೆಚ್ಚಿನ ಕ್ಯಾಲ್ಶಿಯಂ ಸೇವವೆ ರಕ್ತನಾಳಗಳಲ್ಲಿ ಜಮೆಗೊಂಡು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ