ಒಂದು ವಿಷಯವಂತೂ ಸತ್ಯ. ಇಡೀ ವರ್ಷ ನೀವು ಚೆನ್ನಾಗಿ ಕಾಪಾಡಿಕೊಂಡು ಬಂದ ಆರೋಗ್ಯಕ್ಕೆ ಹಬ್ಬಗಳು ಸ್ವಲ್ಪ ಎಡವಟ್ಟು ಮಾಡುತ್ತವೆ. ಈ ಕಾರಣದಿಂದಾಗಿ ಇಚ್ಛೆ ಇಲ್ಲದಿದ್ದಾಗ್ಯೂ ನಮ್ಮ ತೂಕ ಹೆಚ್ಚು ಪ್ರಸಂಗ ಬರುತ್ತದೆ. ಆದರೆ ಮತ್ತೊಂದು ಸತ್ಯವನ್ನು ನಾವು ಅಲ್ಲಗಳೆಯಲು ಕೂಡ ಆಗುವುದಿಲ್ಲ. ಅದೇನೆಂದರೆ ಹಬ್ಬಗಳು ಎಲ್ಲರೂ ಕೂಡಿ ಆಚರಿಸುವ ವಿಶಿಷ್ಟ ಅವಕಾಶ ನೀಡುತ್ತವೆ. ಜೊತೆಗೆ ಎಲ್ಲರೊಂದಿಗೆ ಒಂದಿಷ್ಟು ತಿಂಡಿಗಳನ್ನು ಖುಷಿಯಿಂದ ತಿನ್ನುವಂತೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ತುತ್ತಿಗೂ ನೀವು ಬೊಜ್ಜಿನ ಬಗ್ಗೆ ಚಿಂತೆ ಮಾಡುತ್ತಾ ಕೂತರೆ ಹಬ್ಬಗಳ ಖುಷಿಯನ್ನು ಅನುಭವಿಸಲು ಆದೀತೆ? ಇಲ್ಲ ಅಲ್ಲವೇ? ಹಾಗಿದ್ದರೆ ಮನಸೋಕ್ತವಾಗಿ ಹಬ್ಬಗಳನ್ನು ಎಂಜಾಯ್‌ ಮಾಡಿ. ಆದರೆ ಯಾವುದನ್ನೂ ಅತಿಯಾಗಿ ತಿನ್ನಬೇಡಿ. ಹಬ್ಬಗಳ ಬಳಿಕ ನಿಮ್ಮ ಆರೋಗ್ಯದ ಬಗ್ಗೆ ಮೊದಲಿನಂತೆ ಪರಿಶ್ರಮ ಪಡುವುದನ್ನು ಮರೆಯಬೇಡಿ. ಇದರಿಂದ ನೀವು ಹಬ್ಬಗಳನ್ನೂ ಎಂಜಾಯ್ ಮಾಡಬಹುದು ಹಾಗೂ ಆರೋಗ್ಯದ ಬಗೆಗೂ ಗಮನ ಕೊಡಬಹುದು.

ಈ ಕುರಿತಂತೆ ಡಯೇಟಿಶಿಯನ್‌ ಡಾ. ವಿಭಾ ಹೀಗೆ ಹೇಳುತ್ತಾರೆ, “ಸಾಮಾನ್ಯವಾಗಿ ನಾವು ಹಬ್ಬಗಳಲ್ಲಷ್ಟೇ ಅಲ್ಲ, ಹಬ್ಬಗಳ ಬಳಿಕ ಅದರ ಎಂಜಾಯ್‌ ಮಾಡುತ್ತಿರುತ್ತೇವೆ. ಆ ಕಾರಣದಿಂದ ತೂಕ ಹೆಚ್ಚುವುದು, ಅಸಿಡಿಟಿ ಸಮಸ್ಯೆ, ಹೆಚ್ಚು ಸಿಹಿ ತಿನ್ನುವುದರಿಂದ ಶುಗರ್‌ ಲೆವೆಲ್ ‌ಹೆಚ್ಚುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

“ಹಬ್ಬಗಳ ಸಂದರ್ಭದಲ್ಲಿ ಹಬ್ಬವನ್ನು ಎಂಜಾಯ್‌ ಮಾಡುವುದು ಹಾಗೂ ಹಬ್ಬಗಳ ಬಳಿಕ ಹಳೆಯ ದಿನಚರಿಗೆ ಪುನಃ ಮರಳಬೇಕಾಗುತ್ತದೆ. ಏಕೆಂದರೆ ದೇಹ ಕೂಡ ಅದನ್ನೇ ಬಯಸುತ್ತಿರುತ್ತದೆ. ಹಬ್ಬಗಳ ಸಂದರ್ಭದಲ್ಲಿ ದೇಹ ಹಗುರವಾಗಿರುವಂತೆ ಫೀಲ್ ‌ಮಾಡಿಕೊಳ್ಳಬೇಕು. ನೀವು ಒಳಗಿಂದೊಳಗೆ ಎನರ್ಜಿಟಿಕ್‌ ಎಂಬಂತೆ ಅನುಭವ ಪಡೆದುಕೊಳ್ಳಬೇಕು. ಅದಕ್ಕಾಗಿ ನೀವು ಕೆಲವು ಟಿಪ್ಸ್ ಅನುಸರಿಸಬೇಕು, ಫಿಟ್‌ ಮತ್ತು ಎನರ್ಜಿಟಿಕ್‌ ಆಗಬೇಕು.”

ಆರೋಗ್ಯದ ಕಾಳಜಿ ಹೇಗೆ?

ಹಬ್ಬಗಳ ಸಂದರ್ಭದಲ್ಲಿ ಅತಿಥಿಗಳು ನಮ್ಮ ಮನೆಗೆ ಬರುವುದು ಹಾಗೂ ನಾವು ಬೇರೆಯವರ ಮನೆಗೆ ಹೋಗುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಹಲವು ಸಲ ಚಹಾ/ಕಾಫಿ ಸೇವನೆ ಮಾಡಬೇಕಾಗಿ ಬರುತ್ತದೆ. ಸಿಹಿ ತಿಂಡಿ ಕೂಡ ತಿನ್ನಬೇಕಾಗುತ್ತದೆ. ಈ ರೀತಿ ನೀವು ಹಬ್ಬದ ಸಂದರ್ಭದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಸೇವಿಸುತ್ತೀರಿ. ಹಾಗಾಗಿ ಹಬ್ಬಕ್ಕೆ ಮುಂಚೆಯೇ ನಿಮ್ಮ ಆಹಾರಗಳಿಂದ ಸಕ್ಕರೆ ಅಂಶ ಕಡಿಮೆ ಮಾಡಲು ಪ್ರಯತ್ನಿಸಿ. ಏಕೆಂದರೆ ಈ ಸಕ್ಕರೆ ಅಂಶ ದೇಹದಲ್ಲಿ ಆ್ಯಸಿಡ್‌ ಸಿದ್ಧಪಡಿಸುವ ಕೆಲಸ ಮಾಡುತ್ತದೆ ಹಾಗೂ ಹೆಚ್ಚುವರಿ ಸಕ್ಕರೆಯಿಂದ ದೇಹದಲ್ಲಿ ಬೊಜ್ಜು ನಿರ್ಮಾಣವಾಗುತ್ತದೆ.

ಅಮೆರಿಕದ ಒಂದು ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿ ಇಡೀ ದಿನದಲ್ಲಿ 94 ಗ್ರಾಂ (ಅಂದರೆ ಅದು 358 ಕ್ಯಾಲೋರಿಗೆ ಸಮ) ಸಕ್ಕರೆ ಅಂಶ ಸೇವನೆ ಮಾಡುತ್ತಿದ್ದರೆ, ಟೈಪ್‌ ಮಧುಮೇಹದ ಜೊತೆಗೆ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಸಕ್ಕರೆಯನ್ನು ನಿಮ್ಮ ಡಯೆಟ್‌ ನಿಂದ ಕಡಿಮೆ ಮಾಡಲು ಮರೆಯಬೇಡಿ.

ನೀವು ದಿನಕ್ಕೆ 3-4 ಸಲ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದರೆ, ಅದರ ಬದಲಿಗೆ ಗ್ರೀನ್‌ ಟೀ, ಬ್ಲ್ಯಾಕ್‌ ಟೀ, ಲೆಮನ್‌ ಟೀ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಈ ಪರ್ಯಾಯ ಉಪಾಯಗಳು ನಿಮ್ಮನ್ನು ಫಿಟ್‌ಆಗಿ ಇಟ್ಟಿರುವುದರ ಜೊತೆ ಜೊತೆಗೆ ನಿಮ್ಮ ಶುಗರ್‌ ಕ್ರೀಮಿಂಗ್‌ ನ್ನು ತಡೆಯುವ ಕೆಲಸ ಮಾಡುತ್ತವೆ. ಒಂದು ವೇಳೆ ನಿಮಗೆ ಮಿಲ್ಕ್ ಟೀ ಕುಡಿಯಲೇಬೇಕಿದ್ದರೆ, ಅದರಲ್ಲಿ ಸಕ್ಕರೆ ಬೆರೆಸಬೇಡಿ. ಬರ್ಫಿ, ಸ್ವೀಟ್ಸ್ ಮುಂತಾದವುಗಳನ್ನು ನೆಪ ಮಾತ್ರಕ್ಕೆ ತಿನ್ನಿ. ಅದರ ಬದಲಿಗೆ ನೀವು ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ದೇಹವನ್ನು ಡೀಟಾಕ್ಸ್ ಮಾಡಿ

50913eeb04768a5b1fa9985c16704d96

ಕಾಲಕಾಲಕ್ಕೆ ನಮ್ಮ ಚರ್ಮಕ್ಕೆ ಡೀಟಾಕ್ಸ್ ಮಾಡಿಕೊಳ್ಳುವ ಅವಶ್ಯಕತೆ ಉಂಟಾಗುತ್ತದೆ. ಅದೇ ರೀತಿ ನಮ್ಮ ದೇಹಕ್ಕೂ ಡೀಟಾಕ್ಸ್ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ನಮ್ಮ ಆಹಾರ ಅಭ್ಯಾಸಗಳು, ಲೈಫ್‌ ಸ್ಟೈಲ್ ‌ಹಾಗೂ ವಾತಾವರಣದಲ್ಲಿ ಉಂಟಾದ ಬದಲಾವಣೆಯ ಕಾರಣದಿಂದ ದೇಹದಲ್ಲಿ ವಿಷಕಾರಿ ಘಟಕಗಳು ಜಮೆಗೊಳ್ಳುತ್ತವೆ. ಅವನ್ನು ದೇಹದಿಂದ ಡೀಟಾಕ್ಸ್ ಅಂದರೆ ಹೊರಗೆ ಕಳುಹಿಸಿ ಆರೋಗ್ಯವನ್ನು ಸುಧಾರಿಸಿಕೊಂಡು ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು. ಯಾವ ಯಾವ ಡೀಟಾಕ್ಸ್ ಡ್ರಿಂಕ್ಸ್ ನ್ನು ನೀವು ನಿಮ್ಮ ಡಯೆಟ್‌ ನಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದು.

ಆರೆಂಜ್ಕ್ಯಾರೆಟ್ಜಿಂಜರ್ಡ್ರಿಂಕ್ಸ್

ಮೂಸಂಬಿ ವಿಟಮಿನ್‌ `ಸಿ’ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಗಳಿಂದ ಭರ್ತಿಯಾಗಿರುತ್ತದೆ. ಕ್ಯಾರೆಟ್‌ ಬೀಟಾ ಕೆರೋಟಿನ್‌ ಹಾಗೂ ಫೈಬರ್‌ ನಿಂದ ತುಂಬಿ ತುಳುಕುತ್ತಿರುತ್ತದೆ. ಇದು ಪಚನಕ್ರಿಯೆಯನ್ನು ಸುಧಾರಣೆ ಮಾಡುವುದರ ಜೊತೆಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿ ಶುಂಠಿಯಲ್ಲಿ ಆ್ಯಂಟಿ ಇನ್‌ ಫ್ಲಮೇಟರಿ ಅಂಶ ಇರುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬರ ಪಚನ ವ್ಯವಸ್ಥೆ ಸರಿಪಡಿಸುತ್ತದೆ. ನೀವು ಇಂತಹ ಉಪಯುಕ್ತ ಡ್ರಿಂಕ್‌ ನ್ನು ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಬಹುದು.

ಸೌತೆ, ಪುದೀನಾ ಲೆಮನ್ಡ್ರಿಂಕ್ಸ್

cucumber-lime-agua-fresca-vertical-a-1800-768x1119

ಸೌತೆಕಾಯಿ, ಪುದೀನಾ, ನಿಂಬೆಹಣ್ಣು ಇವು ಆಹಾರದ ರುಚಿ ಹೆಚ್ಚಿಸುವುದರ ಜೊತೆ ಜೊತೆಗೆ ಆ್ಯಂಟಿ ಆಕ್ಸಿಡೆಂಟ್‌ ಗುಣಲಕ್ಷಣಗಳನ್ನು ಹೊಂದಿರುವ ಕಾರಣದಿಂದ ಹೊಟ್ಟೆಯನ್ನು ಸರಿಪಡಿಸುವ ಕೆಲಸ ಕೂಡ ಮಾಡುತ್ತವೆ. ಇದು ಅಸಿಡಿಟಿಯನ್ನು ನಿವಾರಿಸಿ, ದೇಹನ್ನು ಡೀಟಾಕ್ಸ್ ಮಾಡುವ ಕೆಲಸ ಮಾಡುತ್ತದೆ. ಇಡೀ ದಿನದಲ್ಲಿ ಒಂದು ಗ್ಲಾಸ್‌ ರಸ ನಿಮ್ಮನ್ನು ತಾಜಾತನದಿಂದ ಇಡಲು ನೆರವಾಗುತ್ತದೆ.

ಕೋಕೊನಟ್ಮಿಂಟ್ಲೆಮನ್ಡ್ರಿಂಕ್ಸ್

ಕೇವಲ 3 ಇನ್‌ ಗ್ರೀಡಿಯೆಂಟ್ಸ್ ಸುಲಭವಾಗಿ ಲಭ್ಯವಾಗುವುದರ ಜೊತೆಗೆ ಸೇವನೆಗೆ ಅನುಕೂಲ.

ಅರಿಶಿನ ಹಸಿಶುಂಠಿ ಡ್ರಿಂಕ್ಸ್

golden-orange-refresher-5

ಅರಿಶಿನದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಇನ್‌ ಫ್ಲಮೇಟರಿ ಅಂಶ ಇರುವ ಕಾರಣದಿಂದ ಅದು ನಿಮ್ಮ ಕರುಳನ್ನು ಸ್ವಚ್ಛಗೊಳಿಸಿ ರೋಗನಿರೋಧಕ ಶಕ್ತಿಗೆ ಹೊಸತನ ನೀಡುತ್ತದೆ. ಅದಕ್ಕಾಗಿ ನೀವು ಒಂದು ಗ್ಲಾಸ್‌ ನೀರಿನಲ್ಲಿ ಒಂದು ಚಿಟಕಿಯಷ್ಟು ಅರಿಶಿನ ಹಾಗೂ ಒಂದು ಇಂಚ್‌ ನಷ್ಟು ಹಸಿಶುಂಠಿಯನ್ನು ತುರಿದುಕೊಂಡು, ಅದನ್ನು ಎಲ್ಲಿಯವರೆಗೆ ಕುದಿಸಬೇಕೆಂದರೆ ಅದು ಅರ್ಧದಷ್ಟು ಪ್ರಮಾಣಕ್ಕೆ ಬರುವತನಕ. ಇದರ ಸೇವನೆಯಿಂದ  ಕೆಲವೇ ದಿನಗಳಲ್ಲಿ ನಿಮಗೆ ಅದರ ಸಕಾರಾತ್ಮಕ ಲಾಭ ಗೋಚರಿಸುತ್ತದೆ.

ನೋ ಮೋರ್ಪ್ರೊಸೆಸ್ಡ್ ಫುಡ್

black-coffee

ಪ್ರೊಸೆಸ್ಡ್ ಫುಡ್‌ ಅಂದರೆ ಅದನ್ನು ಸುರಕ್ಷಿತವಾಗಿಡಲು, ಅದರ ಸ್ವರೂಪವನ್ನು ಬದಲಿಸಲು ಅದರಲ್ಲಿ ಸಾಕಷ್ಟು ಬಗೆಯ ಪದಾರ್ಥಗಳನ್ನು ಬೆರೆಸಲಾಗುತ್ತದೆ. ಆದರೆ ಆ ಬೆರೆಸಲ್ಪಟ್ಟ ಪದಾರ್ಥಗಳು ದೇಹಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತವೆ. ಇದರಲ್ಲಿ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಂಶ  ಹೇರಳವಾಗಿರುತ್ತದೆ. ಸಮೋಸಾ, ಬರ್ಗರ್‌, ಫಾಸ್ಟ್ ಫುಡ್‌ ಗಳಲ್ಲಿ  ಸೋಡಿಯಂ ಸ್ಯಾಚ್ಯುರೇಟೆಡ್‌ ಫ್ಯಾಟ್ಸ್, ಟ್ರಾನ್ಸ್ ಫ್ಯಾಟ್ಸ್ ಹಾಗೂ ಕಾರ್ಬೋಹೈಡ್ರೇಟ್‌ ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳನ್ನು ನಾವು ನಮ್ಮ ದೈನಂದಿನ ಆಹಾರಗಳಲ್ಲಿ ನಿಯಮಿತವಾಗಿ ಸೇರ್ಪಡೆ ಮಾಡಿಕೊಂಡಾಗ ಅದರಿಂದ ರಕ್ತದೊತ್ತಡದಲ್ಲಿ ಹೆಚ್ಚಳ, ಹೃದ್ರೋಗ ಹಾಗೂ ತೂಕದಲ್ಲಿ ಹೆಚ್ಚಳ ಉಂಟಾಗುತ್ತದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ನೀವು ಹುರಿದ ಕರಿದ ಪದಾರ್ಥಗಳನ್ನು ಆದಷ್ಟೂ ಕಡಿಮೆ ಸೇವನೆ ಮಾಡಬೇಕು. ಹಬ್ಬದ ಬಳಿಕ ಕೆಲವು ದಿನಗಳವರೆಗೆ ನಿಮ್ಮ ಡಯೆಟ್‌ ನಿಂದ ಅಂಥ ಪದಾರ್ಥಗಳನ್ನು ದೂರವೇ ಇಡಬೇಕು.

ನೀವು ನಿಮ್ಮ ಆಹಾರದಲ್ಲಿ ಚಪಾತಿ ಹಾಗೂ ಅನ್ನ ಸೇವನೆ ಮಾಡುತ್ತಿದ್ದರೆ, ಅವುಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಕೆಲವು ದಿನಗಳವರೆಗೆ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಬೇಕು. ಬಿಳಿ ಅಕ್ಕಿಯ ಬದಲಿಗೆ ಬ್ರೌನ್‌ ರೈಸ್‌ ನ್ನು ಬಳಸಿ. ಏಕೆಂದರೆ ಅದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಪ್ರಮಾಣ ಹೇರಳವಾಗಿರುತ್ತದೆ. ಹೀಗಾಗಿ ಅದು ಆರೋಗ್ಯಕರ ಜೀವಕೋಶಗಳು ನಾಶವಾಗುವುದನ್ನು ತಡೆಯುತ್ತದೆ.

tyoharon-ke-bad-fitness-ko-1

ಅದರಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಕೂಡ ಇದ್ದು, ಅವು ದೇಹಕ್ಕೆ ಸಾಕಷ್ಟು ಉಪಯುಕ್ತವಾಗಿರುತ್ತವೆ. ನೀವು ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವಿಸುವುದು ಸೂಕ್ತವಲ್ಲ. ನೀವು ಹೈ ಫೈಬರ್‌ ರಿಚ್‌ ಕಾಳುಗಳು, ಮೊಳಕೆಕಾಳುಗಳು, ಸೂಪ್‌ ಮುಂತಾದವನ್ನು ನಿಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಇವು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತವೆ. ಜೊತೆಗೆ ನಿಮ್ಮ ಫಿಟ್‌ ನೆಸ್‌ ಕಾಪಾಡಲು ನೆರವಾಗುತ್ತವೆ.

ಬಾಹ್ಯ ತಿಂಡಿಯಿಂದ ದೂರ ಇರಿ

Ultra-precessed-foods

ಬಾಹ್ಯ ತಿಂಡಿ ನೋಡಲು ಎಷ್ಟು ಆಕರ್ಷಕ ಎನಿಸುತ್ತದೊ ಅಷ್ಟೇ ರುಚಿ ಕೂಡ  ಆಗಿರುತ್ತದೆ. ಏಕೆಂದರೆ ರುಚಿ ಹೆಚ್ಚಿಸಲು ಅದರಲ್ಲಿ ಸಾಕಷ್ಟು ತೈಲ, ಸಕ್ಕರೆ, ಉಪ್ಪು, ಸ್ಟಾರ್ಚ್‌ ಹಾಕಲಾಗಿರುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಅಮೆರಿಕದ ಒಂದು ಅಧ್ಯಯನದ ಪ್ರಕಾರ ನೀಡಿದ ಸಲಹೆಯೇನೆಂದರೆ, ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಮಹತ್ವ ಕೊಡಿ. ಏಕೆಂದರೆ ನಾವು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿದರೆ, ಅದರಲ್ಲಿ ಸೀಮಿತ ಪ್ರಮಾಣದಲ್ಲಿ ಕ್ಯಾಲೋರಿ, ಫ್ಯಾಟ್‌, ಶುಗರ್‌ಹಾಗೂ ಲೆಕ್ಕಾಚಾರದ ಪ್ರಕಾರ ಡಿಶ್‌ ನ ನ್ಯೂಟ್ರಿಶನ್‌ ವ್ಯಾಲ್ಯೂ ಹೆಚ್ಚಿಸಲು ಅದರಲ್ಲಿ ಇನ್‌ ಗ್ರೀಡಿಯೆಂಟ್ಸ್ ಹಾಕುತ್ತೇವೆ.

ಏಕೆಂದರೆ ಆಹಾರದ ಗುಣಮಟ್ಟ ಕಾಪಾಡುವುದು ನಮ್ಮ ನಿಯಂತ್ರಣದಲ್ಲಿಯೇ ಇರುತ್ತದೆ. ಆದರೆ ಬಾಹ್ಯ ತಿಂಡಿಗಳಲ್ಲಿ ಕೇವಲ ರುಚಿಯ ಬಗೆಗಷ್ಟೇ ಗಮನ ಕೊಡಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಹಬ್ಬದ ಸಂದರ್ಭದಲ್ಲಿ ನೀವು ಸಾಕಷ್ಟು ಅನ್‌ ಹೆಲ್ದೀ ತಿಂಡಿಗಳನ್ನು ತಿಂದುಬಿಟ್ಟಿದ್ದರೆ, ಕೆಲವು ಕಾಲ ಮನೆಯಲ್ಲೇ ತಯಾರಿಸಿದ ಆಹಾರವನ್ನಷ್ಟೇ ತಿನ್ನಿ. ನೀವು ಆಹಾರ ಸೇವನೆಯ ಬಳಿಕ ಮೊಸರು, ಮಜ್ಜಿಗೆ ಹಾಗೂ ಸಲಾಡ್‌ ಸೇವಿಸಿ.

ಮೈಂಡ್ಫುಲ್ ಈಟಿಂಗ್ಹ್ಯಾಬಿಟ್

IB134558-134558131155593-SM404119

ಸಾಮಾನ್ಯವಾಗಿ ನಾವು ಆಹಾರ ಸೇವನೆ ಮಾಡುವಾಗ ಫೋನ್‌ ಬಳಸುವುದು, ಟಿ.ವಿ ನೋಡುವುದು ಮಾಡುತ್ತೇವೆ. ಹೀಗಾಗಿ ನಾವು ನಮ್ಮ ಆಹಾರ ಸೇವನೆಯ ಬಗ್ಗೆ ಫೋಕಸ್‌ ಮಾಡಲು ಆಗುವುದಿಲ್ಲ ಮತ್ತು ಬಾಡಿ ಸಿಗ್ನಲ್ ಗಳನ್ನು ಗುರುತಿಸುವುದಿಲ್ಲ. ಈ ಕಾರಣದಿಂದ ಅತಿಯಾಗಿ ಆಹಾರ ಸೇವಿಸಿ ಬಿಡುತ್ತೇವೆ. ನಿಮ್ಮ ಗಮನ ಆಹಾರ ಸೇವನೆಯ ಬಗ್ಗೆ ಇದ್ದರೆ, ಅದನ್ನು ನೀವು ಅನುಭವಿಸಿ ಸೇವಿಸುತ್ತೀರಿ. ನಿಧಾನವಾಗಿ ತಿನ್ನುತ್ತೀರಿ! ಹೊಟ್ಟೆ ತುಂಬಿದೆ ಎಂದಾಗ ಹೆಚ್ಚುವರಿ ತಿನ್ನುವುದರಿಂದ ದೂರ ಇರುವಿರಿ.

ಸಂಶೋಧನೆಗಳಿಂದ ಖಚಿತವಾದ ಸಂಗತಿಯೆಂದರೆ, ನೀವು ಮೈಂಡ್‌ ಫುಲ್ ಈಟಿಂಗ್‌ ಹ್ಯಾಬಿಟ್‌ ನ್ನು ಅನುಸರಿಸಿದರೆ ನಿಮ್ಮ ಈ ಹ್ಯಾಬಿಟ್‌ ಈಟಿಂಗ್‌ ಡಿಸಾರ್ಡರ್‌ ನಿಂದ ರಕ್ಷಿಸಲು ನೆರವಾಗುತ್ತದೆ. ಜೊತೆಗೆ ತೂಕ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.

20 ನಿಮಿಷಗಳ ವ್ಯಾಯಾಮ

ಹಬ್ಬಗಳ ಕಾರಣದಿಂದ ನಮ್ಮ ದೈನಂದಿನ ಜೀವನಶೈಲಿ ಸ್ವಲ್ಪ ಬಿಗಡಾಯಿಸುತ್ತದೆ. ಹಬ್ಬಗಳಲ್ಲಿ ನಾವು ಮನಸ್ಸಿಗೆ ತೋಚಿದ್ದಷ್ಟು ತಿನ್ನುತ್ತೇವೆ. ಆ ಸಮಯದಲ್ಲಿ ವ್ಯಾಯಾಮ ಮರೆತೇಬಿಡುತ್ತೇವೆ. ಈ ರುಟೀನ್‌ ಕೆಲವು ದಿನಗಳ ಮಟ್ಟಿಗೆ ಸರಿ ಎನಿಸುತ್ತದೆ. ಆದರೆ ಇದೇ ಅಭ್ಯಾಸ ಹಾಗೆಯೇ ಮುಂದುವರಿದರೆ ಅದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ನಾವು ಕ್ರಮೇಣ ಅನಾರೋಗ್ಯಕ್ಕೆ ತುತ್ತಾಗುತ್ತ ಹೋಗುತ್ತೇವೆ. ಹೀಗಾಗಿ ದಿನಕ್ಕೆ 20 ನಿಮಿಷಗಳ ವ್ಯಾಯಾಮ ಅತ್ಯವಶ್ಯ.

ಅಮೆರಿಕಾದ ಕ್ಯಾಲಿಫೋರ್ನಿಯಾ ವಿ.ವಿಯ ಸ್ಕೂಲ್ ಆಫ್‌ ಮೆಡಿಸಿನ್‌ ನ ಸಂಶೋಧಕರ ಪ್ರಕಾರ, ನೀವು ನಿಮ್ಮ ಬಿಡುವಿನ ಜೀವನಶೈಲಿಯಲ್ಲಿ ದಿನ 20 ನಿಮಿಷಗಳ ಕಾಲ ವ್ಯಾಯಾಮಕ್ಕೆ ಮೀಸಲಿಟ್ಟರೆ, ಇದರಿಂದ ನಿಮ್ಮ ಮಾಂಸಖಂಡಗಳು ಬಲಿಷ್ಠವಾಗುವುದರ ಜೊತೆ ಜೊತೆಗೆ ತೂಕವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಒತ್ತಡ ನಿವಾರಿಸಿ, ಮಧುಮೇಹದ ಆತಂಕದಿಂದ ದೂರ ಇರಬಹುದು. ಒಳ್ಳೆಯ ನಿದ್ರೆ ಲಭಿಸುವುದರ ಜೊತೆ ಜೊತೆಗೆ ಅದು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ. ಹೀಗಾಗಿ ಹಬ್ಬಗಳ ಬಳಿಕ ನಿಮ್ಮ ವ್ಯಾಯಾಮದ ದಿನಚರಿಯನ್ನು ಬೇಗ ಆರಂಭಿಸಿ.

ಹೆಚ್ಚೆಚ್ಚು ನೀರು ಸೇವಿಸಿ

SM194930

ನೀರಡಿಕೆಯಾದಾಗ ಬಹಳಷ್ಟು ಜನರು ಕೂಲ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ಅದರ ಬದಲು ನೀರು ಕುಡಿಯುವುದರಿಂದ ನಿಮ್ಮ ಮೆಟಬಾಲಿಸಂ ವೇಗ ಪಡೆದುಕೊಳ್ಳುತ್ತದೆ. ಅದು ನಿಮಗೆ ತೂಕವನ್ನು ಬೇಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ನೀರಿನಂಶ ಹೇರಳವಾಗಿದ್ದರೆ, ದೇಹ ವಿಷಕಾರಿ ಘಟಕಗಳನ್ನು ಬೇಗ ಹೊರಹಾಕಲು ಸಹಾಯವಾಗುತ್ತದೆ.

ಅದರಿಂದ ನಿಮಗೆ ದೇಹ ಹಗುರ ಹಾಗೂ ಒಳ್ಳೆಯ ಅನುಭವವಾಗುತ್ತದೆ. ದಿನಕ್ಕೆ 8-10ಕ್ಕೆ ಗ್ಲಾಸ್‌ ನೀರು ಅವಶ್ಯ ಕುಡಿಯಿರಿ. ಅದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆಗ ನಿಮಗೆ ಮೇಲಿಂದ ಮೇಲೆ ಏನನ್ನಾದರೂ ತಿನ್ನಬೇಕೆಂದು ಅನ್ನಿಸುವುದಿಲ್ಲ. ಅದರಿಂದ ನೀವು ಹಬ್ಬದ ಬಳಿಕ ಓವರ್‌ ಈಟಿಂಗ್‌ ನಿಂದ ದೂರ ಇರಬಹುದು.

ಪ್ರತೀಕ್ಷಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ