ಒಬ್ಬೊಬ್ಬರ ಜೀವನಾನೇ ಹಾಗೆ ಕಣ್ರೀ. ಇವತ್ತು ಹೇಗೋ ಇದ್ದೋರು ನಾಳೆ ಇನ್ ಹೇಗೋ ಆಗಿಬಿಡ್ತಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಇವತ್ತು ಇದ್ದ ರೀತಿನೇ ಬೇರೆ.. ನಾಳೆ ಇರೋ ರೀತಿನೇ ಬೇರೆ. ಅಂದಹಾಗೆ ನಾವೀಗ ಹೇಳ್ತಿರೋದು ಇಲ್ಲಿ ಕಾಣ್ತಿರೋ ಈ ಸುಂದರಿ ಬಗ್ಗೆ. ಈಕೆ ಹೆಸರು ಹರ್ಷ ರಿಚಾರಿಯಾ. ವಯಸ್ಸು ಜಸ್ಟ್ 30 ವರ್ಷ ಅಷ್ಟೇ ಕಣ್ರೀ. ನೋಡೋಕೆ ಮುದ್ದು ಮುದ್ದಾಗಿರೋ ಈಕೆಗೆ ಅದೇನ್ ಅನ್ನಿಸ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ದಿಢೀರ್ನೇ ಆಧ್ಯಾತ್ಮದ ಕಡೆ ವಾಲಿಬಿಟ್ಟಿದ್ದಾರೆ.
ಹೌದು.. ಮೊದಲು ಮಾಡೆಲ್ ಆಗಿದ್ದ ರಿಚಾರಿಯಾ ಹಾರ್ಸ್ ರೈಡಿಂಗ್, ಮೇಕಪ್, ಆಂಕರಿಂಗ್, ಟೂರ್, ವ್ಲಾಗರ್ ಅಂತೆಲ್ಲಾ ದೊಡ್ಡ ಯೂಟ್ಯೂಬರ್ ಆಗಿ ಸಖತ್ ಫೇಮಸ್ ಆಗಿದ್ದರು. ಉತ್ತರಾಖಂಡದ ಈಕೆಯ ಸೌಂದರ್ಯ ನೋಡೋದಿಕ್ಕೋಸ್ಕರನೇ ಈಕೆಯ ಯೂಟ್ಯೂಬ್ ಓಪನ್ ಮಾಡೋರು.. ಈಕೆಯ ವಿಡಿಯೋಗೆ ಕಮೆಂಟ್ ಹಾಕೋರು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಂತೂ ಸಖತ್ ಬೇಜಾರ್ ಆಗಿಬಿಟ್ಟಿದ್ದಾರೆ.
ಯಾಕಂದ್ರೆ, ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ಸೋಮವಾರದಿಂದ ಶುರುವಾಗಿರುವ ಮಹಾಕುಂಭಮೇಳದಲ್ಲಿ ಈಕೆ ದಿಢೀರ್ನೇ ಪ್ರತ್ಯಕ್ಷವಾಗಿದ್ದಾರೆ. ಮೊದಲ ದಿನವೇ ಒಂದೂವರೆ ಕೋಟಿ ಜನರ ಮಧ್ಯೆ ಈ ಸುಂದರಿ ಕೂಡ ಸಾಧ್ವಿ ರೀತಿ ಗಂಗಾತೀರದಲ್ಲಿ ಮಿಂದೆದ್ದಿದ್ದಾರೆ. ಅಸಂಖ್ಯಾತ ಭಕ್ತರ ಮಧ್ಯೆ ಈಕೆನೂ ಕೂಡ ಕಾಣಿಸಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ದೇವರು, ಆಧ್ಯಾತ್ಮ, ಸನಾತನದ ಮೇಲೆ ತುಂಬಾ ಆಸಕ್ತಿ ಹುಟ್ಟಿದ್ದು, ಸಾಧುಗಳ ಜೊತೆ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಸುಂದರಿ ಸಾಧ್ವಿ ಕಂ ಯೂಟ್ಯೂಬರ್ ಬ್ಯೂಟಿ ರಿಚಾರಿಯಾ ವಿಡಿಯೋಗಳು ವೈರಲ್ ಆಗ್ತಿದ್ದಂತೇ ಅನೇಕ ರೀತಿಯ ಕಮೆಂಟ್ ಗಳು ಬರ್ತಿವೆ. ಇವರು ಪೋಸ್ಟ್ ಹಾಕ್ತಿದ್ದಂತೇ ನೆಟ್ಟಿಗರಂತೂ ಇವೆಲ್ಲಾ ಬರೀ ಗಿಮಿಕ್ ಅಷ್ಟೇ.. ವೀವರ್ಸ್ ಜಾಸ್ತಿ ಮಾಡಿಕೊಳ್ಳೋಕೆ ಟ್ರಿಕ್ಸ್ ಮಾಡ್ತಿದ್ದಾರೆ ಅಂತೆಲ್ಲಾ ಅಭಿಪ್ರಾಯಪಡುತ್ತಿದ್ದಾರೆ. ಆದ್ರೆ, ಇನ್ನು ಕೆಲವರು ಮಾತ್ರ ಇಷ್ಟು ಚೆನಾಗಿರೋ ಹುಡುಗಿ ಹೀಗೆ ಸಾಧ್ವಿ ಆಗಿಬಿಟ್ರೆ ನಮ್ ಕತೆ ಏನು.. ನಮ್ ಕಣ್ಗಳಿಗೆ ಬರಗಾಲ ಶುರುವಾಗುತ್ತೆ ಅಂತೆಲ್ಲಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಏನೇ ಆದ್ರೂ 45 ದಿನಗಳ ಮಹಾಕುಂಭಮೇಳದ ಎರಡನೆ ದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕುಂಭಮೇಳಕ್ಕಿಂತ ಈ ಸುಂದರಿ ಸಾಧ್ವಿ ಕುರಿತು ಜಾಸ್ತಿ ಚರ್ಚೆ ನಡೀತಿದೆ. ಎಲ್ಲಾ ಕಡೆ ಅರಿಶಿನ ಹಚ್ಚಿಕೊಂಡಿರೋ ಈ ಬ್ಯೂಟಿಯ ಫೋಟೋಗಳೇ ರಾರಾಜಿಸ್ತಿವೆ.