ನಮ್ಮ ದೇಹದ ಬಹಳಷ್ಟು ರೋಗಗಳ ಮೂಲ ನಮ್ಮ ಹೊಟ್ಟೆ ಅಂದರೆ ಪಚನ ವ್ಯವಸ್ಥೆಯಾಗಿದೆ. ಅದು ಸರಿಯಾಗಿ ಕಾರ್ಯ  ನಿರ್ವಹಿಸದಿದ್ದರೆ ಬಗೆಬಗೆಯ ರೋಗಗಳು ಅಂದರೆ ಮಲಬದ್ಧತೆ, ಗ್ಯಾಸ್‌, ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್ ಹೀಗೆ ಅನೇಕ ತೊಂದರೆಗಳು ಉದ್ಭವಿಸಬಹುದು. ಅಂದಹಾಗೆ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಪಚನ ಕ್ರಿಯೆಯನ್ನು ಚುರುಕುಗೊಳಿಸಿ, ರೋಗ ನಿರೋಧಕ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ನಮ್ಮನ್ನು ಆರೋಗ್ಯದಿಂದಿಡಲು ಪ್ರಮುಖ ಪಾತ್ರ ವಹಿಸುತ್ತವೆ.

ಹೊಟ್ಟೆಯಲ್ಲಿ ಅನ್‌ ಹೆಲ್ದೀ ಹಾಗೂ ಹೆಲ್ದೀ ಮೈಕ್ರೋಬ್ಸ್ ಗಳ ಅಸಮತೋಲನದಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಹೊಟ್ಟೆಯಲ್ಲಿ ಗುಡ್‌ ಬ್ಯಾಕ್ಟೀರಿಯಾಗಳ ಅನುಪಾತ ಕಡಿಮೆಯಾದರೆ, ಆರೋಗ್ಯಕರ ಆಹಾರ ಸೇವನೆಯ ಬಳಿಕ ದೇಹಕ್ಕೆ ಪೋಷಕಾಂಶಗಳು ದೊರಕುವುದಿಲ್ಲ.

ಈ ಕುರಿತಂತೆ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್ ಒಂದರ ಡಯೇಟಿಶಿಯನ್‌ ಹರ್ಷಿತಾ ಹೀಗೆ ಹೇಳುತ್ತಾರೆ, ನಮ್ಮ 70-80% ರೋಗ ನಿರೋಧಕ ಶಕ್ತಿಯು ಪಚನ ವ್ಯವಸ್ಥೆಯಲ್ಲಿ ಕೇಂದ್ರಿಕೃತವಾಗಿದೆ. ಈ ವ್ಯವಸ್ಥೆಯನ್ನು ಆರೋಗ್ಯದಿಂದಿಡಲು ನಮಗೆ ಮೈಕ್ರೊಬಯೋಮ್ ಗಳು ಬೇಕು. ಅದನ್ನು ಮೈಕ್ರೋ ಬಯೋನಿಸಂ ಎಂದು ಕರೆಯಲಾಗುತ್ತದೆ.

ಅದು 2 ರೀತಿಯದ್ದಾಗಿರುತ್ತದೆ. ಮೊದಲನೆಯದು ಗುಡ್‌ ಬ್ಯಾಕ್ಟೀರಿಯಾ ಅದನ್ನು ನಾವು ಪ್ರೊಬಯೋಟಿಕ್‌ ಹೆಸರಿನಿಂದ ಕರೆಯುತ್ತೇವೆ. ಪ್ರೊಬಯೋಟಿಕ್‌ ಲೈವ್ ‌ಬ್ಯಾಕ್ಟೀರಿಯಾ ಆಗಿದ್ದು, ಅವು ನಮ್ಮ ಪಚನಾಂಗಗಳಲ್ಲಿರುತ್ತವೆ. ಅವನ್ನು ನಾವು ನೇರವಾಗಿ ನಮ್ಮ ಡಯೆಟ್‌ ನಲ್ಲಿ ತೆಗೆದುಕೊಳ್ಳಬಹುದಾಗಿದೆ. ಉದಾಹರಣೆಗೆ ನಾವು ಮೊಸರು ಸೇವಿಸುತ್ತೇವೋ ಅಥವಾ ಯೋಗರ್ಟ್‌ ತಿನ್ನುತ್ತೇವೋ ಅಥವಾ ಫರ್ಮೆಂಟೆಡ್‌ ಫುಡ್‌ ಸೇವಿಸುತ್ತೇವೋ ಅದರಲ್ಲಿ ಪ್ರೊಬಯೋಟಿಕ್‌ ಗಳಿರುತ್ತವೆ.

ನಮ್ಮ ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಎರಡನೇ ಉಪಾಯವೆಂದರೆ, ಪ್ರೊಬಯೋಟಿಕ್‌ ಸೇವಿಸುವುದಾಗಿದೆ. ಅವು ನಾನ್ ಡೈಜೆಸ್ಟಿವ್ ‌ಕಾರ್ಬೋಹೈಡ್ರೇಟ್‌ ಆಗಿರುತ್ತವೆ. ನಾವು ಯಾವಾಗ ಇವುಗಳ ಸೇವನೆ ಮಾಡುತ್ತೇವೆ, ಆಗ ಗುಡ್‌ ಎನ್ವಾಯರ್ನ್‌ಮೆಂಟ್‌ ಉಂಟಾಗುತ್ತದೆ. ಅದರಿಂದ ಗುಡ್‌ ಬ್ಯಾಕ್ಟೀರಿಯಾ ತಯಾರಾಗುತ್ತವೆ. ಉದಾಹರಣೆಗೆ ಬಾಳೆಹಣ್ಣು, ಈರುಳ್ಳಿ, ಜೇನುತುಪ್ಪ, ಕೆಲವು ಹಸಿರು ಸೊಪ್ಪುಗಳು, ಇವನ್ನು ನಾವು ಪ್ರೊಬಯೋಟಿಕ್‌ ಹೆಸರಿನಿಂದ ಕರೆಯುತ್ತೇವೆ.

ನಾವು ನಮ್ಮ ಆಹಾರದ ಮೂಲಕ ಇವನ್ನು ಸೇವಿಸಿದಾಗ, ಇವು ಪ್ರೊಬೂಟಿಕ್‌ ನಿರ್ಮಾಣಗೊಳ್ಳಲು ನೆರವಾಗುತ್ತವೆ.

ನಮ್ಮ ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಇವನ್ನು ಸೇವಿಸಿ :

ಫರ್ಮೆಂಟೆಡ್ಡೇರಿ : ಕರುಳನ್ನು ಆರೋಗ್ಯದಿಂದಿಟ್ಟುಕೊಳ್ಳಲು ಫರ್ಮೆಂಟೆಡ್‌ ಫುಡ್ಸ್, ಅದರಲ್ಲೂ ವಿಶೇಷವಾಗಿ ಹಾಲು ಉತ್ಪನ್ನಗಳು ಅಂದರೆ ಮೊಸರು, ಯೋಗರ್ಟ್‌ ಬಹಳ ಉಪಯುಕ್ತ. ನೀವು ಇವನ್ನು ದೈನಂದಿನ ಆಹಾರದಲ್ಲಿ ಸೇರ್ಪಡೆ ಮಾಡಿಕೊಂಡರೆ, ನಿಮ್ಮ ಪಚನ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ ಹಾಗೂ ಗುಡ್‌ ಬ್ಯಾಕ್ಟೀರಿಯಾಗಳು ಬಹುಬೇಗ ಹೆಚ್ಚುತ್ತವೆ.

ಬ್ಲೂಬೆರಿ : ಸಂಶೋಧನೆಗಳಿಂದ ತಿಳಿದು ಬಂದ ಸಂಗತಿಯೆಂದರೆ, ಬ್ಲೂಬೆರಿಯಲ್ಲಿ ಆ್ಯಂಟಿ ಇನ್‌ ಫ್ಲೆಮೆಟರಿ ಏಜೆಂಟ್‌ ಇರುತ್ತದೆ. ಅದು ಕರುಳಿನಲ್ಲಿರುವ ಗುಡ್‌ ಬ್ಯಾಕ್ಟೀರಿಯಾಗಳಿಗೆ ಸಾಕಷ್ಟು ಪೋಷಣೆ ನೀಡುತ್ತದೆ. ಹೀಗಾಗಿ ಇವುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬೀನ್ಸ್ : ಬೀನ್ಸ್ ನಲ್ಲಿ ಕಾರ್ಬೊಹೈಡ್ರೇಟ್‌, ವಿಟಮಿನ್‌ ಹಾಗೂ ಪ್ರೋಟೀನ್‌ ಹೇರಳವಾಗಿರುತ್ತದೆ. ಅದರಲ್ಲಿ ನಾರಿನಂಶ ಕೂಡ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಅದು ಪಚನ ವ್ಯವಸ್ಥೆಯನ್ನು ಸಮರ್ಪಕವಾಗಿಸಲು ನೆರವಾಗುತ್ತದೆ.

ಡಾರ್ಕ್ಚಾಕ್ಲೇಟ್‌ : ಚಾಕ್ಲೇಟ್‌ ತಿನ್ನಲು ಸ್ವಾದಿಷ್ಟವಾಗಿರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಅಂದಹಾಗೆ ಡಾರ್ಕ್‌ ಚಾಕ್ಲೇಟ್‌ ಕರುಳಿನಲ್ಲಿರುವ ಗುಡ್‌ ಬ್ಯಾಕ್ಟೀರಿಯಾಗಳಿಗೆ ತುಂಬಾ ಉಪಯುಕ್ತ. ಇದರಲ್ಲಿರುವ ಕೊಕೊಲಾ ಘಟಕ ಆ್ಯಂಟಿ ಆಕ್ಸಿಡೆಂಟ್‌ ನಿಂದ ಸಮೃದ್ಧವಾಗಿರುತ್ತದೆ. ಅದು ಗುಡ್‌ ಬ್ಯಾಕ್ಟೀರಿಯಾ ನಿರ್ಮಾಣ ಪ್ರಕ್ರಿಯೆಗೆ ನೆರವಾಗುತ್ತದೆ.

ಬಾಳೆಹಣ್ಣು : ಪ್ರತಿದಿನ ಬಾಳೆಹಣ್ಣಿನ ಸೇವನೆಯಿಂದ ಸಾಕಷ್ಟು ಉಪಯೋಗವಿದೆ. ಅಂದಹಾಗೆ ಬಾಳೆಹಣ್ಣು ಪ್ರೊಬಯೋಟಿಕ್‌ ನ ಸಮೃದ್ಧ ಮೂಲವಾಗಿದೆ. ಇದಲ್ಲಿರುವ ಸ್ಟಾರ್ಚ್‌ ದೊಡ್ಡ ಕರುಳಿಗೆ ಹೋಗಿ ಫರ್ಮೆಂಟಾಗುತ್ತದೆ. ಅದು ಇಲ್ಲಿರುವ ಗುಡ್ ಬ್ಯಾಕ್ಟೀರಿಯಾಗಳ ಪೋಷಣೆಗೆ ಬಹಳ ಉಪಯುಕ್ತ. ಇದರ ಹೊರತಾಗಿ ಇವು ಕರುಳಿನಲ್ಲಿರುವ ಗುಡ್‌ ಬ್ಯಾಕ್ಟೀರಿಯಾಗಳಿಗೂ ಒಳ್ಳೆಯದು. ಹೀಗಾಗಿ ನಿಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಅತ್ಯವಶ್ಯವಾಗಿ ಸೇವಿಸಿ.

ಗ್ರೀನ್ಟೀ : ಗ್ರೀನ್‌ ಟೀಯನ್ನು ಪಾಲಿಫಿನಾಲ್ ‌ನ ಅತ್ಯುತ್ತಮ ಮೂಲ ಎಂದು ಹೇಳಲಾಗುತ್ತದೆ. ಇದು ಹೊಟ್ಟೆಯಲ್ಲಿ ಹೆಲ್ದೀ ಮೈಕ್ರೋಬ್‌ ತಯಾರಾಗಲು ನೆರವಾಗುತ್ತದೆ ಮತ್ತು ಇದು ಗುಡ್‌ ಬ್ಯಾಕ್ಟೀರಿಯಾ ಹಾಗೂ ಫ್ಯಾಟಿ ಆ್ಯಸಿಡ್‌ ನ ಅನುಪಾತವನ್ನು ಸಮತೋಲನದಿಂದ ಇಡುತ್ತದೆ. ಇದರಿಂದ ಹೊಟ್ಟೆ ಆರೋಗ್ಯದಿಂದ ಇರುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ನ ಗುಣ ಇದ್ದು, ಅದರಿಂದಾಗಿ ಬಗೆ ಬಗೆಯ ಸೋಂಕು ಮತ್ತು ಕ್ಯಾನ್ಸರ್‌ ನಿಂದಲೂ ರಕ್ಷಣೆ ದೊರಕುತ್ತದೆ.

ಬೀಟ್ರೂಟ್‌ : ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅಂಶ ಇದ್ದು, ಅದು ಗುಡ್‌ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಕವಾಗಿದೆ. ಇದರಲ್ಲಿ ನಾರಿನಂಶ ಕೂಡ ಇದ್ದು, ಅದು ಯಾವುದೇ ಪ್ರಕಾರದ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ.

ಸಂಗತಿಗಳ ಬಗ್ಗೆ ಗೊತ್ತಿರಲಿ

ನಿಮ್ಮ ಹೊಟ್ಟೆಯನ್ನು ಆರೋಗ್ಯದಿಂದಿಡಲು ಸಂಗತಿಯನ್ನು ಗಮನಿಸಿ :

ಒತ್ತಡದ ಮಟ್ಟ ಕಡಿಮೆ ಮಾಡಿಕೊಳ್ಳಿ : ಹೆಚ್ಚು ಒತ್ತಡ ನಮ್ಮ ಹೊಟ್ಟೆಯ ಜೊತೆ ಜೊತೆಗೆ ಇಡೀ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಮುಂಜಾನೆ ನಡಿಗೆ, ಬಾಡಿ ಮಸಾಜ್‌, ಸ್ನೇಹಿತರ ಹಾಗೂ ಕುಟುಂಬದವರ ಜೊತೆ ಗುಣಮಟ್ಟದ ಸಮಯ ಕಳೆಯುವುದು, ನಗು, ಯೋಗ ಮುಂತಾದ ಚಟುವಟಿಕೆಗಳು ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಗುತ್ತವೆ.

ಪರಿಪೂರ್ಣ ನಿದ್ರೆ : ಒಳ್ಳೆಯ ನಿದ್ದೆ ಬರದಿರುವ ಕಾರಣದಿಂದ ಹೊಟ್ಟೆ ಹಾಗೂ ಕರುಳುಗಳಿಗೆ ಒಳ್ಳೆಯ ಬ್ಯಾಕ್ಟೀರಿಯಾಗಳ ಅಸಮತೋಲನ ಉಂಟಾಗುತ್ತದೆ. ಈ ಕಾರಣದಿಂದ ಪಚನ ವ್ಯವಸ್ಥೆ ಹದಗೆಡುತ್ತದೆ. ಅದಕ್ಕಾಗಿ 7-8 ಗಂಟೆಯ ನಿದ್ರೆ ಅತ್ಯವಶ್ಯಕ.

ನೆಮ್ಮದಿಯಿಂದ ಆಹಾರ ಸೇವಿಸಿ : ಆಹಾರವನ್ನು ಚೆನ್ನಾಗಿ ಅಗಿದು ತಿನ್ನಿ ಹಾಗೂ ನೆಮ್ಮದಿಯಿಂದ ತಿನ್ನಿ. ಏಕೆಂದರೆ ಹೊಟ್ಟೆ ಮತ್ತು ಕರುಳುಗಳು ಆಹಾರದಲ್ಲಿರುವ ಪೋಷಕಾಂಶಗಳನ್ನು ಚೆನ್ನಾಗಿ ಪಚನ ಮಾಡಲು, ಹೀರಿಕೊಳ್ಳಲು ಸಹಾಯವಾಗಬೇಕು. ಈ ರೀತಿಯಲ್ಲಿ ಆಹಾರ ನಿಮ್ಮ ಪಚನ ವ್ಯವಸ್ಥೆಯನ್ನು ಸರಿಯಾಗಿ ಇಡುತ್ತದೆ.

ಹೈಡ್ರೇಟ್ಆಗಿರಿ : ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯುವುದು, ಕರುಳು ಹಾಗೂ ಲಿವರ್‌ ನ ಆರೋಗ್ಯಕ್ಕೆ ಒಳ್ಳೆಯದು. ಗುಡ್‌ಬ್ಯಾಕ್ಟೀರಿಯಾಗಳ ಸಮತೋಲನ ಕಾಯ್ದುಕೊಳ್ಳಲು ಕೂಡ ಇದು ನೆರವಾಗುತ್ತದೆ.

ಪ್ರೊಬಯೋಟಿಕ್‌ : ಪ್ರೊಬಯೋಟಿಕ್‌ ಸಪ್ಲಿಮೆಂಟ್ಸ್ ನ್ನು ನಿಮ್ಮ ಆಹಾರದ ಭಾಗವಾಗಿಸಿಕೊಳ್ಳುವುದು ಒಂದು ಒಳ್ಳೆಯ ಪರ್ಯಾಯವಾಗಿದೆ. ಇದು ಕರುಳನ್ನು ಆರೋಗ್ಯದಿಂದಿಡಲು ಅನುಕೂಲಕರ ವಾತಾವರಣ ಕಲ್ಪಿಸುತ್ತದೆ. ಪ್ರೊಬಯೋಟಿಕ್‌ ಫುಡ್ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ. ಯಾರಲ್ಲಿ ಗುಡ್‌ ಬ್ಯಾಕ್ಟೀರಿಯಾಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತವೋ, ಅವರು ಪ್ರೊಬಯೋಟಿಕ್‌ ಸೇವನೆ ಮಾಡಬಾರದು. ಅವರು ವೈದ್ಯರ ಸಲಹೆಯ ಮೇರೆಗೆ ಅವನ್ನು ಬಳಸಬೇಕು.

ಪಚನಕಾರಕ ಆಹಾರ : ಒಂದು ವೇಳೆ ಹೊಟ್ಟೆಯಲ್ಲಿ ಎಳೆದಂತಾಗುವಿಕೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಭೇದಿ ವಾಂತಿ ಹಾಗೂ ಹೊಟ್ಟೆಯಲ್ಲಿ ಗ್ಯಾಸ್‌ ಸಮಸ್ಯೆ ಉಂಟಾದಲ್ಲಿ ನೀವು ನಿಮ್ಮ ಆಹಾರದ ಅಭ್ಯಾಸಗಳ ಬಗ್ಗೆ ಗಮನಕೊಡುವುದು ಅಗತ್ಯ. ನೀವು ಎಂತಹ ಆಹಾರ ಸೇವಿಸಬೇಕೆಂದರೆ, ಅದು ಸುಲಭವಾಗಿ ಜೀರ್ಣವಾಗುವಂತಿರಬೇಕು ಹಾಗೂ ಎಲ್ಲ ಪೋಷಕಾಂಶಗಳು ದೇಹದ ಎಲ್ಲ ಭಾಗಕ್ಕೂ ಸರಿಯಾಗಿ ತಲುಪಬೇಕು.

ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ