ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸಿದ ‘ರಾಜ್ ವಿಷ್ಣು ‘ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿ ಯಾಗಿ ಪಾದರ್ಪಣೆ ಮಾಡಿ ಗಾಳಿಪಟ 2, ಮಾರ್ಟಿನ್ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದ ವೈಭವಿ ಶಾಂಡಿಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮರಾಠಿ ಸಂಪ್ರದಾಯದ ಪ್ರಕಾರ ಕೋಲ್ಹಪುರ ದಲ್ಲಿ ಚಲನಚಿತ್ರ ಛಾಯಾಗ್ರಾಹಕ ಹರ್ಷವರ್ಧನ್ ಜೊತೆ ವೈಭವಿ ಮದುವೆಯಾಗಿದ್ದಾರೆ.
ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಖುಷಿ ಹಂಚಿಕೊಂಡ ವೈಭವಿ, ಪೋಷಕರ ಆಶೀರ್ವಾದ, ಸ್ನೇಹಿತರು ಮತ್ತು ಹಿತೈಷಿಗಳ ಹಾರೈಕೆಯೊಂದಿಗೆ ಹೊಸ ಜೀವನ ಕ್ಕೆ ಕಾಲಿಟ್ಟಿದ್ದೇನೆ, ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ ಎಂದು ಪೋಸ್ಟ್ ಹಾಕಿದ್ದಾರೆ.
ಮರಾಠಿ ಚಿತ್ರದ ಮೂಲಕ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ವೈಭವಿ, ನಂತರ ದಕ್ಷಿಣದತ್ತ ಮುಖ ಮಾಡಿದ್ದರು. ಒಂದೆರಡು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ ವೈಭವಿ ಕನ್ನಡ ದಲ್ಲಿ ಇತ್ತೀಚಿಗೆ ನಟಿಸಿದ ಪ್ಯಾನ್ ಇಂಡಿಯಾ ಮೂವಿ ಮಾರ್ಟೀನ್ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಯಾದ ನಂತರ ಬಾಕ್ಸ್ ಗಳಿಕೆಯಲ್ಲಿ ನೆಲ ಕಚ್ಚಿತ್ತು.ಇಲ್ಲಿಯ ಬರೀ ತನಕ ಗ್ಲಾಮರ್ ಪಾತ್ರಗಳನ್ನಷ್ಟೇ ನಿರ್ವಹಿಸಿಕೊಂಡು ಬಂದಂತಹ ವೈಭವಿ ಗೆ ಕೈಯಲ್ಲಿ ಹೇಳಿ ಕೊಳ್ಳುವಂತಹ ಅವಕಾಶ ಕೂಡ ಇರಲಿಲ್ಲ. ಒಟ್ಟಿನಲ್ಲಿ ಸರಿಯಾದ ಸಮಯದಲ್ಲಿ ವೈಭವಿ ಮದುವೆ ನಿರ್ಧಾರ ಕೈಗೊಂಡಿದ್ದಾರೆ. ದಂಪತಿಗಳಿಗೆ ಶುಭವಾಗಲಿ.