ತಲೈವಾ ಆಕ್ಷನ್​​ ಅಂದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣಿತಾರೆ. ವಯಸ್ಸಾದರೇನಂತೆ ಆಕ್ಷನ್​​​​, ಸ್ಟೈಲ್​ಗೆ ವಯಸ್ಸಾಗೋದೇ ಇಲ್ಲ. ರಜನಿಕಾಂತ್​​ಗೆ ವಯಸ್ಸಾಗ್ತಿದ್ರೂ ಕ್ರೇಜ್ ಮಾತ್ರ ಕಮ್ಮಿ ಆಗ್ತಾನೇ ಇಲ್ಲ. ಜೈಲರ್​​​​ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಕೊಟ್ಟು ಸೂಪರ್ ಹಿಟ್ ಮಾಡಿದ ರಜನಿ ಈಗ ಜೈಲರ್​ 2ನಲ್ಲಿ ಮತ್ತಷ್ಟು ಖದರ್​​ ಆಗಿ ಆಕ್ಟಿಂಗ್ ಮಾಡ್ತಿದ್ದಾರೆ.

JAILER 2 RAJANI (7)

ಜೈಲರ್ 2 ಯಾವಾಗ ಶುರುವಾಗುತ್ತೆ ಅಂತಾ ಕಾಯ್ತಿದ್ದ ಅಸಂಖ್ಯಾತ ಅಭಿಮಾನಿಗಳ ಕಾಯುವಿಕೆಯ ಸಮಯ ಮುಗಿದಾಗಿದೆ. ಜೈಲರ್​ 2 ಸಿನಿಮಾ ಶೂಟಿಂಗ್ ಶುರುವಾಗಿದೆ. ಅದರ ಪೋಸ್ಟರ್​ಗಳು ಹೊರಬಿದ್ದಿದ್ದು, 74 ವರ್ಷದ ರಜನಿಕಾಂತ್​​ಗೆ ರಕ್ತಾಭಿಷೇಕವಾಗಿದೆ.

JAILER 2 RAJANI (1)

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಜೈಲರ್-2 ಸಿನಿಮಾದ ಶೂಟಿಂಗ್ ಶುಭಾರಂಭವಾಗಿದೆ. ಚೆನ್ನೈನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸನ್ ಪಿಕ್ಚರ್ಸ್ ಬ್ಯಾನರ್ ನಡಿ ಕಲಾನಿಧಿ ಮಾರನ್ ನಿರ್ಮಾಣದ ಈ ಸಿನಿಮಾಗೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

JAILER 2 RAJANI (4)

ಅಂದಹಾಗೆ ಇದು 2023ರ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಜೈಲರ್ ಚಿತ್ರದ ಸೀಕ್ವೆಲ್ ಇದಾಗಿದೆ. ಬರೋಬ್ಬರಿ 200 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಜೈಲರ್ ಸಿನಿಮಾ 650ಕ್ಕೂ ಅಧಿಕ ಕೋಟಿ ಗಳಿಸೋ ಮೂಲಕ ಕಾಲಿವುಡ್ ಪಾಲಿಗೆ ಆ ವರ್ಷದ ಬೂಸ್ಟರ್ ಡೋಸ್ ಆಗಿತ್ತು.

JAILER 2 RAJANI (5)

ಜೈಲರ್ ಸಿನಿಮಾದಲ್ಲಿ ತಲೈವಾ ರಜನೀಕಾಂತ್ ಜೊತೆ ನಮ್ಮ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್ ಲಾಲ್, ತೆಲುಗಿನ ಸುನಿಲ್, ರಮ್ಯಾಕೃಷ್ಣ, ತಮನ್ನಾ, ಕಿಶೋರ್, ಬಾಲಿವುಡ್ ನ ಜಾಕಿಶ್ರಾಫ್ ಹೀಗೆ ದೊಡ್ಡ ತಾರಾದಂಡು ಕಮಾಲ್ ಮಾಡಿತ್ತು. ಆದ್ರೀಗ ಜೈಲರ್-2ನಲ್ಲಿ ಯಾರೆಲ್ಲಾ ಮಿಂಚು ಹರಿಸಲಿದ್ದಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

JAILER 2 RAJANI (2)

ಚಿತ್ರತಂಡವೇ ರಿವೀಲ್ ಮಾಡಿರೋ ಮಾಹಿತಿ ಪ್ರಕಾರ ಸದ್ಯ ಇಂದಿನಿಂದ ಚಿತ್ರೀಕರಣ ಶುರುವಾಗಿದ್ದು, ರಜನೀಕಾಂತ್ ದೃಶ್ಯಗಳನ್ನ ಎರಡು ವಾರಗಳ ಕಾಲ ಸೆರೆಹಿಡಿಯುತ್ತಾರಂತೆ. ಮುಂದಿನ ತಿಂಗಳು ಅಂದ್ರೆ ಏಪ್ರಿಲ್ ನಿಂದ ಉಳಿದ ಕಲಾವಿದರ ಜೈಲರ್-2 ಸೆಟ್ ಎಂಟ್ರಿ ಆಗಲಿದೆ ಎನ್ನಲಾಗುತ್ತಿದೆ.

JAILER 2 RAJANI (3)

ಅನಿರುದ್ದ್ ರವಿಚಂದರ್ ಸಂಗೀತ ಸಿನಿಮಾಗೆ ಪ್ಲಸ್ ಆಗಲಿದ್ದು, ಮೊದಲ ಭಾಗದಲ್ಲಿನಂತೆ ಸೀಕ್ವೆಲ್ ನಲ್ಲೂ ಕಿಕ್ ಕೊಡೋ ಹಿನ್ನೆಲೆ ಸಂಗೀತ ಹಾಗೂ ಟ್ರೆಂಡಿಂಗ್ ಸಾಂಗ್ ಕೊಡೋ ಸೂಚನೆ ಇದೆ. ನಿರ್ಮಾಪಕರಿಗೆ ನಿರೀಕ್ಷೆ ಮೀರಿ ಹಣ ಬಂದ ಹಿನ್ನೆಲೆಯಲ್ಲಿ, ಬಹಳ ಖುಷಿಯಿಂದ ತಲೈವಾ ರಜನೀಕಾಂತ್ ರಿಗೆ BMW X7, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ಸಂಯೋಜಕ ಅನಿರುದ್ದ್ ಅವರಿಗೆ ತಲಾ ಒಂದೊಂದು ಪೋರ್ಷೆ ದುಬಾರಿ ಕಾರ್ ಗಳನ್ನ ಗಿಫ್ಟ್ ಮಾಡಿದ್ರು.

JAILER 2 RAJANI (8)

ಈ ಬಾರಿ ಜೈಲರ್-2 ಸಾವಿರ ಕೋಟಿ ಗಳಿಸೋ ಲೆಕ್ಕಾಚಾರಗಳು ನಡೆಯುತ್ತಿದ್ದು, ಮತ್ತಷ್ಟು, ಮಗದಷ್ಟು ವಯಲೆಂಟ್ ಆಗಲಿದ್ದಾರೆ ಜೈಲರ್ ತಲೈವಾ. ಅಲ್ಲದೆ, ಜೈಲರ್ ಸಿನಿಮಾ ತಂಡ ಈ ಬಾರಿ ಮೊದಲ ಭಾಗದಲ್ಲಿದ್ದ ಪರಭಾಷಾ ಸ್ಟಾರ್ ಗಳನ್ನ ಮತ್ತೊಂದು ರೌಂಡ್ ಅಖಾಡಕ್ಕಿಳಿಸೋ ಯೋಜನೆಯಲ್ಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ