ಸರಸ್ವತಿ*

ಮಲಯಾಳಂನ ಸೂಪರ್ ಹಿಟ್ ಸಿನಿಮಾ ದಿ‌ ಪೆಟ್ ಡಿಟೆಕ್ಟಿವ್ ಒಟಿಟಿಗೆ ಎಂಟ್ರಿ ಕೊಡ್ತಿದೆ. ಇದೇ ತಿಂಗಳ‌ 28ರಿಂದ zee5ನಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿಯೂ‌ ಚಿತ್ರ ವೀಕ್ಷಣೆ ಮಾಡಬಹುದು.

ಪ್ರಾಣೀಶ್ ವಿಜಯನ್ ನಿರ್ದೇಶನದ ‘ದಿ ಪೆಟ್ ಡಿಟೆಕ್ಟಿವ್’ ಚಿತ್ರದಲ್ಲಿ ಶರಫ್ ಯು ಧೀನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.‌ ಅಲ್ಲದೇ ನಿರ್ಮಾಪಕರಾಗಿ ಇದು ಚೊಚ್ಚಲ ಪ್ರಯತ್ನ ಕೂಡ.‌ ವಿನಾಯಕನ್, ವಿನಯ್ ಫೋರ್ಟ್, ಅನುಪಮಾ ಪರಮೇಶ್ವರನ್, ಶ್ಯಾಮ್ ಮೋಹನ್ ಮತ್ತು ಜೋಮನ್ ಜ್ಯೋತಿರ್ ಸೇರಿದಂತೆ ಪ್ರತಿಭಾನ್ವಿತ ತಾರಾಗಣ ಚಿತ್ರದಲ್ಲಿದೆ.

detective

ಟೈಟಲ್ ಹೇಳುವಂತೆ ಕಾಣೆಯಾದ ಶ್ವಾನ ಹುಡುಕುತ್ತಾ ಹೋಗುವ ನಾಯಕನ ಸುತ್ತಾ ಸಾಗುವ ಕಥೆ ಇದಾಗಿದೆ.‌ ನೋಡುಗರಿಗೆ ಭರ್ಜರಿ ಮನರಂಜನೆ ರಸದೌತಣ ಬಡಲಿದೆ ದಿ‌ ಪೆಟ್ ಡಿಟೆಕ್ಟಿವ್ ಸಿನಿಮಾ.

ನಿರ್ಮಾಪಕ ಮತ್ತು ನಟ ಶರಫ್ ಯು ಧೀನ್ zee5 ಒಟಿಟಿ ಎಂಟ್ರಿ ಬಗ್ಗೆ ಮಾತನಾಡಿ, “ದಿ ಪೆಟ್ ಡಿಟೆಕ್ಟಿವ್ ನನಗೆ ತುಂಬಾ ವಿಶೇಷ ಸಿನಿಮಾ. ಕೇವಲ ನಟನಾಗಿ ಮಾತ್ರವಲ್ಲ, ನಿರ್ಮಾಪಕನಾಗಿ ನನ್ನ ಚೊಚ್ಚಲ ಪ್ರಯತ್ನ ಇದು. ಪ್ರೇಕ್ಷಕರು ಹೆಚ್ಚು ಯೋಚಿಸದೆ ಸರಳವಾಗಿ ನಗುವಂತಹ ಚಿತ್ರವನ್ನು ನಾವು ಮಾಡಲು ಬಯಸಿದ್ದೇವೆ. ಇದು ವರ್ಣಮಯವಾಗಿದೆ ಮತ್ತು ಹೃದಯ ತುಂಬಿದೆ. ಈಗ ವೀಕ್ಷಕರು ZEE5 ನಲ್ಲಿ ಇದನ್ನು ಆನಂದಿಸಬಹುದು ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ” ಎಂದರು.

ದಿ ಪೆಟ್ ಡಿಟೆಕ್ಟಿವ್ ನವೆಂಬರ್ 28 ರಿಂದ Zee5 ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ