ಕೆಜಿಎಫ್​ ಚಾಪ್ಟರ್​ 2 ಸಹ-ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಆಕಸ್ಮಿಕವಾಗಿ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.

ಪುತ್ರನನ್ನು ಕಳೆದುಕೊಂಡ ನಿರ್ದೇಶಕರ ಕುಟುಂಬ ತೀವ್ರ ದುಃಖದಲ್ಲಿದೆ. ಈ ವಿಷಯ ತಿಳಿದ ನಂತರ, ಅನೇಕ ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಕೀರ್ತನ್ ನಾಡಗೌಡ ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಕೀರ್ತನ್ ನಾಡಗೌಡ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ದಾಖಲೆ ಬರೆದ ಕೆಜಿಎಫ್ ಚಿತ್ರಕ್ಕೆ ಎರಡನೇ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ