– ರಾಘವೇಂದ್ರ ಅಡಿಗ ಎಚ್ಚೆನ್.
ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಝೈದ್ ಖಾನ್ ಅವರು ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶಿಡ್ಲಘಟ್ಟದಲ್ಲಿ ನಡೆದಿರುವ ಘಟನೆ ಝೈದ್ ಖಾನ್ಗೆ ನೆಗೆಟಿವ್ ಆಗಿದೆ. ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ, ಮಹಿಳಾ ಅಧಿಕಾರಿಗೆ ಹಾಕಿರುವ ಬೆದರಿಕೆಗೆ ಇದೀಗ ಝೈದ್ ಖಾನ್ ಸಹ ಕ್ಷಮೆ ಕೋರಿದ್ದಾರೆ. ಝೈದ್ ಖಾನ್ ಅವರು ಪ್ರಚಾರದ ಸಮಯದಲ್ಲಿಯೂ ಸಹ ಸತತವಾಗಿ ಇಂಥಹಾ ಪ್ರಶ್ನೆಗಳನ್ನೇ ಎದುರಿಸುತ್ತಿದ್ದು, ಇದೀಗ ಝೈದ್ ಖಾನ್ಗೆ ತುಳು ಭಾಷೆಯ ಬಗ್ಗೆ ವಿರೋಧ ಇದೆ ಎಂಬ ಆರೋಪವೂ ಎದುರಾಗಿದ್ದು, ಆ ಬಗ್ಗೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಅದರೊಡನೆ ಝೈದ್ ಖಾನ್ ಮುಸ್ಲಿಂ ಧರ್ಮದವರಾದರೂ ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ. ಅದರಂತೆ ಇತ್ತೀಚೆಗೆ ಸಂಕ್ರಾಂತಿ ಹಬ್ಬ ಆಚರಿಸಿದ್ದರು. ನಾಯಕಿ ಜೊತೆ ದೇವಸ್ಥಾನದಲ್ಲಿ ಹಿಂದೂ ದೇವರ ದರ್ಶನ ಪಡೆದು ಮಂಗಳಾರತಿ ಸ್ವೀಕರಿಸಿದ್ದರು. ಈ ಬಗ್ಗೆ ಪ್ರಶ್ನೆಗಳು ಎದ್ದಿದ್ದು ಇದಕ್ಕೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಕಲ್ಟ್ ಸಿನಿಮಾ ಪ್ರಚಾರದ ವೇಳೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದರು. ಇದನ್ನು ನಿಮ್ಮ ಧರ್ಮದವರು ಪ್ರಶ್ನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ನಾನು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ ಎಂದಿದ್ದಾರೆ. ಇನ್ನು ಸಿನಿಮಾದಲ್ಲಿ ಮದ್ಯ ಸೇವನೆ, ಹಿಂಸಾಚಾರದಂತ ದೃಶ್ಯಗಳಿದ್ದು ಇಸ್ಲಾಂನಲ್ಲಿ ಇದೆಲ್ಲವನ್ನು ಹರಾಮ್ ಎಂದು ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಕ್ಕೆ ನಟನೆಯನ್ನು ನಟನೆಯಾಗಿ ಮಾತ್ರ ನೋಡುತ್ತೇನೆ. ಅದಕ್ಕೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬಾರದು ಎಂದರು. ಒಂದು ವೇಳೆ ನಾನು ಹರಾಮ್ ಹೌದೋ ಅಲ್ಲವೋ ಅನ್ನೋದನ್ನು ಸತ್ತ ಮೇಲೆ ನಾನು ದೇವರಿಗೆ ಲೆಕ್ಕ ಕೊಟ್ಟುಕೊಳ್ಳುತ್ತೇನೆ ಎಂದರು
ಇನ್ನು ಝೈದ್ ಖಾನ್ ಇಂಗ್ಲಿಷ್, ತುಳು ಬಿಟ್ಟು ಕನ್ನಡ ಮಾತನಾಡಿ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಮಂಗಳೂರಿಗರು ನಿಮ್ಮ ಸಿನಿಮಾ ಬಂದ್ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಝೈದ್ ಖಾನ್ ನನಗೆ ಮಂಗಳೂರಿನಿಂದ ಕಲೆಕ್ಷನ್ ಬೇಡ ಎಂದಿದ್ದರು. ಇದರ ಕುರಿತಂತೆ ಬೆಂಗಳೂರಿನ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ಕೊಟ್ಟಿರುವ ನಟ ನಾನು ತುಳು ಧ್ವೇಷಿಯಲ್ಲ. ಕನ್ನಡ ಮಾತಾಡಿ ಎಂದಷ್ಟೇ ಹೇಳಿರೋದು ಎಂದರು. ಅದಕ್ಕೆ ಪತ್ರಕರ್ತರು ಮಂಗಳೂರಿನವರು ಕನ್ನಡ ಮಾತಾಡಲ್ಲ ಎಂದು ನಿಮಗೆ ಯಾರು ಹೇಳಿದ್ರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಝೈದ್ ಖಾನ್, ನಾನು ಉಡುಪಿ, ಮಂಗಳೂರು ಸೇರಿದಂತೆ ಆ ಭಾಗಕ್ಕೆ ಪ್ರವಾಸ ಹೋಗಿದ್ದೀನಲ್ಲ ಸಾರ್. ಆಗ ಎಲ್ಲರೂ ತುಳುವಿನಲ್ಲೇ ಮಾತಾಡ್ತಾರೆ. ಹಾಗಾಗಿ ಕನ್ನಡ ಮಾತಾಡಿ ಎಂದಷ್ಟೇ ಹೇಳಿದ್ದೇನೆ ಎಂದಿದ್ದಾರೆ.
ಇನ್ನೊಂದೆಡೆ ಕಲ್ಟ್ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ಪ್ರಯುಕ್ತ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದ ರಚಿತಾ ಬಾಡಿ ಶೇಮಿಂಗ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ಡೋಂಟ್ ಗೀವ್ ಎ ಡ್ಯಾಮ್ನ್ ಅಂತ ಹೇಳಿ ಬ್ಯಾಡ್ ವರ್ಡ್ ಬಳಕೆ ಮಾಡಿದ್ದಾರೆ ಅನ್ನೋದು ಸದ್ಯ ಸಂಚಲನ ಮೂಡಿಸೋ ಸುದ್ದಿಯಾಗ್ತಿದೆ. ಅಷ್ಟೇ ಅಲ್ಲ ನಮ್ಮ ದೇಹವನ್ನ ನಾವು ಪೂಜಿಸ್ತೀವಿ. ಏನು ತಿನ್ನಬೇಕು..? ಎಷ್ಟು ವರ್ಕೌಟ್ ಮಾಡ್ಬೇಕು ಅನ್ನೋದು ನನಗೆ ಗೊತ್ತು. ಬೇರೆಯವರಿಗೆ ಇಷ್ಟದಂತೆ ನನ್ನ ದೇಹವನ್ನ ಇಡೋಕೆ ಆಗಲ್ಲ. ಆತ್ಮಹತ್ಯೆ ಮಾಡ್ಕೊಳ್ಳೋರು ಮುಠಾಳರು ಅಂತ ಖಾರವಾಗಿಯೇ ಮಾತನಾಡಿದ್ದಾರೆ. . ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಝೈದ್ ಜೊತೆ ರಂಗಾಯಣ ರಘು, ಮಲೈಕಾ ವಾಸುಪಾಲ್, ರಚಿತಾ ರಾಮ್, ಅಚ್ಯುತ್ ಕುಮಾರ್ ನಟಿಸಿದ್ದಾರೆ.





