ರಾಘವೇಂದ್ರ ಅಡಿಗ ಎಚ್ಚೆನ್.

13 ರಿಂದ 25 ವರ್ಷ ವಯಸ್ಸಿನ ಜೆನ್ ಝಿ ಪ್ರೇಕ್ಷಕರನ್ನು ಕೇಂದ್ರವಾಗಿರಿಸಿಕೊಂಡು ಹೊಸಬರ ತಂಡವೊಂದು “ಇಂದಿರಾ” ಎನ್ನುವ ಸಿನಿಮಾ ತಯಾರಿಸಿದೆ. ಸಿನಿಮಾದ ಟೈಟಲ್ ಟೀಸರ್ ಮತ್ತು ಪೋಸ್ಟರ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ಅನಾವರಣಗೊಳಿಸಿದರು, ಕಾರ್ಯಕ್ರಮದಲ್ಲಿ ಬಾ. ಮಾ. ಗಿರೀಶ್, ಟಿಪಿ ಸಿದ್ದರಾಜು, ನಿತ್ಯಾನಂದ್, ಗಿರೀಶ್ ಮತ್ತು ಮಾರ್ಕೆಂಡೇಯ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Indira

:ಇಂದಿರಾ” ಸಿನಿಮಾದ ನಾಯಕ ನಟಿಯನ್ನು ಇದಾಗಲೇ ಆಯ್ಕೆ ಮಾಡಲಾಗಿದ್ದರೂ ಸಹ ಈ ಕುರಿತಂತೆ , ಜನವರಿ 27 ರಂದು ಘೋಷಿಸಲಾಗುವುದು ಎಂದು ನಿರ್ಮಾಪಕ ಕಿರಣ್ ಕುಮಾರ್ ಹೇಳಿದ್ದಾರೆ.  ಸಿವಿಲ್ ಎಂಜಿನಿಯರ್, ಬಿಲ್ಡರ್ ಮತ್ತು ಲ್ಯಾಂಡ್ ಡೆವಲಪರ್ ಆಗಿರುವ ಕಿರಣ್ ಕುಮಾರ್, ಈ ಚಿತ್ರವು ಒಂದು ರೀತಿಯಲ್ಲಿ ಕ್ರಾಂತಿಕಾರಿ ಮಹಿಳೆಯ ಸುತ್ತ ಸುತ್ತುತ್ತದೆ.ಎಂದು ಹೇಳಿದ್ದು ಇಂದಿರಾ ಪಾತ್ರವು ಒಂದು ಬಗೆಯ ಧೈರ್ಯಶಾಲಿ ಮಹಿಳಾ ವ್ಯಕ್ತಿತ್ವವನ್ನು ಹೊಂದಿದೆ ಎಂದರು.

Indira 2

ನಿರ್ಮಾಪಕ ಕಿರಣ್ “ಇಂದಿರಾ” ಚಿತ್ರದ ನಿರ್ದೇಶಕ ನಿರ್ದೇಶಕ ವೇದ್ ಅವರ ಆಲ್ಬಮ್ ಹಾಡುಗಳನ್ನು ನೋಡಿದ ನಂತರ ಅವರ ಪ್ರತಿಭೆಯನ್ನು ಮನಗಂಡು ಅವರಿಗಾಗಿ “ಇಂದಿರಾ” ಸಿನಿಮಾ ತಯಾರಿಸಲು ಒಪ್ಪಿಕೊಂಡರು.  ವೇದ್ ಅವರಿಗಿದು ಅವರ ನಿರ್ದೇಶನದ ಎರಡನೇ ಚಿತ್ರವಾಗಿದೆ. ಈ ಸಿನಿಮಾದಲ್ಲಿ 13 ರಿಂದ 25 ವರ್ಷ ವಯಸ್ಸಿನವರ ಆಲೋಚನೆಗಳು ಮತ್ತು ಮನಸ್ಥಿತಿಯನ್ನು ವಿಶೇಷವಾಗಿ ಚರ್ಚಿಸಲಾಗಾಗುತ್ತದೆ.ಇದರೊಡನೆ ಸಮಾಜದ ತಪ್ಪುಗಳನ್ನು ಸರಿಪಡಿಸುವ ಸಂದೇಶವೂ ಇಲ್ಲಿದೆ. ಚಿತ್ರದ ಟೈಟಲ್ ಟೀಸರ್ ಅನ್ನು AI ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ ಎನ್ನುವುದು ವಿಶೇಷ.

Indira 3

ನಿರ್ದೇಶಕ ವೇದ್ ಅವರ ಚಿತ್ರ “ರಾ 1” ಇಷ್ಟಪಟ್ಟ ನಟ ದೇವ್ ದೇವಯ್ಯ, ಟೈಟಲ್ ಟೀಸರ್ ಬಿಡುಗಡೆಯ ಸಮಯದಲ್ಲಿ ಅವರನ್ನು ಅಭಿನಂದಿಸಿದರು.

Indira 1

ಆದರೆ ನಿರ್ದೇಶಕರು ದೇವ್ ಅವರು ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಾಗ ನಟ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ