ಬಹುನಿರೀಕ್ಷಿತ 2025ರ ಬ್ಲಾಕ್ಬಸ್ಟರ್ ಸಿನಿಮಾ ‘ಕಾಂತಾರ: ಚಾಪ್ಟರ್ 1’ ರ ವಿಶ್ವ ಕಿರುತೆರೆ ಪ್ರೀಮಿಯರ್ (World Television Premiere) ಇದೇ ಜನವರಿ 24 ರಂದು ಸಂಜೆ 7:00 ಗಂಟೆಗೆ ಕೇವಲ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ವಿಶ್ವದಾದ್ಯಂತ ₹250 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿ, ಕನ್ನಡದ ಅತಿಹೆಚ್ಚು ಗಳಿಕೆಯ ಸಿನಿಮಾ ಎಂಬ ಇತಿಹಾಸ ಬರೆದ ಈ ಚಿತ್ರವು ಈಗ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಮತ್ತು ವ್ಯಾಪಕ ಪ್ರಶಂಸೆ ಗಳಿಸಿದ ನಂತರ, ಈ ಅದ್ಭುತ ಸಾಂಸ್ಕೃತಿಕ ಸಿನಿಮಾ ಅನುಭವವನ್ನು ಇದೀಗ ವಿಶ್ವ ಕಿರುತೆರೆ ಪ್ರೀಮಿಯರ್ ಮೂಲಕ ಕರ್ನಾಟಕದ ಮನೆಮನೆಗೆ ತಲುಪಿಸಲಾಗುತ್ತಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





