–  ರಾಘವೇಂದ್ರ ಅಡಿಗ ಎಚ್ಚೆನ್.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(ರಿ) ನೂತನ ಅಧ್ಯಕ್ಷರಾಗಿ ಚಲನಚಿತ್ರ ನಟ ಗಣೇಶರಾವ್ ಕೇಸರಕರ್ ಬಹುಮತದಿಂದ ಆಯ್ಕೆಯಾಗಿದ್ದು, 25 ವರ್ಷಗಳ ಇತಿಹಾಸದಲ್ಲೇ ಕಲಾವಿದರೊಬ್ಬರು ಮೊದಲ ಬಾರಿಗೆ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಡಿಸಿ ವೀರೇಂದ್ರ ಬೆಳ್ಳಿಚುಕ್ಕಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಭಾಸ್ಕರ ಎನ್.ಎಸ್, ಸುನೀಲ್ ಪುರಾಣಿಕ, ರಾಮಸ್ವಾಮಿ ಗೌಡ, ರೇಣು ಶಿಕಾರಿ,  ಪದ್ಮವಾಸಂತಿ, ವಿಕ್ರಂ ಸೂರಿ, ಸತ್ಯ ವಿಕಾಸ್ ಕೆ, ಸಾಗರ್ ಬಿ.ಕೆ, ಗುರುಮೂರ್ತಿ ಹೆಗ್ಡೆ, ಸಂಜೀವ ಸಿ.ಕೆ, ಗಿರೀಶ್ ಕೆ.ಟಿ, ಅಶೋಕ್ ಸುಲೇಗಾಯ್, ರಾಮು ಎಮ್.ಎಸ್, ವ್ಯಾಸರಾಜ ಎಸ್.ವೃ,  ವಿಠ್ಠಲ್ ಎನ್.ಎಂ, ಸಂದೇಶ್ ಹೆಚ್.ಸಿ, ತಿಮ್ಮರಾಜು ಟಿ, ವೆಂಕಟೇಶ ಡಿ. ಒಟ್ಟು 21 ಅಭ್ಯರ್ಥಿಗಳು ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಛಾಯಾಗ್ರಾಹಕ ವಲಯ, ಧ್ವನಿಗ್ರಾಹಕರು, ಸಂಕಲನಕಾರರ ವಲಯ, ಪ್ರಸಾಧನಕಾರರು, ಕಲಾನಿರ್ದೇಶಕರು, ವಸ್ತ್ರವಿನ್ಯಾಸಕರು, ಬರಹಗಾರರ ವಲಯ, ಸ್ಟುಡಿಯೋ  ಮಾಲೀಕರ ವಲಯ, ಯೂನಿಟ್ ಮಾಲೀಕರ ವಲಯ, ಸಂಗೀತ ವಲಯ, ನಿರ್ಮಾಣ  ನಿರ್ಮಾಪಕರ ವಲಯ, ಜಾಹೀರಾತು ವಲಯ, ಸಹಾಯಕರ ವಲಯದಿಂದ ಆಯ್ಕೆಯಾಗಿದ್ದಾರೆ.  ಮುಂದಿನ ಎರಡು ವರ್ಷಗಳ ವರೆಗೆ ಕಾರ್ಯನಿರ್ವಹಿಸಲಿದ್ದಾರೆಂದು ಚುನಾವಣಾಧಿಕಾರಿ ಎನ್.ಓ.ಚಂದ್ರಶೇಖರ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ