Sj*

ಸುರಮ್ ಮೂವೀಸ್ ಲಾಂಛನದಲ್ಲಿ “ನಿದ್ರಾದೇವಿ ನೆಕ್ಸ್ಟ ಡೋರ್” ಚಿತ್ರವನ್ನು ನಿರ್ಮಿಸಿರುವ, ” ಎಲ್ ಎಸ್ ಡಿ”, “ನಾಕುತಂತಿ”, “ಉಗ್ರಾಯುಧಮ್” ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ ದೇವಸಮುದ್ರ ಅವರು ನಿರ್ಮಿಸಿರುವ ಹಾಗೂ “ಆನ”, “ಮೇರಿ” ಚಿತ್ರಗಳ ನಂತರ ಮನೋಜ್ ಪಿ ನಡಲುಮನೆ ಅವರು ನಿರ್ದೇಶಿಸಿರುವ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರ ನವೆಂಬರ್ 13 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಚಿತ್ರತಂಡ ಈ ವಿಷಯವನ್ನು ತಿಳಿಸಿದೆ.

allava1

ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಹ ಚಿತ್ರದಲ್ಲಿದೆ‌. ಮನೆಮಂದಿಯೆಲ್ಲಾ ಒಟ್ಟಾರೆ ಕುಳಿತು ನೋಡವ ಚಿತ್ರ ಇದಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ರಾಹುಲ್ ಆರ್ಕಟ್, ಕಾಶಿ ಮಾ, ಆರತಿ ಪಡುಬಿದ್ರಿ, ತಾರಕ್ ಮಾಸ್ಟರ್, ಭಾವನ ಚಂದ್ರ, ರೋಹಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಉದಯ್ ಲೀಲಾ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ನೀಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ