–  ರಾಘವೇಂದ್ರ ಅಡಿಗ ಎಚ್ಚೆನ್.

ಒಂದು ಕಾಲದಲ್ಲಿ ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಸಿನಿಪ್ರಿಯರ ಮನಗೆದ್ದಿದ್ದ ನಟಿ ಕಾಮ್ನಾ ಜೇಠ್ಮಲಾನಿ ನೆನಪಿದ್ದಾರಾ? ಟಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದ ಈ ನಟಿ, ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೂ ತೆರೆ ಹಂಚಿಕೊಂಡಿದ್ದರು. ಆದರೆ ಸಿನಿಮಾ ಅವಕಾಶಗಳಿದ್ದಾಗಲೇ ಮದುವೆಯಾಗಿ ಕ್ರಮೇಣ ಬೆಳ್ಳಿತೆರೆಯಿಂದ ದೂರಾದರು. ಅಷ್ಟಕ್ಕೂ ಕಾಮ್ನಾ ಜೇಠ್ಮಲಾನಿ ಈಗ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ಸಿನಿಮಾ ಸ್ಟೋರಿ. ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದ ನಟಿ ಕಾಮ್ನಾ ಜೇಠ್ಮಲಾನಿ! ತೆಲುಗು ಸಿನಿಮಾಗಳಲ್ಲಿ ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಗಮನ ಸೆಳೆದಿದ್ದ ಈ ನಟಿ, ಗೋಪಿಚಂದ್ ಅಭಿನಯದ ‘ರಣಂ’ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಆ್ಯಕ್ಷನ್, ಲವ್, ಕಾಮಿಡಿ… ಹೀಗೆ ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಂಡ ಕಾಮ್ನಾ, ಅಲ್ಪಾವಧಿಯಲ್ಲೇ ಸಿನಿಪ್ರಿಯರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದರು.
ತೆಲುಗು ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲೂ ಕಾಮ್ನಾ ಜೇಠ್ಮಲಾನಿ ಮಿಂಚಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ‘ಯುಗಾದಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ‘ಗರುಡ’ ಹಾಗೂ ‘ಅಗ್ರಜ’ ಚಿತ್ರಗಳಲ್ಲೂ ನಟಿಸಿ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು. ಬೆರಳೆಣಿಕೆಯ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಕಾಮ್ನಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.
ಸಿನಿಮಾ ವೃತ್ತಿಜೀವನದಲ್ಲಿ ಗುರುತಿಸಿಕೊಂಡಿದ್ದ ಕಾಮ್ನಾ ಜೇಠ್ಮಲಾನಿ, 2014ರ ಆಗಸ್ಟ್ 11ರಂದು ಬೆಂಗಳೂರಿನ ಉದ್ಯಮಿ ಸೂರಜ್ ನಾಗ್‌ಪಾಲ್ ಅವರನ್ನು ವಿವಾಹವಾದರು. ಮದುವೆಯ ಬಳಿಕ ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾಮ್ನಾ, ಕ್ರಮೇಣ ಸಿನಿಮಾಗಳಿಂದ ದೂರ ಉಳಿದರು. ಒಂದು ಕಾಲದಲ್ಲಿ ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಮಿಂಚಿದ್ದ ನಟಿ ಇದ್ದಕ್ಕಿದ್ದಂತೆ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾದಾಗ ಅಭಿಮಾನಿಗಳಲ್ಲೂ ಕುತೂಹಲ ಮೂಡಿತ್ತು.
ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಕಾಮ್ನಾ ಅಭಿಮಾನಿಗಳ ಸಂಪರ್ಕ ಕಳೆದುಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳು ಹಾಗೂ ವೈಯಕ್ತಿಕ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇಂದಿಗೂ ಅವರ ಹಳೆಯ ಸಿನಿಮಾಗಳನ್ನು ನೆನಪಿಸಿಕೊಳ್ಳುವ ಅಭಿಮಾನಿಗಳು, ಮತ್ತೆ ಬೆಳ್ಳಿತೆರೆಯಲ್ಲಿ ಕಾಮ್ನಾ ಅವರನ್ನು ನೋಡಲು ಕಾಯುತ್ತಿದ್ದಾರೆ.

ಒಂದು ಕಾಲದಲ್ಲಿ ಗೋಪಿಚಂದ್, ರವಿಚಂದ್ರನ್ ಸೇರಿದಂತೆ ಜನಪ್ರಿಯ ನಟರ ಜೊತೆ ತೆರೆ ಹಂಚಿಕೊಂಡಿದ್ದ ಕಾಮ್ನಾ ಜೇಠ್ಮಲಾನಿ ಮತ್ತೆ ಚಿತ್ರರಂಗಕ್ಕೆ ಮರಳುತ್ತಾರಾ? ಸದ್ಯ ಪೂರ್ಣ ಪ್ರಮಾಣದ ಸಿನಿಮಾ ಕಮ್‌ಬ್ಯಾಕ್ ಕುರಿತು ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ ‘ರಣಂ’, ‘ಯುಗಾದಿ’ ಸೇರಿದಂತೆ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಕಾಮ್ನಾ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.

ಒಂದು ಕಾಲದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ಕಾಮ್ನಾ ಜೇಠ್ಮಲಾನಿ ಮತ್ತೆ ಬಣ್ಣ ಹಚ್ಚುತ್ತಾರಾ? ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ್ದ ಈ ಸುಂದರಿಯನ್ನು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ನೋಡುವ ಅವಕಾಶ ಸಿಗುತ್ತಾ? ಇದಕ್ಕೆ ಕಾಲವೇ ಉತ್ತರ ಕೊಡಬೇಕು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ