– ರಾಘವೇಂದ್ರ ಅಡಿಗ ಎಚ್ಚೆನ್.

ಮಂಡ್ಯ ಹುಡ್ಗನ ದೇವಿಗೆ ಧನಿಯಾದ ಜೋಗಿ ಪ್ರೇಮ್

ಪ್ರೇಮ್ಗೆ ಹಸು ಕರುಗಳನ್ನ ಉಡುಗೊರೆ ಕೊಟ್ಟ ಯುವ ರೈತ

———

ಯುವ ರೈತ ಚೇತನ್ ಹಾಗೂ ಭವ್ಯ ಗೌಡ ಅಭಿನಯದ ದೇವಿ ಚಿತ್ರದ ಅಮ್ಮನ ಧ್ಯಾನಿಸೋ ಹಾಡಿನ ರೆಕಾರ್ಡಿಂಗ್ ಇಂದು ಲೂಪ್ ಸ್ಟುಡಿಯೋದಲ್ಲಿ ನಡೆಯಿತು.. ನಿರ್ದೇಶಕ ಜೋಗಿ ಪ್ರೇಮ್ ಗಾಯನದಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ರೆಕಾರ್ಡ್ ಮಾಡಿದರು. ಪ್ಯಾಥೋ ಪ್ರಜ್ಜು ಸಾಹಿತ್ಯದ  “ಜೋಗುಳುವ ಹಾಡಿ ನೀನು ಕೈತ್ತು ಕೊಟ್ಟೋಳು”

1001948723

ಪದಗಳನ್ನ ಪ್ರೇಮ್ ಹಾಡಿದಾಗ ಜೋಗಿ ಚಿತ್ರದ ಬೇಡುವನು ವರವನ್ನು ಹಾಡು ನೆನಪಿಸಿದರು.

ಮಂಡ್ಯದ ಹುಡ್ಗ ಯುವ ರೈತ ಚೇತನ್ ದೇವಿ ಚಿತ್ರಕ್ಕೆ ಶುಭಹಾರೈಸೋದ್ರ ಜೊತೆಗೆ ನಮ್ಮೂರಿನ ಪ್ರತಿಭೆಗಳು ಅನ್ನೋ ಪ್ರೀತಿಗೆ ಪ್ರೇಮ್ ಈ ಹಾಡನ್ನ ಹಾಡಿಕೊಟ್ಟಿದ್ದಾರೆ.

ವಿಶೇಷ ಅಂದ್ರೆ ಪ್ರೇಮ್ ಅವ್ರಿಗೆ ಚಿತ್ರದ ನಾಯಕ ಮತ್ತು ನಿರ್ಮಾಪಕ ಚೇತನ್ ಎರಡು ಹಸು‌ಕರುಗಳನ್ನ ಉಡುಗೊರೆಯಾಗಿ ಕೊಟ್ಟರು.

ಅಂದ್ಹಾಗೆ CR ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಯುವ ರೈತ ಚೇತನ್ ಕುಮಾರ್ ಕಥೆ ಚಿತ್ರಕಥೆ ಬರೆದು, ನಟಿಸಿ, ನಿರ್ಮಿಸ್ತಿರುವ ಈ ಚಿತ್ರವನ್ನ ಪ್ರಕಾಶ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗ್ತಿದ್ದು, ಇದೀಗ ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಹೊಸ ವರ್ಷಕ್ಕೆ ದೇವಿ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ