ವಿದೇಶೀ ಚಿಂತನೆ_ಶಕ್ತಿಗಳ ತೆಕ್ಕೆಗೆ ಬಿದ್ದು ಭಾರತೀಯವಾದುದನ್ನೆಲ್ಲ ವಿರೋಧಿಸುವುದರಲ್ಲೇ  ಜೀವನೋಪಾಯ ಕಂಡುಕೊಂಡಿರುವ ಕೆಲವರಿಗೆ #ಸನಾತನ_ಧರ್ಮ, #ಹಿಂದೂ_ಧರ್ಮ ಎಂದಕೂಡಲೆ ಕೆರಳಿಕೆ ಪ್ರಾರಂಭವಾಗುತ್ತದೆ.

ಸನಾತನಧರ್ಮವೆಂದರೆ ಕೇವಲ ಬ್ರಾಹ್ಮಣರದ್ದು, ಅದು ಹೊರಗಡೆಯಿಂದ ಬಂದದ್ದು, ಸನಾತನಧರ್ಮೀಯರು ಇಲ್ಲಿಯ ಮೂಲನಿವಾಸಿಗಳನ್ನು ಶೋಷಣೆಗೊಳಪಡಿಸಿದರು, – ಹೀಗೆ ಪುಂಖಾನುಪುಂಖವಾಗಿ ವಿತಂಡವಾದಗಳನ್ನು ಮಾಡಲು ತೊಡಗುತ್ತಾರೆ.

ಸನಾತನ ಧರ್ಮವನ್ನು ವಿರೋಧಿಸುವುದಕ್ಕಾಗಿ ಮಾತ್ರ ಅವರು #ಶರಣ_ಸಂಸ್ಕೃತಿ, #ಬೌದ್ಧಮತ ಮೊದಲಾದವುಗಳನ್ನು ಗುರಾಣಿಯಾಗಿ ಹಿಡಿಯಲು ಪ್ರಾರಂಭಿಸುತ್ತಾರೆಯೇ ವಿನಾ ವಾಸ್ತವದಲ್ಲಿ ಅವರು ಇಂಥ ಯಾವ ಸಕಾರಾತ್ಮಕ ಸಂಗತಿಗಳ ಅನುಯಾಯಿಗಳೂ ಅಲ್ಲ; ಅನುಷ್ಠಾನಿಕರೂ ಅಲ್ಲ.

ಗಮನಿಸಿ ನೋಡಿ,
ಜನಸಾಮಾನ್ಯರನ್ನು ಗೊಂದಲಕ್ಕೆ ದೂಡಿ, ಅವರಲ್ಲಿ ಅಪನಂಬಿಕೆಗಳನ್ನು ಮೂಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಇಂಥ ಸಮಾಜಘಾತಕರಿಂದಲೂ ಈ ದೇಶ, ಈ ದೇಶದ ಹತ್ತಾರು ಭಾಷೆಗಳು ಉಳಿದಿರುವುದಕ್ಕೆ ಕಾರಣವೂ #ಸನಾತನ_ಧರ್ಮವೇ.

ಸನಾತನ ಧರ್ಮ ವ್ಯಕ್ತಿವ್ಯಕ್ತಿಗೂ ನೀಡಿರುವಷ್ಟು ಸ್ವಾತಂತ್ರ್ಯವನ್ನೂ ಪೋಷಣೆಯನ್ನೂ ಬೇರಾವ ಮತಗಳೂ ನೀಡಿಲ್ಲ.

ಬಹುತ್ವಕ್ಕೆ ಸನಾತನಧರ್ಮ ನೀಡಿರುವಷ್ಟು ಪೋಷಣೆ-ಪ್ರೋತ್ಸಾಹ-ಅವಕಾಶಗಳನ್ನು ಈ ಸಮಾಜಘಾತಕರು ಜೋತುಬಿದ್ದಿರುವ  ಕಮ್ಯೂನಿಸಮ್ಮೂ ನೀಡಿಲ್ಲ.

ಹಾಗಾಗಿಯೇ,
#ತಾಯಿ ಎನಿಸಿರುವ ಭಾರತ, ಆಕೆಯ #ಮಗಳು ಎನಿಸಿರುವ ಕರ್ನಾಟಕ, ಇಲ್ಲಿಯ ಭಾಷೆ, ಬದುಕು, ಬಹುತ್ವಗಳು ಉಳಿದಿರುವುದು, ಉಳಿಯಬಹುದಾದದ್ದು  ಸನಾತನಧರ್ಮದ ಅರಿವು-ಅನುಷ್ಠಾನದಿಂದಲೇ.

ಇದನ್ನು ಅರ್ಥಮಾಡಿಕೊಳ್ಳಲು *ಸನಾತನ ಧರ್ಮ* ಪುಸ್ತಕವನ್ನು ಓದಿ.

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ:
ಸಾಹಿತ್ಯಭಾರತೀ _ 074836 81708

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ