– ರಾಘವೇಂದ್ರ ಅಡಿಗ ಎಚ್ಚೆನ್.

ನನ್ನ ಅಚ್ಚುಮೆಚ್ಚಿನ ನಾಯಕಿ, ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸುವ ಅವಕಾಶ ದೊರೆತದ್ದು ನನ್ನ ರಾಜಕೀಯ ಜೀವನದ ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣಗಳಲ್ಲಿ ಒಂದು. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮ ನನ್ನ ಪಾಲಿಗೆ ಕೇವಲ ಪುಸ್ತಕ ಬಿಡುಗಡೆ ಸಮಾರಂಭವಾಗಿರಲಿಲ್ಲ; ತ್ಯಾಗ, ಪ್ರೀತಿ, ನೋವು, ಹೋರಾಟ ಹಾಗೂ ದೇಶದ ಮೇಲಿನ ಅಪಾರ ಬದ್ಧತೆಯ ಜೀವಂತ ಚರಿತ್ರೆಯನ್ನು ಸ್ಮರಿಸುವ ಅವಿಸ್ಮರಣೀಯ ಸಂದರ್ಭವಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷರಾದ  ಬಿ.ಕೆ. ಹರಿಪ್ರಸಾದ್ ಹೇಳಿದರು.

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕವನ್ನು ಭಾರತ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಅಧ್ಯಕ್ಷರಾದ  ಬಿ.ಕೆ. ಹರಿಪ್ರಸಾದ್  ಬಿಡುಗಡೆಗೊಳಿಸಿದರು.

1002005542

ಕಾರ್ಯಾಧ್ಯಕ್ಷರಾದ ವಸಂತಕುಮಾರ್, ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ಕೆ ಎಚ್ ಮುನಿಯಪ್ಪ, ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಮಾಜಿ ಸಿಎಂ ವೀರಪ್ಪ ಮೋಯ್ಲಿ, ಮತ್ತಿತರರು ಉಪಸ್ಥಿತರಿದ್ದರು.

ನನ್ನ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸೋನಿಯಾ ಗಾಂಧಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವ ನನ್ನ ಪಾಲಿನ ಅತ್ಯಂತ ದೊಡ್ಡ ಹೆಮ್ಮೆ. ಅಧಿಕಾರಕ್ಕಿಂತ ದೇಶವನ್ನು, ವೈಯಕ್ತಿಕ ಬದುಕಿಗಿಂತ ಪಕ್ಷವನ್ನು, ರಾಜಕಾರಣಕ್ಕಿಂತ ಮಾನವೀಯತೆಯನ್ನು ಎತ್ತರದಲ್ಲಿ ಕಂಡ ಅವರ ಬದುಕೇ ಒಂದು ಮಹಾನ್ ಪಾಠಶಾಲೆ.

1002005543

ಬದುಕಿನಲ್ಲಿ ಒಂದರ ಮೇಲೊಂದು ದುರಂತಗಳನ್ನು ಎದುರಿಸಿದರೂ ಕುಗ್ಗದೆ, ಸಂಕಷ್ಟದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯಾಗಿ ನಿಂತವರು. ದೇಶದ ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಜಿಸಿ, ಬಡವರು, ಮಹಿಳೆಯರು ಹಾಗೂ ದುರ್ಬಲ ವರ್ಗಗಳ ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ವಿ. ಮೋಹನ್, ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್, ಹಿರಿಯ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಶ್ರೀ ಕೆ.ಜೆ. ಜಾರ್ಜ್, ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಮುಖಾಂಶಗಳು.

ಇತಿಹಾಸವನ್ನು ಬದಲಿಸಿದ ನಾಯಕತ್ವ, ಹೃದಯಗಳನ್ನು ಗೆದ್ದ ಪಯಣ.

ಕೆಪಿಸಿಸಿ ವತಿಯಿಂದ ಶ್ರೀಮತಿ ಸೋನಿಯಾ ಗಾಂಧಿಯವರ ಆತ್ಮಕಥೆ ‘BELONGING – A JOURNEY OF LOVE ಬಿಡುಗಡೆ.

ಪುಟಗಳಲ್ಲಿ ಅರಳಿದ ಸೋನಿಯಾ ಗಾಂಧಿಯವರ ಸುದೀರ್ಘ ಸಾರ್ವಜನಿಕ ಬದುಕಿನ ಹೆಜ್ಜೆಗುರುತುಗಳು.

ಅಧಿಕಾರಕ್ಕಿಂತ ದೇಶವೇ ದೊಡ್ಡದು ಎಂದ ಪಕ್ಷದ ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ಅಂತರಂಗದ ಮಾತುಗಳು

ಪದಗಳಿಗಿಂತ ಮಿಗಿಲಾದ ಪ್ರೀತಿ ಮತ್ತು ಬದ್ಧತೆಯ ಕಥೆ ‘BELONGING – A JOURNEY OF LOVE

ಭಾರತದ ರಾಜಕೀಯ ಇತಿಹಾಸದ ಪ್ರಮುಖ ಅಧ್ಯಾಯವೊಂದರ ಅನಾವರಣ.

ಪ್ರೀತಿ ಮತ್ತು ತ್ಯಾಗದ ಮೂಲಕ ಈ ನೆಲದೊಂದಿಗೆ ಬೆಸೆದ ಬಾಂಧವ್ಯದ ಕಥೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ