ಚಿತ್ರ: ಬೃಂದಾವಿಹಾರಿ
ನಿರ್ದೇಶನ: ಶ್ರೀನಿವಾಸರಾಜು
ನಿರ್ಮಾಣ: ಸಮೃದ್ಧಿ ವಿ. ಮಂಜುನಾಥ್‌
ತಾರಾಗಣ: ಗಣೇಶ್, ಮಾಳವಿಕಾ ಶರ್ಮಾ, ದೇವಿಕಾ ಭಟ್‌, ರಾಮ್‌ಕುಮಾರ್‌, ಶ್ವೇತಾ, ಲಕ್ಷ್ಮೀ, ಅಶೋಕ್‌, ಕುರಿ ಪ್ರತಾಪ್‌, ರಂಗಾಯಣ ರಘು, ರಾಜೇಶ್‌ ನಟರಂಗ, ಸಂಗೀತಾ, ಚಿತ್ಕಲಾ ಬಿರಾದರ್‌, ಮಂಜು ಪಾವಗಡ, ಸಾಧುಕೋಕಿಲ, ಗಿರಿ ಮಹೇಶ್‌, ಅವಿನಾಶ್‌, ಅಚ್ಯುತ್‌ ಕುಮಾರ್.‌
ರೇಟಿಂಗ್: 3/5 ***

– ರಾಘವೇಂದ್ರ ಅಡಿಗ ಎಚ್ಚೆನ್.

ಬೃಂದಾವನ ಎಂಬ ಊರಿನಲ್ಲಿ ಮಾಧವ (ಗಣೇಶ್)‌ ಎಂಬ ಮುದ್ದಾದ ಹುಡುಗನಿದ್ದಾನೆ. ಆ ಊರಿನಲ್ಲಿ ಬ್ರಿಟಿಷರದ್ದೇ ಆಳ್ವಿಕೆ. ಆ ಊರಿನ ಮುಖ್ಯದ್ವಾರವನ್ನು ದಾಟಿ ಯಾರೂ ಹೊರಗೆ ಹೋಗುವಂತಿಲ್ಲ. ಹೋದರೂ, ಅದಕ್ಕೆ ನೂರೆಂಟು ರೂಲ್ಸ್!‌ ಹಾಗಾಗಿ, ಮಾಧವ ಆ ಊರಿನಿಂದ ಆಚೆಯೇ ಹೋಗಿಲ್ಲ. ಅವನಿಗಾಗಿಯೇ ಅಜ್ಜ-ಅಜ್ಜಿ ಇದ್ದಾರೆ. ಮೂವರು ಸ್ನೇಹಿತರು, ಆಗಾಗ ಬಂದುಹೋಗುವ ಸಂಬಂಧಿಕರು ಎಲ್ಲರೂ ಇದ್ದಾರೆ. ಜೊತೆಗೆ ಹುಡುಗಿಯೊಬ್ಬಳ ಪ್ರೀತಿಯೂ ಇದೆ‌, ಹಾಗೆಯೇ ವಿರಹವೂ ಕೂಡ! ಇಷ್ಟೆಲ್ಲಾ ಮಂದಿಯ ಪ್ರೀತಿ ಪಡೆದಿರುವ ಮಾಧವನ ಬಾಳಲ್ಲಿ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲೇ ಕಥೆ ದೊಡ್ಡ ಟ್ವಿಸ್ಟ್ ಪಡೆದುಕೊಳ್ಳುತ್ತದೆ.ಇಂಟರ್‌ವಲ್‌ ಹೊತ್ತಿಗೆ ಬರುವ ಆ ಟ್ವಿಸ್ಟ್‌ ಪ್ರೇಕ್ಷಕರ ಎಲ್ಲಾ ಆಲೋಚನೆಯನ್ನು ತಿರುವು ಮುರುವು ಮಾಡುತ್ತದೆ.
1002015420
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಪೋಸ್ಟರ್‌ಗಳಲ್ಲಿ ಗಣೇಶ್ ಮತ್ತು ನಾಯಕಿಯ ನಡುವಿನ ಸುಂದರ ಪ್ರೇಮಕಥೆಯ ಝಲಕ್ ಗಮನ ಸೆಳೆಯುತ್ತಿದೆ. ಪ್ರಕೃತಿಯ ಸುಂದರ ಪರಿಸರ, ಹೂವಿನ ಸೊಬಗು, ಜಲಪಾತದ ಹಿನ್ನೆಲೆ ಹಾಗೂ ಗಣೇಶ್ ಮತ್ತು ನಾಯಕಿಯ ರೊಮ್ಯಾಂಟಿಕ್ ದೃಶ್ಯಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಈ ಸಿನಿಮಾದಲ್ಲಿ ಗಣೇಶ್ ವಿಭಿನ್ನ ಪ್ರೇಮಭರಿತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ದೃಶ್ಯ ವಿನ್ಯಾಸ ಮತ್ತು ಹಾಡಿನ ಪ್ರಚಾರದ ಚಿತ್ರಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥಾ ಸಿನಿಮಾಗಳಿಗೆ ತನ್ನದೇ ಆದ ಪ್ರೇಕ್ಷಕ ವರ್ಗವಿದೆ. ಅದರಲ್ಲೂ ಗಣೇಶ್ ಅವರ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಇರುತ್ತದೆ.ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಕಾಂಬಿನೇಷನ್‌ನಲ್ಲಿ ಈ ಹಿಂದೆ ʻಕೃಷ್ಣಂ ಪ್ರಣಯ ಸಖಿʼ ಸಿನಿಮಾ ರಿಲೀಸ್‌ ಆಗಿತ್ತು. ಈಗ ಈ ಜೋಡಿಯು ಮತ್ತೊಮ್ಮೆ ಒಂದಾಗಿದ್ದು, ʻಬೃಂದಾವಿಹಾರಿʼ ಸಿನಿಮಾವನ್ನು ನೀಡಿದೆ. ಈ ಹಿಂದಿನಂತೆಯೇ ಈಗಲೂ ಗಣೇಶ್‌ ಮತ್ತು ಶ್ರೀನಿವಾಸ ರಾಜು ಜೋಡಿ ಮೋಡಿ ಮಾಡಿದೆಯೇ? ಇದನ್ನು ತಿಳಿಯಲು ನೀವು ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು.

ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆ ಇದೆ. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ಸ್‌ ಹೆಚ್ಚು ಕನೆಕ್ಟ್‌ ಆಗುತ್ತದೆ. ಹಾಸ್ಯಕ್ಕೂ ಜಾಗವಿದೆ. ಹಾಗೆಯೇ ಭರ್ಜರಿ ಫೈಟ್ಸ್‌ ಕೂಡ ಇವೆ. ಸಂಬಂಧಗಳ ಮೌಲ್ಯ ಮತ್ತು ಭಾವನೆಗಳ ಮಹತ್ವವನ್ನು ಸಾರುವ ಪ್ರಯತ್ನ ಇಲ್ಲಿದೆ. ಹಿನ್ನೆಲೆ ಸಂಗೀತ  ‌ʻರಾಮ ರಾಮ..ʼ ಸಾಂಗ್‌ ಅತ್ಯುತ್ತಮವಾಗಿ ಮೂಡಿಬಂದಿದೆ.ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ಒಂದೆರಡು ಕಡೆ ಹಾಡುಗಳ ಅವಶ್ಯಕತೆ ಇರಲಿಲ್ಲ ..ಛಾಯಾಗ್ರಹಣ ಮತ್ತು ಕಲಾ ನಿರ್ದೇಶನ ಚಿತ್ರದ ಪ್ಲಸ್‌ ಪಾಯಿಂಟ್‌.
1002015415
ತೆರೆಮೇಲೆ ಗಣೇಶ್ ಯಂಗ್ ಆಗಿ ಕಾಣಿಸುತ್ತಾರೆ. ಮಾಧವನ ಪಾತ್ರಕ್ಕೆ ಗಣೇಶ್ ಅಕ್ಷರಶಃ ಜೀವ ತುಂಬಿದ್ದಾರೆ. ಡ್ಯಾನ್ಸ್, ಆಕ್ಟಿಂಗ್‌ ಹಾಗೂ ಸ್ಟಂಟ್ಸ್ ವಿಚಾರದಲ್ಲಿ ಗಣೇಶ್ ಗಮನ ಸೆಳೆಯುತ್ತಾರೆ. ರಾಧಾ ಪಾತ್ರದಲ್ಲಿ ದೇವಿಕಾ ಭಟ್ ನಟಿಸಿದ್ದಾರೆ. ಗಣೇಶ್ – ದೇವಿಕಾ ಭಟ್‌ ಕಾಂಬಿನೇಶನ್ ಫ್ರೆಶ್ ಎನಿಸುತ್ತದೆ. ಎಮೋಷನಲ್‌ ಸೀನ್‌ಗಳಲ್ಲಿ ದೇವಿಕಾ ಭಟ್‌ ನಟನೆ ಇನ್ನೂ ಮಾಗಬೇಕು. ಮೀರಾ ಪಾತ್ರದಲ್ಲಿ ಮಾಳವಿಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ಮಾಳವಿಕಾ ಶರ್ಮಾ ಇನ್ನೂ ಪಳಗಬೇಕು. ಕುರಿ ಪ್ರತಾಪ್‌ ಸ್ಕ್ರೀನ್ ಮೇಲೆ ಬಂದಾಗೆಲ್ಲಾ ಕಾಮಿಡಿ ಕಚಗುಳಿ ನೀಡುತ್ತಾರೆ. ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ ಮೂಗನ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಹಿರಿಯ ನಟಿ ಲಕ್ಷ್ಮೀ, ಹಿರಿಯ ನಟ ಅಶೋಕ್, ನಟ ರಾಮ್‌ಕುಮಾರ್, ಸಾಧು ಕೋಕಿಲ, ಶ್ವೇತಾ, ರಂಗಾಯಣ ರಘು, ಜಗ್ಗಪ್ಪ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಸಾಧುಕೋಕಿಲ ಇರುವ ಕಾಮಿಡಿ ದೃಶ್ಯಗಳಲ್ಲಿನ ಸಂಭಾಷಣೆ ಬೇಸರ ಮೂಡಿಸುತ್ತದೆ.

1002015419

ಕಥೆ – ಚಿತ್ರಕಥೆಯಲ್ಲಿ ಇನ್ನೂ ಗಟ್ಟಿತನ ಅಗತ್ಯ ಇತ್ತು. ನಿರ್ದೇಶಕರು ಸಂಬಂಧಗಳ ಮಹತ್ವ ಹಾಗೂ ಮನುಷ್ಯತ್ವ ಬಗ್ಗೆ ಹೇಳಲು ಹೊರಟಿದ್ದರೂ ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಪರಿಕಲ್ಪನೆ ವಾಸ್ತವಕ್ಕೆ ಬಹಳ ದೂರ ಇದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ