ಪ್ರೆಗ್ನೆನ್ಸಿಯಲ್ಲಿ ಸೆಕ್ಸ್ ಸ್ವಲ್ಪ ಎಚ್ಚರ ಇರಲಿ

ಅಮಿತ್‌ ಮತ್ತು ಅರ್ಚನಾರಿಗೆ ಮೊದಲ ಮಗು ಬರುತ್ತಿರುವ ಖುಷಿ. ಒಂದೆಡೆ ತಾನು ತಾಯಿಯಾಗುವ ಆನಂದ ಅವಳಿಗಿದೆ, ಇನ್ನೊಂದೆಡೆ ಅವಳು ಅಮಿತ್‌ನಿಂದ ತನ್ನನ್ನು ತಾನು ದೂರ ಇಟ್ಟುಕೊಳ್ಳಲು ಯೋಚಿಸುತ್ತಿರುತ್ತಾಳೆ. ಅಂದಹಾಗೆ ಅವಳು ಅಮಿತ್ ಜೊತೆಗೆ ದೈಹಿಕ ಸಂಬಂಧ ನಡೆಸಲು ಹಿಂದೇಟು ಹಾಕುತ್ತಿದ್ದಾಳೆ.

ತಾನು ಅಮಿತ್‌ ಜೊತೆಗೆ ಸಮಾಗಮ ನಡೆಸಿದರೆ, ಎಲ್ಲಿ ತನ್ನ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ತೊಂದರೆಯಾಗುತ್ತೋ, ಬೇರೆ ಸಮಸ್ಯೆಗಳಿಗೆ ತುತ್ತಾಗುತ್ತೇನೋ ಎಂಬ ಹೆದರಿಕೆ ಅರ್ಚನಾಳಿಗಿದೆ. ಅಮಿತ್‌ ಅವಳಿಗೆ ಅದೆಷ್ಟೋ ತಿಳಿಸಿ ಹೇಳಿದ. ಆದರೆ ಆಕೆ ಮಾತ್ರ ಅವನ ಮಾತಿಗೆ ಒಪ್ಪಿಗೆ ಕೊಡಲಿಲ್ಲ.

ಅಂದಹಾಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಸೆಕ್ಸ್ ಕುರಿತಂತೆ ಹೆದರಿಕೆ, ಅಳುಕುವ ಅಥವಾ ಸಂಕೋಚ ಇವು ಸಾಮಾನ್ಯ ಸಂಗತಿಗಳು. ಆದರೆ ಅಮಿತ್‌ ತನ್ನ ದೈಹಿಕ ಆಕಾಂಕ್ಷೆಗಳು ಈಡೇರದ ಕಾರಣ ಸದಾ ಸಿಡಿಮಿಡಿಗೊಳ್ಳುತ್ತಿದ್ದ. ಅವರಿಬ್ಬರ ಸಂಬಂಧದಲ್ಲಿ ಒಂದು ತೆರನಾದ ಒತ್ತಡ ಮನೆ ಮಾಡಿದೆ. ಅದು ಯಾವುದೇ ರೀತಿಯಲ್ಲಿ ಅರ್ಚನಾಳಿಗೆ ಸಮಂಜಸವಾದುದಲ್ಲ.

ಗರ್ಭಾವಸ್ಥೆಯ 9 ತಿಂಗಳು ಯಾವುದೇ ಒಬ್ಬ ಮಹಿಳೆಗೆ ಎಲ್ಲಕ್ಕೂ ಅತ್ಯಮೂಲ್ಯ  ಕ್ಷಣಗಳಾಗಿವೆ. ಆದರೆ ಇದರರ್ಥ ನೀವು ವೈದ್ಯರ ಸಲಹೆಯಿಲ್ಲದೆ ನಿಮ್ಮ ಲೈಂಗಿಕ ಇಚ್ಛೆಗಳನ್ನು ಹತ್ತಿಕ್ಕಬೇಕು ಎಂದಲ್ಲ. ಅಂದಹಾಗೆ ನಮ್ಮಲ್ಲಿ ಗರ್ಭಾವಸ್ಥೆಯಲ್ಲಿ ಸೆಕ್ಸ್ ನ್ನು ವರ್ಜ್ಯ ಅಥವಾ ಅನುಚಿತ ಕೆಲಸ ಎಂದು ಭಾವಿಸಲಾಗುತ್ತದೆ. ಆ ಅವಧಿಯಲ್ಲಿ ಸೆಕ್ಸ್ ಬಗ್ಗೆ ಚರ್ಚಿಸಿದರೆ ಕೆಲವರು ಮುಖ ಸಿಂಡರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿಗೆ ಯಾವುದಾದರೂ ಬಗೆಯ ಹಾನಿಯುಂಟಾಗುವ ಸಾಧ್ಯತೆಯ ಭೀತಿ ಹಾಗೂ ಯಾವಾಗ ಯಾವ ಭಂಗಿಯಲ್ಲಿ ಸಮಾಗಮ ನಡೆಸಬೇಕೆಂಬ ಬಗ್ಗೆ ಮಾಹಿತಿ ಇರದೇ ಇರುವುದು ಹಾಗೂ ವೈದ್ಯರೊಂದಿಗೆ ಈ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದು.

ಆದರೆ ಇಂತಹ ಸ್ಥಿತಿ ವಿದೇಶದಲ್ಲಿ ಖಂಡಿತ ಇಲ್ಲ. ಅಲ್ಲಿನ ಜನರು ಮುಕ್ತವಾಗಿ ತಮ್ಮ ಲೈಂಗಿಕ ಜೀವನವನ್ನು ಪರಿಪೂರ್ಣವಾಗಿ ಆನಂದಿಸುತ್ತಾರೆ. ಜೊತೆಗೆ ಗರ್ಭಿಣಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.

ಚಾಪೆಲ್ ‌ಹಿಲ್‌ನ ಯೂನಿವರ್ಸಿಟಿ ಆಫ್‌ ನಾರ್ಥ್‌ ಕೆರೊಲಿನಾದಲ್ಲಿ ನಡೆದ ಅಧ್ಯಯನದಲ್ಲಿ ಕಂಡುಬಂದ ಸಂಗತಿಯೆಂದರೆ, ಈ ಅವಧಿಯಲ್ಲಿ ಸಮಾಗಮ ನಡೆಸುವುದು ಲಾಭಕರವಂತೆ. ಏಕೆಂದರೆ ಗರ್ಭಾವಸ್ಥೆ ಪೂರ್ಣಾವಧಿಗೆ ತಲುಪಲು ಸೆಕ್ಸ್ ಪ್ರೋತ್ಸಾಹಿಸುತ್ತದೆ ಎಂಬುದು ಅಧ್ಯಯನಕಾರರ ಹೇಳಿಕೆಯಾಗಿದೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರ ಮನಸ್ಸಿನಲ್ಲಿ ಸೆಕ್ಸ್ ಬಗೆಗೆ ಹಲವು ತೆರನಾದ ಭಯಭೀತಿ ಹುಟ್ಟುಹಾಕುವುದು ಸಹಜವೇ ಆಗಿದೆ. ಆದರೆ ಈ ಧೋರಣೆ ಪರಿಪೂರ್ಣವಾಗಿ ಸತ್ಯ ಅಥವಾ ಸುಳ್ಳು ಅಲ್ಲ. ವಾಸ್ತವ ಸಂಗತಿಯೆಂದರೆ, ಹಲವು ಕಾರಣಗಳಿಂದ ಗರ್ಭಾವಸ್ಥೆಯಲ್ಲಿ ಸಮಾಗಮ ಆನಂದದಾಯಕವಾಗಬಹುದು. ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿಯೇ ನೀವು ಖುಷಿ ಅನುಭವಿಸಿದರೂ ಅದು ತೃಪ್ತಿಗೆ ಕಾರಣವಾಗುತ್ತದೆ.

ಭಾವನಾತ್ಮಕ ಸಂಬಂಧ

ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿ ಅವರು ಹೇಳುವುದೇನೆಂದರೆ, ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆ ಉಂಟಾಗುತ್ತದೆ. ಅವು ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನಿಂದ ಭಾವನಾತ್ಮಕ ಹೊಂದಾಣಿಕೆ ಅನುಭೂತಿ ಮಾಡಿಕೊಳ್ಳುತ್ತೇವೆ ಹಾಗೂ ಸಂಗಾತಿಯಿಂದ ದೈಹಿಕ ಸಂಪರ್ಕದ ಬದಲು ಭಾವನಾತ್ಮಕ ಸಪೋರ್ಟ್‌ ಬಯಸುತ್ತವೆ.

ಅಂದಹಾಗೆ ಈ ಅವಧಿಯಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಬಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಆಕೆ ಕೇವಲ ಪ್ರೀತಿಭರಿತ ಸ್ಪರ್ಶ, ಸ್ನೇಹ ಮತ್ತು ಆರೈಕೆ ಬಯಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಅವಳಿಗೆ ಒಂದುವೇಳೆ ಸೆಕ್ಸ್ ಬಗ್ಗೆ ಉತ್ತೇಜನ ಉಂಟಾಗಿ ಸಮಾಗಮ ನಡೆಸಿದರೆ ಅದು ತಪ್ಪೇನೂ ಅಲ್ಲ. ಆದರೆ ಅವಳಿಗೆ ಗರ್ಭಾವಸ್ಥೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳುಂಟಾಗಬಾರದು.

ಮೊದಲ 3 ತಿಂಗಳಲ್ಲಿ ದೈಹಿಕ ಸಂಬಂಧ ಮಾಡಬೇಡಿ. ಅದೇ ರೀತಿ ಕೊನೆಯ ತ್ರೈಮಾಸಿಕ ಅಂದರೆ 7-9ನೇ ತಿಂಗಳಿನಲ್ಲೂ ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಆ ಅವಧಿಯಲ್ಲಿ ಹೊಟ್ಟೆ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆಯಾಗಿರುತ್ತದೆ. ಆಗ ಮಾಡುವ ಅಷ್ಟಿಷ್ಟು ತಪ್ಪು ಹೊಟ್ಟೆಗೆ ಏಟು ತಗುಲಿಸಬಹುದು. 4 ರಿಂದ 6 ಅಂದರೆ ಎರಡನೇ ತ್ರೈಮಾಸಿಕ ಪರಿಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಹೊಟ್ಟೆಯಲ್ಲಿ ನೋವು, ಯೂರಿನರಿ ಇನ್‌ಫೆಕ್ಷನ್‌ ಅಥವಾ ಪ್ಲೆಸೆಂಟ್‌ ಕೆಳಗಿರುವವರು ಅಥವಾ ಮೊದಲಿನಿಂದಲೇ ಗರ್ಭಧಾರಣೆಯಾಗುವಲ್ಲಿ ತೊಂದರೆ ಅನುಭವಿಸುವವರು ಸಮಾಗಮ ಕ್ರಿಯೆಯಿಂದ ದೂರವಿರಬೇಕು.

ಗರ್ಭಾವಸ್ಥೆಯಲ್ಲಿ ಸಮಾಗಮ ಚಟುವಟಿಕೆ ಹಲವು ಸಂಗತಿಗಳನ್ನು ಅವಲಂಬಿಸಿರುತ್ತದೆ. ಅವುಗಳೆಂದರೆ

ಸೆಕ್ಸ್ ಬಗ್ಗೆ ನಿಮ್ಮ ಹಾಗೂ ಸಂಗಾತಿಯ ಯೋಚನೆ ಮೊದಲು ಏನಿತ್ತು?

ಪ್ರೆಗ್ನೆನ್ಸಿಯಲ್ಲಿ ದೈಹಿಕ ಭಂಗಿ ಅಥವಾ ಸೆಕ್ಸ್ ಪೊಸಿಶನ್‌.

ಪ್ರೆಗ್ನೆನ್ಸಿಯಲ್ಲಿ ಭಾವನಾತ್ಮಕ ದೃಷ್ಟಿಕೋನ.

ಗರ್ಭಾವಸ್ಥೆಯಲ್ಲಿ ಸೆಕ್ಸ್ ಸಂಬಂಧ ಹೇಗೆ ಮತ್ತು ಏಕೆ ಸುಖಕರವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಗರ್ಭಾವಸ್ಥೆಯಲ್ಲಿ ದೇಹದ ಜೊತೆ ಜೊತೆಗೆ ನಂಬಿಕೆ, ಧೋರಣೆಯಲ್ಲೂ ಅನಿಯಂತ್ರಿತ ಬದಲಾವಣೆಗಳು ಆಗುತ್ತಿರುತ್ತವೆ.

ಮಹಿಳೆಯರು ಈ ಅವಧಿಯಲ್ಲಿ ಸುಖ ಹಾಗೂ ವಿಶ್ರಾಂತಿ ಬಯಸುವುದಿಲ್ಲ. ಇನ್ನೊಂದೆಡೆ ಪುರುಷರು ಯೋಚಿಸುವುದೇನೆಂದರೆ, ಗರ್ಭಿಣಿ ದೇಹ ಅತ್ಯಂತ ಕಾಮೋತ್ತೇಜಕ ಮತ್ತು ಡಿಸೈರಬ್‌ ಆಗಿರುತ್ತದೆ ಎಂದು. ಹೀಗಾಗಿ ತಮ್ಮ ಯೋಚನೆಯ ವೈರುಧ್ಯಗಳು ದೇಹದ ಬಗೆಗಿನ ವರ್ತನೆ ಮತ್ತು ಸೆಕ್‌ಸ್ಯುಯಾಲಿಟಿಯ ಬಗ್ಗೆ ಚರ್ಚೆ ಮಾಡಿ. ಇದರಿಂದ ನೀವು ಆ ದಿನಗಳಲ್ಲೂ ಕೂಡ ಅತ್ಯುತ್ತಮ ರೀತಿಯಲ್ಲಿ ಸೆಕ್ಸ್ ಲೈಫ್‌ನ ಆನಂದ ಪಡೆಯಬಹುದು.

ಆ ದಿನಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಏನೇನು ಯೋಚನೆಗಳು ಬರುತ್ತವೆ, ಅವನ್ನೆಲ್ಲ ಸಂಗಾತಿಯ ಮುಂದೆ ಹೇಳುವುದರಿಂದ ಲೈಂಗಿಕವಾಗಿ ಆತ ನಿಮಗೆ ಸಹಾಯ ಮಾಡಬಹುದು. ಉದಾಹರಣೆಗಾಗಿ ಅಪ್ಪುಗೆ, ರಿಲ್ಯಾಕ್ಸಿಂಗ್‌ ಬಾಥ್‌, ರೊಮ್ಯಾಂಟಿಕ್‌ ಡಿನ್ನರ್, ಮಸಾಜ್‌ ಮುಂತಾದವುಗಳ ಬಗ್ಗೆ ಗಮನಹರಿಸುವುದರಿಂದ ನೀವು ಲೈಂಗಿಕವಾಗಿ ಖುಷಿ ಅನುಭವಿಸುವಿರಿ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನುಗಳ ಏರಿಳಿತ ಕೂಡ ಪ್ರೀತಿ ಮಾಡಲು ನಿಮ್ಮ ಪ್ರತಿಕ್ರಿಯೆಗಳಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತದೆ. ಎಷ್ಟೋ ಮಹಿಳೆಯರು ಮೊದಲ ತ್ರೈಮಾಸಿಕದಲ್ಲೇ ದಣಿವಿನ ಅನುಭೂತಿ, ದೈಹಿಕ ಬದಲಾವಣೆ, ವಾಂತಿ ಮುಂತಾದವುಗಳ ಕಾರಣದಿಂದ ಲೈಂಗಿಕ ಆಸಕ್ತಿ ತೋರಿಸುವುದಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಹೊಟ್ಟೆಯ ಗಾತ್ರ ಹೆಚ್ಚುವುದರಿಂದ ವಿಚಿತ್ರ ಖುಷಿಯ ಅನುಭೂತಿಯಾಗುತ್ತದೆ. ಅದೇ ರೀತಿ ಮೂರನೇ ತ್ರೈಮಾಸಿಕದಲ್ಲಿ ಲೈಂಗಿಕ ಇಚ್ಛೆ ಕಡಿಮೆಯಾಗುತ್ತಾ ಬರುತ್ತದೆ.

ಅತ್ಯುತ್ತಮ ಸೆಕ್ಸ್ ಭಂಗಿ

ಗರ್ಭಾವಸ್ಥೆಯಲ್ಲಿ ಸಮಾಗಮ ನಡೆಸುವಾಗ ಕ್ರಿಯೇಟಿವಿಟಿ ನಿಮ್ಮ ಕೀವರ್ಡ್‌ ಆಗಬೇಕು. ಹಲವು ಭಂಗಿಗಳಲ್ಲಿ ನೀವು ಈ ಕ್ರಿಯೇಟಿವಿಟಿಯನ್ನು ಅನುಭೂತಿ ಮಾಡಿಕೊಳ್ಳುವುದರ ಜೊತೆಗೆ ಸಮಾಗಮದ ಸಮಯದಲ್ಲಿ ವಿಶ್ರಾಂತಿಯ ಅನುಭೂತಿ ಕೂಡ ಮಾಡಿಕೊಳ್ಳಬಹುದು. ಉದಾಹರಣೆಗೆ ಸಂಗಾತಿ ಮೇಲಿರುವ ಭಂಗಿ, ಸ್ಮೂತಿಂಗ್‌, ಸೆಕ್ಸ್ ಪೊಸಿಶನ್‌ ಅಂದರೆ ಸಂಗಾತಿ ಹಿಂದಿರುವ ಭಂಗಿ ಕೈ ಮತ್ತು ಮೊಣಕಾಲಿನ ಬಲದ ಮೇಲೆ ಸೈಡ್‌ ಲೈಯಿಂಗ್‌ ಪೊಜಿಶನ್‌.ಮಾಹಿತಿಯ ಅಭಾವದಿಂದ ಜನರು ತಪ್ಪು ಭಂಗಿಯಲ್ಲಿ ಸಮಾಗಮ ನಡೆಸಿ ಯಾವುದಾದರೊಂದು ರೀತಿಯಲ್ಲಿ ಅಪಾಯ ಉಂಟಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರೆಗ್ನೆಂಟ್ ಸೆಕ್ಸ್ ಪೊಸಿಶನ್‌ ಪಡೆದುಕೊಳ್ಳುವುದು. ನೀವು ಯಾವ ಭಂಗಿಯಲ್ಲಿ ಸಮಾಗಮ ನಡೆಸುವಿರಿ ಎಂಬುದನ್ನು ಅವಲಂಬಿಸಿರುತ್ತದೆ. ಅತ್ಯುತ್ತಮ ಸಮಾಗಮದ ಆನಂದಕ್ಕಾಗಿ ವಿಚಾರಗಳಲ್ಲಿ ಕೋಮಲತೆ, ಫ್ಲೆಕ್ಸಿಬಿಲಿಟಿ ಹಾಗೂ ಹೊಸ ಸಂಗತಿಗಳನ್ನು ಪ್ರಯತ್ನಿಸುವುದು ಅತ್ಯಂತ ಅತ್ಯವಶ್ಯಕ. ಇಂತಹದರಲ್ಲಿ ಇಬ್ಬರೂ ದೈಹಿಕವಾಗಿ ಕಂಫರ್ಟೆಬಲ್ ಆಗಿರುವುದು ಅತ್ಯವಶ್ಯಕ. ಗರ್ಭಾಶಯದ ಮೇಲೆ ಒತ್ತಡ ಬೀಳದಂತೆ ಇಬ್ಬರೂ ಎಚ್ಚರ ವಹಿಸುವುದು ಅತ್ಯವಶ್ಯಕ.

ಆರಾಮದಾಯಕ ಭಂಗಿ

ಎಜ್ಆಫ್ದಿ ಬೆಡ್ಸೆಕ್ಸ್ ಪೊಸಿಶನ್‌ : ಈ ಭಂಗಿ ಸಾಕಷ್ಟು ಆರಾಮದಾಯಕ. ಇದರಲ್ಲಿ ಗರ್ಭಿಣಿ ಬೆಡ್‌ನ ಒಂದು ಬದಿ ಮಲಗಿರುತ್ತಾಳೆ. ಪುರುಷ ನಿಂತುಕೊಂಡು ಇಲ್ಲಿ ಮೊಣಕಾಲಿನ ಆಧಾರದ ಮೇಲೆ ಇರುತ್ತಾರೆ. ರೇರ್‌ ಎಂಟ್ರಿ ಪೊಸಿಶನ್‌ನ ಈ ಅವಸ್ಥೆಯಲ್ಲಿ ನೀವು ಬೆಡ್‌ ಕೆಳಭಾಗದಲ್ಲಿ ಮೊಣಕಾಲಿನ ಆಧಾರದ ಮೇಲೆ ನಿಂತುಕೊಳ್ಳಬಹುದು. ಮೊಣಕಾಲಿನ ಕೆಳಭಾಗದಲ್ಲಿ ದಿಂಬನ್ನು ಇಟ್ಟುಕೊಳ್ಳಬಹುದು. ದೇಹದ ಮೇಲ್ಭಾಗ ಬೆಡ್‌ನ ಮೇಲ್ಭಾಗ ಹಾಗೂ ಹೊಟ್ಟೆ ಕೆಳಭಾಗದಲ್ಲಿ ಇರಬೇಕು. ಏಕೆಂದರೆ ಹೊಟ್ಟೆಯ ಮೇಲೆ ಯಾವುದೇ ಭಾರ ಬೀಳಬಾರದು.

ಸ್ಪೂನಿಂಗ್ಸೆಕ್ಸ್ ಪೊಸಿಶನ್‌ : ಇದು ಗರ್ಭಾವಸ್ಥೆಯಲ್ಲಿ ಎಲ್ಲಕ್ಕೂ ಆರಾಮದಾಯಕ ಅವಸ್ಥೆ. ಏಕೆಂದರೆ ಇದರಲ್ಲಿ ಯಾವುದೇ ರೀತಿಯಲ್ಲಿ ಹೊಟ್ಟೆಯ ಮೇಲೆ ಭಾರ ಬೀಳುವುದಿಲ್ಲ. ಇದರಲ್ಲಿ ಸಂಗಾತಿ ಹಿಂಭಾಗದಿಂದ ಸಮಾಗಮ ನಡೆಸುತ್ತಾನೆ. ಈ ಅವಸ್ಥೆಯಲ್ಲಿ ನೀವು ಬಲಬದಿಗೆ ತಿರುಗಿ ಮಲಗಬೇಡಿ.

ಸೈಡ್‌  ಬೈ ಸೈಡ್ಪೊಸಿಶನ್‌ : ಸ್ಪೂನಿಂಗ್‌ಗಿಂತ ಈ ಅವಸ್ಥೆಯಲ್ಲಿ ಸಮಾನ ರೀತಿಯಲ್ಲಿ ದೈಹಿಕ ಸಂಪರ್ಕ ಉಂಟಾಗುತ್ತದೆ. ಆದರೆ ಈ ಸ್ಥಿತಿಯಲ್ಲಿ ಸಮಾಗಮ ನಡೆಸುವುದು ಸ್ವಲ್ಪ ಕಷ್ಟಕರ. ಸ್ಪೂನಿಂಗ್‌ ಪೊಸಿಶನ್‌ ಏಕೆ ಉತ್ತಮ ಎಂದರೆ ಅದರಲ್ಲಿ ಪರಸ್ಪರರ ದೇಹದ ಭಾರ ಯಾರಿಗೂ ಅನುಭವಕ್ಕೆ ಬರುವುದಿಲ್ಲ.

ವುಮನ್ಆನ್ಟಾಪ್ಪೊಸಿಶನ್‌ : ಇದು ಮಹಿಳೆ ಮೇಲೆ ಇರುವ ಭಂಗಿ. ಏಕೆಂದರೆ ಸಮಾಗಮದ ಗಾಢತೆಯ ನಿಯಂತ್ರಣ ಅರಿವಿಗೆ ಬರಬೇಕು. ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಈ ಭಂಗಿ ಹೆಚ್ಚು ದಣಿವನ್ನು ಉಂಟು ಮಾಡುವುದಾಗಿರುತ್ತದೆ.

ರೇರ್ಎಂಟ್ರಿ ಪೊಸಿಶನ್‌ : ಇದನ್ನು ವಜೈನಾದಲ್ಲಿ ಜಿ ಸ್ಪಾಟ್‌ನ್ನು ಉತ್ತೇಜಿತಗೊಳಿಸಲು ಅತ್ಯುತ್ತಮ ಎಂದು ಭಾವಿಸಲಾಗುತ್ತದೆ. ಇದು ಆರಾಮದಾಯಕ ಬದಲಾವಣೆ ಆಗಬಹುದು. ಏಕೆಂದರೆ ಇದು ಎಂತಹ ಒಂದು ಪೊಸಿಶನ್‌ ಎಂದರೆ, ನೀವು ಇದನ್ನು ಸಾಮಾನ್ಯವಾಗಿ ಟ್ರೈ ಮಾಡುವುದಿಲ್ಲ. ಈ ಸೆಕ್ಸ್ ಪೊಸಿಶನ್‌ನ್ನು ನೀವು ಬೆಡ್‌ ಮೇಲೆಯೇ ಟ್ರೈ ಮಾಡಬಹುದು.

ಹೆಡ್ಸ್ ಅಂಡ್ನೀಸ್‌ : ಗರ್ಭಿಣಿಯರಿಗೆ ಸೆಕ್ಸ್ ನ ಆನಂದ ಪಡೆಯಲು ಇದು ಅತ್ಯಂತ ಒಳ್ಳೆಯ ಭಂಗಿ. ಏಕೆಂದರೆ ಇದರಿಂದ ಹೊಟ್ಟೆಯ ಮೇಲೆ ಒತ್ತಡ ಉಂಟಾಗುವುದಿಲ್ಲ. ಆದರೆ ಹೊಟ್ಟೆ ಬೆಳೆಯುತ್ತ ಹೋದಂತೆ ಹೊಟ್ಟೆ ಹಾಸಿಗೆಗೂ ತಗಲುತ್ತದೆ. ಆದರೆ ಕೊನೆಯ 3 ತಿಂಗಳಲ್ಲಿ ಇದು ಸಾಕಷ್ಟು ಕಷ್ಟಕರವಾಗಿ ಪರಿಣಮಿಸಬಹುದು.

ಸುರಕ್ಷಿತ ವಿಧಾನ ಗರ್ಭಾವಸ್ಥೆಯಲ್ಲಿ ಸೆಕ್ಸ್ ಸಂಗಾತಿಗೆ ಪ್ರೀತಿ, ಪರಸ್ಪರರ ಬಗ್ಗೆ ಆಕರ್ಷಣೆ, ಆತ್ಮೀಯತೆ ಕಾಯ್ದುಕೊಂಡು ಹೋಗಲು ಇದೊಂದು ಅತ್ಯುತ್ತಮ ವಿಧಾನ. ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಂಡರೆ ಸಾಮಾನ್ಯವಾಗಿ ಇದು ಸುರಕ್ಷಿತ ವಿಧಾನ. ಇಂತಹದರಲ್ಲಿ ಸೆಕ್ಸ್ ನ ಖುಷಿದಾಯಕಗೊಳಿಸುವ ನಿಟ್ಟಿನಲ್ಲಿ ಯಾವುದಾದರೂ ವಿದೇಶಿ ಪ್ರಯೋಗ ಮಾಡಲು ಹೋಗಬೇಡಿ. ಗರ್ಭಾವಸ್ಥೆಯ ಸಂದರ್ಭದಲ್ಲಿ ಸಮಾಗಮ ಎನ್ನುವುದು ತಿಳಿವಳಿಕೆ, ಕ್ರಿಯಾಶೀಲತೆ, ಸಹಾನುಭೂತಿ ಹಾಗೂ ಪ್ರೀತಿ ವ್ಯಕ್ತಪಡಿಸುವ ಒಂದು ಅತ್ಯುತ್ತಮ ವಿಧಾನ.

ಸಮಾಗಮ ನಡೆಸುವ ಮನಸ್ಸು ನಿಮಗೆ ಇಲ್ಲದಿದ್ದರೆ ಸಂಗಾತಿಗೆ ಹೇಳಲು ಸಂಕೋಚಪಡಬೇಡಿ. ಬಲವಂತದ ಸಮಾಗಮ ನಿಮಗೆ ಹಾನಿಯನ್ನುಂಟು ಮಾಡಬಹುದು. ಪರಸ್ಪರರ ಭಾವನೆಗಳನ್ನು ಗೌರವಿಸಿ. ಅವಧಿಗೂ ಮುನ್ನವೇ ಹೆರಿಗೆಯಾಗುವ ಸಾಧ್ಯತೆ ಇದ್ದರು ಸಮಾಗಮ ಸುರಕ್ಷಿತ ಎಂದು ವೈದ್ಯರು ಹೇಳುವತನಕ ಸಮಾಗಮ ನಡೆಸಬಾರದು.

ಆ್ಯಮ್ನಿಯಾಟಿಕ್‌ ಪ್ಲಯಿಡ್‌ ಸ್ರಾವವಾಗುತ್ತಿದ್ದಲ್ಲಿ ಅಥವಾ ಅದರ ಸಾಧ್ಯತೆ ಇದ್ದಲ್ಲಿ ಲೈಂಗಿಕ ಚಟುವಟಿಕೆಯಿಂದ ದೂರ ಇರಿ.

ಗರ್ಭಾವಸ್ಥೆಯಲ್ಲಿ ಸಮಾಗಮ ನಡೆಸುವಾಗ ಕಾಂಡೋಮ್ ಬಳಸುವುದು ಸೂಕ್ತ. ಏಕೆಂದರೆ ಅದರಿಂದ ಸೋಂಕು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಯಾವ ಸಂದರ್ಭದಲ್ಲಿ ಸುರಕ್ಷಿತಲ್ಲ?

ಸಾಮಾನ್ಯ ಪರಿಸ್ಥಿತಿಯಲ್ಲಿ ಗರ್ಭಾವಸ್ಥೆಯಲ್ಲಿ ಸಮಾಗಮ ಸುರಕ್ಷಿತವಾಗಿರುತ್ತದೆ. ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ಅದು ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಅವು ಕೆಳಕಂಡಂತಿವೆ :

ಒಂದುವೇಳೆ ವೈದ್ಯರು ನಿಮಗೆ ಯಾವುದೊ ಕಾರಣದಿಂದ ಸಮಾಗಮ ನಡೆಸಬಾರದೆಂದು ಸೂಚಿಸಿದ್ದರೆ.

ನಿಮಗೆ ಅವಧಿಗೆ ಮುನ್ನ ಹೆರಿಗೆಯಾಗಿದ್ದಲ್ಲಿ.

ನಿಮಗೆ ಪ್ಲೆಸೆಂಟಾ ಪ್ರೀಮಿಯಾ ಆಗಿದ್ದರೆ ಅಂದರೆ ಪ್ಲೆಸೆಂಟಾದ ಭಾಗ ಸರ್ವಿಕ್ಸ್ ನ್ನು ಅರಿಸಿಕೊಂಡಿದ್ದಲ್ಲಿ.

ನೀರು ಅಥವಾ ಯಾವುದೇ ತೆರನಾದ ದ್ರವ ಸ್ರಾವವಾಗುತ್ತಿದ್ದಲ್ಲಿ.

ರಕ್ತ ಸ್ರಾವ ಆಗುತ್ತಿದ್ದಲ್ಲಿ.

ನಿಮಗೆ ಅಥವಾ ನಿಮ್ಮ ಸಂಗಾತಿಗೆ ಎಚ್‌ಐವಿ ಇದ್ದರೆ.

ಅವಧಿಗೆ ಮುನ್ನವೇ ಸರ್ವಿಕ್ಸ್ ಪಸರಿಸಿಕೊಂಡಿದ್ದರೆ.

ಪ್ಲೆಸೆಂಟಾ ಕೆಳಭಾಗದಲ್ಲಿದ್ದರೆ.

ಗರ್ಭಾಶಯ ಅಸಮರ್ಥವಾಗಿದ್ದಲ್ಲಿ.

ಪರ್ಯಾಯ ವಿಧಾನಗಳು

ಅವಧಿಗೆ ಮುನ್ನವೇ ಹೆರಿಗೆಯಾದ ಮಹಿಳೆಯರಿಗೆ, ಈ ಮೊದಲು ಗರ್ಭಪಾತ ಉಂಟಾದವರಿಗೆ ಪಾರಂಪರಿಕ ಸಮಾಗಮ ನಡೆಸುವುದು ಬೇಡ ಎಂದು ಹೇಳಲಾಗುತ್ತದೆ. ಆದರೆ ದಂಪತಿಗಳು ಇತರೆ ಕೆಲವು ಉಪಾಯಗಳ ಮೂಲಕ ಲೈಂಗಿಕ ತೃಪ್ತಿಯನ್ನು ಪಡೆದುಕೊಳ್ಳಬಹುದು. ಅವುಗಳೆಂದರೆ ದೈಹಿಕ ಸ್ಪರ್ಶ, ಅಪ್ಪುಗೆ, ಹಸ್ತಮೈಥುನದ ಮೂಲಕ ಸುಖಾನುಭೂತಿ ಹೊಂದಬಹುದು.

ಮಾಲಿನಿ ರಾವ್.

ಅನ್ ಲಿಮಿಟೆಡ್ ಕಥೆ, ಲೇಖನ ಓದಲುಸಬ್ ಸ್ಕ್ರೈಬ್ ಮಾಡಿ