ಮೇಕಪ್ ಬ್ಯೂಟಿ ಎರಡನ್ನೂ ಫ್ರೆಶ್ ಆಗಿಟ್ಟುಕೊಳ್ಳಲು ಮೇಕಪ್ ಆರ್ಟಿಸ್ಟ್ ಸದಾ ಏನಾದರೊಂದು ಸವಾಲನ್ನು ಎದುರಿಸುತ್ತಾ ಇರಬೇಕಾಗುತ್ತದೆ. ಆಗ ಹೊಸತನ ಉಳಿಯುತ್ತದೆ. ಈ ನಿಟ್ಟಿನಲ್ಲಿ `ಆಂಬ್ರೆ ಮೇಕಪ್` ಇತ್ತೀಚಿನ ಹೊಸ ಟ್ರೆಂಡ್ ಎನಿಸಿದೆ. ಸಣ್ಣಪುಟ್ಟ ಪಾರ್ಟಿ ಇರಲಿ ಅಥವಾ ವೆಡ್ಡಿಂಗ್ ಪಾರ್ಟಿಯಂಥ ಮಹತ್ವದ್ದೇ ಇರಲಿ, ಆಂಬ್ರೆ ಮೇಕಪ್ ನಿಮಗೆ ಎಲ್ಲ ಕಡೆ ಹೆಚ್ಚಿನ ಯಶಸ್ಸು ತಂದುಕೊಡಲಿದೆ. ಅಸಲಿಗೆ ಮೇಕಪ್‌ನಲ್ಲಿ ಆಂಬ್ರೆ ಹೇರ್ ಕಲರ್‌ನಿಂದಲೇ ಖ್ಯಾತಿಗೆ ಬಂತು. ಇದು ಎಲ್ಲೆಡೆ ಬೇಗ ಜನಪ್ರಿಯತೆ ಪಡೆಯಿತು. ಈ ಕಾರಣದಿಂದಲೇ ಈ ಟೆಕ್ನಿಕ್‌ನ್ನು ತುಟಿ, ಕೆನ್ನೆ, ಗಲ್ಲ, ಕಂಗಳ ಮೇಕಪ್‌ಗೆಂದೇ ವಿಶೇಷವಾಗಿ ಬಳಸಲಾಗುತ್ತಿದೆ. ಇದರಲ್ಲಿ ಒಂದೇ ಕಲರ್ ಟೋನ್ ಯಾ ಕಾಂಟ್ರಾಸ್ಟ್ ಕಲರ್‌ನ, ಲೈಟ್‌ಡಾರ್ಕ್ ಶೇಡ್ಸ್ ನ್ನು ಬಳಸುತ್ತಾರೆ. ಇದು ಸುಂದರವಾಗಿ ಕಂಗೊಳಿಸುವುದು ಮಾತ್ರವಲ್ಲದೆ ಆಕರ್ಷಕ ಕೂಡ.
ಫ್ಯಾಷನ್‌ನಲ್ಲಿ ಇನ್
ಸೌಂದರ್ಯ ತಜ್ಞೆಯರ ಪ್ರಕಾರ ಆಂಬ್ರೆ ಒಂದು ಉತ್ತಮ ಟೆಕ್ನಿಕ್. ಇದರಲ್ಲಿ ತುಟಿಗಳಿಗೆ 2-3 ಬಗೆಯ ಬಣ್ಣದ ಲಿಪ್‌ಸ್ಟಿಕ್ ಹಚ್ಚಿ ಕೊನೆಗೆ ಫೈನ್ ಕಲರ್ ಪಡೆಯಬಹುದು. ಇದರಲ್ಲಿ ಮುಖ್ಯವಾಗಿ 3 ಬಗೆ ಬಣ್ಣ ಬೆರೆಸಲಾಗುತ್ತದೆ. ಬ್ರೈಡಲ್‌ನಲ್ಲಿ ಈ ಬಾರಿ ಹಾಟ್‌ಆರೆಂಜ್ ಕಲರ್ ಅತಿ ಹೆಚ್ಚು ಚಾಲ್ತಿಯಲ್ಲಿದೆ. ರೆಡ್ ಕಲರ್‌ಮೊದಲೇ ಪಾಪ್ಯುಲರ್. ವಧುವಿಗಾಗಿ ರೆಡ್ ಎವರ್ ಗ್ರೀನ್ ಕ್ಲಾಸಿಕ್‌ಕಲರ್ ಎನ್ನಬಹುದು. ಇಂಡಿಯನ್ ವೆಡ್ಡಿಂಗ್ಸ್ ನಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಇರುತ್ತದೆ. ಕೆಂಪು ಬಣ್ಣವಿಲ್ಲದೆ ನಮ್ಮಲ್ಲಿ ಮದುವೆಗಳು ನಡೆಯುವುದೇ ಇಲ್ಲ. 80% ಮಹಿಳೆಯರು ಕೆಂಪು, ಮೆರೂನ್ ಬಣ್ಣದ ವೆಡ್ಡಿಂಗ್ ಡ್ರೆಸೆಸ್‌ಗೇ ಆದ್ಯತೆ ನೀಡುತ್ತಾರೆ. ಎಲ್ಲಾ ಬ್ರೈಟ್ ಕಲರ್ಸ್ ಅಂದ್ರೆ ಹಾಟ್ ಆರೆಂಜ್, ಫ್ಯೂಶಿಯಾ ಇತ್ಯಾದಿ ಫ್ಯಾಷನ್‌ನಲ್ಲಿ ಇನ್ ಎನಿಸಿದೆ.
ಮೇಕಪ್ ಮಾಡಿಕೊಳ್ಳುವ ಮುನ್ನ ಗಮನಿಸಿ :
ಎಲ್ಲಕ್ಕೂ ಮುನ್ನ ನಿಮ್ಮ ಮುಹೂರ್ತದ ಡ್ರೆಸ್, ರಿಸೆಪ್ಶನ್ ಡ್ರೆಸ್ ಎಂಥದಿರಬೇಕು ನಿರ್ಧರಿಸಿ. ಈ ಡ್ರೆಸ್‌ನ್ನು ಕಾಂಪ್ಲಿಮೆಂಟ್‌ಮಾಡುವಂಥ ಕಲರ್‌ನ್ನು ನೀವು ಆರಿಸಬಹುದು. ಉದಾ: ನೀವು ಕೆಂಪು ಬಣ್ಣದ ಸೀರೆ ಆರಿಸಿದ್ದರೆ, ಅದಕ್ಕೆ ತಕ್ಕಂತೆ ಮೆರೂನ್, ಪಿಂಕ್ ಸಹ ಆರಿಸಬಹುದು.
ಆಂಬ್ರೆ ಅಂದ್ರೆ ಅರ್ಥ, ಒಂದೇ ಫ್ಯಾಮಿಲಿಯ ಡಾರ್ಕ್ ಲೈಟ್ ಶೇಡ್ಸ್ ಆರಿಸುವುದು. ಉದಾ: ನೀವು ಕೆಂಪು ಬಣ್ಣದ ಲಿಪ್‌ಸ್ಟಿಕ್ ಆರಿಸಿದ್ದರೆ ಅದಕ್ಕೆ ಪೂರಕ ಬಣ್ಣಗಳನ್ನು ಜೊತೆಗೆ ಆರಿಸಿ.
ಮೊದಲು ಬೇಸ್ ಲಿಪ್‌ಸ್ಟಿಕ್‌ನಿಂದ 1 ಶೇಡ್ ಡಾರ್ಕ್ ಔಟರ್ ಲಿಪ್ ಲೈನರ್ ಎಳೆಯಿರಿ. ಲೈನ್ ತುಸು ಥಿಕ್ ಇರಲಿ. ಇದಾದ ಮೇಲೆ ಬೇಸ್ ಲಿಪ್‌ಸ್ಟಿಕ್ ಹಚ್ಚಿ, ಕೊನೆಯಲ್ಲಿ ತುಟಿಗಳ ಭಾಗಕ್ಕೆ ಲೈಟ್ ಶೇಡ್ ಹಚ್ಚಬೇಕು. ಇದರ ಮೇಲೆ ಲಿಪ್ ಗ್ಲಾಸ್ ಹಚ್ಚಿ, ಅದಕ್ಕೆ ಫೈನ್ ಟಚ್ ಕೊಡಿ.
ನೀವು ಮನೆಯಲ್ಲೇ ಈ ಬಗೆಯ ಮೇಕಪ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಪರ್ಸನಲ್ ಮೇಕಪ್ ಆರ್ಟಿಸ್ಟ್ ಯಾ ಸೆಲೂನ್‌ನಿಂದ ಮೇಕಪ್ ಸಾಮಗ್ರಿ ಕೊಳ್ಳುವಾಗ, ಅಲ್ಲಿನ ಎಕ್ಸ್ ಪರ್ಟ್‌ನಿಂದ ಇದರ ಟೆಕ್ನಿಕ್ಸ್ ಬಗ್ಗೆಯೂ ತಿಳಿದುಕೊಳ್ಳಿ.
ಇಷ್ಟು ಮಾತ್ರವಲ್ಲ, ಈ ವರ್ಷ ಹೋಲೋಗ್ರಾಫಿ ಕೂಡ ಚಾಲ್ತಿಯಲ್ಲಿದೆ. ಇದರಲ್ಲಿ ಮುಖದಲ್ಲಿನ ಯಾವುದಾದರೂ ಒಂದು ಭಾಗವನ್ನು ಹೈಲೈಟ್ಗೊಳಿಸುವ ಕ್ರಮವಿದೆ. ಆ ಭಾಗಕ್ಕೆ ಎಕ್ಸ್ ಟ್ರಾ ಶೈನಿಂಗ್ ನೀಡಿ ಎದ್ದು ಕಾಣುವಂತೆ ಮಾಡಬಹುದು. ಇದಕ್ಕಾಗಿ ಸಿಲ್ವರ್, ಗೋಲ್ಡನ್ ಕಲರ್ಸ್ ಆರಿಸಿ. ಈ ವರ್ಷ ಕಂಗಳ ಮೇಲ್ಭಾಗದಲ್ಲಿ ಅದನ್ನು ನೀಡುವ ಟ್ರೆಂಡ್ ಶುರುವಾಗಿದೆ. ನವ ವಧು ಇಂಥದ್ದನ್ನು ಧರಿಸಿ ವಿಭಿನ್ನ ಲುಕ್ಸ್ ಪಡೆಯಬಹುದು.
ಯಂಗ್ ಬ್ರೈಡಲ್ ಪಾಪ್ಬ್ರೈಟ್ ಕಲರ್ ಧರಿಸಬಹುದು. ಅದರ ಪ್ರಕಾರವೇ ಆಂಬ್ರೆ ಮೇಕಪ್ ಮಾಡಿ.
ಸ್ಕಿನ್ ಕಲರ್ ಆಧರಿಸಿ ಡ್ರೆಸ್ ಆರಿಸಬೇಕು. ಆಗ ಮಾತ್ರ ಮೇಕಪ್ ಸರಿಯಾಗಿ ಕಾಣಿಸುತ್ತದೆ.
ನವ ವಧು ಮದುವೆಗೆ 2 ತಿಂಗಳು ಮೊದಲಿನಿಂದಲೇ ತನ್ನ ಚರ್ಮದ ಆರೈಕೆಗೆ ತೊಡಗಬೇಕು. ಆಗ ಮಾತ್ರ ಮದುವೆಯ ದಿನ ಇಂಥ ಮೇಕಪ್ ಅವಳ ಇಡೀ ವ್ಯಕ್ತಿತ್ವಕ್ಕೆ ಉತ್ತಮ ಗೆಟಪ್ ನೀಡಬಲ್ಲದು.
– ಜಿ. ಸುಮಾ