ಕೆಮಿಕಲ್ಸ್ ಬೆರೆತ ಹೇರ್ ಕೇರ್ ಉತ್ಪನ್ನಗಳ ಸತತ ಬಳಕೆಯಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ. ಅಂಥ ಸಮಯದಲ್ಲಿ ಕೆಮಿಕಲ್ಸ್ ಬೆರೆತಿರುವ ಇಂಥ ಹೇರ್ ಕೇರ್ ಉತ್ಪನ್ನಗಳನ್ನು ಬಳಸಲೇಬಾರದು. ಹೀಗಿರುವಾಗ ಕೂದಲಿನ ನೈಸರ್ಗಿಕ ಚಿಕಿತ್ಸೆಗಾಗಿ ಆ್ಯರೋಮಾಥೆರಪಿ ಎಲ್ಲಕ್ಕೂ ಉತ್ತಮ ಆಯ್ಕೆ ಎನಿಸುತ್ತದೆ.
ಕೂದಲಿನ ಅತಿ ದೊಡ್ಡ ಶತ್ರು ಎಂದರೆ ಡ್ಯಾಂಡ್ರಫ್. ಹಾಗಿರುವಾಗ ಈ ತಲೆಹೊಟ್ಟು ಅಂದರೇನೆಂದು ಮೊದಲು ತಿಳಿಯೋಣ. ನಮ್ಮ ಭುಜಗಳ ಮೇಲೆ ಆಗಾಗ ಉದುರುವ ಈ ಹೊಟ್ಟು, ಅಸಲಿಗೆ ಶ್ಯಾಂಪೂನಿಂದ ಸರಿಯಾಗಿ ತಲೆಗೂದಲನ್ನು ತೊಳೆಯದೆ ಇರುವುದರಿಂದ ಆಗಿರುವಂಥದು. ಇದರ ಅರ್ಥ ಅಸಲಿಗೆ ಹೊಟ್ಟು ಎಂಬುದು ಬ್ಯಾಕ್ಟೀರಿಯಲ್ ಸೋಂಕಿನ ಒಂದು ಪ್ರಕಾರವಾಗಿದೆ. ಇದು ಹೆಚ್ಚಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಇದು ಬೇಸಿಗೆಯಲ್ಲೂ ಹಾಜಾರಾಗುತ್ತದೆ. ಈ ಸೋಂಕಿನ ಚಿಕಿತ್ಸೆಗೆ ಕನಿಷ್ಠ 6-12 ತಿಂಗಳು ಬೇಕು. ಕೂದಲು ತೊಳೆಯಲು ಬಿಸಿ ನೀರು ಬಳಸಿದಷ್ಟೂ ಇದರ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಸಾಧ್ಯವಾದಷ್ಟೂ ತಣ್ಣೀರನ್ನೇ ಬಳಸಿ.
ಸಾಮಾನ್ಯವಾಗಿ ಕೆಮಿಕಲ್‌ಯುಕ್ತ ಶ್ಯಾಂಪೂ ತಲೆಗೂದಲಿಗೆ ಒಳ್ಳೆಯದೆಂದು ಭಾವಿಸುತ್ತೇವೆ, ಆದರೆ ಅದು ನಿಜವಲ್ಲ. ಶ್ಯಾಂಪೂ ಬದಲು ಸೋಪು ಬಳಸುವುದೇ ಉತ್ತಮ, ಏಕೆಂದರೆ ಶ್ಯಾಂಪೂವಿಗೆ ಹೋಲಿಸಿದಾಗ ಇದು ಸುಲಭವಾಗಿ ತಲೆಯಿಂದ ದೂರಾಗುತ್ತದೆ. ವಿಭಿನ್ನ ಕೆಮಿಕಲ್ಸ್ ಬೆರೆತ ಶ್ಯಾಂಪೂ ಬಳಕೆಯನ್ನು ಆದಷ್ಟೂ ನಿಲ್ಲಿಸಿ. ಸಲ್ಫೇಟ್ ರಹಿತ ಡಿಟರ್ಜೆಂಟ್ ಬೇಸ್ಡ್ ಇರುವಂಥ ಶ್ಯಾಂಪೂವನ್ನೇ ಬಳಸಬೇಕು. ಅದು ಪ್ಯಾರಾಬೆನ್ ಪ್ರಿಝರ್ವೇಟಿವ್ಸ್ನಿಂದಲೂ ಮುಕ್ತವಾಗಿರಬೇಕು.
ಗಮನಿಸಿ
ತಲೆಗೆ ಶ್ಯಾಂಪೂ ಬಳಸಿದ ನಂತರ ಅದನ್ನು ಚೆನ್ನಾಗಿ ತೊಳೆಯದಿದ್ದರೆ ನಿಮ್ಮ ಕೂದಲಿನ ಹೊಳಪು, ಸೌಂದರ್ಯ ಕುಂದುತ್ತದೆ. ಕೂದಲನ್ನು ಸರಿಯಾದ ಆಕಾರದಲ್ಲಿ ಇಟ್ಟುಕೊಳ್ಳಲು, ಆಗಾಗ ಎಣ್ಣೆ ಹಚ್ಚುವುದನ್ನು ಮರೆಯಬೇಡಿ. ಇದಕ್ಕಾಗಿ ಅಗತ್ಯವಾಗಿ ಕೊಬ್ಬರಿ ಎಣ್ಣೆ ಬಳಸಿರಿ. ಚಳಿಗಾಲ, ಮಳೆಗಾಲ, ಬೇಸಿಗೆ ಯಾವುದೇ ಇರಲಿ, ಕೊಬ್ಬರಿ ಎಣ್ಣೆ ಬಳಸುವುದನ್ನು ತಪ್ಪಿಸಬೇಡಿ.
ತಲೆಹೊಟ್ಟು ತಲೆಬುರುಡೆಯ (ಸ್ಕಾಲ್ಪ್) ಮೇಲ್ಪದರದ ಚರ್ಮದಿಂದ ಏಳುತ್ತದೆ, ಆದ್ದರಿಂದ ಕೂದಲನ್ನು ನಿಯಮಿತವಾಗಿ ಆರೈಕೆ ಮಾಡಿ. ಆ್ಯರೋಮಾಥೆರಪಿ ಮಾಡುವುದರಿಂದ ತ್ವಚೆಯ ರೋಮರಂಧ್ರಗಳ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ :
ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಅದು ಹೆಚ್ಚು ಸಶಕ್ತಗೊಳ್ಳುತ್ತದೆ, ಜೊತೆಗೆ ಗುಣಮಟ್ಟ ಸುಧಾರಿಸುತ್ತದೆ. ಇದಕ್ಕಾಗಿ ನಿಮಗೆ ಸಮರ್ಪಕ ಟೆಕ್ನಿಕ್‌ಮತ್ತು ಸಮಯದ ಮಾಹಿತಿ ಇರಬೇಕು. ಎಷ್ಟೋ ಮಹಿಳೆಯರು ಬೆಳಗ್ಗೆ ತಲೆಗೆ ಎಣ್ಣೆ ಹಚ್ಚಲು ಬಯಸುತ್ತಾರೆ. ಆದರೆ ಇದು ಸರಿಯಲ್ಲ. ಹೀಗಾಗಿ ಬೆಳಗ್ಗೆ ತಲೆಗೆ ಎಣ್ಣೆ ಹಚ್ಚಲು ಹೋಗಬೇಡಿ. ನೀವು ನಿಮ್ಮ ಕೂದಲಿನ ಗುಣಮಟ್ಟ ಸುಧಾರಿಸಲು, ಅದನ್ನು ಉದ್ದ ಬೆಳೆಸಲು, ಅಕಾಲಿಕ ನರೆ ತಪ್ಪಿಸಲು, ಸೀಳುತುದಿಯ ಕೂದಲಿನಿಂದ ಮುಕ್ತಿ ಬಯಸಿದರೆ…
ರಾತ್ರಿ ಹೊತ್ತು ತಲೆಗೆ ಎಣ್ಣೆ ಹಚ್ಚುವುದೇ ಸೂಕ್ತ! ಮಾರನೇ ಬೆಳಗ್ಗೆ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಎಣ್ಣೆಯನ್ನು ತಲೆಗೂದಲಿನ ಬುಡಕ್ಕೆ ಅಂದರೆ ನೇರವಾಗಿ ತಲೆಬುರುಡೆಗೆ ಒತ್ತಬೇಕು.
ಕೊಬ್ಬರಿ ಎಣ್ಣೆ ತಲೆಗೂದಲಿಗೆ ನಿಜಕ್ಕೂ ಬಹೂಪಯೋಗಿ. ಕೊಬ್ಬರಿ ಎಣ್ಣೆ ಹಚ್ಚಿದ ನಂತರ, ಟವೆಲ್‌ನ್ನು ಬಿಸಿ ನೀರಿನಲ್ಲಿ ಅದ್ದಿ, ಗಟ್ಟಿಯಾಗಿ ತಲೆಗೆ ಕಟ್ಟಿ, ಅದರ ಹಬೆ ತಲೆಗೆ 15-20 ನಿಮಿಷ ಚಿಕಿತ್ಸೆ ನೀಡುವಂತಿರಬೇಕು.
ಆ್ಯರೋಮಾಥೆರಪಿಯ ಸೂತ್ರ
1 ಸಣ್ಣ ಚಮಚ ಬೇಸ್ ಆಯಿಲ್‌ಗೆ (ಕೊಬ್ಬರಿ, ಬಾದಾಮಿ, ಹಿಪ್ಪೆ ಎಣ್ಣೆ ಇತ್ಯಾದಿ) 2 ಹನಿ ವಿಟಮಿನ್ ಆಯಿಲ್, 1-1 ಹನಿ ಟೀಟ್ರೀ, ಪಚೋಲಿ, ತುಳಸಿ ಆಯಿಲ್ ಬೆರೆಸಿಕೊಳ್ಳಿ. ಇದರ ಸತತ ಬಳಕೆಯಿಂದ ನಿಮ್ಮ ಕೂದಲಿನ ರಂಗುರೂಪು ಸುಧಾರಿಸುವಲ್ಲಿ, ಸಶಕ್ತಗೊಳಿಸುವಲ್ಲಿ ಪ್ರಮುಖ ನೆರವು ಸಿಗಲಿದೆ.
ನೀವು ಬಯಸಿದರೆ ಪಾರ್ಲರ್‌ಗೆ ಹೋಗಿ ಕೂದಲಿಗೆ ಯಾಂತ್ರಿಕ ಹಬೆ ಸಹ ಕೊಡಿಸಬಹುದು, ಮಾರನೇ ಬೆಳಗ್ಗೆ ಅಗತ್ಯ ಅದನ್ನು ತೊಳೆಯಿರಿ.
ಕೂದಲಿನ ಆರೈಕೆಯಲ್ಲಿ ಕಂಡೀಶನರ್‌ನ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ. ನಾವು ಟವೆಲ್‌ನ್ನು ತಲೆಗೆ ಉಜ್ಜುವುದರಿಂದ ಉಂಟಾಗುವ ಹಾನಿಗೆ ಇದು ಪರಿಹಾರವಾಗಿದೆ. ಹೀಗಾಗಿ ಅಗತ್ಯ ಬಿದ್ದಾಗ ಕಂಡೀಶನರ್‌ಬಳಸಬೇಕು.
ಯಾವುದು ನೈಸರ್ಗಿಕ ಮೂಲದಿಂದ ತಯಾರಾದುದೋ, ಸುಲಭವಾಗಿ ಕೂದಲಿನಿಂದ ಹೊರಬೀಳಬಲ್ಲದೋ ಅಂಥ ಕಂಡೀಶನರ್‌ನ್ನೇ ಬಳಸಬೇಕು.
ಕೂದಲಿನ ಆರೈಕೆಗಾಗಿ ಸಲಹೆ
1-1 ಚಮಚ ಮೊಸರು, ಬೆಟ್ಟದ ನೆಲ್ಲಿಕಾಯಿಯ ಪೇಸ್ಟ್, ಸೀಗೇಕಾಯಿ, ಚಿಗರೆಪುಡಿ, ಅರ್ಧರ್ಧ ಚಮಚ ತುಳಸಿ ರಸ, ಪುದೀನಾ ರಸ, ಮೆಂತ್ಯ ಪೇಸ್ಟನ್ನು ಚೆನ್ನಾಗಿ ಬೆರೆಸಿ, ತಲೆಗೆ ತಿಕ್ಕಿ ನೆನೆಯಲು ಬಿಟ್ಟು, ನಂತರ ತೊಳೆಯಿರಿ.
ಮೊಟ್ಟೆಯ ತುಸು ಬಿಳಿ ಭಾಗಕ್ಕೆ ಹರ್ಬಲ್ ಶ್ಯಾಂಪೂ ಬೆರೆಸಿ, ನಂತರ ತಲೆಗೆ ಬಳಸಿ.
ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಸೇವಿಸಿ. ಇದರಿಂದ ಕೂದಲಿನ ಬೆಳಣಿಗೆಗೆ ಬೇಕಾದ ಸೂಕ್ತ ವಿಟಮಿನ್, ಖನಿಜ, ಪೋಷಕಾಂಶಗಳು ಸಿಗುತ್ತವೆ. ಇದರಿಂದ ದೇಹ, ಮನಸ್ಸುಗಳೆರಡೂ ಪ್ರಫುಲ್ಲಿತಗೊಳ್ಳುತ್ತದೆ. ಸಮರ್ಪಕ ಆಹಾರ ಸೇವನೆ ಎಷ್ಟೋ ರೋಗಗಳನ್ನು ತಡೆಗಟ್ಟಿ, ಆರೋಗ್ಯ ಹಾನಿಯಾಗದಂತೆ ರಕ್ಷಿಸುತ್ತದೆ. ಜೊತೆಗೆ ಕೂದಲಿನ ಆರೋಗ್ಯ, ಸೌಂದರ್ಯ ಉಳಿಸುತ್ತದೆ. ಹೀಗಾಗಿ ಇದನ್ನು ಬಿಟ್ಟು ಜಂಕ್‌ಫುಡ್ ಸೇವಿಸಬೇಡಿ.
ಪ್ರೋಟೀನ್ ದೊರಕಲು ಮೊಟ್ಟೆ ಉತ್ತಮ ಸ್ರೋತವಾಗಿದೆ. ಇದರಲ್ಲಿ ಹಲವು ಬಗೆಯ ಅವಶ್ಯಕ ವಿಟಮಿನ್, ಖನಿಜಗಳು ಜೊತೆಗೆ ಕ್ಯಾಲರಿಯೂ ಉಂಟು. ಆರೋಗ್ಯಕರ ಕೂದಲಿಗಾಗಿ ಆಗಾಗ ಮೊಟ್ಟೆಯ ಬಿಳಿ ಭಾಗ ಸೇವಿಸಿ. ಇದು ತಲೆಹೊಟ್ಟು, ಕೂದಲಿನ ಡ್ರೈನೆಸ್, ಸೀಳುತುದಿಯ ಸಮಸ್ಯೆಗಳನ್ನು ನಿವಾರಿಸಲು ಪೂರಕ.
ವಾರದಲ್ಲಿ 2-3 ಸಲ ಸಲಾಡ್ ಜೊತೆ ಮೊಳಕೆ ಕಟ್ಟಿದ ಕಾಳು (ಹಸಿಯಾಗಿಯೇ) ಸೇವಿಸಿ. ಇದಕ್ಕೆ ಉಪ್ಪು, ಕೆಚಪ್ ಹಾಕಬೇಡಿ. ಈ ರೀತಿ ಸಲಾಡ್‌ಸೇವಿಸಿದ 2 ತಾಸಿನ ನಂತರ ನಿಂಬೆರಸ, ಪುದೀನಾ ಚಟ್ನಿ ಸೇವಿಸುವುದರಿಂದ ಕೂದಲಿನ ಆರೋಗ್ಯ, ಸೌಂದರ್ಯ ಸುಧಾರಿಸುತ್ತದೆ.
– ಡಾ. ನಳಿನಾ ಸುರೇಶ್