ಮೊದಲಿನಿಂದಲೂ ಮಕ್ಕಳೆಂದರೆ ಬಲು ಅಕ್ಕರೆಯುಳ್ಳ ಸುರಭಿ ವರ್ಮ ತನ್ನ ತಾಯಿಯಂತೆ ಡಾಕ್ಟರ್ ಆಗಬಯಸಿದರು. ಆದರೆ ಮೆಡಿಕಲ್‌ನಲ್ಲಿ ಈಕೆಗೆ ದಾಖಲಾತಿ ಸಿಗಲಿಲ್ಲ ಎಂದು ಹೋಮ್ ಸೈನ್ಸ್ ತೆಗೆದುಕೊಂಡರು. ಅದರಲ್ಲಿನ ಸೈಕಾಲಜಿಯ ಮೊದಲ ಪಿರಿಯಡ್, ತಮ್ಮ ಜೀವನದ ಗತಿಯನ್ನೇ ಬದಲಿಸುತ್ತದೆಂದು ಗೊತ್ತಿರಲಿಲ್ಲ.
ಚೈಲ್ಡ್ ಡೆಲಪ್‌ಮೆಂಟ್‌ನ ಆ ಕ್ಲಾಸ್, ಸುರಭಿಯರನ್ನು ಮುಂದೆ ಮಕ್ಕಳಿಗಾಗಿ ಏನಾದರೂ ಮಾಡಲೇಬೇಕೆಂದು ಸಂಕಲ್ಪ ಕೈಗೊಳ್ಳುವಂತೆ ಪ್ರೇರೇಪಿಸಿತು. ತಮ್ಮ ಬಹುದಿನಗಳ ಈ ಕನಸನ್ನು ನನಸಾಗಿಸಲು 2005ರಲ್ಲಿ ಸುರಭಿ `ಸ್ಪರ್ಶ್ ಫಾರ್ ಚಿಲ್ಡ್ರನ್’ ಸಂಸ್ಥೆ ಸ್ಥಾಪಿಸಿದರು. ಇದೊಂದು ಮಲ್ಟಿ ಡಿಸಿಪ್ಲಿನರಿ ಥೆರಪಿ ಸೆಂಟರ್ ಆಗಿದ್ದು, ಇಲ್ಲಿ ಮಂದಬುದ್ಧಿಯ ಮಕ್ಕಳಿಗೆ ಹೊಸ ಜೀವನ ಸಿಗುತ್ತದೆ.
ಈ ಸೆಂಟರ್ `ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್, ಲರ್ನಿಂಗ್ ಡಿಫಿಕಲ್ಟಿ, ಅಟೆನ್ಶನ್ ಡಿಫಿಕಲ್ಟಿ, ಸ್ಪೀಚ್‌ಲ್ಯಾಂಗ್ವೇಜ್ ಡಿಫಿಕಲ್ಟಿ, ಡಿಸೆಬಿಲಿಟಿ,’ ಮುಂತಾದ ಮಾತ್ರವಲ್ಲದೆ ಸಾಮಾಜಿಕ ಭಾವನಾತ್ಮಕ ಸಮಸ್ಯೆಗಳಿಂದ ಪೀಡಿತ ಮಕ್ಕಳಿಗಾಗಿ ಕೆಲಸ ಮಾಡುತ್ತದೆ.
`ಸ್ಪರ್ಶ್’ನ ಉದ್ದೇಶ ಈ ಮಕ್ಕಳು ಹಾಗೂ ಇವರ ಕುಟುಂಬದವರನ್ನು ಸಮಾಜದೊಂದಿಗೆ ಪ್ರಭಾವಶಾಲಿಯಾಗಿ ಬೆರೆತುಕೊಳ್ಳುವಂತೆ ಮಾಡುವುದಾಗಿದೆ. ಇದಕ್ಕಾಗಿ ಅವರಿಗೆ ಉಚ್ಚ ಮಟ್ಟದ ಸಹಾಯ ಹಾಗೂ ಥೆರಪಿ ಸೇವೆಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಈ ಮಕ್ಕಳ ಸಾಮರ್ಥ್ಯ ವಿಕಾಸಗೊಳಿಸಲು ಸ್ಪೆಷಲ್ ಎಜುಕೇಶನ್, ಆಕ್ಯುಪೇಶನ್ ಥೆರಪಿ, ಪ್ಲೇ ಸ್ಟಡಿ ಗ್ರೂಪ್ಸ್, ಅರ್ಲಿ ಇಂಟರ್‌ವೆನ್ಶನ್ ಸೆಂಟರ್, ಸ್ಪೀಚ್ ಲ್ಯಾಂಗ್ವೇಜ್ ಥೆರಪಿ, ಸೈಕಲಾಜಿಕಲ್ ಫ್ಯಾಮಿಲಿ ಕೌನ್ಸಿಲಿಂಗ್‌ನಂಥ ಸೇವೆಗಳು ಇಲ್ಲಿ ಲಭ್ಯ.
ಮುಂದೆ ಏನಾಗಬೇಕೆಂದು ಯಾವಾಗ ಯೋಚಿಸಿದಿರಿ?
ನನಗೆ ಮೊದಲಿನಿಂದಲೂ ದೊಡ್ಡ ಕನಸೇನೂ ಇರಲಿಲ್ಲ. ದೆಹಲಿ ಯೂನಿವರ್ಸಿಟಿಯಿಂದ ಹೋಮ್ ಸೈನ್ಸ್ ನಲ್ಲಿ ಪದವಿ ಪಡೆದ ನಂತರ, ಚೈಲ್ಡ್ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದ್ದನ್ನೇ ಮಾಡಬೇಕೆನಿಸಿತು. ಹೀಗಾಗಿ 2002ರಲ್ಲಿ ಇದೇ ವಿಷಯವಾಗಿ ಎಂ.ಎಸ್. ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದೆ. ನಂತರ ಯೂನಿವರ್ಸಿಟಿ ಆಫ್ ಬರ್ಮಿಂಘಮ್ ನಲ್ಲಿ ಶಿಕ್ಷಣ ಪೂರೈಸಿ ಈ ಫೀಲ್ಡ್ ಗೆ ಎಂಟ್ರಿ ಪಡೆದೆ.
ಈ ಫೀಲ್ಡ್ ಗೆ ಬರಬೇಕೆಂಬ ಪ್ರೇರಣೆ ದೊರಕಿದ್ದು ಹೇಗೆ?
ನನ್ನ ಶಿಕ್ಷಣ ಮುಗಿಸಿ ವಿಭಿನ್ನ ಸಂಸ್ಥೆಗಳಲ್ಲಿ ಕೆಲಸ ಮಾಡಿದಾಗ ಒಂದು ಬೇಸರದ ವಿಷಯ ಗಮನಿಸಿದೆ. ಪೇರೆಂಟ್ಸ್ ತಮ್ಮ ಮಂದಬುದ್ಧಿಯ ಮಕ್ಕಳ ಉತ್ತಮ ಥೆರಪಿಗಾಗಿ ನಾನಾ ಕಡೆ ಅಲೆದಾಡುತ್ತಿದ್ದರು. ಇದರಿಂದ ಅವರ ಸಮಯ, ಹಣ ಹಾಳು. ಜೊತೆಗೆ ಅವರೊಂದಿಗೆ ಮಕ್ಕಳಿಗೂ ಹಿಂಸೆ ತಪ್ಪಿದ್ದಲ್ಲ. ಹೀಗಾಗಿ 2005ರಲ್ಲಿ `ಸ್ಪರ್ಶ್ ಫಾರ್ ಚಿಲ್ಟ್ರನ್’ ಸಂಸ್ಥೆ ಸ್ಥಾಪಿಸಿದೆ.
ನಿಮ್ಮ ಜೀವನದ ಯಾವ ಕ್ಷಣಗಳನ್ನು ಬದಲಿಸ ಬಯಸುತ್ತೀರಿ?
ಅಂಥ ದೊಡ್ಡ ಅನುಭವವೇನಿಲ್ಲ. ಜೀವನದ ಪ್ರತಿ ಅನುಭವದಿಂದಲೂ ಪಾಠ ಕಲಿತಿದ್ದೇನೆ. ಸಮಯ ಸರಿದಂತೆ ಮಕ್ಕಳೊಂದಿಗೆ ನನ್ನ ಪ್ರೀತಿ ವಾತ್ಸಲ್ಯ ಹೆಚ್ಚುತ್ತಿದೆ…. ಹೀಗಾಗಿ ನಾನು ಏನನ್ನೂ ಬದಲಾಯಿಸಲು ಬಯಸುವುದಿಲ್ಲ.
ನಿಮ್ಮ ಮುಂದಿನ ಯೋಜನೆಗಳೇನು?
ನನ್ನ ಸಂಸ್ಥೆಯ ಮಕ್ಕಳೀಗ ದೊಡ್ಡವರಾಗುತ್ತಿದ್ದಾರೆ. ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕು. ನಮ್ಮ ಒಬ್ಬ ವಿದ್ಯಾರ್ಥಿ ಇದೀಗ ತಾನೇ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸಿಗೆ ಸೇರಿದ್ದಾನೆ. ನಮ್ಮ ಇತರ ವಿದ್ಯಾರ್ಥಿಗಳೂ ಹೀಗೇ ಮುಂದೆ ಬರಬೇಕೆಂಬುದೇ ನಮ್ಮ ಆಶಯ. ಮುಂದೆ ಈ ಕೇಂದ್ರವನ್ನು ಇನ್ನೂ ದೊಡ್ಡದಾಗಿ ಬೆಳೆಸುವಾಸೆ. ಯಾವ ಘಟನೆ ನಿಮ್ಮ ಜೀವನಕ್ಕೆ ಒಂದು ತಿರುವು ನೀಡಿತು. ನನಗೀಗಲೂ ನೆನಪಿದೆ, ಸ್ನಾತಕೋತ್ತರ ಶಿಕ್ಷಣದ ಸಲುವಾಗಿ ಹಲವು ಬಗೆಯ ಪ್ರಾಜೆಕ್ಟ್ ಗಳಿಗಾಗಿ ಕೆಲಸ ಮಾಡಬೇಕಿತ್ತು. ನಾವೆಲ್ಲ 20 ವಿದ್ಯಾರ್ಥಿಗಳು, ಎಲ್ಲರೂ ಬೇರೆ ಬೇರೆ ಪ್ರಾಜೆಕ್ಟ್ಸ್ ಮಾಡಬೇಕಿತ್ತು. ನನಗೆ ಕಿವುಡು-ಮೂಕ ಮಕ್ಕಳ ಕುರಿತಾಗಿ ಪ್ರಾಜೆಕ್ಟ್ ಮಾಡಬೇಕಿತ್ತು ಹಾಗೂ ನನ್ನ ಗೆಳತಿ ಆಟಿಸಂ ಕುರಿತಾಗಿ ಅವಳು ಈ ಪ್ರಾಜೆಕ್ಟ್ ಮಾಡುವಾಗ, ಆಟಿಸಂ ಕುರಿತಾಗಿ ಯಾವ ಹೆಚ್ಚಿನ ಮಾಹಿತಿಯೂ ಸಿಗಲಿಲ್ಲ. ಆ ವಿಷಯ ಅವಳು ವಿವರಿಸಿದಾಗ ನಾನೇಕೆ ಮುಂದೆ ಆಟಿಸಂ ಮಕ್ಕಳ ಸಲುವಾಗಿ ಏನಾದರೂ ಮಾಡಬಾರದು ಎನಿಸಿತು. ಅದು ಸುಮಾರು 12-13 ವರ್ಷಗಳ ಹಿಂದಿನ ಮಾತು, ಅದೇ ನನ್ನ ಜೀವನಕ್ಕೆ ಒಂದು ತಿರುವಾಯಿತು.
ಇಷ್ಟು ವರ್ಷಗಳ ಪರಿಣಾಮವಾಗಿ ಎಂದಾದರೂ ನಿಮ್ಮ ಸಂಸ್ಥೆಗೆ ಯಾವುದೋ ಒಂದು ಮಗುವಿನಿಂದಾಗಿ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆಯೇ?
ಪ್ರತಿಯೊಂದು ಮಗು ಡಿಫರೆಂಟ್. ಯಾವುದೇ ಮಗುವಿಗೆ ಹೊಸ ಸ್ಟೆಪ್ಸ್ ಹೇಳಿಕೊಡಬೇಕಾದಾಗ, ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ದೊಡ್ಡ ಪ್ರಮಾಣದ ಸಮಸ್ಯೆ ಎದುರಾಗಿಲ್ಲ.
ಇಂಥ ಸಮಸ್ಯೆಗಳಿಂದ ಪೀಡಿತ ಮಕ್ಕಳ ತಾಯಿತಂದೆಯರಿಗೆ ನೀವೇನು ಸಂದೇಶ ನೀಡಬಯಸುತ್ತೀರಿ?
ಎಂದೂ ನಂಬಿಕೆ ಕಳೆದುಕೊಳ್ಳಬೇಡಿ! ಪ್ರತಿ ಮಗುವಿನಲ್ಲೂ ಏನಾದರೊಂದು ವಿಶಿಷ್ಟ ಗುಣವಿದ್ದೇ ಇರುತ್ತದೇ, ಅದನ್ನು ಹುಡುಕಿ ತೆಗೆಯಬೇಕಷ್ಟೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು, ಆದರೆ ಕಾಲಕ್ರಮೇಣ ನಿಮಗೆ ನಿಮ್ಮ ಮಗುವಿನ ವೈಶಿಷ್ಟ್ಯ ತಿಳಿದೇ ತಿಳಿಯುತ್ತದೆ.
ಮಗುವಿನ 25 ವರ್ಷ ವಯಸ್ಸಿನ ಕಾಲಘಟ್ಟ ಅತ್ಯಂತ ಮಹತ್ವವಾದುದು. ಇದೇ ಕಾಲದಲ್ಲಿ ಅದು ಶಾಲೆಗೆ ಹೋಗಬೇಕು. ಈ ಸಮಯದಲ್ಲಿ ಅದು ಬೇರೆಯವರೊಂದಿಗೆ ವ್ಯವಹರಿಸಲು ಕಲಿಯುತ್ತದೆ. ಅದಕ್ಕೆ ಇದರಿಂದಲೇ ಬುನಾದಿ ಸಿಗುತ್ತದೆ. ಈ ಕಾಲ ಮತ್ತೆಂದೂ ಮರಳಿ ಬರದು. ಹೀಗಾಗಿ ಪೇರೆಂಟ್ಸ್ ಸಮಯ ಹಾಳು ಮಾಡದೆ ತಕ್ಷಣ ಮಗುವಿನ ಸಮಸ್ಯೆ ಗುರುತಿಸಿ ಸಂಬಂಧಿಸಿದ ವೈದ್ಯರಿಗೆ ತೋರಿಸಿ, ಥೆರಪಿಯ ನೆರವು ಪಡೆಯಬೇಕು.
– ಜಿ. ಪಂಕಜಾ