ಎಕ್ಸ್ ಪೋರ್ಟ್ ಬಿಸ್‌ನೆಸ್ ನಡೆಸುತ್ತಿರುವ ಕುಟುಂಬಕ್ಕೆ ಸೇರಿದ ರಿತಿಕಾ ನಾಂಗಿಯಾ, ತಮ್ಮ ಬಾಲ್ಯದಿಂದಲೇ ತಾಯಿತಂದೆಯರು ಕರ್ತವ್ಯ ನಿಷ್ಠರಾಗಿ ಬಿಸ್‌ನೆಸ್ ನಡೆಸುವುದನ್ನು ಕಂಡರು. ತಮ್ಮ ತಾಯಿಯಿಂದ ಆಕೆ ಹೆಚ್ಚು ಪ್ರಭಾವಿತರಾದರು. ತಮ್ಮ ಕುಟುಂಬದ ಬಿಸ್‌ನೆಸ್ ಮುಂದುವರಿಸಲು ಅವರ ತಾಯಿ ಬಹಳ ಶ್ರಮಪಟ್ಟರು ಜೊತೆಗೆ ಕುಟುಂಬವನ್ನೂ ಅಚ್ಚುಕಟ್ಟಾಗಿ ಮುನ್ನಡೆಸಿದರು. ಅವರನ್ನು ಗಮನಿಸಿಯೇ ರಿತಿಕಾ ತಾವು ಮುಂದೆ ತಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕೆಂದು ನಿರ್ಧಾರ ಕೈಗೊಂಡರು.
ರಿತಿಕಾ ಮೊದಲಿನಿಂದಲೂ ಗಮನಿಸಿದಂತೆ, ಪಾರ್ಟಿಗಳಿಗಾಗಿ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಜನರಲ್ ಸ್ಟೋರ್ಸ್‌ನಿಂದಲೇ ಖರೀದಿಸುತ್ತಿದ್ದರು, ಇದು ದುಬಾರಿ ಕೂಡ. ಆಗ ಅವರಿಗೆ ಪಾರ್ಟಿ ಮೆಟೀರಿಯಲ್ಸ್ ಸಪ್ಲೈ ಬಿಸ್‌ನೆಸ್‌ಗೆ ತಾವೇಕೆ ಇಳಿಯಬಾರದು ಎನಿಸಿತು. ಇದನ್ನೇ ಯೋಚಿಸಿ ಆಕೆ 2014ರಲ್ಲಿ ಮಾರ್ಕಿಟ್ ರಿಸರ್ಚ್ ನಡೆಸಿದರು. ನಂತರ 2015ರಲ್ಲಿ ತಮ್ಮ ಆನ್‌ಲೈನ್ ಸ್ಟೋರ್ ಫನ್‌ಕಾರ್ಟ್.ಇನ್ ಹೆಸರಿನಿಂದ ಶುರು ಮಾಡಿದರು. ಇದು ಪೋರ್ಟ್ ಪಾರ್ಟಿಯ ಪ್ಲಾನಿಂಗ್‌ಶಾಪಿಂಗ್‌ನ ಮಜಾದ ಅನುಭವ ನೀಡುತ್ತದೆ. ಪಾರ್ಟಿ ನೀಡಬಯಸುವ ಎಲ್ಲಾ ವಯಸ್ಸಿನ, ಎಲ್ಲಾ ಸಂದರ್ಭಗಳಿಗೆ ಒಪ್ಪುವ ಉತ್ತಮ ಕ್ವಾಲಿಟಿಯ ಸಾವಿರಾರು ಐಟೆಮ್ಸ್ ಇಲ್ಲಿ ಸಿಗುತ್ತವೆ. ಅವರೊಂದಿಗಿನ ಮಾತುಕಥೆಯ ಮುಖ್ಯಾಂಶ :
ನೀವು ನಿಮ್ಮ ಈ ಆನ್‌ಲೈನ್ ಪೋರ್ಟ್ ಶುರು ಮಾಡಲು ಏನಾದರೂ ವಿಶೇಷ ಶಿಕ್ಷಣ ಪಡೆದುಕೊಂಡಿರಾ?
ದೆಹಲಿ ಯೂನಿವರ್ಸಿಟಿಯಲ್ಲಿ ಕಾಮರ್ಸ್ ಪದವಿ ಪಡೆದ ನಂತರ, ನಾನು ನವದೆಹಲಿಯಿಂದ ರೀಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ PHd ಮಾಡಿದೆ. ನಂತರ ಹಾವರ್ರ್ಡ್ ಯೂನಿವರ್ಸಿಟಿಯಿಂದ ಸ್ಟ್ರಾಟೆಜೆಟಿಕ್ ಮ್ಯಾನೇಜ್‌ಮೆಂಟ್ ಇಂಟರ್ ನ್ಯಾಷನಲ್ ಬಿಸ್‌ನೆಸ್‌ನಲ್ಲಿ ಸ್ಪೆಷಲೈಸೇಷನ್ ಕೋರ್ಸ್ ಮಾಡಿಕೊಂಡೆ. ನಾನು ಒಬ್ಬ ವ್ಯವಹಾರಸ್ಥ ಕುಟುಂಬದ ಹೆಣ್ಣುಮಗಳಾದ್ದರಿಂದ, ಬಿಸ್‌ನೆಸ್‌ಗೆ ಸಂಬಂಧಿಸಿದ ವಿಷಯಗಳೆಲ್ಲ ನನಗೆ ಚೆನ್ನಾಗಿಯೇ ಗೊತ್ತಿತ್ತು.
ನಿಮ್ಮ ಬಾಲ್ಯದ ಕನಸೇನು?
ನಾನು ಮೊದಲಿನಿಂದಲೂ ನನ್ನದೇ ಸ್ವಂತ ಬಿಸ್‌ನೆಸ್ ನಡೆಸುವ ಉದ್ದೇಶ ಹೊಂದಿದ್ದೆ. ನನ್ನ ತಾಯಿಯೇ ನನಗೆ ರೋಲ್ ಮಾಡೆಲ್. ನಾನು ಅವರಂತೆಯೇ ಆಗಬಯಸಿದೆ. ಅವರು ತಮ್ಮ ಸಂಸ್ಥೆಗಾಗಿ ಅಹರ್ನಿಶಿ ದುಡಿಯುತ್ತಾರೆ, ಜೊತೆಗೆ ಕುಟುಂಬವನ್ನೂ ಅಚ್ಚುಕಟ್ಟಾಗಿ ನೋಡಿಕೊಳ್ತಾರೆ. ಹೀಗಾಗಿ ನಾನು ಅವರಂತೆಯೇ ವ್ಯವಸ್ಥಿತವಾಗಿ ಹಾಗೂ ಯಶಸ್ವಿ ಎನಿಸಲು ಬಯಸುತ್ತೇನೆ.
ಈ ಕ್ಷೇತ್ರಕ್ಕಾಗಿ ದುಡಿಯಬೇಕೆನ್ನುವ ಪ್ರೇರಣೆ ಹೇಗೆ?
ನಮ್ಮ ದೇಶದಲ್ಲಿ ಪಾರ್ಟಿ ಸಪ್ಲೈ ಮೆಟೀರಿಯಲ್ಸ್ ಬಿಲ್‌ಕುಲ್ ವ್ಯವಸ್ಥಿತವಾಗಿಲ್ಲ. ನೀವು ಇದಕ್ಕೆ ಸಂಬಂಧಿಸಿದ ಹಲವು ಸ್ಟೋರ್ಸ್ ನೋಡಿರಬಹುದು, ಅಲ್ಲಿ ಬಗೆಬಗೆಯ ಸಾಮಗ್ರಿ ದೊರಕಬಹುದು, ಆದರೆ ಒಂದು ಪಾರ್ಟಿಗೆ ಬೇಕಾದ ಎಲ್ಲ ವಸ್ತುಗಳೂ ಒಂದೇ ಕಡೆ ಸಿಗಲ್ಲ. ಮತ್ತೆ ನಮ್ಮ ದೇಶದಲ್ಲಿ ಪಾರ್ಟಿ ಸಪ್ಲೈ ಮೆಟೀರಿಯಲ್ಸ್ ನ ಯಾವ ದೊಡ್ಡ ಕಂಪನಿಯೂ ಇಲ್ಲ. ಮಾರುಕಟ್ಟೆಯಲ್ಲಿ ಎಲ್ಲ ಸಿಗುತ್ತದೆ, ಆದರೆ ಗುಣಮಟ್ಟ ಗ್ಯಾರಂಟಿ ಇಲ್ಲ. ಇದು ಬಹಳ ಹೆಚ್ಚಿನ ಅವಕಾಶಗಳಿರುವ ಕ್ಯಾಟೆಗರಿ, ಆದರೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೆಟೀರಿಯ್ಸ್‌ನತ್ತ ಮಾರುಕಟ್ಟೆಯಲ್ಲಿ ಅಂಥ ದೊಡ್ಡ ಹೆಸರಿನ ಕಂಪನಿ ಯಾದೂ ಇಲ್ಲ. ಇದರಲ್ಲಿ ನನಗೆ ಬಹಳ ಅವಕಾಶಗಳು ಕಂಡುಬಂದ. ಜನರಿಗೆ ತಮ್ಮ ಪಾರ್ಟಿ ಯಶಸ್ವಿಗೊಳಿಸಲು ಹಾಗೂ ಡಿಫರೆಂಟ್ ಆಗಿಸಲು ಎಷ್ಟೋ ಅಂಗಡಿ ಅಲೆದಾಡಬೇಕಿತ್ತು. ಇದೆಲ್ಲವನ್ನೂ ಯೋಚಿಸಿಯೇ ನಾನು ಈ ಫೀಲ್ಡ್ ಗೆ ಹೆಜ್ಜೆ ಇರಿಸಿದೆ. ಹೀಗಾಗಿ 2014ರಿಂದ ನನ್ನದೇ ಬ್ರ್ಯಾಂಡ್ ಶುರು ಮಾಡಿದೆ.