- ರಾಘವೇಂದ್ರ ಅಡಿಗ ಎಚ್ಚೆನ್.
ಪ್ರಮೋದ್ ಶೆಟ್ಟಿ , ಜಾನ್ ಕೈಪ್ಪಲ್ಲಿ ಹಾಗೂ ಅರ್ಚನಾ ಕೊಟ್ಟಿಗೆ ಅಭಿನಯದ "ಶೇಷ 2016" ಚಿತ್ರ ಬಿಡುಗಡೆ ಮುನ್ನ Amazon ಪ್ರೈಮ್ ಸಂಸ್ಥೆಯು ಓಟಿಟಿ ಗೆ ಒಳ್ಳೆ ಮೊತ್ತಕ್ಕೆ ಪಡೆದುಕೊಂಡಿದೆ.
ಬೆಳ್ಳಿ ಪರದೆ ಮೇಲೆ ಮತ್ತೊಮ್ಮೆ ಪೋಲಿಸ್ ಕಥಾನಕ ಚಿತ್ರ ಬರಲು ಸಜ್ಜಾಗಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರೀಕರಣವಾದ ಈ ಸಿನಿಮಾದಲ್ಲಿ ಪೊಲೀಸ್ ಇಲಾಖೆಯಲ್ಲಿರುವಂತಹ ಭ್ರಷ್ಟ ಹಾಗೂ ಪ್ರಾಮಾಣಿಕತೆಯ ಸಂಘರ್ಷದ ನಡುವೆ ಸಾಗುವ ಕುತೂಹಲಕಾರಿ ಕಥೆಯನ್ನು ಒಳಗೊಂಡಿದೆಯಂತೆ. ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್ ಮೂಲಕ ಉಮೇಶ್ ಗೌಡ , ಮಂಜುವಾಣಿ .ವಿ. ಎಸ್ ಹಾಗೂ ವೀಣಾ. ಎಸ್ ನಿರ್ಮಾಣದ ಈ ಚಿತ್ರವನ್ನು ಯುವ ಪ್ರತಿಭೆ ಪ್ರದೀಪ್ ಅರಸೀಕೆರೆ ನಿರ್ದೇಶನ ಮಾಡಿದ್ದಾರೆ. ಈಗ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಓ ಟಿಟಿ ಪ್ಲಾಟ್ಫಾರ್ಮ್ ರೈಟ್ ಪಡೆದಿರುವ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಲು ಇತ್ತೀಚಿಗೆ ಚಿತ್ರತಂಡ ಜಿಟಿ ಮಾಲ್ ನಲ್ಲಿರುವ ಉತ್ಸವ ಲೆಗಸಿಯಲ್ಲಿ ಪತ್ರಿಕಾಗೋಷ್ಠಿಯನ್ನು ಯೋಜನೆ ಮಾಡಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಎಸಿಪಿ ಗಣೇಶ್ ಹಾಗೂ ಮೋಹನ್ ಕುಮಾರ್ ದಾನಪ್ಪ ರವರು ಆಗಮಿಸಿ ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್ ಲಾಂಚ್ ಮಾಡಿದರು.

ತದನಂತರ ಎಸಿಪಿ ಗಣೇಶ್ ಮಾತನಾಡುತ್ತ ಸಾಮಾನ್ಯವಾಗಿ ಪೊಲೀಸ್ ಪಾತ್ರಗಳನ್ನು ನೆಗೆಟಿವ್ ಆಗಿ ತೋರಿಸುವುದೇ ಹೆಚ್ಚು , ಈ ಚಿತ್ರತಂಡ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಒಂದಷ್ಟು ಕಥೆಯ ಬಗ್ಗೆ ಮಾಹಿತಿ ಪಡೆದುಕೊಂಡೆ. ಪೊಲೀಸ್ ಇಲಾಖೆಯಲ್ಲಿ ಇರುವಂತಹ ಭ್ರಷ್ಟ ವ್ಯಕ್ತಿಗಳ ಜೊತೆಗೆ ಒಳ್ಳೆಯ ಅಧಿಕಾರಿಗಳ ಬಗ್ಗೆ ಕೂಡ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಜನರಲ್ಲಿ ಜಾಗೃತಿ ಮೂಡಿಸುವ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ಕೊಡುವ ಕೆಲಸ ಆಗಬೇಕು. ನಾನು ಮೂಲತಃ ಹೊಸಪೇಟೆಯವನು. ನಟ ಅಜಯ್ ರಾವ್ ನನ್ನ ಆತ್ಮೀಯ ಗೆಳೆಯ , ನಾನು ಅವನ ಸಿನಿಮಾ ಬದುಕಿನ ಬಗ್ಗೆ ಹತ್ತಿರದಿಂದ ನೋಡಿದ್ದೇನೆ. ಜನರನ್ನ ಸಿನಿಮಾ ಗೆ ಕರೆ ತರುವುದೇ ಬಹಳ ಕಷ್ಟವಾಗಿದೆ. ಕಲಾವಿದರಾಗಿ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ , ಅವರು ದೈವದಿಂದ ವರ ಪಡೆದ ಪುತ್ರರು. ಓದಿ ಕೆಲಸ ಗಿಟ್ಟಿಸಿಕೊಳ್ಳುವುದು ಆದರೆ ನಟನೆ ಮಾಡುವುದು ಬಹಳ ಕಷ್ಟ. ಎಲ್ಲರೂ ಮೊಬೈಲ್ ನಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಈಗ ಪರಸಿ ಕಡಿವಾಣದ ಬಗೆಯು ಚರ್ಚೆ ನಡೆಯುತ್ತಿದೆ , ಈ ಚಿತ್ರವನ್ನು ನೋಡಿ ಎಂದು ಹೇಳಿದರು.

ಮತ್ತೊಬ್ಬ ಅಧಿಕಾರಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮುಖ್ಯಸ್ಥ ಮೋಹನ್ ಕುಮಾರ್ ದಾನಪ್ಪ ಮಾತನಾಡುತ್ತಾ ನಾನು ಉತ್ತರ ಕರ್ನಾಟಕ ಭಾಗದವನು, ನಾನು ನನ್ನ ಫ್ಯಾಮಿಲಿ ಜೊತೆ ಹೋಗಿ ಕನ್ನಡ ಸಿನಿಮಾಗಳನ್ನ ನೋಡುತ್ತೇನೆ. ಕನ್ನಡದ ಉತ್ತಮ , ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.
ಇನ್ನು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಪ್ರಮೋದ್ ಶೆಟ್ಟಿ , ಜಾನ್ ಕೈಪ್ಪಲ್ಲಿ ಕಾಂಬಿನೇಷನ್ನ ಈ "ಶೇಷ 2016" ಚಿತ್ರದ ಓಟಿಟಿ ರೈಟ್ಸ್ ಅನ್ನ ಅಮೆಜಾನ್ ಪ್ರೈಮ್ ವೀಡಿಯೋಸ್ ಒಳ್ಳೆ ಮೊತ್ತಕ್ಕೆ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಡಾ. ರಾಜೀವ್ ಹಾಗೂ ಕ್ರಾಂತಿ ಪ್ರಸಾದ್ ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು , ನಂತರ ಪ್ರಸಾದ್ ಮಾತನಾಡುತ್ತಾ ಸರಿ ಸುಮಾರು ಈಗಾಗಲೇ 1880 ಚಿತ್ರಗಳ ಹಕ್ಕನ್ನು ಪಡೆದುಕೊಂಡಿದ್ದೇವೆ. ಉತ್ತಮ ಕ್ವಾಲಿಟಿ , ಸದಭಿ ರುಚಿಯ ಚಿತ್ರಗಳು ಬಂದರೆ ಖಂಡಿತ ನಾವು ಸಪೋರ್ಟ್ ಮಾಡುತ್ತೇವೆ. ಹಾಗಾಗಿಯೇ ನಾವು ಈಗ ಶೇಷ 2016 ಚಿತ್ರದ ರೈಟ್ಸ್ ಪಡೆಯುವ ಮೂಲಕ ಚಿತ್ರ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದರು. ಅದೇ ರೀತಿ ಡಾ. ರಾಜೀವ್ ಕನ್ನಡ ಬರೆದಿದ್ದರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾ ಒಳ್ಳೆಯ ಚಿತ್ರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತೆ ಎಂದರು.
ಈ ಚಿತ್ರದ ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ.





