ಈ ಟಿಪ್ಸ್ ಅನುಸರಿಸಿ, ಬಿರು ಬೇಸಿಗೆಯಲ್ಲೂ ನಿಮ್ಮ ಮೈಕಾಂತಿ ನಳನಳಿಸುವಂತೆ ಮಾಡಿ.....
ಬಿರು ಬೇಸಿಗೆಯ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಹೈಪರ್ ಪಿಗ್ಮೆಂಟೇಶನ್, ಸನ್ ಬರ್ನ್, ಆಯ್ಲಿ ಸ್ಕಿನ್, ಆ್ಯಕ್ನೆ, ಮೊಡವೆಗಳಂಥ ಎಷ್ಟೋ ಸಮಸ್ಯೆಗಳು ಹೆಂಗಸರನ್ನು ಸತಾಯಿಸುತ್ತವೆ. ಇವುಗಳಿಂದ ಪಾರಾಗಲು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುವ ತಲೆಬಾಲವಿಲ್ಲದ ಸಲಹೆ ಅನುಸರಿಸಲು ಹೋಗಿ ಮತ್ತಷ್ಟು ತೊಂದರೆಗೆ ಸಿಲುಕುತ್ತಾರೆ. ಹೀಗಾಗಿ ಇಲ್ಲಿ ತಿಳಿಸಲಾಗಿರುವ ಬೇಸಿಗೆಯ ಕೆಲವು ಚರ್ಮ ಸಮಸ್ಯೆಗಳ ಕಾರಣ ತಿಳಿಯಿರಿ, ಅವಕ್ಕೆ ಪರಿಹಾರವನ್ನೂ ಕಂಡುಕೊಳ್ಳಿ.
ಆಯ್ಲಿ ಸ್ಕಿನ್ : ಬೇಸಿಗೆಯಲ್ಲಿ ಬೆವರು ಹೆಚ್ಚು. ಇದರ ಜೊತೆ ಧೂಳು, ಮಣ್ಣು ಬೆರೆತು ಮುಖ ಅಂಟಂಟಾಗುತ್ತದೆ. ಇದರಿಂದ ಮುಖದ ರೋಮರಂಧ್ರಗಳು ಬ್ಲಾಕ್ ಆಗುತ್ತವೆ. ಇದರಿಂದ ಸ್ಕಿನ್ ಹೆಚ್ಚು ಆಯ್ಲಿ ಆಗುತ್ತದೆ. ಮುಖದಲ್ಲಿ ಸದಾ ಜಿಡ್ಡು ಜಿನುಗುಟ್ಟುತ್ತದೆ. ಇದು ನೋಡಲಿಕ್ಕೆ ಬಹಳ ಕೆಟ್ಟದಾಗಿರುತ್ತದೆ. ಜೊತೆಗೆ ಇದರಿಂದ ಅಲ್ಲಲ್ಲಿ ಗುಳ್ಳೆ, ದದ್ದುಗಳಾಗುತ್ತವೆ.
ಆಯ್ಲಿ ಚರ್ಮವನ್ನು ನಿಯಮಿತವಾಗಿ ಮಾಯಿಶ್ಚರೈಸಿಂಗ್‌ಹೈಡ್ರೇಟಿಂಗ್ ಮಾಡುತ್ತಿರಬೇಕು. ಹೀಗಾಗಿ ನಿಮ್ಮ ಚರ್ಮಕ್ಕೆ ನಿಯಮಿತವಾಗಿ ನಾನ್ ಆಯಿಲ್, ನಾನ್ ಕಾಮೆಡೋಜೆನಿಕ್, ವಾಟರ್ ಬೇಸ್ಡ್ ಮಾಯಿಶ್ಚರೈಸರ್ ಹಚ್ಚುತ್ತಿರಬೇಕು.
ಬೇಸಿಗೆಯಲ್ಲಿ ಹೆಂಗಸರು ಫೌಂಡೇಶನ್ ಗೆ ಬದಲಾಗಿ ಪೌಡರ್ ಬೇಸ್ಡ್ ಮೇಕಪ್ ಬಳಸಬೇಕು. ಆದರೆ ಎಷ್ಟೋ ಸಲ ಹೆಚ್ಚಿನ ಬೆವರು ಆಯಿಲ್ ಕಾರಣ ಮುಖದಲ್ಲಿ ಬ್ರೇಕ್ ಔಟ್ಸ್ ಎದ್ದು ಕಾಣುತ್ತವೆ. ಹೀಗಾಗಿ ಫೌಂಡೇಶನ್ ಯಾ ಪೌಡರ್ ಬೇಸ್ಡ್ ಮೇಕಪ್ ನ್ನು ಎಂದೂ ಮಾಡಿಕೊಳ್ಳಬೇಡಿ. ಯಾರಿಗೆ ಆಯ್ಲಿ ಸ್ಕಿನ್ ಇದೆಯೋ, ಅವರು ಜೆಲ್ ಬೇಸ್ಡ್ ಕ್ಲೆನ್ಸರ್ ಬಳಸಬೇಕು. ಇದರಿಂದ ಚರ್ಮ ಇರಿಟೇಶನ್, ಬರ್ನಿಂಗ್ ಹಾಗೂ ಸೀಬಂ ಸೆಕ್ರೀಶನ್ ನಿಂದ ಮುಕ್ತಿ ಸಿಗುತ್ತದೆ. ಅಸಲಿಗೆ, ಆಯಿಲ್‌ಆಲ್ಕೋಹಾಲ್ ಬೇಸ್ಡ್ ಕ್ಲೆನ್ಸರ್ ನಲ್ಲಿ ಫ್ಯಾಟಿ ಆ್ಯಸಿಡ್ ಇರುತ್ತದೆ. ಇದರಿಂದ ಚರ್ಮದ ಮೇಲೆ ಆಯಿಲ್ ನ ಸಮಸ್ಯೆ ಹಾಗೆಯೇ ಉಳಿದುಬಿಡುತ್ತದೆ.
ಬೇಸಿಗೆಯಲ್ಲಿ ಹೆಚ್ಚು ಹೆಚ್ಚಾಗಿ ಸೌತೇಕಾಯಿ ಸೇವಿಸಿ. ಇದರಲ್ಲಿ ಹೆಚ್ಚಿನ ಅಂಶ ನೀರು ತುಂಬಿರುತ್ತದೆ. ಜೊತೆಗೆ ಇದು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತುಂಬಿದೆ. ಇದು ಕೊಲೋಜೆನ್ ಬೂಸ್ಟ್ ಮಾಡಲು ಸಹಕಾರಿ. ಇದರ ಕೂಲಿಂಗ್ ಎಫೆಕ್ಟ್ ನಿಮ್ಮ ಚರ್ಮವನ್ನು ಆಂತರಿಕವಾಗಿ ಹೈಡ್ರೇಟ್ ಗೊಳಿಸುವಲ್ಲಿ ಸಹಕಾರಿ.
ಬ್ರೋಕ್ಲಿ, ಪಾಲಕ್ ಸೊಪ್ಪು, ಇನ್ನಿತರ ಹಸಿರು ತರಕಾರಿಗಳಲ್ಲಿ ಆಯಿಲ್ ಯಾ ಫ್ಯಾಟ್ ಇರುವುದಿಲ್ಲ. ಬೇಸಿಗೆಯಲ್ಲಿ ಆಯ್ಲಿ ಸ್ಕಿನ್ನಿನ ಹೆಂಗಸರು ತಮ್ಮ ಡಯೆಟ್ ನಲ್ಲಿ ಫ್ಯಾಟ್/ಆಯಿಲ್ ಅಂಶವನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು. ಇದರ ಬದಲಿಗೆ ಫೈಬರ್ ರಿಚ್ ಫುಡ್ ಬಳಸಬೇಕು.

ಸನ್ ಬರ್ನ್ ಸಮಸ್ಯೆ : ಬೇಸಿಗೆಯಲ್ಲಿ ವಿಪರೀತ ಬಿಸಿಲಿನ ಝಳದಿಂದ, ಚರ್ಮ ಬೇಗ ಮುದುಡಿ ಹೋಗುತ್ತದೆ, ಈ ಕಾರಣ ಮುಖದಲ್ಲಿ ಕೆಂಪು ದದ್ದು, ಪ್ಯಾಚೆಸ್, ಹೊಪ್ಪಳೆ ಏಳುತ್ತದೆ. ಇದರಿಂದ ನವೆ, ಕಡಿತ ಹೆಚ್ಚುತ್ತದೆ. ಇದರಿಂದ ಪಾರಾಗುವುದು ಹೇಗೆ?
ಆದಷ್ಟೂ ಬಿಸಿಲಿನಲ್ಲಿ ಸುತ್ತಾಡಬೇಡಿ. ನಿಮ್ಮ ಕೆಲಸಗಳನ್ನು ಬೆಳಗ್ಗೆ/ಸಂಜೆಗೆ ಪ್ಲಾನ್ ಮಾಡಿ.





