ಕ್ಲೆನ್ಸಿಂಗ್ ಮಾಡುವ ಸರಿಯಾದ ಕ್ರಮ ಯಾವುದು ಹಾಗೂ ಇದನ್ನು ಹಂತ ಹಂತವಾಗಿ ಹೇಗೆ ಮಾಡಬೇಕು....?
ಬೇಸಿಗೆಯ ದಿನಗಳಲ್ಲಿ ಚರ್ಮ ಸದಾ ನಳನಳಿಸುತ್ತಾ ಇರಬೇಕೆಂದರೆ ಹಾಗೂ ಕೊಳೆಯ ಡೀಪ್ ಕ್ಲೀನ್ ಮಾಡುವುದಕ್ಕಾಗಿ ಕ್ಲೆನ್ಸಿಂಗ್ ಅತ್ಯಗತ್ಯ. ಇದರಿಂದ 2 ದೊಡ್ಡ ಲಾಭಗಳಿವೆ. ಮೊದಲನೆಯದಾಗಿ, ಚರ್ಮದ ಡೀಪ್ ಕ್ಲೆನ್ಸಿಂಗ್ ಆಗಿಹೋಗುತ್ತದೆ, ಎರಡನೆಯದಾಗಿ, ಕ್ಲೆನ್ಸಿಂಗ್ ನಂತರ ಮೇಕಪ್ ಮತ್ತಷ್ಟು ಎದ್ದು ಕಾಣುತ್ತದೆ.
ಎಲ್ಲಕ್ಕೂ ಮೊದಲು ಕೈಗಳನ್ನು ನೀಟಾಗಿ ತೊಳೆದು ಒರೆಸಿಕೊಳ್ಳಿ. ಇದರಲ್ಲಿನ ಕೊಳೆ ಮುಖಕ್ಕೆ ತಗುಲಬಾರದು. ಅದರಿಂದ ಆ್ಯಕ್ನೆ ಸಮಸ್ಯೆ ತಪ್ಪಿದ್ದಲ್ಲ. ಜೆಂಟ್ ಫೇಸ್ ವಾಶ್ ನಿಂದ ಮುಖವನ್ನು ಶುಚಿಗೊಳಿಸಿ.
ಸ್ಕಿನ್ ಆಯ್ಲಿ ಆಗಿದ್ದರೆ, ಸ್ಯಾಲಿಸಿಲಿಕ್ ಆ್ಯಸಿಡ್ ಹಾಗೂ ನಿಯಾಸಿನಾ ಮೈಡ್ ಇರುವಂಥ ಫೇಸ್ ವಾಶ್ ನ್ನೇ ಆರಿಸಿಕೊಳ್ಳಿ. ಅಂದಹಾಗೆ ಚಾರ್ ಕೋಲ್ ಫೇಸ್ ವಾಶ್ ಸಹ ಇಲ್ಲಿ ಬಳಸಿಕೊಳ್ಳಬಹುದು.
ಡ್ರೈ ಸ್ಕಿನ್ ಇದ್ದರೆ ಕ್ರೀಮೀ ಫೇಸ್ ವಶ್ ಬಳಸಿರಿ. ಫೇಸ್ ವಾಶ್ ನಲ್ಲಿ ಗ್ಲಿಸರಿನ್, ಹ್ಯಾಲುರೋನಿಕ್ ಆ್ಯಸಿಡ್, ಸೆರಾಮೈಡ್ಸ್ ನಂಥ ಘಟಕಗಳು ಇದ್ದರೆ ಉತ್ತಮ.
ನಾರ್ಮಲ್ ಸ್ಕಿನ್ ಟೈಪ್ ಗಾಗಿ ಯಾವುದಾದರೂ ಮೈಲ್ಡ್ ಫೇಸ್ ವಾಶ್ ಬಳಸಿಕೊಳ್ಳಿ.
ನಂತರ ಕ್ಲೆನ್ಸರ್ ಯಾ ಮೈಸಿಲರ್ ವಾಟರ್ ಬಳಸಬೇಕು.
ನೀವು ಮೇಕಪ್ ಯಾ ಸನ್ ಸ್ಕ್ರೀನ್ ಬಳಸುವಿರಾದರೆ, ಅದಕ್ಕೆ ಮೊದಲು ಅಗತ್ಯವಾಗಿ ಕ್ಲೆನ್ಸರ್ ನಿಂದ ಡೀಪ್ ಕೆನ್ಸಿಂಗ್ ಮಾಡಲೇಬೇಕು.
ನಂತರ ಕಾಟನ್ ಪ್ಯಾಡ್ ಮೇಲೆ ಕ್ಲೆನ್ಸರ್ ಹಾಕಿಕೊಂಡು, ಇಡೀ ಮುಖವನ್ನು ಕೈಗಳಿಂದಲೇ ಲೈಟ್ ಆಗಿ ಕ್ಲೀನ್ ಮಾಡಿ.
ವಾರದಲ್ಲಿ 12 ಸಲ ಸ್ಕ್ರಬ್ ಬಳಸಿಕೊಳ್ಳಿ, ಹೆಚ್ಚಿಗೆ ಬೇಡ. ನಿಮಗೆ ಆ್ಯಕ್ನೆ, ಮೊಡವೆ ಇದ್ದರೆ, ಸ್ಕ್ರಬ್ ಬಳಕೆ ಬೇಡ.
ಕ್ಲೆನ್ಸಿಂಗ್ ನಂತರ ಮೇಕಪ್
ಮೇಕಪ್ ಸ್ಟಾರ್ಟ್ ಮಾಡುವ ಮೊದಲು ಟೋನರ್ ಹಚ್ಚಿಕೊಳ್ಳಿ. ಇದರ ಬಳಕೆಯಿಂದ ಪೋರ್ಸ್ ಟೈಟ್ ಆಗುತ್ತದೆ, ಮೇಕಪ್ ಸುದೀರ್ಘ ಬಾಳಿಕೆ ಬರುತ್ತದೆ.
ಕ್ಲೆನ್ಸಿಂಗ್ ನಂತರ ಚರ್ಮವನ್ನು ಅತ್ಯಗತ್ಯವಾಗಿ ಹೈಡ್ರೇಟ್ ಮಾಡಬೇಕು. ಹೀಗಾಗಿ ಲೈಟ್ ವೆಯ್ಟ್ ಮಾಯಿಶ್ಚರೈಸರ್ ತೀಡಿರಿ. ಆಗ ಚರ್ಮದ ಆರ್ದ್ರತೆ ಹಾಗೇ ಉಳಿಯುತ್ತದೆ.
ಮಾಯಿಶ್ಚರೈಸರ್ ಹೆಚ್ಚಿಗೆ ಬಳಸಬಾರದು, ಲೈಟ್ ಆಗಿರಲಿ. ಆಗ ಮೇಕಪ್ ಸ್ಮೂತ್ ಆಗಿರುತ್ತದೆ.
ಪ್ರೈಮರ್ ಆಪ್ಶನ್, ಆದರೆ ಇದನ್ನು ಬಳಸಿದರೆ ಉತ್ತಮ. ಇದನ್ನು ಬಳಸುವುದರಿಂದ ಮೇಕಪ್ ಈವೆನ್ ಆಗಿ ಕಾಣಿಸುತ್ತದೆ, ಪೋರ್ಸ್ ನೀಟಾಗಿ ಕವರ್ ಆಗಿಬಿಡುತ್ತದೆ.
- ಪೂಜಾ ಭಾರದ್ವಾಜ್





