ಅದ್ಭುತ ನಟನೆಯಿಂದ ಪ್ರೇಕ್ಷಕರಿಗೆ ಮೋಡಿ ಮಾಡಿದವರು

ಎಂಪವರ್‌ ಮೆಂಟ್‌ ಥ್ರೂ ಎಂಟರ್‌ ಟೇನ್ಮೆಂಟ್‌ ಐಕಾನ್‌ ಮಾರ್ಚ್‌ ರಂದು  ಗೃಹಶೋಭಾ ಇನ್‌ ಸ್ಪೈರಿಂಗ್‌ ಅವಾರ್ಡ್ಸ್ 2025ರ ಆಯೋಜನೆಯನ್ನು ಟ್ರಾಂಕೋರ್‌ ಪ್ಯಾಲೇಸ್‌, ನವದೆಹಲಿ, ಇಲ್ಲಿ ನಡೆಸಲಾಯಿತು. ಈ ಸಮಾರಂಭದಲ್ಲಿ ಸಮಾಜದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತಿರುವ ಪ್ರಭಾವಶಾಲಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಲಿವುಡ್‌ ನ  ಅದ್ಭುತ ನಟಿ, ತನ್ನನ್ನು ತಾನು ಎಲ್ಲಾ ಬಗೆಯ ಪಾತ್ರಗಳಲ್ಲೂ ಬಿಂಬಿಸಿಕೊಂಡಿರುವಂಥ ಶಬಾನಾ ಆಜ್ಮಿಯವರಿಗೆ, ಎಂಟರ್ ಟೇನ್ಮೆಂಟ್‌ ಐಕಾನ್‌ ವಿಭಾಗಕ್ಕಾಗಿ ಸನ್ಮಾನಿಸಲಾಯಿತು.

ಶಬಾನಾ ಬಾಲಿವುಡ್‌ ಮಾತ್ರವಲ್ಲದೆ, ಅಮೆರಿಕಾದ ಹಾಲಿವುಡ್‌ ಚಿತ್ರಗಳಲ್ಲೂ ಮಿಂಚಿದ್ದಾರೆ! ಇಂದಿಗೂ ಈಕೆ ಸಿನಿಮಾಗಳಲ್ಲಿ ಸಕ್ರಿಯರು. ಒಬ್ಬ ನಟಿ ಮಾತ್ರವಲ್ಲದೆ, ಈಕೆ ಅನೇಕ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಕೆ ಹಿಂದಿಯ ಪ್ರಸಿದ್ಧ ಶಾಯರ್‌, ಕವಿ ಆದ ಕ್ಯಾಫೇ ಆಜ್ಮಿಯವರ ಮಗಳು. ಹಿಂದಿಯ ಪ್ರಸಿದ್ಧ ಲೇಖಕ, ಸಂಗೀತಗಾರ ಜಾವೇದ್‌ ಅಖ್ತರ್‌ ರ ಪತ್ನಿ. ಇವರ ಅತ್ಯುತ್ತಮ ನಟನೆಯಿಂದಾಗಿ, ತಮ್ಮ ಕೆರಿಯರ್‌ ನ ಬೆಳವಣಿಗಾಗಿ ಎಂದೂ ತಂದೆ, ಪತಿಯ ಸಹಾಯ ಬೇಡಲಿಲ್ಲ.

ಮೊದಲ ಚಿತ್ರದಿಂದಲೇ ಸ್ಟಾರ್‌ ಹೈದರಾಬಾದ್‌ ಈಕೆಯ ತವರು. ತಮ್ಮ ಫಿಲ್ಮಿ ಕೆರಿಯರ್‌ ಆರಂಭಿಸಿದ್ದು 1973ರಲ್ಲಿ ಶ್ಯಾಂ ಬೆನೆಗಲ್ ರ `ಅಂಕುರ್‌’ ಚಿತ್ರದಿಂದ. ಈ ಚಿತ್ರದಿಂದ ಈಕೆ ವಿಮರ್ಶಕರ ಜೊತೆಗೆ ಪ್ರೇಕ್ಷಕರಿಗೂ ಬಹಳ ಅಚ್ಚುಮೆಚ್ಚಿನವರಾದರು. ಈ ಚಿತ್ರ ಬಾಕ್ಸ್ ಆಫೀಸ್‌ ನಲ್ಲೂ ಗೆದ್ದಿತು! ತನ್ನ ಮೊದಲ ಚಿತ್ರದ ನಟನೆಯಿಂದಲೇ ಈಕೆಗೆ ಶ್ರೇಷ್ಠ ನಟಿಯ ರಾಷ್ಟ್ರಪ್ರಶಸ್ತಿ ದೊರಕಿತು.

ನಟನೆಗಾಗಿ ಒಂದಲ್ಲ 5 ಸಲ ರಾಷ್ಟ್ರಪ್ರಶಸ್ತಿ ಪಡೆದಂಥ ಪ್ರತಿಭಾನ್ವಿತ ನಟಿ ಈಕೆ. ಆ ಚಿತ್ರಗಳೆಂದರೆ, `ಅಂಕುರ್‌, ಅರ್ಥ್‌, ಖಂಡ್‌ಹರ್‌, ಪಾರ್‌, ಗಾಡ್‌ ಮದರ್‌.’

ಕಳೆದ ಹಲವು ದಶಕಗಳಿಂದ ಶಬಾನಾ ತಮ್ಮ ಅದ್ಭುತ ನಟನೆಯಿಂದ ಭಾರತೀಯ ಚಿತ್ರಗಳಲ್ಲಿ ರಾರಾಜಿಸುತ್ತಿದ್ದಾರೆ. ಹಿಂದಿ, ಬಂಗಾಳಿ, ಆಂಗ್ಲ ಚಿತ್ರಗಳೂ ಸೇರಿದಂತೆ ಸುಮಾರು 140 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತಮ್ಮ ಕೆರಿಯರ್‌ ನ ಪೀಕ್‌ ನಲ್ಲಿ ಲೆಜೆಂಡರಿ ಡೈರೆಕ್ಟರ್‌ ಆದ ಶ್ಯಾಂ ಬೆನೆಗಲ್, ಸತ್ಯಜಿತ್‌ ರೇ, ಅಪರ್ಣಾ ಸೇನ್‌ ಮುಂತಾದವರ ಜೊತೆ ದುಡಿದಿದ್ದಾರೆ. ನಸೀರುದ್ದೀನ್‌ ಶಾಹ್‌, ಅಮಿತಾಭ್ ‌ಬಚ್ಚನ್‌, ಓಂಪುರಿ ಮುಂತಾದ ಘಟಾನುಘಟಿಗಳೊಂದಿಗೆ ಹಿಟ್‌ ಚಿತ್ರ ನೀಡಿದ್ದಾರೆ. ಇತ್ತಿಚೆಗೆ ಈಕೆ ನೆಟ್‌ ಫ್ಲಿಕ್ಸ್ ನ `ಡಬ್ಬಾ ಕಾರ್ಟೆಲ್‌’ ಡ್ರಾಮಾ ಸೀರೀಸ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೇಮ ವಿವಾಹಕ್ಕೆ ನಕಾರ ತೋರಿದ ಪೇರೆಂಟ್ಸ್ 1984ರ ಡಿಸೆಂಬರ್‌ ರಂದು ಈಕೆ ಹಿಂದಿಯ ಪ್ರಸಿದ್ಧ ಗೀತಕಾರ, ಕವಿ, ಚಿತ್ರಕಥಾ ಲೇಖಕ ಜಾವೇದ್‌ ಅಖ್ತರ್‌ ಜೊತೆ ಮದುವೆ ಆದರು. ಅವರು ಈಕೆಯ ತಂದೆ ಕ್ಯಾಫಿ ಆಜ್ಮಿಯಿಂದ ಸಲಹೆ ಪಡೆಯಲು ಬರುತ್ತಿದ್ದರು. ಈ ನಡುವೆ ಇವರಿಬ್ಬರ ಸ್ನೇಹ ಬೆಳೆದು, ಪ್ರೇಮವಾಯ್ತು. ಆದರೆ ಈಕೆಯ ಹೆತ್ತವರಿಗೆ ಈ ಪ್ರೇಮ ವಿವಾಹದಲ್ಲಿ ಒಪ್ಪಿಗೆ ಇರಲಿಲ್ಲ. ಏಕೆಂದರ ಜಾವೇದ್‌ ವಿವಾಹಿತ. ನಂತರ ಆತ ತನ್ನ ಮೊದಲ ಪತ್ನಿ ಹನೀ ಇರಾನಿಯಿಂದ ವಿಚ್ಛೇದನ ಪಡೆದರು. ಆ ನಂತರವೇ ಇವರ ಮದುವೆ ಸಲೀಸಾಗಿ ನಡೆದಿದ್ದು, ವಿಷಾದ ಎಂದರೆ ಇವರಿಬ್ಬರಿಗೂ ಮಕ್ಕಳಾಗಲಿಲ್ಲ.

ಈಕೆಯ ಅದ್ಭುತ ಪ್ರತಿಭೆ, ಮ್ಯಾನರಿಸಂ ಬೇರೆ ಕಲಾವಿದರಿಂದ ಇವರನ್ನು ವಿಭಿನ್ನವಾಗಿಸುತ್ತದೆ. ತನ್ನ ಖಾಸಗಿ ಜೀವನದಲ್ಲಿ ಆಕೆ ಎಲ್ಲಾ ನಿರ್ಧಾರಗಳನ್ನೂ ಸ್ವತಂತ್ರವಾಗಿ ಕೈಗೊಳ್ಳುತ್ತಾರೆ. ತಾನೊಬ್ಬ ನಿರ್ಭಯ ಸ್ವಭಾವದ ಮಹಿಳೆ ಎಂದು ಸಮಾಜಕ್ಕೆ ಸಾಬೀತುಪಡಿಸಿದ್ದಾರೆ. ಯಾವ ಹೆಣ್ಣೇ ಆಗಲಿ, ತನ್ನ ಮನದ ಅಭಿಪ್ರಾಯ ಹೇಳಿಕೊಳ್ಳಲು ಹಿಂಜರಿಯಬಾರದು ಎಂದು ಸಮಾಜಕ್ಕೆ ಪ್ರೇರಣೆ ನೀಡಿದ್ದಾರೆ. ಮುಂದೆ ಪರಿಸ್ಥಿತಿ ಏನೇ ಇರಲಿ, ತಲೆ ಬಾಗಬಾರದು ಎನ್ನುತ್ತಾರೆ. ಆನ್‌ ಸ್ಕ್ರೀನ್‌ ಆಫ್‌ ಸ್ಕ್ರೀನ್‌ ಎರಡೂ ಕಡೆ ಇವರು ತಮ್ಮ ಮನದ ಇಂಗಿತವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಸರಿ ಅರ್ಥದಲ್ಲಿ ಶಬಾನಾ ಇಂದಿನ ಯುವತಿಯರಿಗೆ ಇನ್ ಸ್ಪಿರೇಶನ್‌ ಆಗಿದ್ದಾರೆ.

– ಕುಮ್ ಕುಮ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ