ಕಥೆ - ಸುಮಾ ವೀಣಾ

ದಿನನಿತ್ಯದ ಜಂಜಾಟದ ಬದುಕಿನ ಮಧ್ಯೆ ಮಹತಿ ಮುಖ್ಯ ಬದಲಾವಣೆ ಹೊಂದಲು ಬಯಸಿದಳು. ಅವಳ ಯಾಂತ್ರಿಕ ಜೀವನದ ಮಧ್ಯೆ ಅವಳು ಕೇಳಿದಂಥ ಚೇಂಜ್‌ ಸಿಕ್ಕಿತೇ......?

``ರಿಜಿಸ್ಟ್ರಡ್‌ ಪೋಸ್ಟ್..... ತೂಕ ಮಾಡಿ ಎಷ್ಟು ಇದೆ ಹೇಳಿ ಮೇಡಮ್!'' ಎಂದ ವ್ಯಕ್ತಿಯ ಕೈಯಲ್ಲಿದ್ದ 50ರ ನೋಟನ್ನು ಕಂಡು ಮಹತಿ, ``24 ರೂಪಾಯಿ ಆಗುತ್ತೆ ಚೇಂಜ್‌ ಬೇಕು. ಚೇಂಜ್‌ ಇಲ್ವಲ್ಲ ಫಿಪ್ಟಿಗೆ ಬೆಳಗ್ಗೆನೆ ಹೀಗಾದ್ರೆ ಹೇಗೆ ಸರ್‌......? ಚೇಂಜ್‌ ಬೇಕು ಸರ್‌....! ಚೇಂಜ್‌....'' ಎನ್ನುತ್ತಲೇ ಡ್ರಾಯರ್‌ ನಲ್ಲಿದ್ದ ಪುಡಿ ಚೇಂಜನ್ನೆಲ್ಲಾ ಒಟ್ಟು ಮಾಡಿದ ಮಹತಿ ಇಪ್ಪತ್ತಾರು ರೂ.ಗಳನ್ನು ರಿಸಿಪ್ಟ್ ಜೊತೆ ಕೊಟ್ಟು ಆ ವ್ಯಕ್ತಿಯನ್ನು ಕಳುಹಿಸಿದಳು.

ಚೇಂಜ್‌ ಚೇಂಜ್‌ ಎನ್ನುತ್ತಲೇ ಮಹತಿಯ ಮನಸ್ಸಿನಲ್ಲಿ, `ಈ ಚೇಂಜ್‌ ಏನೋ ಸಿಗುತ್ತೆ. ಬದುಕಿಗೂ ಚೇಂಜ್‌ ಬೇಕಲ್ವಾ...' ಎಂಬ ಆಲೋಚನೆ ಬಂದದ್ದೇ ತಡ ಸದಾ ಕೆಲಸವಿಲ್ಲದೆ ಕುಳಿತು ತಿನ್ನು, ಕಿರಿಕಿರಿ ಮಾಡುವ ಗಂಡ. ಅವನಿಗೆ ನಾನು ಬೇಕಾಗಿಲ್ಲ. ನಮ್ಮಿಬ್ಬರ ನಡುವೆ ಇನ್ಯಾರೋ ಇದ್ದಾರೆ ಸಂಜೆ ಹೋಗುವಾಗ ರೂಮ್ ಅಸಹಜವಾಗಿರುತ್ತದೆ ಏನೋ ಅಸಹ್ಯ ಎನಿಸುತ್ತದೆ. ಏನು ಮಾಡೋದು...? ಬಾಯಿ ಬಿಟ್ರೆ ರಬ್ಬಿಶ್‌ ಟಾಕ್‌ ಅವನದ್ದು. ಸರ್ಕಾರಿ ಹುದ್ದೆಯಲ್ಲಿದ್ದಿದ್ದರೆ ರಿಟೈರ್ಡ್‌ ಮೆಂಟ್‌ ವಯಸ್ಸು ಅವನದ್ದು. ಅಂಥ ಮಗನಿಗೂ ಚಾಡಿ ಚುಚ್ಚುವ ಅತ್ತೆಯ ಕಟು ಮಾತುಗಳು ನೆನಪಿಗೆ ಬಂದವು.

`ಹೇಗೂ ಇಲ್ಲಿ ದಿನವೆಲ್ಲಾ ಕೆಲಸ. ಮರುದಿನ ಬೆಳಗ್ಗೆ ಬೇರೆ ಟೇಬಲ್ ಗೆ ಕಳುಹಿಸುತ್ತಾರೆ. ಅಲ್ಲಿ ಬೇರೆ ಕೆಲಸ. ಸಧ್ಯ ಆಫೀಸ್‌ ನಲ್ಲಿ ಚೇಂಜ್‌ ಇದೆ ಬದುಕಲ್ಲಿ ಏಕಿಲ್ಲ....' ಎಂದುಕೊಂಡಳು, `ಅಚ್ಚಚ್ಚೋ ಇಲ್ಲಿ ಚೇಂಜ್‌ ಇದೆಯಲ್ಲ.....' ಎನ್ನುವಷ್ಟರಲ್ಲಿ ಇನ್ನೊಬ್ಬರು ಬಂದು, ``ಸ್ಪೀಡ್‌ ಪೋಸ್ಟ್.... ಎಷ್ಟಾಗುತ್ತೆ...? ಯಾವಾಗ ತಲುಪುತ್ತೇ.....? ಮಧ್ನಾಹ್ನವೇ ಮೂವ್ ‌ಆಗುತ್ತಾ.....?'' ಎಂದು ಪ್ರಶ್ನೆಗಳನ್ನು ಹಾಕಿದ ವ್ಯಕ್ತಿ ನೂರರ ಗರಿ ಗರಿ ನೋಟನ್ನು ಕೌಂಟರ್‌ ನೊಳಕ್ಕೆ ತೂರಿದ.

``ಸರ್‌.... ಎಲ್ಲಿಂದ ಚೇಂಜ್‌ ತರೋಣ.....? ನೀವೇ ತರಬೇಕು. ಬೆಳಗ್ಗೆನೇ ಹೀಗಾದ್ರೆ ಹೇಗೆ....?'' ಎಂದಳು ಮಹತಿ.

``ಸಾರಿ ಮೇಡಂ.... ಚೇಂಜ್‌ ಇದೆ. ಎಷ್ಟು ಹೇಳಿ....'' ಎಂದು ಅಗತ್ಯವಿದ್ದ ಚೇಂಜ್‌ ಕೊಟ್ಟ.

ಮಹತಿ, ``ವಾವ್‌....  ಸರ್‌ ಚೇಂಜ್‌ ಕೇಳಿದ ಕೂಡಲೇ ಕೊಟ್ರಿ. ಹೀಗೆ ನಾವ್ ಕೇಳಿದಾಗ ಚೇಂಜ್‌ ಸಿಕ್ಕಿದ್ರೆ ಚೆನ್ನಾಗಿರುತ್ತೆ ಅಲ್ವಾ....? ಎಂದಳು.

``ಮೇಡಂ ಈ ಚೇಂಜ್‌ ಹೇಗೂ ಸಿಗುತ್ತೆ.... ಬದುಕಲ್ಲಿ ಚೇಂಜಸ್‌ ಅಷ್ಟು ಸುಲಭ ಅಲ್ಲ,'' ಎಂದ.

`ಇವನದ್ದೂ ನನ್ನದೆ ಚಿಂತನಾ ಕ್ರಮ...' ಎಂದುಕೊಳ್ಳುತ್ತಾ, ``ಹೌದು ಸರ್‌, ಏನ್‌ ಮಾಡೋಣ ಹೇಳಿ....? ನಿಮಗೂ ಚೇಂಜ್ ಬೇಕಾ ಬದುಕಲ್ಲಿ....?''

ಅವನು, ``ಸಿಗುತ್ತಾ.....?'' ಎಂದು ಕೆಲಸವಾಗುತ್ತಿದ್ದಂತೆ ಅಲ್ಲಿಂದ ಹೊರಟ ಅವನನ್ನು ಮಹತಿ ಗೇಟ್ ಧಾಟಿ ಮರೆಯಾಗುವವರೆಗೂ ನೋಡಿದಳು.

ಮಹತಿಗೆ ಮತ್ತದೆ ಕೆಲಸ. ಮನೆಯಲ್ಲಿಯೂ ದಿನ ಅದೇ ಗೋಳು. ಮಗ ದೂರದ ನವೋದಯದಲ್ಲಿ ಹನ್ನೆರಡರಲ್ಲಿ ಓದುತ್ತಿದ್ದ. ಅವನ ಜೊತೆ ಮಾತುಕತೆ ಅಷ್ಟಕ್ಕೆ ತೃಪ್ತಿಪಡುತ್ತಾ ದಿನಗಳನ್ನು ದೂಡುತ್ತಿದ್ದಳು. ಹೀಗೆ ಬಿಲ್ಲಿಂಗ್‌ ಕೌಂಟರ್‌ ನಲ್ಲಿ ಕೆಲಸ ಮಾಡುವಾಗಲೇ ಚೇಂಜ್‌ ಬೇಕು ಎಂದಿದ್ದ ಅದೇ ವ್ಯಕ್ತಿ ಬಂದು ಮತ್ತೆ ಪೋಸ್ಟ್ ಕವರ್‌ ಕೊಟ್ಟು, ``ಎಷ್ಟು....?'' ಎಂದಾಗ ಮಹತಿ ಕತ್ತೆತ್ತಿ ನೋಡಿ, ಹಿಂದೆ ಅವನು ಬಂದಿದ್ದು ನೆನಪಾಗಿ, ``ಸರ್‌ ಚೇಂಜ್‌ ಕೊಡಿ.....'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ