ಪ್ಲಾಸ್ಟಿಕ್‌ ಸರ್ಜರಿ, ಬೋಟಾಕ್ಸ್ ಯಾ ಫಿಲ್ಲರ್ಸ್‌ ಗಳ ಕಾಟವಿಲ್ಲದೆ ಚಿರಯೌವನ ಹೊಂದಲು ಬಯಸುವಿರಾ….?

ಇತ್ತೀಚೆಗೆ ಎಲ್ಲಿ ನೋಡಿದರೂ ಆ್ಯಂಟಿ ಏಜಿಂಗ್‌ ಟ್ರೀಟ್‌ ಮೆಂಟ್ಸ್ ನ ಡಿಮ್ಯಾಂಡ್‌ ದಿನೇದಿನೇ ಹೆಚ್ಚುತ್ತೀ ಇದೆ. ಜನರು ಬೋಟಾಕ್ಸ್, ಫಿಲ್ಲರ್ಸ್‌, ಪ್ಲಾಸ್ಟಿಕ್‌ ಸರ್ಜರಿಗಳ ನೆರವಿನಿಂದ ತಮ್ಮ ಅಕಾಲ ವೃದ್ಧಾಪ್ಯ ತಡೆಯ ಬಯಸುತ್ತಾರೆ. ಆದರೆ ಇವು ಬಲು ದುಬಾರಿ! ಜೊತೆಗೆ ಚಿಕಿತ್ಸೆಯ ನೆಪದಲ್ಲಿ ನೋವನ್ನೂ ಸಹಿಸಬೇಕು. ಚರ್ಮಕ್ಕೆ ಥ್ರೆಡ್‌ ಅಳವಡಿಸಿ ಲಿಫ್ಟ್ ಮಾಡಿಸುವುದು ಸಹ ಒಂದು ಜನಪ್ರಿಯ ವಿಧಾನ, ಆದರೆ ಇದು ಸಹ ಬಲು ತ್ರಾಸದಾಯಕ.

ಹಾಗಾದರೆ ನೀವು ಸರ್ಜರಿ ಯಾ ನೋವುಗಳ ಕಾಟವಿಲ್ಲದೆ, ಮುಖದಲ್ಲಿನ ಸುಕ್ಕು, ಫೈನಲ್ ಲೈನ್ಸ್ ನಿವಾರಿಸಿಕೊಳ್ಳಲು ಬಯಸುವಿರಾ? ಇದಕ್ಕೆ `ಕಾಪರ್‌ ಪೆಪ್ಟೈಡ್‌ ಥ್ರೆಡ್‌ ಲಿಫ್ಟ್ ಫೇಶಿಯಲ್’ ಒಂದು ಅತ್ಯಾಧುನಿಕ, ನೋವುರಹಿತ ವಿಧಾನ ಎನ್ನಬಹುದು.

ಇದೊಂದು ಇನೋವೇಟಿವ್‌, ನಾನ್‌ ಸರ್ಜಿಕಲ್ ಟ್ರೀಟ್‌ ಮೆಂಟ್‌ ಆಗಿದ್ದು, ಚರ್ಮಕ್ಕೆ ಯಾವುದೇ ನೋವು ನೀಡದೆ ಲಿಫ್ಟ್ ಮಾಡಿ, ಜೋತುಬೀಳದಂತೆ ಅದನ್ನು ಟೈಟ್‌ ಗೊಳಿಸುತ್ತದೆ. ಈ ಫೇಶಿಯಲ್ ನಲ್ಲಿ ಕೊಲೋಜೆನ್‌ ಥ್ರೆಡ್ಸ್ ಹಾಗೂ ಕಾಪರ್‌ ಪೆಪ್ಟೈಡ್‌ ಸೀರಮ್ ನ್ನು ಬಳಸಲಾಗುತ್ತದೆ. ಇದು ನೈಸರ್ಗಿಕ ವಿಧಾನದಿಂದ ಚರ್ಮವನ್ನು ತನ್ನ ಚಿರಯೌವನ ಉಳಿಸಿಕೊಳ್ಳುವಂತೆ ಮಾಡಿ, ಅದಕ್ಕೆ ಹೆಚ್ಚಿನ ಗ್ಲೋ ನೀಡುತ್ತದೆ.

ಇದನ್ನು ತಿಂಗಳಿಗೆ ಒಮ್ಮೆ ಮಾಡಿಸಿ, ಪ್ರತಿ ವಾರ ಕೊಲೋಜೆನ್‌ ಥ್ರೆಡ್ಸ್ ಹಾಕಿಸಿಕೊಂಡರೆ, ನಿಮ್ಮ ಚರ್ಮ ಹಲವು ವರ್ಷಗಳ ಕಾಲ ಯಂಗ್‌ ಆಗಿಯೇ ಉಳಿಯುತ್ತದೆ.

ಇದನ್ನು ಮಾಡಿಸುವುದು ಹೇಗೆ? : ಎಲ್ಲಕ್ಕೂ ಮೊದಲು ಚರ್ಮವನ್ನು ಡೀಪ್‌ ಕ್ಲೆನ್ಸಿಂಗ್‌ ಮಾಡಲಾಗುತ್ತದೆ. ಆಗ ಮುಖದಲ್ಲಿನ ಡಸ್ಟ್, ಆಯಿಲ್‌, ಡೆಡ್‌ ಸ್ಕಿನ್‌ ದೂರವಾಗುತ್ತದೆ. ನಂತರ ಜೆಂಟಲ್ ಎಕ್ಸ್ ಫಾಲಿಯೇಶನ್‌ (ಸ್ಕ್ರಬಿಂಗ್‌) ಮಾಡುತ್ತಾರೆ. ಆಗ ಚರ್ಮ ಚಿಕಿತ್ಸೆಗೆ ಸಿದ್ಧವಾಗುತ್ತದೆ. ಇದಾದ ನಂತರ ಚರ್ಮಕ್ಕೆ ಲೇಸರ್‌ ಒದಗಿಸಲಾಗುತ್ತದೆ. ಇದರಿಂದ ಚರ್ಮದ ಜೀವಕೋಶಗಳು ಆ್ಯಕ್ಟಿವೇಟ್‌ ಆಗುತ್ತವೆ, ಕೊಲೋಜೆನ್‌ ಪ್ರೊಡಕ್ಷನ್‌ ಹೆಚ್ಚುತ್ತದೆ. ಕಂಗಳ ಏರಿಯಾದಲ್ಲಿ ಬಯೋಪ್ಟ್ರಾನಿನ ಯೆಲ್ಲೋ ವೈಟ್ ಒದಗಿಸುತ್ತಾರೆ. ಆಗ ಡಾರ್ಕಲ್ ಸರ್ಕಲ್ ಫೈನ್‌ ಲೈನ್ಸ್ ತಂತಾನೇ ಕಡಿಮೆ ಆಗುತ್ತದೆ.

ನಂತರ ಚರ್ಮದ ಫೈನ್ ಲೈನ್ಸ್ ಸುಕ್ಕುಗಳ ಮೇಲೆ ಕೊಲೋಜೆನ್ನಿನ ಸ್ಪೆಷಲ್ ಥ್ರೆಡ್ಸ್ ಅಳವಡಿಸುತ್ತಾರೆ. ಆ ನಂತರ, ಅದರ ಮೇಲೆ ಕಾಪರ್‌ ಪೆಪ್ಟೈಡ್‌ ಸೀರಮ್ ಹಾಕಿ ಸೆಟ್‌ ಮಾಡಿಸುತ್ತಾರೆ. ಇದು ಥ್ರೆಡ್ಸ್ ನ್ನು ಬೇಗ ಬೇಗ ಚರ್ಮದಲ್ಲಿ ವಿಲೀನಗೊಳ್ಳಲು ಸಹಕರಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಈ ಥ್ರೆಡ್ಸ್ ಪೂರ್ತಿಯಾಗಿ ಚರ್ಮದಲ್ಲಿ ವಿಲೀನಗೊಂಡು ಒಂದಾಗುತ್ತದೆ.

ಆಮೇಲೆ ಅಲ್ಟ್ರಾಸಾನಿಕ್‌ ಮೆಶೀನ್‌ ಬಳಸುತ್ತಾರೆ. ಅದರಿಂದ ಕಾಪರ್‌ ಪೆಪ್ಟೈಡ್‌ಕೊಲೋಜೆನ್‌, ಚರ್ಮದ ಡೀಪ್‌ ಲೇಯರ್ಸ್‌ ನಲ್ಲಿ ಹುದುಗಿ ಹೋಗುತ್ತದೆ. ಇದಾದ ನಂತರ ಲೈಟ್‌ ಆಗಿ ಮಸಾಜ್‌ ಮಾಡುತ್ತಾರೆ. ಇದರಿಂದ ಸ್ಕಿನ್‌ ರಿಲ್ಯಾಕ್ಸ್ ಆಗುತ್ತದೆ ಹಾಗೂ ರಕ್ತ ಸಂಚಾರ ವರ್ಧಿಸುತ್ತದೆ. ಕೊನೆಯಲ್ಲಿ ಚರ್ಮವನ್ನು ಹೈಡ್ರೇಟ್‌ ಗೊಳಿಸುವುದಕ್ಕಾಗಿ, ಕೊಲೋಜೆನ್‌ ಶೀಟ್‌ ಮಾಸ್ಕ್ ಯಾ ರಬ್ಬರ್ ಮಾಸ್ಕ್ ಹಾಕುತ್ತಾರೆ. ಇದು ಚರ್ಮಕ್ಕೆ ತೀವ್ರತರ ಪೋಷಣೆ ಒದಗಿಸುತ್ತದೆ, ಇನೆಸ್ಟೆಂಟ್‌ ಗ್ಲೋ ನೀಡುತ್ತದೆ.

ಇದು ಚರ್ಮಕ್ಕೆ ಹೇಗೆ ಲಾಭಕರ? : ಕಾಪರ್‌ ಪೆಪ್ಟೈಡ್‌ ಒಂದು ಪವರ್‌ ಫುಲ್ ಆ್ಯಂಟಿ ಏಜಿಂಗ್‌ ಘಟಕವಾಗಿದ್ದು, ಅದು ಚರ್ಮದ ನ್ಯಾಚುರಲ್ ಹೀಲಿಂಗ್‌ ಪ್ರೋಸೆಸ್‌ ನ್ನು ಬೂಸ್ಟ್ ಮಾಡುತ್ತದೆ. ಕೊಲೋಜೆನ್‌ಎಲಾಸ್ಟಿನ್‌ ಪ್ರೊಡೆಕ್ಷನ್‌ ನ್ನು ಇದು ಹೆಚ್ಚಿಸುತ್ತದೆ. ಇದರಿಂದ ಚರ್ಮ ಹೆಚ್ಚು ಟೈಟ್‌ಸ್ಮೂಥ್‌ ಆಗುತ್ತದೆ.

ಇದು ಚರ್ಮದ ಸೆಲ್ ‌ರೀಜನರೇಶನ್‌ ಗೆ ಹೆಚ್ಚು ಸಹಾಯ ಮಾಡುತ್ತದೆ, ಇದರಿಂದ ಸುಕ್ಕುಗಳು ಎಷ್ಟೋ ಕಡಿಮೆ ಆಗುತ್ತವೆ. ಇದು ಚರ್ಮವನ್ನು ಆಳವಾಗಿ ಹೈಡ್ರೈಟ್‌ ಮಾಡುತ್ತದೆ, ಇದರಿಂದ ಸ್ಕಿನ್‌ ಹೆಲ್ದಿ ಗ್ಲೋಯಿಂಗ್‌ ಆಗುತ್ತದೆ. ಇದು ಸಹಜವಾಗಿಯೇ ಇನ್‌ಫ್ಲಮೇಶನ್‌ರೆಡ್‌ ನೆಸ್‌ ನ್ನು ಕಡಿಮೆ ಮಾಡುತ್ತದೆ. ಇದರಿಂದ ಸೆನ್ಸಿಟಿವ್ ಸ್ಕಿನ್ನಿನವರಿಗೂ ಹೆಚ್ಚಿನ ಲಾಭವಿದೆ.

ಮನೆಯಲ್ಲೇ ಕಾಪರ್‌ ಪೆಪ್ಟೈಡ್‌ ನ್ನು ಬಳಸುವುದು ಹೇಗೆ? : ನೀವು ಈ ಫೇಶಿಯಲ್ ನ ರಿಸ್ಟ್‌ ದೀರ್ಘ ಬಾಳಿಕೆ ಬರಬೇಕೆಂದು ಬಯಸಿದರೆ, ಇದನ್ನು ಮನೆಯಲ್ಲಿ ನೀವೇ ಮಾಡಿಕೊಳ್ಳುವುದೇ ಸೂಕ್ತ ಆಯ್ಕೆ ಆಗಲಿದೆ. ಪ್ರತಿ ರಾತ್ರಿ ಮಲಗುವ ಮುನ್ನ, ನಿಮ್ಮ ಮುಖವನ್ನು ಫೇಸ್‌ ವಾಶ್‌ ನಿಂದ ಚೆನ್ನಾಗಿ ಶುಚಿಗೊಳಿಸಿ, ಕಾಪರ್‌ ಪೆಪ್ಟೈಡ್‌ ಸೀರಮ್ ಬಳಸಿಕೊಳ್ಳಿ.

ಹೀಗೆ ಪ್ರತಿ ವಾರ ಕೊಲೋಜೆನ್‌ ಥ್ರೆಡ್ಸ್ ಹಾಕಿಸುತ್ತಾ, ಸ್ಕಿನ್‌ ಟೈಟ್‌ ನಿಂಗ್‌ ನ್ನು ಹೆಚ್ಚಿಸಿ. ಬ್ಯೂಟಿಶಿಯನ್‌

– ಭಾರತಿ ತನೇಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ