ಎಸ್. ಜೆ*.

ಕೆ.ಎಸ್.ಹೇಮಂತ್ ಗೌಡ ಹಾಗೂ ಕೆ.ವಿ.ಸತ್ಯಪ್ರಕಾಶ್ ನಿರ್ಮಾಣದ, ಜಡೇಶ್ ಕೆ ಹಂಪಿ ನಿರ್ದೇಶನದ ಹಾಗೂ ವಿಜಯ ಕುಮಾರ್(ದುನಿಯಾ ವಿಜಯ್), ರಚಿತರಾಮ್, ರಿತನ್ಯ ವಿಜಯ್ ಮುಂತಾದವರು ನಟಿಸಿರುವ “ಲ್ಯಾಂಡ್‌ ಲಾರ್ಡ್” ಚಿತ್ರವನ್ನು ಇತ್ತೀಚಿಗೆ ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀಶ್ರೀಶ್ರಿ ಡಾ||ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಹಾಲಕ್ಷ್ಮಿ ಪುರದ ಬಿ.ಜಿ.ಎಸ್ ಶಾಲೆ ಹಾಗೂ ಕಾಲೇಜು ಆವರಣದಲ್ಲಿರುವ ಥಿಯೇಟರ್ ನಲ್ಲಿ ವೀಕ್ಷಿಸಿದರು. ಶಾಖಾ ಮಠದ ಸ್ವಾಮಿಗಳು, ವಿದ್ಯಾರ್ಥಿಗಳು, ಶಾಸಕ ಗೋಪಾಲಯ್ಯ, ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ|| ಸಿ.ಸೋಮಶೇಖರ್, ಮಾಜಿ ಸಂಸದ ಮುದ್ದಹನುಮೇಗೌಡ ಹಾಗೂ ನಿರ್ಮಾಪಕರಾದ ಕೆ.ಎಸ್ ಹೇಮಂತ್ ಗೌಡ, ಕೆ.ವಿ.ಸತ್ಯಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

swamy 1

“ಲ್ಯಾಂಡ್ ಲಾರ್ಡ್”, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ. ದುಡ್ಡಿಗಿಂತ ವಿದ್ಯೆಯೇ ಮುಖ್ಯ ಎಂದು ಸಾರುವ ಹಾಗೂ ರೈತರ ಪರ ಕಾಳಜಿ ಇರುವ ಚಿತ್ರ. ಹೆಣ್ಣುಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯ ಎಂಬುದನ್ನು ಸಹ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರ ವೀಕ್ಷಣೆಯ ನಂತರ ಶ್ರೀಶ್ರೀಶ್ರೀ ಡಾ||ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದರು ಎಂದು ನಿರ್ಮಾಪಕರು ತಿಳಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ