ನಿರಂತರ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ್ದ ಆಟೋ ಚಾಲಕರಿಗೆ ಕೊನೆಗೂ ಸಿಹಿ ಸುದ್ದಿ ದೊರೆತಿದೆ. ಪ್ರಮುಖ ಇಂಧನ ವಿತರಕ ಸಂಸ್ಥೆ ಟೋಟಲ್ ಗ್ಯಾಸ್ (TotalEnergies) ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಕಡಿತಗೊಳಿಸಿದೆ. ಈ ಕುಸಿತದಿಂದ ಆಟೋ ಚಾಲಕರು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲಿದೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್‌ ನಡುವೆ ಉಂಟಾದ ಭೀಕರ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ವ್ಯಾಪಕ ಏರುಪೇರಾದ ಪರಿಣಾಮ, ಆಟೋ ಎಲ್‌ಪಿಜಿ ದರವು ಸಾರ್ವಕಾಲಿಕ ದಾಖಲೆಯ ₹100 ಗಡಿ ದಾಟಿತ್ತು. ಈ ಭಾರಿ ಏರಿಕೆಯು ದೈನಂದಿನ ಜೀವನಕ್ಕಾಗಿ ಆಟೋ ಬಾಡಿಗೆಯನ್ನೇ ಅವಲಂಬಿಸಿದ್ದ ಲಕ್ಷಾಂತರ ಚಾಲಕರ ಜೇಬಿಗೆ ಕತ್ತರಿ ಹಾಕಿದಂತಾಗಿತ್ತು.

ಆದರೆ, ಇತ್ತೀಚೆಗೆ ಜಾಗತಿಕ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಸರಬರಾಜು ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಇಂಧನದ ಲಭ್ಯತೆ ಹೆಚ್ಚಾಗಿದೆ. ಹೀಗಾಗಿ, ಮೊದಲು ₹100 ತಲುಪಿದ್ದ ದರವು ಹಂತ-ಹಂತವಾಗಿ ಇಳಿದು ₹95 ಕ್ಕೆ ಬಂದಿತ್ತು. ಈಗ ಮತ್ತೊಂದು ಕುಸಿತದಲ್ಲಿ ನೇರವಾಗಿ ₹85 ಕ್ಕೆ ಇಳಿಕೆಯಾಗಿದೆ.

ಬೆಲೆ ಇಳಿಕೆ ಸುದ್ದಿಯಿಂದ ಆಟೋ ಚಾಲಕರಲ್ಲಿ ಸಂತಸದ ಮೂಡಿದೆ. ನಿರಂತರ ಏರಿಕೆಯಿಂದ ದಿನಕ್ಕೆ ದುಡಿಯುವ ಹಣದಲ್ಲಿ ಅರ್ಧದಷ್ಟು ಎಲ್‌ಪಿಜಿ ಗ್ಯಾಸ್‌ಗೆ ಖರ್ಚಾಗುತ್ತಿತ್ತು. ಕೆಲವು ವೇಳೆ ಬಾಡಿಗೆ ದರ ಹೆಚ್ಚಿಸದೆ ಅನಿವಾರ್ಯವಾಗಿರಲಿಲ್ಲ, ಆದರೆ ಗ್ರಾಹಕರು ಈಗಾಗಲೇ ಹೆಚ್ಚಿನ ದರಕ್ಕೆ ಆಟೋ ಬಳಸಲು ಹಿಂದೇಟು ಹಾಕುತ್ತಿದ್ದರು.

ದರ ಇಳಿಕೆಯು ಕೇವಲ ಚಾಲಕರಿಗೆ ಮಾತ್ರವಲ್ಲ, ಸಾರ್ವಜನಿಕ ಸಾರಿಗೆ ಬಳಕೆದಾರರಿಗೂ ಅನುಕೂಲವಾಗಲಿದೆ. ಆಟೋ ಬಾಡಿಗೆ ದರಗಳು ಇಂಧನ ಬೆಲೆಯ ಮೇಲೆ ನೇರ ಪರಿಣಾಮ ಬೀರುವುದರಿಂದ, ಈ ಕಡಿತದಿಂದಾಗಿ ಪ್ರಯಾಣಿಕರಿಗೂ ಸ್ವಲ್ಪ ಪರಿಹಾರ ಸಿಗುವ ಸಾಧ್ಯತೆಯಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ಬೆಲೆಗಳು ಸ್ಥಿರಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ರಷ್ಯಾ-ಯುಕ್ರೇನ್ ಸಂಘರ್ಷದ ಪರಿಸ್ಥಿತಿಯೂ ಸುಧಾರಿಸಿದಂತೆ, ಇಂಧನ ದರಗಳು ಮತ್ತಷ್ಟು ಇಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ