ಸಾಂಪ್ರದಾಯಕವಾದ ಹಯಗ್ರೀವ ಸಿಹಿ ಖ್ಯಾದ್ಯವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಯಗ್ರೀವ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಡಲೇ ಬೇಳೆ – 1/2 ಪಾವು
- ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು
- ತುರಿದ ಕೊಬ್ಬರಿ – 1 ಬಟ್ಟಲು
- ಗಸಗಸೆ – 20 ಗ್ರಾಂ
- ಗೊಡಂಬಿ – 8-10
- ದ್ರಾಕ್ಷಿ – 8-10
- ಏಲಕ್ಕಿ – 2-3
- ತುಪ್ಪ – 3-4 ಚಮಚ
ಹಯಗ್ರೀವ ತಯಾರಿಸುವ ವಿಧಾನ
- ಹಯಗ್ರೀವ ತಯಾರಿಸುವ ಸುಮಾರು ಮೂರ್ನಾಲ್ಕು ಮೊದಲು ಗಂಟೆಗಲ ಮೊದಲೇ ಕಡಲೇ ಬೇಳೆಯನ್ನು ಚೆನ್ನಾಗಿ ನೆನೆಸಿಟ್ಟು ಕೊಳ್ಳಬೇಕು
- ನೆನೆಸಿಟ್ಟು ಕೊಂಡ ಕಡಲೇ ಬೇಳೆಯನ್ನು ಕುಕ್ಕರಿನಲ್ಲಿ ಸುಮಾರು ನಾಲ್ಕೈದು ವಿಶಲ್ ಬರುವ ವರೆಗೂ ಬೇಯಿಸಿಕೊಂಡು ಆರಲು ಬಿಡಬೇಕು
- ಪಾತ್ರೆಯೊಂದರಲ್ಲಿ ಬೆಲ್ಲದ ಪುಡಿಯನ್ನು ಹಾಕಿಕೊಂಡು ಅದು ಮುಳುಗುವಷ್ಟು ನೀರನ್ನು ಬೆರೆಸಿ ಬೆಲ್ಲದ ಪಾಕವನ್ನು ತಯಾರಿಸಿಕೊಂಡು ಅದನ್ನು ಶೋಧಿಸಿ ಆರಲು ಬಿಡಬೇಕು.
- ಒಂದು ಸಣ್ಣ ಬಾಣಲೆಯನ್ನು ತೆಗೆಕೊಂಡು ಸಣ್ಣ ಉರಿಯಲ್ಲಿ ಗಸಗಸೆಯನ್ನು ಚೆನ್ನಾಗಿ ಕೆಂಪಗಾಗುವರೆಗೂ ಹುರಿದು ಕೊಳ್ಳಬೇಕು
- ಒಂದು ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕು ತುಪ್ಪ ಕಾದ ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬಾಡಿಸಿಕೊಳ್ಳಬೇಕು
- ಈಗ ಅದಕ್ಕೆ ಬೆಲ್ಲದ ಪಾಕ ಸೇರಿಸಿ ಅದು ಒಂದು ಕುದಿ ಬಂದ ನಂತರ ಅದಕ್ಕೆ ಬೇಯಿಸಿಟ್ಟು ಕೊಂಡಿದ್ದ ಬೇಳೆಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು
- ಈಗ ಅದಕ್ಕೆ ಏಲಕ್ಕಿ ಪುಡಿ ಮತ್ತು ಕೊಬ್ಬರೀ ತುರಿಯನ್ನು ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿಬೇಕು
- ಆ ಮಿಶ್ರಣಕ್ಕೆ ಹುರಿದುಕೊಂಡಿದ್ದ ಗಸಗಸೆಯನ್ನು ಸೇರಿಸಿ ಮತ್ತೆ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿ ತಣ್ಣಗಾಗಲು ಬಿಟ್ಟಲ್ಲಿ ರುಚಿ ರುಚಿಯಾದ ಹಯಗ್ರೀವ ಸವಿಯಲು ಸಿದ್ಧ.
ಬಿಸಿ ಬಿಸಿಯಾದ, ಸಿಹಿಯಾದ ಹಯಗ್ರೀವ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
https://youtu.be/c0va3c3TYdY
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ

ಮನದಾಳದ ಮಾತು : ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಮಾತ್ರವೇ ಸವಿಯಲು ಸಿಗುವ ಹಯಗ್ರೀವ, ಕಡಲೇಬೇಳೆ ಮತ್ತು ಬೆಲ್ಲ ಬಳಸಿ ತಯಾರಿಸಿರುವ ಈ ಸಿಹಿ ಖಾದ್ಯ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕೆ ಒಂದು ಚೂರು ಪಚ್ಚ ಕರ್ಪೂರ ಸೇರಿಸಿದಲ್ಲಿ ರುಚಿಯೂ ಹೆಚ್ಚುವುದಲ್ಲದೇ ಆರೋಗ್ಯಕ್ಕೂ ಉತ್ತಮ.
ಏನಂತೀರೀ...???
ನಿಮ್ಮವನೇ
ಉಮಾಸುತ
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





