ಮೈಸೂರು ಒಡೆಯರ್ ವಂಶದಲ್ಲೇ ಅತ್ಯಂತ ಸುದೀರ್ಘವಾಗಿ 30 ಜೂನ್ 1799 ರಿಂದ 27 ಮಾರ್ಚ್ 1868 ಸುಮಾರು 70 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ರಾಜ್ಯಭಾರ ಮಾಡಿದ ಕೀರ್ತಿ ಹೊಂದಿದ್ದ ಮೈಸೂರು ಸಂಸ್ಥಾನದ 22ನೆಯ ಮಹಾರಾಜರಾಗಿದ್ದ, ಸ್ವತಃ ಕಲೆಗಾರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಂದು ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಸಾಧನೆಗಳ ಪರಿಚಯ ಮಾಡಿಸುವ ಸಣ್ಣ ಪ್ರಯತ್ನ.
14 ಜುಲೈ 1794 ರಂದು ಶ್ರೀರಂಗಪಟ್ಟಣದಲ್ಲಿ ಖಾಸಾ ಚಾಮರಾಜ ಒಡೆಯರ್ IX ಮತ್ತು ಅವರ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರಿಗೆ ಜನಿಸುತ್ತಾರೆ. ಬಾಲಕನಿರುವಾಗಲೇ, ಮಹಾರಾಣಿ ಲಕ್ಷ್ಮಿ ಅಮ್ಮಣಿ ದೇವಿ ಅವರನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣ ಮತ್ತು ಪಾಲನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಲ್ಲದೇ, ಅವರನ್ನು ಮೈಸೂರು ಸಿಂಹಾಸನಾಧಿಪತಿಯನ್ನಾಗಿ ಮಾಡಲು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಮಹಾರಾಣಿ ಲಕ್ಷ್ಮೀದೇವಿಯವರಿಗೆ ಸಂತಾನವಿಲ್ಲದಿದ್ದಾಗ, ಬಹಳ ಕುಯುಕ್

ಹೀಗೆ ಮೈಸೂರು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಂದಿನ ಬ್ರಿಟಿಫ್ ಸರ್ಕಾರ ಕೆಲವು ಷರತ್ತು ಬದ್ಧ ಒಪ್ಪಂದದ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿರುತ್ತದೆ. ಅದರ ಪ್ರಕಾರ, ಮಹಾರಾಜರು, ಆಂತರಿಕ ಆಡಳಿತವನ್ನು ಮಾತ್ರ ನಿರ್ವಹಿಸತಕ್ಕದ್ದೆಂದೂ; ಉಳಿದ ಎಲ್ಲಾ ಹೊರ ವ್ಯವಹಾರಗಳೂ ಈಸ್ಟ್ ಇಂಡಿಯ ಕಂಪನಿಯೇ ನಿಭಾಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಲ್ಲದೇ, ಮೈಸೂರು ಸರ್ಕಾರ ವಾರ್ಷಿಕವಾಗಿ ಕಂಪನಿ ಸರ್ಕಾರಕ್ಕೆ ಏಳುಲಕ್ಷ ಪಗೋಡಾಗಳನ್ನು ಕಪ್ಪವಾಗಿ ಕೊಡಬೇಕೆಂದು ತೀರ್ಮಾನಿಸಲಾಗಿರುತ್ತದೆ. ಈ ರೀತಿಯ ಒಪ್ಪಂದದ ಪ್ರಕಾರವಾಗಿಯೇ ಅರಮನೆಯ ಅಪಾರವಾದ ಐಶ್ವರ್ಯವನ್ನು ಬ್ರಿಟಿಷರು ದೋಚಿಕೊಂದು ಹೋದದ್ದು ನಮ್ಮ ದೌರ್ಭಾಗ್ಯವೇ ಸರಿ.





