ಸಂವಿಧಾನದಲ್ಲಿ ಸೆಕ್ಯುಲರ್‌ ಎಂಬ ಶಬ್ದ ಪ್ರಿಯೆಂಬ್‌ ನಲ್ಲಿದೆ. ಇತ್ತೀಚೆಗೆ BJP ಹಾಗೂ ಹಿಂದೂತ್ವದ ಭಾರಿ ಕೀಲಿ ಮಾಡುತ್ತಾ, ಅಲ್ಲಿಂದ ಈ ಶಬ್ದವನ್ನು ಉಚ್ಚಾಟಿಸಬೇಕು ಎನ್ನುತ್ತಿದ್ದಾರೆ, ಆಗ ಭಾರತವನ್ನು ಒಂದು ತರಹದಲ್ಲಿ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂಬುದು.

ಆ ಹಿಂದೂ ರಾಷ್ಟ್ರದ ಅರ್ಥವೇನು? ಭಾರತದಲ್ಲಿ ಹಿಂದೂಗಳ ಮೇಲೆ ಶೋಷಣೆ ನಡೆಯುತ್ತಿದೆಯೇ? ಹಿಂದೂ ಸೆಕೆಂಡ್‌ ಕ್ಲಾಸ್‌ಸಿಟಿಜನ್‌ ಎಂದು ಫೀಲ್ ‌ಆಗಲು ಈ ಸೆಕ್ಯುಲರ್‌ ಶಬ್ದ ಕಾರಣವೇ? ಈ ಶಬ್ದದ ಬಳಕೆಯಿಂದ ಹಿಂದೂಗಳು ತಮ್ಮನ್ನು ತಾವು ಅಸುರಕ್ಷಿತರೆಂದು ಭಾವಿಸುತ್ತಿದ್ದಾರೆಯೇ? ಈ ಶಬ್ದದ ಉಚ್ಚಾಟನೆಯಿಂದ ಈ ದೇಶದಲ್ಲಿ ಚಿನ್ನದ ಸುರಿಮಳೆ ಆಗಲಿದೆಯೇ? ಬಡ ಹಿಂದೂಗಳಿಗೆ ಹೆಚ್ಚಿನ ಹಣ ಸಿಗಲಿದೆಯೇ?

ಹಾಗೇನೂ ಆಗೋದಿಲ್ಲ ಬಿಡಿ. ಸೆಕ್ಯುಲರ್‌ ಶಬ್ದದ ಅರ್ಥ ಕೇವಲ ಇಷ್ಟೆ, ಸರ್ಕಾರ ಹಿಂದೂ, ಮುಸ್ಲಿಂ, ಬೌದ್ಧ, ಸಿಖ್‌, ಜೈನ, ಕ್ರೈಸ್ತ, ಪಾರಸಿ ಯಾ ನಾಸ್ತಿಕರ ಜೊತೆ ಭೇದಭಾವ ಮಾಡೋದಿಲ್ಲ ಅಂತ. ಈ ಧರ್ಮಗಳನ್ನು ಅನುಸರಿಸುವವರನ್ನು ಸೆಕೆಂಡ್‌ ಕ್ಲಾಸ್ ಸಿಟಿಜನ್‌ ಎನ್ನಲಾಗದು. ಬಹುಸಂಖ್ಯಾತರಾದ 80% ಹಿಂದೂ ಇದರಿಂದ ಹೆಚ್ಚಿನ ಲಾಭ ಏನು ಗಳಿಸಲಿದ್ದಾರೆ? ಸಾಮಾನ್ಯ ಹಿಂದೂ ಕುಟುಂಬ, ಲಿಬರ್‌ ಯಾ ಕನ್ಸರ್ವೇಟಿವ್‌ ಆಗಿರಲಿ. ಈ ಶಬ್ದ ಇದ್ದರೂ ತೆಗೆದರೂ, ಬದಲಾಗದು. ಹಾಗಿರುವಾಗ ಕೆಲವರೇಕೆ ಈ ಶಬ್ದದ ಹಿಂದೆ ಹೀಗೆ ಬಿದ್ದಿದ್ದಾರೆ?

ಇದರ ಹಿಂದೆ ಎಲ್ಲಕ್ಕೂ ಹೆಚ್ಚಿನ ದೊಡ್ಡ ಭಾವನೆ ಪೌರಾಣಿಕ ಧರ್ಮವನ್ನು ವಾಪಸ್ಸು ತರುವುದಾಗಿದೆ. ಹಿಂದೂಗಳು ತಮ್ಮ ಹಕ್ಕನ್ನು ತಾವೇ ಕಳೆದುಕೊಳ್ಳುವಂಥ ಧರ್ಮ ಪುನಸ್ಥಾಪಿಸುವುದು ಅಂತ. ಇದಕ್ಕೆ ಬಲಿ ಆಗುವವರು ಹೆಂಗಸರು! 80% ಹಿಂದೂಗಳ ಅರ್ಧದಷ್ಟು ಜನಸಂಖ್ಯೆಯರು. ಸೆಕ್ಯುಲರ್‌ ಶಬ್ದದ ನೆಪದಲ್ಲಿ ಹಿಂದೂ ಹೆಂಗಸರಿಗೆ ಬಹಳಷ್ಟು ಧಾರ್ಮಿಕ ಅನ್ಯಾಯಗಳಿಂದ ಮುಕ್ತಿ ಸಿಕ್ಕಿವೆ. ಸೆಕ್ಯುಲರ್‌ಈಕ್ವಾಲಿಟಿ ಶಬ್ದಗಳ ಬಳಕೆಯಿಂದ, ಹಿಂದೂ ಹೆಂಗಸರಿಗೆ ವಸತಿಯಿಂದ ಮುಕ್ತಿ ಸಿಕ್ಕಿತು. ಸೆಕ್ಯುಲರಿಸಂ ಕಾರಣ ಶಾಲಾಕಾಲೇಜುಗಳ ಬಾಗಿಲು ಎಲ್ಲರಿಗೂ ತೆರದಂತಾಗಲು, ಹೆಣ್ಣಿಗೂ ಸಮಾನ ಶಿಕ್ಷಣದ ಅವಕಾಶ ಲಭಿಸಿತು. ಬೀದಿಗಳಲ್ಲಿ ಪ್ರತಿಯೊಂದು ತರಹದ ಜನರು ಓಡಾಡಲಿಕ್ಕೆ ಪ್ರಾಥಮಿಕ ಹಕ್ಕು ಸಿಕ್ಕಿತು. ಸಹಜವಾಗಿ ಇದು ಹೆಂಗಸರಿಗೂ ದಕ್ಕಿತು. ಮನಸ್ಸು ಬಯಸಿದ ಡ್ರೆಸ್‌ ಧರಿಸಿ, ಮನಸ್ಸು ಬಂದೆಡೆ ಸಾರ್ವಜನಿಕವಾಗಿ ಸುತ್ತಾಡುವ ಹಕ್ಕು ಪಡೆದುಕೊಂಡರು.

ಹಿಂದೆಲ್ಲ ರೈಲ್ವೆ ಸ್ಷೇಷನ್‌ ಗಳಲ್ಲಿ ಹಿಂದೂಮುಸ್ಮಾನರಿಗೆ ಬೇರೆ ಬೇರೆ ಮೂಲದ ನೀರು ಸಿಗುತ್ತಿತ್ತು. ಎರಡೂ ಕಡೆಯ ಗಂಡಸರು ತಾವು ನೀರು ಕುಡಿದು, ಪರಿವಾರದವರಿಗಾಗಿ ರೈಲ್ವೆ ಚೊಂಬಿನಲ್ಲಿ ನೀರು ಕೊಂಡೊಯ್ಯುತ್ತಿದ್ದರು. ಸೆಕ್ಯುಲರಿಸಮ್ ಬಂದ ನಂತರ ಧರ್ಮದ ಈ ಭೇದಭಾವ ತಳ್ಳಿಹಾಕಿತು, ಸೆಕ್ಸ್ ನ ಭೇದಭಾವ ದೂರಾಯಿತು. ಕಂದಾಚಾರದ ಕಂಬ, ರೇಖೆಗಳು, ತಂತಾನೇ ದೂರ ಸರಿದಾಗ, ಎಷ್ಟೋ ಇತರ ಅಡೆತಡೆಗಳೂ ಹಾಗೆ ದೂರವಾಗುತ್ತಾ ಹೋಗುತ್ತವೆ. ಹೆಂಗಸರು ಈಗ ತಾವೇ ಬಂದು ಸಾಲಲ್ಲಿ ನಿಂತು ನೀರು ಪಡೆಯುತ್ತಾರೆ, ಗಂಡಸರ ಮಧ್ಯೆ ಸಮಾನತೆಯ ಹಕ್ಕು ಪಡೆಯುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ