ಮೋಹಿತಾ ಇಂದ್ರಾಯಣ್ ಬಾಲ್ಯದಲ್ಲಿ ಗೊಂಬೆಗಳೊಂದಿಗೆ ಆಟ ಆಡುತ್ತಿದ್ದರು, ಅವುಗಳಿಗೆ ಪುಟ್ಟ ಪುಟ್ಟ ಫ್ರಾಕ್‌ಗಳನ್ನು ತಯಾರಿಸಿ ಖುಷಿಪಡುತ್ತಿದ್ದರು. ಆ ಫ್ರಾಕ್‌ಗಳನ್ನು ಒಮ್ಮೆ ಬಟ್ಟೆಯಿಂದ ತಯಾರಿಸುತ್ತಿದ್ದರೆ, ಮತ್ತೊಮ್ಮೆ ಕಾಗದದಿಂದ ರೂಪಿಸಿ ಟೇಪ್‌ನಿಂದ ಅಂಟಿಸುತ್ತಿದ್ದರು. ಗೊಂಬೆಯ ಅಂದಚೆಂದ ನೋಡಿ ಗೆಳತಿಯರು ಕೂಡ ಆಕೆಯಿಂದಲೇ ತಮ್ಮ ಗೊಂಬೆಗಳಿಗೂ ಡ್ರೆಸ್ ಸಿದ್ಧಪಡಿಸುತ್ತಿದ್ದರು.
ಅಂದಹಾಗೆ ಮೋಹಿತಾ ಬಾಲ್ಯದಿಂದಲೇ ತಾಯಿಯ ಹಾಗೆ ಬಹಳ ಕ್ರಿಯೇಟಿವ್‌ಆಗಿದ್ದರು. ಇದೇ ಕಾರಣದಿಂದ ದೊಡ್ಡವರಾದ ಬಳಿಕ ಅದೇ ಅವರ ವೃತ್ತಿಯಾಯಿತು. ಈಗ ಅವರು `6-12 ಲೀಗ್' ಕ್ಲೋಥಿಂಗ್‌ಬ್ರ್ಯಾಂಡ್‌ನ ಸಂಸ್ಥಾಪಕಿ ಹಾಗೂ ಸಿಇಒ ಆಗಿದ್ದಾರೆ.
`6-12 ಲೀಗ್' ಭಾರತದ ಮೊದಲ ಬ್ರ್ಯಾಂಡ್‌ಆಗಿದ್ದು, ಅದು 6 ರಿಂದ 12 ವಯಸ್ಸಿನ ಮಕ್ಕಳನ್ನೇ ಕೇಂದ್ರೀಕರಿಸಲ್ಪಟ್ಟಿದೆ. ಇವರ ಉತ್ಪನ್ನಗಳು ಭಾರತದ 130 ನಗರಗಳ 365ಕ್ಕೂ ಹೆಚ್ಚು ಪಿಒಎಸ್‌ನಲ್ಲಿ ಲಭ್ಯವಿವೆ. ಅವರೊಂದಿಗೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.
ನಿಮ್ಮ ಬಾಲ್ಯದ `ಡ್ರೀಮ್ ಜಾಬ್' ಯಾವುದಾಗಿತ್ತು?
ನನಗೆ ಯಾವುದೇ ಡ್ರೀಮ್ ಜಾಬ್ ಇರಲಿಲ್ಲ. ಆರಂಭದಿಂದಲೇ ನನಗೆ ಕ್ರಿಯೇಟಿವಿಟಿಯ ಬಗ್ಗೆ ಒಲವು ಇತ್ತು. ಯಾವುದೇ ಕ್ರಿಟಿಕಲ್ ಜಾಬ್ ಮಾಡಲು ನನಗೆ ಆಸಕ್ತಿ ಇರಲಿಲ್ಲ. ನನ್ನ ಸೃಜನಶೀಲತೆ ಎದ್ದು ಕಾಣುವಂತಹ ಕೆಲಸ ಮಾಡುವುದು ನನಗೆ ಇಷ್ಟವಿತ್ತು.
ನನ್ನ ತಂದೆ ಇಂಡಿಯನ್‌ಟೆಲಿಕಾಮ್ ಸರ್ವೀಸ್‌ನಲ್ಲಿ ಇದ್ದಾರೆ. ತಾಯಿ ಗೃಹಿಣಿ. ನಾನು ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ ಮತ್ತು ನಿಫ್ಟ್ ನಿಂದ ಅಪೆರ್ ಮಾರ್ಕೆಟಿಂಗ್ ಹಾಗೂ ಮರ್ಚೆಂಟೈಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇದೇ ಕ್ಷೇತ್ರದಲ್ಲಿ ಉದ್ಯಮ ಸ್ಥಾಪನೆ ಮಾಡಿದೆ.
ಉದ್ಯಮಿಯಾಗುವ ಪ್ರೇರಣೆ ನಿಮಗೆ ಯಾರಿಂದ ದೊರಕಿತು?
ಪತಿ ಮನು ಇಂದ್ರಾಯಣ್ ಅವರೇ ನನಗೆ ಪ್ರೇರಣೆ. ಮದುವೆಯ ಬಳಿಕವೇ ನಾನು ಈ ಬಗ್ಗೆ ಗಂಭೀರವಾಗಿ ಯೋಚಿಸಿದೆ. ಏಕೆಂದರೆ ಬಿಸ್‌ನೆಸ್ ಮಾಡುವ ಬರ್ನಿಂಗ್ ಡಿಸೈರ್ ನನ್ನ ಪತಿಯಲ್ಲಿತ್ತು. ಮದುವೆಗೂ ಮುಂಚಿನಿಂದಲೂ ಅವರು ಉದ್ಯಮದಲ್ಲಿ ಮಗ್ನರಾಗಿದ್ದರು. ಅವರ ಪ್ರೇರಣೆಯಿಂದಲೇ ನಾವಿಬ್ಬರೂ ಸೇರಿ 2009ರಲ್ಲಿ ಪಾಲುದಾರಿಕೆಯಲ್ಲಿ `6-12 ಲೀಗ್' ಶುರು ಮಾಡಿದೆ.
ನೀವು 6 ರಿಂದ 12 ವಯಸ್ಸಿನ ಮಕ್ಕಳ ಬ್ರ್ಯಾಂಡ್ನ್ನೇ ಶುರು ಮಾಡಲು ಏಕೆ ನಿರ್ಧರಿಸಿದಿರಿ?
ನನ್ನ ಮಕ್ಕಳು 3 ಹಾಗೂ 7 ವರ್ಷದವರಿದ್ದಾಗಿನ ಮಾತಿದು. ಆ ಸಂದರ್ಭದಲ್ಲಿ ನಾವೆಲ್ಲ ಅಮೆರಿಕಾಕ್ಕೆ ಹೋಗಿದ್ದೆ. ಅಲ್ಲಿ ಮಕ್ಕಳಿಗೆ ಬೇಕಾಗುವ ಬೇಸಿಕ್ ಡ್ರೆಸೆಸ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ. ಆದರೆ ಭಾರತದಲ್ಲಿ ಹಾಗಲ್ಲ. ಫ್ಯಾಷನೆಬಲ್ ಬಟ್ಟೆಗಳೇ ಹೆಚ್ಚು ಮಾರಾಟವಾಗುತ್ತವೆ. ಬೇಸಿಕ್ ಡ್ರೆಸೆಸ್ ಒಳ್ಳೆಯ ಗುಣಮಟ್ಟದ ಜೊತೆಗೆ ಕ್ಲೀನ್ ಲುಕ್ ನೀಡುತ್ತವೆ.
ಅಷ್ಟೇ ಅಲ್ಲ, ಅಮೆರಿಕಾದಲ್ಲಿ ಮಕ್ಕಳ ಬಟ್ಟೆಗಳಲ್ಲಿ ಬೇರೆ ಬೇರೆ ಕ್ಲಿಯರ್ ಸೆಗ್‌ಮೆಂಟ್ಸ್ ಇರುತ್ತವೆ. 2 ವರ್ಷದೊಳಗಿನ ಮಕ್ಕಳದ್ದು ಬೇರೆ, 2 ರಿಂದ 6 ವರ್ಷದ ತನಕ ಹಾಗೂ 6 ರಿಂದ 12 ವರ್ಷದ ತನಕ ಬೇರೆ ಬೇರೆ ಇರುತ್ತವೆ. ನಾನು ಭಾರತಕ್ಕೆ ವಾಪಸ್‌ಆಗಿ ಪ್ರೀ ಟೀನ್ಸ್ (6 ರಿಂದ 12) ರೇಂಜ್‌ಆರಂಭಿಸಬೇಕೆಂದು ಯೋಚಿಸಿದೆ. ಇಂತಹ ಬಟ್ಟೆಗಳು ಹೆಚ್ಚು ಪ್ರಖರವಾಗಿರುವುದಿಲ್ಲ, ಆದರೆ ಫ್ಯಾಷನ್‌ಗೆ ತಕ್ಕಂತೆಯೇ ಇರುತ್ತವೆ.