- ರಾಘವೇಂದ್ರ ಅಡಿಗ ಎಚ್ಚೆನ್.

'ಟಗರು', 'ಸಲಗ' ಹಾಗೂ 'ಯುಐ' ಚಿತ್ರಗಳನ್ನು ನಿರ್ಮಿಸಿರುವ ಕೆಪಿ ಶ್ರೀಕಾಂತ್ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿ ಮೂಡಿ ಬರ್ತಿರುವ ನಾಲ್ಕನೇ ಚಿತ್ರಕ್ಕೆ 'ಹಲ್ಕಾ ಡಾನ್' ಎಂಬ ಶೀರ್ಷಿಕೆ ಇಡಲಾಗಿದೆ.

FB_IMG_1761361365399

ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಹಾಜರಿದ್ದ ಶಿವಣ್ಣ-ಗೀತಾ ದಂಪತಿ, ಸುದೀಪ್, ರಚಿತಾ ರಾಮ್, ದುನಿಯಾ ವಿಜಯ್, ವಿನಯ್ ರಾಜ್​ಕುಮಾರ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಹಲವು ತಾರೆಯರು ಚಿತ್ರ ತಂಡಕ್ಕೆ ಶುಭ ಕೋರಿದರು. ಇದೇ ವೇಳೆ, ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿಕುಮಾರ್ ಅವರಿಗೆ ಚಿತ್ರತಂಡ ಸನ್ಮಾನಿಸಿತು.

FB_IMG_1761361360341

ಕಿಚ್ಚ ಸುದೀಪ್‌ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ಗೀತಕ್ಕ ಹಾಗೂ ರಚಿತಾ ರಾಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ಶಿವಣ್ಣ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದರು. 'ರತ್ನನ್ ಪ್ರಪಂಚ' ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ, ಜ್ಯೋತಿ ರೈ ತಾರಾಬಳಗದಲ್ಲಿದ್ದಾರೆ

FB_IMG_1761361363474

ಮುಹೂರ್ತದ ಬಳಿಕ ಚಿತ್ರದ ಕುರಿತು ಮಾತನಾಡಿದ ನಟ ದುನಿಯಾ ವಿಜಯ್, ಶ್ರೀಕಾಂತ್ ಸರ್ ಮೇಲೆ ಪ್ರೀತಿ, ಕೋಪ ಎರಡು ಇದೆ. ಸಿನಿಮಾ ಮಾಡದೇ ಇದ್ದಾಗ ಕೋಪ, ಮಾಡಿದಾಗ ಖುಷಿ ಇರುತ್ತದೆ. ನಾನು ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಶ್ರೀಕಾಂತ್ ಸರ್ ಬ್ಯಾನರ್ ಪ್ರಮುಖ ಕಾರಣ. 'ಸಲಗ' ಬಳಿಕ 'ಭೀಮ' ಸಿನಿಮಾ ನನಗೆ ಮತ್ತೊಂದು ಜನ್ಮ ಕೊಟ್ಟಿತು. ಈಗ ನಿರ್ಮಾಣಗೊಳ್ಳುತ್ತಿರುವ 'ಹಲ್ಕಾ ಡಾನ್' ಸಿನಿಮಾ ಸೂಪರ್ ಹಿಟ್ ಆಗಲಿ. ಈ ಚಿತ್ರದ ಕಾಂಬಿನೇಷನ್ ಸೂಪರ್ ಆಗಿದೆ. ಸತ್ಯ ಹೆಗ್ಡೆ ಹಾಗೂ ಸೂರಿ ಅವರನ್ನು ನಾನು ಯಾವತ್ತೂ ಮರೆಯುವ ಹಾಗಿಲ್ಲ. ಹರಿಕೃಷ್ಣ ಸೂಪರ್ ಹಿಟ್ ಹಾಡು ಕೊಟ್ಟವರು. ಗಾಂಧಿ ನಗರದಲ್ಲಿ ರೇಸ್ ಕುದುರೆಗಳ ಕರೆಕ್ಟ್ ಕುನ್ನಿಸ್ ಬಾಯಿ ಹಿಡಿಯುವವರು ಅಂದರೆ ಅದು ಶ್ರೀಕಾಂತ್ ಸರ್. 'ರತ್ನನ್ ಪ್ರಪಂಚ' ಚಿತ್ರದಲ್ಲಿ ಪ್ರಮೋದ್ ಅವರ ನಟನೆ ಚೆನ್ನಾಗಿ ಮೂಡಿ ಬಂದಿತ್ತು. ಈ ಚಿತ್ರಕ್ಕೂ ಕೂಡ ಒಳ್ಳೆಯದಾಗಲಿ ಎಂದರು.

FB_IMG_1761361351218

ನಿರ್ಮಾಪಕ ಶ್ರೀಕಾಂತ್ ಮಾತನಾಡಿ, 'ಹಲ್ಕಾ ಡಾನ್' ಚಿತ್ರದ ಮುಹೂರ್ತದಿಂದ ನನಗೆ ಎನರ್ಜಿ ಬಂದಿದೆ. ಇದೇ ಎನರ್ಜಿಯಿಂದ ಮುಂದೆ ಶಿವಣ್ಣ ಹಾಗೂ ವಿಜಯ್ ಅವರ ಜೊತೆ ಸಿನಿಮಾ ಮಾಡುವೆ. ಅವರಿಬ್ಬರ ಜೊತೆ ಹರಿಕೃಷ್ಣ ಮ್ಯೂಸಿಕ್ ಇರಲಿದೆ. ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಸಿನಿಮಾ ನೋಡ್ಬಹುದು. ನಮ್ಮ ಸಂಸ್ಥೆಗೆ ವಿಜಿ ಸರ್ ಬೆನ್ನೆಲುಬು ಆಗಿ ನಿಂತಿದ್ದು, ನನ್ನ ಹಿಂದೆ ಒಳ್ಳೆ ತಂಡ ಇದೆ. ಎಲ್ಲರ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಆಗಲಿದೆ. 'ಹಲ್ಕಾ ಡಾನ್' ಎಂಬುದು ಆಡು ಭಾಷೆ. ಚಿತ್ರದಲ್ಲಿ ಪ್ರಮೋದ್ ಅವರು ಸಾಯಿಕುಮಾರ್ ಅವರ ಫ್ಯಾನ್ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ