ನಟ, ನಿರ್ದೇಶಕ ಅಜೇಯ್ ರಾವ್ ಈಗ ರಾಧೇಯನಾಗಿದ್ದಾರೆ. ಹೌದು, ಅವರು ಹೊಸ ಚಿತ್ರದ ಹೆಸರು ರಾಧೇಯ. ಒಂದಷ್ಟು ವರ್ಷಗಳಿಂದ ಕೆಲ ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದಿರುವ ವೇದಗುರು ಇದೇ ಮೊದಲಬಾರಿಗೆ 'ರಾಧೇಯ' ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಜೊತೆಗೆ ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ. ಕೃಷ್ಣ ಅಜಯ್ ರಾವ್ ಹಾಗೂ ಸೋನಾಲ್ ಮಂತೆರೋ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ನಿರ್ದೇಶಕ ವೇದಗುರು ಮಾತನಾಡುತ್ತ ಮಹಾಭಾರತದ ಕರ್ಣನ ಇನ್ನೊಂದು ಹೆಸರು 'ರಾಧೇಯ'. ಕರ್ಣನ ಸಾಕು ತಾಯಿ ಹೆಸರು ರಾಧಾ. ಆ ಕರ್ಣನಿಗೂ ಈ ಕಥೆಗೂ ಸಂಬಂಧವಿಲ್ಲ. ಆದರೆ ಅವನ ತ್ಯಾಗದ ಅಂಶ ನಮ್ಮ ಚಿತ್ರದಲ್ಲಿದೆ. ಮೊದಲು ಅಜಯ್ ರಾವ್ ಅವರಿಗೆ ಈ ಕಥೆ ಹೇಳಿದಾಗ ನಿರ್ದೇಶಕನಷ್ಟೇ ಆಗಿದ್ದೆ. ನಂತರ ನಿರ್ಮಾಪಕನಾದೆ. ಇದು ಲವ್ ಜಾನರ್ ಚಿತ್ರವಾದರೂ ಬೇರೆಯದೇ ರೀತಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ಈ ಹಂತದಲ್ಲಿ ನಮಗೆ ಶಕ್ತಿಯಾಗಿ ವಿತರಕ ಕಾಂತರಾಜು ಅವರು ಸಾಥ್ ನೀಡಿದ್ದಾರೆ. ನಮ್ಮ ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ. ಅದಕ್ಕಾಗಿ ಏನೆಲ್ಲಾ ಪ್ರಾಬ್ಲಮ್ ದಾಟಿ ಬರುತ್ತಾನೆ ಎಂಬುದನ್ನು ಪ್ಯೂರ್ ಲವ್ ಸ್ಟೋರಿಯೊಂದಿಗೆ ಹೇಳಿದ್ದೇನೆ. ನನಗೆ ಸ್ಕ್ರಿಪ್ಟ್ ಮೇಲೆ ಇದ್ದ ನಂಬಿಕೆಯಿಂದಲೇ ನಿರ್ಮಾಪಕನಾದೆ. ಬೆಂಗಳೂರು ಸುತ್ತ ಮತ್ತು ಚಿತ್ರದ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು.

1000727994

ನಂತರ ನಾಯಕ ಅಜಯ್ ರಾವ್ ಮಾತನಾಡುತ್ತ 'ನನ್ನ ಸಿನಿ ಜರ್ನಿಯಲ್ಲಿ ಈ ಚಿತ್ರಕ್ಕೆ ವಿಶೇಷ ಜಾಗವಿದೆ. ಮೊದಲಿನಿಂದ ಅಜಯ್ ರಾವ್ ಬ್ರ್ಯಾಂಡೇ ಬೇರೆ. ಇದರಲ್ಲಿ ಬೇರೆ ಥರಾ ಇದೆ. ನನಗೆ ವೇದಗುರು ಅವರೇ ಈ ಚಿತ್ರದ ಹೀರೋ ಅನಿಸ್ತಾರೆ. ಅಷ್ಟು ಸ್ಟ್ರಗಲ್ ಮಾಡಿ ಚಿತ್ರವನ್ನು ಈ ಹಂತಕ್ಕೆ ತಂದಿದ್ದಾರೆ. ನಾನೂ ಒಬ್ಬ ನಿರ್ಮಾಪಕನಾಗಿದ್ದರಿಂದ ಆತನ‌ ಕಷ್ಟ ಏನೆಂದು ಗೊತ್ತಾಗಿದೆ. ಕ್ರಿಮಿನಲ್ ಆಗಿ ಜೈಲಿನಲ್ಲಿರುವವನ ಕ್ಯಾರೆಕ್ಟರ್ ಸುತ್ತ‌ ಈ ಚಿತ್ರದ ಕಥೆ ಸಾಗುತ್ತದೆ. ನನ್ನ ಪಾತ್ರ ಸೈಕ್ ಥರನೇ ಇದೆ. ಇಂಥ ಪಾತ್ರ ನನಗೆ ಹೊಸದು. ಅಜಯ್ ಹೀಗೂ ಮಾಡುತ್ತಾನಾ ಎಂಬಂಥ ಪಾತ್ರವಿದು' ಎಂದರು.

1000727993

ನಾಯಕಿ ಸೋನಾಲ್ ಮಾಂಟೆರೋ ಮಾತನಾಡುತ್ತ ನನಗೆ ಹೊಸ ಅನುಭವ ಕೊಟ್ಟ ಚಿತ್ರವಿದು. ಅಮೃತ ಎಂಬ ಲೋಕಲ್ ಚಾನೆಲ್ ನ ಕ್ರೈಮ್ ರಿಪೋರ್ಟರ್ ಆಗಿ ನಟಿಸಿದ್ದೇನೆ. ಕೇಸ್ ಸ್ಟಡಿ ಮಾಡಿ ದೊಡ್ಡ ಚಾನೆಲ್ ಗೆ ಹೋಗುವಾಸೆ ಅವಳಿಗೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಇದೆ' ಎಂದು ಹೇಳಿದರು.

ಫಾರೆಸ್ಟ್ ನಿರ್ಮಾಪಕ ಕಾಂತರಾಜು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಅವರು ಮಾತನಾಡುತ್ತ 'ಕಳೆದ ವರ್ಷ ಅಗಸ್ಟ್ ನಲ್ಲಿ ವೇದಗುರು ಈ ಚಿತ್ರ ನೋಡಲು ಕರೆದರು. ಆಗ ನಾನು ನಮ್ಮ ಫಾರೆಸ್ಟ್ ರಿಲೀಸ್ ಟೆನ್ ಷನ್ ನಲ್ಲಿದ್ದೆ. . ಅದು ಅಷ್ಟಾಗಿ ಸೌಂಡ್ ಮಾಡಲಿಲ್ಲ. ನಂತರ ಸಿನಿಮಾ ವಿತರಣೆ‌ಗೆ ಮುಂದಾದೆ. ಈ ಸಿನಿಮಾ ನೋಡಿದಾಗ ತುಂಬಾ ಇಷ್ಟವಾಯ್ತು. ಅಷ್ಟು ಚನ್ನಾಗಿ ಸಿನಿಮಾ ಮಾಡಿದ್ದಾರೆ. ನನಗೆ ಡಿಫರೆಂಟ್ ಫೀಲ್ ಕೊಟ್ಟಿತು. ಚಿತ್ರದಲ್ಲಿ ಅಜಯ್ ರಾವ್ ಅವರ ಅಭಿನಯ ಅದ್ಭುತ ಎನಿಸಿತು. ಹಾಗಾಗಿ ಚಿತ್ರಕ್ಕೆ ಸಾಥ್ ನೀಡಿದ್ದೇನೆ' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ