- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ಇತಿಹಾಸವನ್ನು ಗಮನಿಸಿದರೆ, ಕೆಲವು ಶೀರ್ಷಿಕೆಗಳು ಕೇವಲ ಹೆಸರಾಗಿ ಉಳಿಯದೆ ಒಂದು ಸಂಚಲನವನ್ನೇ ಸೃಷ್ಟಿಸಿರುತ್ತವೆ. ಅಂತಹ ಪಟ್ಟಿಯಲ್ಲಿ 'ಉಶ್' (Ush) ಎಂಬ ಹೆಸರಿಗೆ ಅಗ್ರಸ್ಥಾನವಿದೆ. ತೊಂಬತ್ತರ ದಶಕದಲ್ಲಿ ಉಪೇಂದ್ರ ಅವರ ಸೃಜನಶೀಲತೆಯಿಂದ ಹುಟ್ಟಿಕೊಂಡ ಈ ಶೀರ್ಷಿಕೆ ಇಂದು ಹೊಸಬರ ತಂಡವೊಂದಕ್ಕೆ ಸ್ಫೂರ್ತಿಯಾಗಿದೆ. ಗಾಂಧಿನಗರದ ಗಲ್ಲಿಗಳಲ್ಲಿ ಈಗ ಮತ್ತೆ 'ಉಶ್' ಸದ್ದು ಕೇಳಿಬರುತ್ತಿದೆ. ಹೊಸ ಪ್ರತಿಭೆಗಳ ಸೃಜನಾತ್ಮಕ ಹಸಿವು ಮತ್ತು ಹಿರಿಯ ತಂತ್ರಜ್ಞರ ಮಾರ್ಗದರ್ಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರ, ತನ್ನ ಆಕರ್ಷಕ ಹಾಡುಗಳ ಮೂಲಕ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

'ಉಶ್' (Ush): ಹೆಸರಿನಲ್ಲಿರುವ ಜವಾಬ್ದಾರಿ ಮತ್ತು ಮ್ಯಾಜಿಕ್....

ಕನ್ನಡಿಗರಿಗೆ 'ಉಶ್' ಎನ್ನುವ ಶಬ್ದ ಅತ್ಯಂತ ಪರಿಚಿತ ಹಾಗೂ ಹತ್ತಿರವಾದದ್ದು. ಇಂತಹ ಒಂದು ಐತಿಹಾಸಿಕ ತೂಕವಿರುವ ಶೀರ್ಷಿಕೆಯನ್ನು ತನ್ನ ಚಿತ್ರಕ್ಕೆ ಬಳಸಿಕೊಳ್ಳುವುದು ಯಾವುದೇ ಹೊಸ ತಂಡಕ್ಕೆ ಒಂದು ರೀತಿಯಲ್ಲಿ 'ಎರಡು ಅಲಗಿನ ಕತ್ತಿ'ಯಂತೆ. ಇದು ಪ್ರೇಕ್ಷಕರಲ್ಲಿ ತಕ್ಷಣದ ಕುತೂಹಲ ಮೂಡಿಸುವುದು ಎಷ್ಟು ಸತ್ಯವೋ, ಅಷ್ಟೇ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸುವ ಕಲಾತ್ಮಕ ಜವಾಬ್ದಾರಿಯೂ ತಂಡದ ಮೇಲಿರುತ್ತದೆ. ಈ ತಂಡವು ಈ ಸವಾಲನ್ನು ಒಂದು ಸಕಾರಾತ್ಮಕ ಆಶೀರ್ವಾದವಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವುದು ಶ್ಲಾಘನೀಯ.

FB_IMG_1766209835785

ಬ್ಯಾಂಕರ್ ಟು ಲಿರಿಸಿಸ್ಟ್: ಇಬ್ಬರು ಸುರೇಶ್‌ಗಳ ಸಾರಥ್ಯ...

ಈ ಚಿತ್ರದ ಹಿಂದೆ ಇಬ್ಬರು ಸುರೇಶ್ ಅವರ ಶ್ರಮವಿದೆ. ಒಬ್ಬರು ಮೂಲತಃ ತುಮಕೂರಿನವರಾದ ಸುರೇಶ್, ವೃತ್ತಿಯಲ್ಲಿ ಬ್ಯಾಂಕರ್ ಆದರೂ ಪ್ರವೃತ್ತಿಯಲ್ಲಿ ಕಲಾಪ್ರೇಮಿ. ಕೇವಲ ಹಣ ಹೂಡುವ ನಿರ್ಮಾಪಕರಾಗಷ್ಟೇ ಉಳಿಯದೆ, ಚಿತ್ರದ "ವಾಣಿ ವೈನ್ಸ್" ಎಂಬ ಹಾಡಿಗೆ ತಾವೇ ಸಾಹಿತ್ಯ ಬರೆಯುವ ಮೂಲಕ ತಮ್ಮೊಳಗಿನ ಸೃಜನಶೀಲತೆಯನ್ನು ಹೊರಹಾಕಿದ್ದಾರೆ. ಇವರೊಂದಿಗೆ ಮತ್ತೊಬ್ಬ ಸುರೇಶ್ ಅವರು ಸಾಥ್ ನೀಡಿದ್ದು, ಈ 'ಪ್ಯಾಷನ್' ಚಿತ್ರದ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸಿದೆ. ವೃತ್ತಿ ಮತ್ತು ಕಲೆಯ ನಡುವಿನ ಈ ಸಮತೋಲನವೇ ಈ ತಂಡದ ಶಕ್ತಿ.

'ವಾಣಿ ವೈನ್ಸ್' ಮತ್ತು ಗಾಯಕ ಶರಣ್ ಅವರ ಕಂಠಸಿರಿ...

ಈ ಚಿತ್ರದ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಜನಪ್ರಿಯ ನಟ ಮತ್ತು ಅದ್ಭುತ ಗಾಯಕ ಶರಣ್ ಅವರು ಚಿತ್ರದ ಹಾಡೊಂದಕ್ಕೆ ಧನಿಯಾಗಿರುವುದು. ಶರಣ್ ಮತ್ತು ಹಿಟ್ ಹಾಡುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಈ ಹಿಂದೆ ಅವರು ಹಾಡಿರುವ 'ಕುಡುಕರ ಸಾಂಗ್'ಗಳು ಹೇಗೆ ಸೂಪರ್ ಹಿಟ್ ಆಗಿವೆಯೋ, ಅದೇ ಸಾಲಿಗೆ ಈ "ವಾಣಿ ವೈನ್ಸ್" ಕೂಡ ಸೇರ್ಪಡೆಯಾಗಲಿದೆ ಎಂಬ ಭರವಸೆ ಮೂಡಿದೆ. ಸಂಗೀತ ನಿರ್ದೇಶಕ ಡ್ಯಾನಿಯಲ್ ಅವರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಅತ್ಯಂತ 'ಕ್ಯಾಚಿ' ಆಗಿದ್ದು, ಇಡೀ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಹಾಡಿನ ರೆಕಾರ್ಡಿಂಗ್ ವೇಳೆ ಶರಣ್ ಅವರು ಸಂಗೀತದ ಪ್ರಾಮುಖ್ಯತೆಯ ಬಗ್ಗೆ ಹೀಗೆ ಹಂಚಿಕೊಂಡರು:

"ಮ್ಯೂಸಿಕ್ ಅನ್ನುವಂತದ್ದು ಒಂದು ಸಿನಿಮಾನ ಎತ್ತಿ ಹಿಂಗೆ ಎಲಿವೇಟ್ ಮಾಡಿ ನಿಲ್ಸೋದಕ್ಕೆ ಮ್ಯೂಸಿಕ್ ನ ಸಾತಇದೆಯಲ್ಲ ಅದು ತುಂಬಾನೇ ಮುಖ್ಯ. ಸಿನಿಮಾ ಮತ್ತು ಸಂಗೀತದ ಪ್ರೊಪೋರ್ಷನ್ ಯಾವಾಗಲೂ ಈಕ್ವಲ್ ಆಗಿರಬೇಕು."

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ