ನಾವು ಹುಟ್ಟಿದೂರು ಮಲೆನಾಡಿನ ತವರೂರಾದ ಚಿಕ್ಕಮಗಳೂರು, ಚಿಕ್ಕಂದಿನಿಂದ ಅಲ್ಲಿನ ಗಿರಿ ಪ್ರದೇಶ ನಮಗೆ ಹೊಸತೇನಲ್ಲ ವರ್ಷಕ್ಕೊಮ್ಮೆ ಸೀತಾಳ್ಳಯ್ಯನ ಗಿರಿ. ಮುಳ್ಳಯ್ಯನ ಗಿರಿ ಮತ್ತು ಕೆಮ್ಮಣ್ಣು ಗುಂಡಿಗೆ ಹೋಗಿ ಬರುವುದು ನಮಗೆ ಮೊದಲಿನಿಂದಲೂ ಬಂದ ಪದ್ಧತಿ. ಆದರೆ ಮಕ್ಕಳು ದೊಡ್ಡವರಾಗಿ ನಾವು ಬೆಂಗಳೂರಿಗೆ ಬಂದ ಮೇಲೆ ಆ ಪದ್ಧತಿ ತಪ್ಪಿಹೋಯಿತು. ನನ್ನ ಚಿಕ್ಕಂದಿನ ಚಿಕ್ಕಮಗಳೂರನ್ನು ನಿಜಕ್ಕೂ ಮರೆತಂತೆಯೇ ಆಗಿತ್ತು. ಆದರೆ ಮಗಳು, ಮೊಮ್ಮಕ್ಕಳೊಡನೆ ಬಂದಾಗ ಅವಳಿಗೆ ತನ್ನ ಅಜ್ಜಿಯ ಮನೆಯನ್ನು ತೋರಿಸುವ ಆಸೆ ಹಂಡೆಯಲ್ಲಿ ನೀರನ್ನು ಹೇಗೆ ಕಾಯಿಸಿಕೊಳ್ಳುತ್ತಾರೆ ಎಂದು ಮಕ್ಕಳಿಗೆ ತೋರಿಸುವ ತವಕ, ಹಾಗೆಯೇ ಹಂಡೆಯ ಬಿಸಿ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವ ಬಯಕೆ. ಗೀಸರ್‌ನ ನೀರಿನಲ್ಲಿ ಸ್ನಾನ ಮಾಡಿದ ಮಕ್ಕಳು ಹಂಡೆಯನ್ನು ನೋಡಿದ್ದೇ ಇಲ್ಲ. ಮೊಮ್ಮಕ್ಕಳ ದೆಸೆಯಿಂದ ನಾವು ಚಿಕ್ಕಮಗಳೂರಿಗೆ ಹೋಗಿ ಅಲ್ಲಿಯ ಹಚ್ಚ ಹಸುರಿನ ಗಿರಿ ಸಾಲುಗಳನ್ನು, ಕಾಫಿ ತೋಟಗಳನ್ನು ನೋಡಿ ಬಂದದ್ದಾಯಿತು.

ಬೆಂಗಳೂರಿನ ಬಿಸಿಲಿಗೆ ಬಸವಳಿದ ನಮಗೆ ಚಿಕ್ಕಮಗಳೂರಿನ ತಂಪು ಗಾಳಿ ನಿಜಕ್ಕೂ ಸ್ವರ್ಗ ಸುಖವನ್ನೀಯಿತು.... ಹಸುರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ ಎನ್ನುವ ಕವಿ ನುಡಿಯ ನಿಜ ದರ್ಶನವಾದಂತೆನಿಸಿತು. ರುಕ್ಮಾಂಗದ ದೊರೆಯು ತನ್ನ ಚಿಕ್ಕ ಮಗಳಿಗೆ ಉಡುಗೊರೆಯಾಗಿ ನೀಡಿದ್ದರಿಂದ ಚಿಕ್ಕಮಗಳೂರೆನ್ನುವ ಹೆಸರು ಬಂದಿತಂತೆ. ಅಂದು ವಿದ್ಯೆ, ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಸರಾದ ಊರಾಗಿತ್ತು. ಈಗಲೂ ಸಿರಿವಂತರ ನಾಡೇ ಅದು. ಕಾಫಿ, ಏಲಕ್ಕಿ ತೋಟಗಳ ಒಡೆಯರು ಅಲ್ಲಿ ಶ್ರೀಮಂತರೇ.

ಸೀತಾಳ್ಳಯ್ಯನ ಗಿರಿ

ಮೊದಲ ದಿನ ಇನೋವಾದಲ್ಲಿ  ತಮ್ಮನ ಮಕ್ಕಳನ್ನು ಏರಿಸಿಕೊಂಡು ಗಿರಿಯ ಕಡೆ ಹೊರಟೆ. ಮಧ್ಯಾಹ್ನದ ಊಟಕ್ಕೆ ಮಾವಿನಕಾಯಿ ಚಿತ್ರಾನ್ನ ಸಿದ್ಧವಾಯಿತು. ಮಕ್ಕಳು ಚಿಪ್ಸ್, ಫಾಂಟಾ, ಬಿಸ್ಕೆಟು ಚಾಕಲೇಟುಗಳನ್ನು ಮರೆಯದೆ ಹಿಡಿದುಕೊಂಡರು. ಎಷ್ಟು ಬೇಗ ಎಂದುಕೊಂಡರೂ ನಮ್ಮ ಪಟಾಲಮ್ ಹೊರಡುವ ಹೊತ್ತಿಗೆ ಬೆಳಗ್ಗೆ ಒಂಬತ್ತಾಗಿಯೇ ಹೋಯಿತು. ಮೊದಲಿಗೆ ಸೀತಾಳ್ಳಯ್ಯನ ಗಿರಿ, ಸಾಗುವ ದಾರಿಯಲ್ಲಿ ಅಕ್ಕಪಕ್ಕ ಕಾಫಿ ತೋಟಗಳು, ನಾವು ಹೋದ ಕಾಲಕ್ಕೆ ಅಲ್ಲಿ ಹೂವಿನ ಕಾಲ ಮುಗಿದು ಹೋಗಿತ್ತು. ಯುಗಾದಿಯ ನಂತರ ಏಪ್ರಿಲ್‌ನಲ್ಲಿ ಕಾಫಿ ಹೂ ನೋಡಲು ಬಲು ಚಂದ, ಮಲ್ಲಿಗೆಯ ಮೊಗ್ಗಿನ ಜಡೆ ಹೆಣೆದಂತಿರುತ್ತದೆ ಅಥವಾ ಕೆಂಪನೆಯ ಹೊಳೆಯು ಕಾಫಿ ಹಣ್ಣುಗಳನ್ನು ನೋಡಬೇಕೆಂದರೆ ಡಿಸೆಂಬರ್‌ ನಂತರ ಹೋಗಬೇಕು.

ಮಳೆಗಾಲ ಆಗ ತಾನೇ ಪ್ರಾರಂಭವಾಗಿದ್ದರಿಂದ ನಮಗೆ ಹೊಳೆಯುವ ಹಸಿರು ಎಲೆಗಳ ದರ್ಶನ ಭಾಗ್ಯವಷ್ಟೆ ಆಯಿತು. ಸುತ್ತಲಿನ ಪ್ರಕೃತಿಯ ಸಿರಿಯನ್ನು ಸವಿಯುತ್ತಾ ಸಾಗಿದಾಗ ಬಹಳ ಬೇಗ ಸೀತಾಳ್ಳಯ್ಯನ ಗಿರಿ ಸಿಕ್ಕಿತು. ಅಲ್ಲಿಯೇ ದೇವರ ದರ್ಶನ, ಉದ್ಭವ ಗಂಗೆಯ ಮಧ್ಯೆ ಶಿವಲಿಂಗ, ನಾವು ಹೋಗುವ ಹೊತ್ತಿಗೆ ಅಯ್ಯನೋರು ಪೂಜೆ ಮಾಡಿಕೊಟ್ಟರು. ಎತ್ತರದ ಹಸಿರು ಗಿರಿಗಳ ಸಾಲುಗಳ ನಡುವೆ ನೆಲೆಸಿರುವ ಶಿವನ ದರ್ಶನ ಮನಕ್ಕೆ ಮುದವೆನಿಸಿತು.

ಆಧುನಿಕ ಕಾಲ, ಅಲ್ಲಿಯೂ ಮಂಗಳಾರತಿಯ ಸಮಯದಲ್ಲಿ ವಿದ್ಯುತ್‌ ಜಾಗಟೆ, ಡಮರುಗ. ನಮ್ಮವರಿಂದ ಅದರ ಚಾಲನೆಯೂ ಆಗಿಹೋಯಿತು. ದೇವಾಲಯದ ಎದುರು ಒಂದು ಗುಹೆ, ಇದೇ ರೀತಿಯ ಗುಹೆ ನಾವು ಮುಳ್ಳಯ್ಯನಗಿರಿಯಲ್ಲೂ ಕಂಡೆವು. ಪ್ರಾಯಶಃ ಆಗಿನ ರಾಜರು ಗುಹೆಗಳ ಮೂಲಕ ಇಲ್ಲಿಗೆ ಬರುತ್ತಿದ್ದರೇನೋ ಅಥವಾ ಸಂಕಟಗಳ ಸಮಯದಲ್ಲಿ ಗುಹೆಯ ಮೂಲಕ ಸುರಕ್ಷಿತವಾಗಿ ದೇವಾಲಯ ತಲುಪುತ್ತಿದ್ದರೇನೋ, ಸರಿಯಾದ ಮಾಹಿತಿ ನೀಡುವವರು ಯಾರೂ ಇಲ್ಲವಾದ್ದರಿಂದ ನಮ್ಮದೇ ಆದ ಊಹೆಗಳನ್ನು ಮಾಡಿಕೊಂಡಿದ್ದಾಯಿತು. ಆ ದಿನ ದೇವಾಲಯದಲ್ಲಿ ಪೂಜೆ ಮಾಡಿಸುತ್ತಿದ್ದರು, ನೀವು ಊಟ ಮಾಡಿಕೊಂಡು ಹೋಗಿ ಎಂದು ಸತ್ಕರಿಸಿದರು. ನೋಡಿ ನಮ್ಮ ಸಂಸ್ಕೃತಿ ಅಡಗಿರುವುದೇ ಇಂತಹ ಅತಿಥಿ ಸತ್ಕಾರದಲ್ಲಿ, ಅವರ ವಿಶ್ವಾಸಕ್ಕೆ ಮನತುಂಬಿ ಬಂದರೂ ನಮಗೆ ಹೊತ್ತಾಗುತ್ತದೆ ಎಂದು ಅಲ್ಲಿಂದ ಹೊರಟೆವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ