ಯೂರಾಲಜಿ ಆರೈಕೆಗಾಗಿ ಮೋಸೆಸ್ 2.0 ತಂತ್ರಜ್ಞಾನ ಮೂತ್ರಪಿಂಡದಲ್ಲಿರುವ ಕಲ್ಲು ಮತ್ತು ಪ್ರಾಸ್ಟೇಟ್ ನ್ನು ಅತ್ಯಂತ ನಿಖರತೆಯಿಂದ ತೆಗೆದು ಹಾಕಲು ಹೊಸ ಆಧುನಿಕ ತಂತ್ರಜ್ಞಾನದ ನೆರವು ಇಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ಪತ್ರೆಯು ಯೂರಾಲಜಿ ಆರೈಕೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೋಸೆಸ್ 2.0 ತಂತ್ರಜ್ಞಾನವನ್ನು ಪ್ರಾರಂಭಿಸಿದೆವು.
ಪ್ರಾಯೋಗಿಕವಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಈ ಸೇವೆ ಪರಿಚಯಿಸಲಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ತೊಂದರೆ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಸೇರಿ ಇತರೆ ಸಮಸ್ಯೆಗಳಿಗೆ ಸುಧಾರಿತ ಲೇಸರ್ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲು ಇದು ಸಹಾಯವಾಗುತ್ತದೆ. ಸಂಪೂರ್ಣವಾಗಿ ರಕ್ತರಹಿತ ಮತ್ತು ನೋವುರಹಿತ ಶಸ್ತ್ರಚಿಕಿತ್ಸೆಯೂ ಸಿಗಲಿದೆ. ಕೇವಲ ಒಂದು ಗಂಟೆಯಲ್ಲಿ ಮೂತ್ರಪಿಂಡದಲ್ಲಿರುವ ಕಲ್ಲು ಮತ್ತು ಪ್ರಾಸ್ಟೇಟ್ ನ್ನು ಅತ್ಯಂತ ನಿಖರತೆಯಿಂದ ತೆಗೆದುಹಾಕಲು ತಂತ್ರಜ್ಞಾನದ ನೆರವು ಆಗಲಿದೆ. ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಲು ಹಾಗೂ ಶಸ್ತ್ರಚಿಕಿತ್ಸೆ ಬಳಿಕ ವೇಗವಾಗಿ ಚೇತರಿಸಿಕೊಳ್ಳಲು ಅನುಕೂಲವಾಗಲಿದೆ.
ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಮೋಸೆಸ್ 2.0 ಎಂಬುದು ಹೋಲ್ಮಿಯಮ್ ಲೇಸರ್ ತಂತ್ರಜ್ಞಾನದಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವ ತಡೆಯಲು ರಕ್ಷಣೆ ಮಾಡುತ್ತದೆ. ಅನೇಕ ಆರೋಗ್ಯ ಅಪಾಯಗಳನ್ನು ಹೊಂದಿರುವ ಮತ್ತು ರಕ್ತ ತೆಳುಗೊಳಿಸುವ ಅಥವಾ ಹೆಪ್ಪುರೋಧಕಗಳನ್ನು ಹೊಂದಿರುವ ಜನರಿಗೆ, ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಅಥವಾ ಪ್ರಾಸ್ಟೇಟ್ ಹಿಗ್ಗುವಿಕೆ ತಡೆಯಲು ಇದನ್ನು ಬಳಸಲಾಗುತ್ತದೆ. ಇದು 120 ವ್ಯಾಟ್ ಮೂಲಕ ಹೋಲ್ಮಿಯಂ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಚೀನಾ ಮತ್ತು ಅಮೆರಿಕಾದಲ್ಲಿ ಈ ತಂತ್ರಜ್ಞಾನ ಆಧಾರಿತದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಳಿಕ, ಇದನ್ನು ಭಾರತದ ಅಪೋಲೋ ಆಸ್ಪತ್ರೆಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಈ ಮೂಲಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಸಾಲಿನಲ್ಲಿ ವಿಶ್ವದಲ್ಲೇ 3ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮುಂದಿನ ವರ್ಷದ ಜನರೊಳಗೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಇರುವ ಅಪೋಲೋ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈ ಸೇವೆ ಲಭ್ಯವಾಗಲಿದೆ.
ಮೋಸೆಸ್ ತಂತ್ರಜ್ಞಾನವನ್ನು ಕಲ್ಲುಗಳಿಗೆ ಚಿಕಿತ್ಸೆ ನೀಡಲು ಬಳಸಿದಾಗ ಇದನ್ನು ಮೋಸೆಸ್ ಲೇಸರ್ ಟೆಕ್ನಾಲಜಿ ಫ್ರಾಗ್ಮೆಂಟೇಶನ್ ಹಾಗೂ ಪ್ರಾಸ್ಟೇಟ್ ಚಿಕಿತ್ಸೆಯಲ್ಲಿ ಬಳಸಿದಾಗ ಇದನ್ನು ಮೋಸೆಸ್ ಲೇಸರ್ ಎನ್ಯುಕ್ಲಿಯೇಶನ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ ಎಂದು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯ ಯೂರೋ ಆಂಕಾಲಜಿಸ್ಟ್ ಡಾ. ಟಿ. ಮನೋಹರ್ ಹೇಳುತ್ತಾರೆ. ಸಾಮಾನ್ಯವಾಗಿ ರೋಗಿಗಳು ಎದುರಿಸುವ ಹಲವು ಸಮಸ್ಯೆಗಳಲ್ಲಿ ಕಿಡ್ನಿ ಕಲ್ಲುಗಳ ಸಮಸ್ಯೆಯೂ ಒಂದು. ಕಲ್ಲುಗಳ ಗಾತ್ರದಲ್ಲಿ ಚಿಕ್ಕದು ಇದ್ದರೆ ಯಾವುದೇ ಚಿಕಿತ್ಸೆ ಇಲ್ಲದೆ ಮೂತ್ರದಲ್ಲಿ ಹೊರಹೋಗುತ್ತದೆ. ಆದರೆ, ದೊಡ್ಡ ಗಾತ್ರದ ಕಲ್ಲು ಇದ್ದರೆ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಶಸ್ತ್ರಚಿಕಿತ್ಸೆಗಳಿದ್ದರೂ ಅಪೋಲೋ ಆಸ್ಪತ್ರೆಯಲ್ಲಿ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಚಿಕಿತ್ಸೆ ನಡೆಸುವ ಮೂಲಕ ಕಿಡ್ನಿಯಲ್ಲಿ ಇರುವ ಕಲ್ಲು ತೆಗೆಯಲಾಗುತ್ತದೆ.