ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗಳ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ.
2024ರ ಸೆಪ್ಟೆಂಬರ್ 8ರಂದು ಹೆಣ್ಣು ಮಗುವಿನ ಪಾಲಕರಾದ ಈ ದಂಪತಿಯ ಮಗು ಜನಿಸಿ ವರ್ಷದ ಮೇಲಾಗಿತ್ತು. ಆದರೆ ಇಬ್ಬರೂ ಎಂದೂ ಮಗಳ ಮುಖವನ್ನು ತೋರಿಸಿರಲಿಲ್ಲ. ಇದೀಗ ಮಗಳ ಫೋಟೋ ರಿವೀಲ್ ಮಾಡಿದ್ದು, ಗಮನ ಸೆಳೆಯುವ ರೀತಿಯಲ್ಲಿ ಇವೆ.ದೀಪಿಕಾ ಪಡುಕೋಣೆ ಅವರು ನಟಿಯಾಗಿ ಗಮನ ಸೆಳೆದೆವರು. ರಣವೀರ್ ಸಿಂಗ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ದಂಪತಿಗೆ ಕಳೆದ ಸೆಪ್ಟೆಂಬರ್ನಲ್ಲಿ ಮಗಳು ಜನಿಸಿದ್ದು, ದುವಾ ಎಂದು ಹೆಸರಿಟ್ಟಿದ್ದಾರೆ.
ಮಗು ಜನಿಸಿ ವರ್ಷ ಕಳೆದರೂ ದೀಪಿಕಾ ಪಡುಕೋಣೆ ಅವರು ಮಗಳ ಫೋಟೋ ತೋರಿಸಿಯೇ ಇರಲಿಲ್ಲ. ಇದೀಗ ದೀಪಿಕಾ ಪಡುಕೋಣೆ ತಮ್ಮ ಮಗಳು ದುವಾ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮಗಳನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ದುವಾ ಸಖತ್ ಕ್ಯೂಟ್ ಆಗಿದ್ದಾಳೆ. ಅವಳ ಪುಟಾಣಿ ಜುಟ್ಟು, ನಗು ಗಮನ ಸೆಳೆಯುವಂತಿದೆ ಎಂದು ಅನೇಕರು ಹೇಳಿದ್ದಾರೆ. ದೀಪಿಕಾ ಹಾಗೂ ದುವಾ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ. ರಣವೀರ್ ಸಿಂಗ್, ದೀಪಿಕಾ ದಂಪತಿ ಮಗಳ ಫೋಟೋದೊಂದಿಗೆ ಕಂಗೊಳಿಸುತ್ತಿದ್ದಾರೆ. ಕೆಲವರು ದುವಾ ತನ್ನ ಅಮ್ಮ ದೀಪಿಕಾ ತರ ಕಾಣುತ್ತಿದ್ದಾಳೆ ಎಂದರೆ, ಇನ್ನೂ ಕೆಲವರು ರಣವೀರ್ ಸಿಂಗ್ ರೀತಿ ಇದ್ದಾರೆ ಎನ್ನುತ್ತಿದ್ದಾರೆ.