– ರಾಘವೇಂದ್ರ ಅಡಿಗ ಎಚ್ಚೆನ್.

ಡೆವಿಲ್​ ಸಿನಿಮಾ ಸಕ್ಸಸ್​ ತುಂಬಾನೇ ಖುಷಿಯಾಗ್ತಿದೆ. ದರ್ಶನ್​ ಇಲ್ದಿದ್ರೂ, ಫ್ಯಾನ್ಸ್​ ಸಿನಿಮಾನಾ ಮೆರೆಸ್ತಿದ್ದಾರೆ. ಚಿತ್ರನ ತಲೆಮೇಲೆ ಎತ್ಕೊಂಡು ಮೆರೆಸ್ತಾರೆ ಇದೇ ಸಾಕ್ಷಿ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಾರೆ.
ಡಿಕಂಪನಿ ಇನ್ಸ್​ಸ್ಟಾ ಪೇಜ್​ನಲ್ಲಿ ಪ್ರೋಮೋ ರಿಲೀಸ್​ ಮಾಡಿದೆ. ಅದರಲ್ಲಿ ವಿಜಯಲಕ್ಷ್ಮೀ ಅವರು ‘ಡೆವಿಲ್’ ಬಗ್ಗೆ ಮಾತನ್ನಾಡಿದ್ದಾರೆ. ಸಿನಿಮಾ ಸಕ್ಸಸ್​ ತುಂಬಾನೇ ಸಕ್ಸಸ್ ಆಗಿದೆ. ಅಭಿಮಾನಿಗಳು ಅವರನ್ನ, ಅವರ ಸಿನಿಮಾವನ್ನು ತಲೆಮೇಲೆ ಹೊತ್ಕೊಂಡು ಮೆರೆಸುತ್ತಾರೆ ಎಂದು.
ಇದೇ ವೇಳೆ ದರ್ಶನ್ ಫ್ಯಾನ್ಸ್ ಪರ ಬ್ಯಾಟ್ ಬೀಸಿದ್ದಾರೆ. ದರ್ಶನ್​ ಫ್ಯಾನ್ಸ್​ಗೆ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಅಂತಾ ಗೊತ್ತಿದೆ. ಅವರನ್ನು ಹೇಗೆ ನೋಡಿಕೊಳ್ಳಬೇಕು ಅಂತಾನೂ ಗೊತ್ತಿದೆ. ನೆಗೆಟಿವ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ದರ್ಶನ್ ಅಭಿನಯದ ಡೆವಿಲ್ ಸಿನಿಮಾವು ಡಿಸೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಬಂದಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ