ಜಾನಪದಕ್ಕಾಗಿ ಜೀವನ ಮುಡುಪಿಟ್ಟ ಶಿಲ್ಪಾ ಮುಡುಬಿ, `ಸಂಸ್ಕೃತಿ ಸಂಗಮ' ಕನಸು ಬೆನ್ನಟ್ಟಿದ ಕಂಚಿನ ಕಂಠದ ಕಲಾವಿದೆ. ಈಕೆ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಉತ್ತರ ಕರ್ನಾಟಕದ ಜಾನಪದ ಸೊಗಡನ್ನು ಹೇಗೆ ಹರಡುತ್ತಿದ್ದಾರೆ ಎಂದು ತಿಳಿಯೋಣವೇ....?

ಕಲಿಯುವ ಆಸಕ್ತಿ ಕಲೆಗೆ ನಾಂದಿ ಹಾಡುತ್ತದೆ. ಕರತಲಾಮಲಕವಾಗುವ ಆ ಕಲೆಯೇ ಸಾಧನೆಯ ಕಿರೀಟ ತಂದುಕೊಡುತ್ತದೆ. ಆ ಸಾಧನೆಯ ಹಾದಿಯಲ್ಲಿ ಸಾರ್ಥಕತೆಯ ಬದುಕು ರೂಪುಗೊಳ್ಳುತ್ತದೆ. ಅಂತಹ ಬದುಕಿನಲ್ಲಿ ಭವಿಷ್ಯದ ಭರವಸೆಯ ಬೆಳಕು ಕಾಣಿಸುತ್ತದೆ. ಆ ಬೆಳಕಿನ ಜೊತೆ ಜೊತೆಗೇ ಹಣವೆಂಬ ಹಪಾಹಪಿ ಬಿಟ್ಟು, ಅಳಿಸಿ ಹೋಗುತ್ತಿರುವ ಜನಪದ ಕಲೆಗೆ ಮರುಜೀವ ಕೊಡುವ ಕೆಲಸ ಒಂದು ಸಾಹಸವೇ ಸರಿ. ಅಂತಹ ಸಾಹಸದಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುವ ಮಹಿಳೆಯೊಬ್ಬರಿದ್ದಾರೆ, ಅವರೇ ಶಿಲ್ಪಾ ಮುಡುಬಿ.

ಖ್ಯಾತ ಜನಪದ ಗಾಯಕಿ, ಜಾನಪದ ಅಕಾಡೆಮಿ ಸದಸ್ಯೆಯೂ ಆಗಿರುವ ಶಿಲ್ಪಾ ಮುಡುಬಿಯವರ ಕನಸು, ಗುರಿಯ ವ್ಯಾಪ್ತಿ ಬಹಳ ದೊಡ್ಡದು. ಬರೆಯುತ್ತಾ ಹೋದರೆ ಪುಟಗಳು ಸಾಲವು. ಏಕೆಂದರೆ ಇವರು ಹೆತ್ತವರು ಅಂದುಕೊಂಡಿದ್ದು ಒಂದು, ಇವರು ಆಗಿದ್ದು ಇನ್ನೊಂದು. ಇವರ ತಂದೆ ನಿವೃತ್ತ ಐಎಎಸ್‌ ಅಧಿಕಾರಿ ಬಾಬುರಾವ್ ‌ಮುಡುಬಿ. ತಾಯಿ ತುಳಸಿ ಮುಡುಬಿ, ನಿವೃತ್ತ ಶಿಕ್ಷಕಿ. ಹಳ್ಳಿಯಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು, ಉನ್ನತ ಉದ್ಯೋಗದಿಂದಾಗಿ ಬೆಂಗಳೂರು ಮಹಾನಗರದಲ್ಲೇ ಜೀವನ ಕಟ್ಟಿಕೊಂಡರು. ತಂದೆಯ ಹುಟ್ಟೂರು ಬೀದರ್‌ ನ ಮುಡುಬಿ ಆಗಿದ್ದರೂ, ಕೆಲಸ ಮತ್ತು ಮಕ್ಕಳ ಭವಿಷ್ಯದ ಉದ್ದೇಶದಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು.

ದೊಡ್ಡ ಮಗಳು ಶಿಲ್ಪಾ ಕೂಡ ದೊಡ್ಡ ಅಧಿಕಾರಿ ಆಗಬೇಕು ಎಂದು ತಂದೆ ಕನಸು ಕಟ್ಟಿಕೊಂಡಿದ್ದರು. ಕೆಳವರ್ಗದ ಸಮುದಾಯವಾಗಿದ್ದರಿಂದ ಮತ್ತೆ ಹಳ್ಳಿ ಜೀವನ ಬೇಡ, ಮಗಳು ನಗರದಲ್ಲೇ ಇದ್ದು, ದೊಡ್ಡ ಕೆಲಸ ಮಾಡಲಿ ಎಂಬ ಆಸೆ ಹೊತ್ತಿದ್ದರು. ಅದಕ್ಕಾಗಿ ಪ್ರತಿಷ್ಠಿತ ಮೌಂಟ್‌ ಕಾರ್ಮೆಲ್ ‌ಕಾಲೇಜಿನಲ್ಲಿ ಓದಿಸಿದ್ದರು. ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಪೂರೈಸಿದರು.

ದಿಕ್ಕು ಬದಲಿಸಿದ ಅಜ್ಜಿಯ ಹಾಡಿನಿಂದಾಗಿ ಸಿರಿವಂತಿಕೆ ತೊರೆದ ಶಿಲ್ಪಾ : ಬಾಲ್ಯದಿಂದಲೂ ಯಲ್ಲಮ್ಮನ ದೊಡ್ಡಾಟ, ಬಯಲಾಟ ನೋಡಿ ಬೆಳೆದಿದ್ದ ಶಿಲ್ಪಾ, ಸಿಡ್ನಿಯಲ್ಲಿ ಸಿನಿಮಾ ಮೇಕಿಂಗ್‌ ಕುರಿತು ಉನ್ನತ ಶಿಕ್ಷಣ ಪಡೆದರು. ಮೊದಲಿನಿಂದಲೂ ರಂಗಭೂಮಿ ಕುರಿತು ಆಸಕ್ತಿ ಇದ್ದುದರಿಂದ ಮಗಳ ಮನಸ್ಸು ತಂದೆಯ ಕನಸಿನ ದಾರಿಯಲ್ಲಿ ಸಾಗಲಿಲ್ಲ. ಅಜ್ಜಿ ಗುಂಡಮ್ಮ ಹಾಡುತ್ತಿದ್ದ ಜೋಗತಿ ಪದಗಳ ಸೆಳೆತ ಮಗಳ ಬದುಕಿನ ದಿಕ್ಕನ್ನೇ ಬದಲಿಸಿತು. ತನ್ನ ಮೂಲ ಯಾವುದು....? ಎಂಬ ಪ್ರಶ್ನೆ ಹುಟ್ಟಿದಾಗ ಅದಕ್ಕೆ ಸಿಗುವ ಉತ್ತರ ತಂದೆಯ ಹುಟ್ಟೂರು. ಜೊತೆಗೆ ತನ್ನ ಬಾಲ್ಯದ ನೆನಪು, ಅಜ್ಜಿ ಹಾಡುತ್ತಿದ್ದ ಕುಟ್ಟುವ, ಬೀಸುವ ಪದಗಳು, ಗೀಗಿ ಪದ, ಜೋಗುಳ ಪದ ನೆನಪಾಗುತ್ತವೆ. ಅಜ್ಜಿ ಗುಂಡಮ್ಮ, ಹಳ್ಳಿಯ ಅಜ್ಜಿ ಶರಣಮ್ಮ ಗುನುಗುತ್ತಿದ್ದ ದೇಸಿ ಪದಗಳು ಶಿಲ್ಪಾರ ಬಾಲ್ಯದಲ್ಲೇ ಜನಪದ ಸೊಗಡಿನ ಮೊಳಕೊಡೆಸಿತು. ಹಾಗಾಗಿ ಸಿರಿವಂತಿಕೆಯ ಜೀವನ ತೊರೆದ ಮಗಳು ಶಿಲ್ಪಾ ಕನ್ನಡ ನೆಲದ ಸೊಗಡಿನ ಸಿರಿವಂತಿಕೆಯ ಜಾನಪದಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟರು. ಅಜ್ಜಿ ಹಾಡುತ್ತಿದ್ದ ಜೋಗತಿ ಪದ ಹೊಸತನ್ನು ಹುಡುಕುವಂತೆ ಮಾಡಿತು. ತನ್ನ ಹಿರಿಕರ ಹಿನ್ನೆಲೆಯನ್ನು ಶೋಧಿಸುತ್ತಾ ಹೋದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ