ಅಮಿತ್‌ : ನಿನ್ನ ಹೆಂಡತಿ ನಿನ್ನನ್ನು ಬಿಟ್ಟು ಏಕೆ ಓಡಿ ಹೋದಳು?

ಅರುಣ್‌ : ಏನೋಪ್ಪ ಗೊತ್ತಿಲ್ಲ.... ನಾನು ಬಾತ್‌ ರೂಮಿಗೆ ಸ್ನಾನಕ್ಕೆಂದು ಹೋಗಿದ್ದೆ. ಬಂದು ನೋಡ್ತೀನಿ.... ಓಡಿ ಹೋಗಿಬಿಟ್ಟಿದ್ದಾಳೆ!

ಅಮಿತ್‌ : ಬಹಳ ದಿನಗಳಿಂದ ನೀನು ಸ್ನಾನಕ್ಕೆ ಹೋಗಲಿ ಅಂತ ಕಾಯ್ತಿದ್ದಳೋ ಏನೋ....ಅಲ್ವಾ.... ನೀನು ಸೋಮಾರಿ ಸೋಫಾ ಬಿಟ್ಟು ಮೇಲೆ ಏಳೋದೇ ಇಲ್ಲ.

ಅರುಣ್‌ : ಅದಕ್ಕೆ ಮತ್ತೆ.... ಶುಚಿತ್ವ, ಶುಭ್ರತೆ, ಹೈಜೀನ್‌ ಅಂತೆಲ್ಲ ತಲೆ ಕೆಡಿಸಿಕೊಳ್ಳಬಾರದು ಅಂತ ಅನ್ನೋದು!

ಇಬ್ಬರು ಸಿನಿಮಾ ನಟರ ಪತ್ನಿಯರು ಮಾತುಕಥೆಯಲ್ಲಿ ತೊಡಗಿದ್ದರು. ಒಬ್ಬಳು ಹೇಳಿದಳು, ``ನನ್ನ ಪತಿ ಸತತ ಕೆಲಸ ಕಾರ್ಯಗಳಿಂದ ವಿಶ್ರಾಂತಿ ಒಂದು ತಿಂಗಳ ರಜೆ ಪಡೆದಿದ್ದಾರೆ. ನಾವು ವಿಶ್ವ ಪರ್ಯಟನೆಗೆ ಹೊರಟಿದ್ದೇವೆ!''

``ಹ್ಞೂಂ..... ಅದೇನೋ ಸರಿ. ನಾವು ಸಹ ರಜೆಯ ಮಜಾ ಪಡೆಯಬೇಕೆಂದು ಇದ್ದೇವೆ. ಆದರೆ ನಿಮ್ಮ ತರಹ ನಾವು ಒಂದೇ ಕಡೆ ವರ್ಲ್ಡ್ ಟೂರ್‌ ಅಂತ ಹೋಗೋಲ್ಲಪ್ಪ...? ಭಾರತವಿಡೀ ಬೇರೆ ಬೇರೆ ಊರುಗಳನ್ನು ಸುತ್ತಾಡಿ ಬರುತ್ತೇವೆ,'' ಇನ್ನೊಬ್ಬಳು ಥಟ್ಟನೆ ಹೇಳಿದಳು.

ಪತಿ : ಈ ವಿಷಯ ನಂಬಲಾಗದ ಸತ್ಯವಾಗಿದೆ. ಇದರ ವಾಸ್ತವಿಕ ಸಂಗತಿಯನ್ನು ಅಲ್ಲಗಳೆಯಲು ಆಗುವುದಿಲ್ಲ. ಯೂರೋಪಿನ ಒಬ್ಬ ವಿದ್ವಾಂಸರು ಬರೆಯುತ್ತಾರೆ, ``ಯಾವ ವ್ಯಕ್ತಿ ಮಹಾ ಕಡು ಮೂರ್ಖರಾಗಿರುತ್ತಾನೋ, ಅವನಿಗೆ ಅಷ್ಟೇ ಚೆಂದುಳ್ಳಿ ಚೆಲುವೆಯಾದ ಹೆಂಡತಿ ಸಿಗುತ್ತಾಳಂತೆ....''

ಪತ್ನಿ : ಅಯ್ಯೋ.... ಹೋಗ್ಲಿ ಬಿಡಿ ಅಂದ್ರೆ... ಸುಮ್ಮ ಸುಮ್ಮನೇ ನನ್ನನ್ನು ಹೊಗಳುತ್ತಿರುವುದು ಅಂದ್ರೆ ನಿಮಗೆ ತುಂಬಾ ಇಷ್ಟ ಅಂತ ನನಗೆ ಗೊತ್ತಿಲ್ಲವೇ....?

ಪ್ರಭಾ : ನನ್ನ 4 ವರ್ಷದ ಮಗ ಈ ದಿನ ವಜ್ರದ ಉಂಗುರ ನುಂಗಿಬಿಟ್ಟ. ಈಗ ಅವನ ಆಪರೇಷನ್‌ ಮಾಡಿಸಬೇಕಿದೆ. ಇಲ್ಲಿಗೆ ಹೊಸದಾಗಿ ಬಂದಿದ್ದಾರಲ್ಲ ಡಾ. ವಿನಯ್‌, ಅವರ ಕೈಗುಣ ಹೇಗಿದೆ?

ವಿಭಾ : ಕೈಗುಣದ ಬಗ್ಗೆ ಗೊತ್ತಿಲ್ಲ..... ಅವರಿಗೆ ತುಂಬಾ ಮರೆತಂತೆ, ಆಪರೇಷನ್‌ ಗೆ ಹೇಳಿದರೆ ಮಾತ್ರ, ಮೇಜಿನ ಮೇಲೆ ಇರಿಸಿದ್ದ ಕತ್ತಿ, ಚಾಕು ಸಂಖ್ಯೆ ಸರಿಯಾಗಿದೆ ತಾನೇ ಅಂತ ಚೆಕ್‌ ಮಾಡಿಕೊಳ್ಳಬೇಕಂತೆ. ಆಮೇಲೆ ರೋಗಿಗೆ ಹೊಟ್ಟೆನೋವು ಬಂದುಬಿಟ್ಟೆ?

ಮಹೇಂದ್ರ ತನ್ನ ಗೆಳೆಯ ಮಹೇಶನ ಮದುವೆಯ ವಾರ್ಷಿಕೋತ್ಸವಕ್ಕೆ 5,000/ ರೂ. ಬೆಲೆ ಬಾಳುವ ಒಂದು ಅದ್ಭುತವಾದ ಮಾತನಾಡು ಗಿಣಿಯನ್ನು ಉಡುಗೊರೆಯಾಗಿ ತಂದುಕೊಟ್ಟ. ಕೆಲವು ದಿನಗಳ ನಂತರ ಮಹೇಶನ ಮನೆಗೆ ಬಂದ ಮಹೇಂದ್ರ ಕೇಳಿದ, ``ನಾನು ಕೊಟ್ಟ ಉಡುಗೊರೆ ಹಿಡಿಸಿತೇ?''

ಅದಕ್ಕೆ ಮಹೇಶ, ``ಬಹಳ ಹಿಡಿಸಿತು... ಆದರೆ ಪೆದ್ದಿ, ನನ್ನ ಹೆಂಡತಿ ಸ್ವಲ್ಪ ಉಪ್ಪು ಹಾಕಿ ಹಾಕಿಬಿಟ್ಟಿದ್ದಳು!'' ಮಹೇಂದ್ರ ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ!

ಸುರೇಶ : ಅಲ್ಲಯ್ಯ, ನಿನ್ನ ಕೈಗಳೇಕೆ ಇಷ್ಟೊಂದು ಕಪ್ಪಾಗಿವೆ....?

ರಾಜೇಶ : ತವರಿಗೆ ಹೊರಟು ನಿಂತಿದ್ದ ನನ್ನ ಹೆಂಡತಿಯನ್ನು ರೈಲು ಹತ್ತಿಸಿ ಈಗ ತಾನೇ ಸೀದಾ ಅಲ್ಲಿಂದಾನೇ ಬರ್ತಿದ್ದೀನಿ!

ಸುರೇಶ : ಅದಕ್ಕೂ ಇದಕ್ಕೂ ಏನಯ್ಯಾ ಸಂಬಂಧ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ