ಪ್ರಯಾಣ ಹಾಗೂ ಹಬ್ಬ ಎರಡನ್ನೂ ಆನಂದಿಸಲು ಬಯಸಿದರೆ, ಇದನ್ನು ತಿಳಿದುಕೊಳ್ಳಿ.....

ಹಬ್ಬಗಳ ನಿಜವಾದ ಖುಷಿ ಸಿಗುವುದು ನಿಮ್ಮ ಹುಟ್ಟೂರಿನಲ್ಲಿ, ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಇದ್ದಾಗ ಮಾತ್ರ. ಹುಟ್ಟಿದೂರಿನಿಂದ ದೂರ ಕೆಲಸ ಮಾಡುತ್ತಿರುವವರು ಹಬ್ಬಗಳ ಸಮಯಕ್ಕೆ ತಮ್ಮೂರಿಗೆ ಹೋಗಲು ಪ್ರಯಾಣ ಹಾಗೂ ಶಾಪಿಂಗ್ ಯೋಜನೆಗಳನ್ನು ಹಲವಾರು ದಿನಗಳ ಮುಂಚಿತವಾಗಿಯೇ ಮಾಡಿಕೊಳ್ಳುತ್ತಾರೆ. ನಿಮ್ಮ ಈ ತಯಾರಿಯಲ್ಲಿ ಯಾವುದೇ ಕೊರತೆಯಾಗದಂತೆ ಈ ಸಲಹೆಗಳನ್ನು ಅನುಸರಿಸಿ :

ಯೋಜನೆ ಮಾಡಿ

ಮೊದಲನೆಯದಾಗಿ, ನೀವು ಬಸ್‌/ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತೀರಾ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ಬಸ್/ರೈಲು ಬುಕ್ಕಿಂಗ್‌ ನ್ನು ಪ್ರಯಾಣಕ್ಕೆ ಸುಮಾರು 4 ತಿಂಗಳ ಮೊದಲೇ ಮಾಡಬೇಕು. ನೀವು ವೇಟಿಂಗ್‌ ಲಿಸ್ಟ್ ನಲ್ಲಿ ಟಿಕೆಟ್ ಪಡೆದರೆ, ನಂತರ ಪ್ಲಾನ್‌ ಬಲೆಗೆ ಸಿದ್ಧರಾಗಿರಿ. ಏಕೆಂದರೆ ಹಬ್ಬದ ಸಮಯದಲ್ಲಿ ಟಿಕೆಟ್‌ ಕನ್‌ ಫರ್ಮ್ ಸಾಧ್ಯತೆಗಳು ಕಡಿಮೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಹೋದರೆ, ಪ್ಲಾನ್‌ ಬಿ ಹೊಂದಿರುವುದು ಮುಖ್ಯ.

ವಿಮಾನ ಟಿಕೆಟ್‌ ಗಳನ್ನು ಸಹ 4-5 ತಿಂಗಳು ಮುಂಚಿತವಾಗಿ ಬುಕ್‌ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಟಿಕೆಟ್‌ ಬೆಲೆ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ನೀಡುವ ಅಪ್ಲಿಕೇಶನ್‌ ಗಳಿವೆ. ದೂರಕ್ಕೆ ಅನುಗುಣವಾಗಿ ಬೆಲೆ ನಿರ್ಧರಿಸಲಾಗುತ್ತದೆ.

ನೀವು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಮನೆಯಿಂದ ನೀವು ಹೊರಡುವ ಸಮಯ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ, ಹಬ್ಬದ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ ಮತ್ತು ಕೆಲವೇ ಗಂಟೆಗಳ ನಿಮ್ಮ ಪ್ರಯಾಣ ಹಲವು ಗಂಟೆಗಳಾಗಿ ಬದಲಾಗಬಹುದು. ಸಮಯ ಉಳಿಸಲು ನಿಮ್ಮ ಕಾರಿನ ಫಾಸ್ಟ್ ಟ್ಯಾಗ್‌ ನ್ನು ಅಪ್‌ ಡೇಟ್ ಮಾಡುವುದನ್ನು ಮಾತ್ರ ಮರೆಯದಿರಿ.

ದಾಖಲೆಗಳನ್ನು ಜೊತೆಗೆ ಇಟ್ಟುಕೊಳ್ಳಿ

ಪ್ರಯಾಣಕ್ಕೆ ಹೊರಡು ಮೊದಲು, ನಿಮ್ಮ ದಾಖಲೆಗಳು ಯಾವುದೇ ಸಮಯದಲ್ಲೂ ಅಗತ್ಯವಾಗಬಹುದು. ಆದ್ದರಿಂದ ಅವು ನಿಮ್ಮ ಬಳಿಯೇ ಇರಲಿ. ನಿಮ್ಮ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಇತ್ಯಾದಿಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅವುಗಳ ಹಾರ್ಡ್‌ ಕಾಪಿಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ, ಅವುಗಳನ್ನು ನಿಮ್ಮ ಡಿಜಿಟಲ್ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳಬಹುದು. ಖಾಸಗಿ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ಕುಟುಂಬದ ಯಾರೊಂದಿಗಾದರೂ ತಾವು ಪ್ರಯಾಣಿಸುತ್ತಿರುವ ಲೋಕೇಶನ್‌ ಶೇರ್‌ ಮಾಡಿಕೊಳ್ಳುವುದು ಒಳ್ಳೆಯದು.

ಔಷಧಿಗಳನ್ನು ಮರೆಯದಿರಿ

ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಪ್ರಯಾಣಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಪ್ರಯಾಣ ಮಾಡುವಾಗ ಕೆಲವು ಅಗತ್ಯ ಔಷಧಿಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದರಿಂದ ದಾರಿಯಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದಲ್ಲದೆ ಸಣ್ಣಪುಟ್ಟ ಗಾಯಗಳು ಅಥವಾ ವಾಂತಿಯಂಥ ಸಮಸ್ಯೆಗಳಿಗೆ ಔಷಧಿಗಳನ್ನು ಇಟ್ಟುಕೊಳ್ಳಲು ಮರೆಯಬೇಡಿ.

ನಗದು ಅಥವಾ ಕಾರ್ಡ್

ಪ್ರಯಾಣ ಮಾಡುವಾಗ ಹೆಚ್ಚು ಹಣ ಕೊಂಡೊಯ್ಯಬೇಡಿ. ನಿಮಗೆ ಎಷ್ಟು ಅಗತ್ಯವೇ ಅಷ್ಟು ಹಣವನ್ನು ಮಾತ್ರ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಇದಲ್ಲದೆ, ನಿಮ್ಮ ಎಲ್ಲಾ ಹಣವನ್ನು ಎಂದಿಗೂ ಒಂದೇ ಸ್ಥಳದಲ್ಲಿ ಇಡಬೇಡಿ. ನಗದು ಮತ್ತು ಕ್ರೆಡಿಟ್ ಕಾರ್ಡ್‌ ಗಳನ್ನು 2 ಅಥವಾ 3 ವಿಭಿನ್ನ ಸ್ಥಳಗಳಲ್ಲಿ ಇರಿಸಿ. ಇದರಿಂದ ನಿಮ್ಮ ಯಾವುದೇ ವಸ್ತುಗಳು ಕಳುವಾದರೆ, ನೀವು ಸಂಪೂರ್ಣವಾಗಿ ಖಾಲಿಯಾಗುವುದಿಲ್ಲ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್‌ ಸೌಲಭ್ಯ ಬಹುತೇಕ ಎಲ್ಲೆಡೆ ಲಭ್ಯವಿದೆ. ಆದ್ದರಿಂದ ಹೊರಡು ಮೊದಲು ನಿಮ್ಮ ಯುಪಿಐನ್ನು ಅಪ್‌ ಡೇಟ್‌ ಮಾಡಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ